AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾದಪ್ಪನ ಮೊರೆಹೋದ ಆರ್​ಸಿಬಿ ಅಭಿಮಾನಿ; ಈ ಸಲ ಕಪ್ ನಮ್ದೇ ಆಗಲಿ ಎಂದು ಬೇಡಿಕೊಂಡ ಫ್ಯಾನ್

ತೆಂಗಿನ ಕಾಯಿಯ ಮೇಲೆ ‘ಈ ಬಾರಿ ಕಪ್ ನಮ್ದೇ’ ಎಂದು ಈಡುಗಾಯಿ ಒಡೆಸಿರುವ ಅಭಿಮಾನಿ ಮಾದಪ್ಪನ ಸನ್ನಧಿಯಲ್ಲಿ ಆರ್ ಸಿಬಿ ಎಂದು ಕರ್ಪೂರದಲ್ಲಿ ಬರೆದು ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಾದಪ್ಪನ ಮೊರೆಹೋದ ಆರ್​ಸಿಬಿ ಅಭಿಮಾನಿ; ಈ ಸಲ ಕಪ್ ನಮ್ದೇ ಆಗಲಿ ಎಂದು ಬೇಡಿಕೊಂಡ ಫ್ಯಾನ್
ಮಾದಪ್ಪನ ಮೊರೆಹೋದ ಆರ್​ಸಿಬಿ ಅಭಿಮಾನಿ
TV9 Web
| Edited By: |

Updated on:Oct 03, 2021 | 5:06 PM

Share

ಚಾಮರಾಜನಗರ: ಆರ್​ಸಿಬಿ ಈಬಾರಿ ಐಪಿಎಲ್ ಕಪ್ ಗೆಲ್ಲಲಿ ಎಂದು ಅಭಿಮಾನಿಯೋರ್ವ ಮಾದಪ್ಪನ ಮೊರೆ ಹೋಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದ ಮಾದಪ್ಪನಿಗೆ ಭಕ್ತರೋರ್ವರು ಆರ್​ಸಿಬಿ ಗೆಲುವು ಸಾಧಿಸುವಂತೆ ಮೊರೆ ಹೋಗಿರುವುದು. ಹನೂರಿನ‌ ಅಭಿಮಾನಿ ಮಂಟೇಸ್ವಾಮಿ ಅವರೇ ಆರ್​ಸಿಬಿ ಪರ ದೇವರ ಮೊರೆಹೊದ ಅಭಿಮಾನಿ. ತೆಂಗಿನ ಕಾಯಿಯ ಮೇಲೆ ‘ಈ ಬಾರಿ ಕಪ್ ನಮ್ದೇ’ ಎಂದು ಈಡುಗಾಯಿ ಒಡೆದಿದ್ದಾರೆ ಅಭಿಮಾನಿ.

ಮಾದಪ್ಪನ ಸನ್ನಧಿಯಲ್ಲಿ ಆರ್ ಸಿಬಿ ಎಂದು ಕರ್ಪೂರದಲ್ಲಿ ಬರೆದು ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಂದು ಪಂಜಾಬ್ ವಿರುದ್ದ ಪಂದ್ಯ ಗೆದ್ದರೆ ಪ್ಲೇ ಆಫ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್​ಗೆ ಎಂಟ್ರಿ ಪಡೆಯಲಿದೆ.

ಪ್ಲೇ ಆಫ್​ಗೆ ಅರ್ಹತೆ ಪಡೆಯಲು ಆರ್​ಸಿಬಿಗೆ ಬೇಕು ಗೆಲುವು: ಪಂಜಾಬ್ ಸೋತರೆ ಟೂರ್ನಿಯಿಂದ ಔಟ್

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2021) ಸೂಪರ್ ಸಂಡೆಯ ಎರಡು ಪಂದ್ಯಗಳು ನಡೆಯಲಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಲಿರುವ ಮೊದಲ ಮುಖಾಮುಖಿಯಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಕೆ. ಎಲ್ ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್ (Punjab Kings) ತಂಡಗಳು ಸೆಣೆಸಾಟ ನಡೆಸಲಿವೆ. ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದಲ್ಲಿರುವ ಆರ್​ಸಿಬಿ (RCB) ತಂಡ ಪಂಜಾಬ್‌ ಅನ್ನು ಮಣಿಸಿ ಪ್ಲೇ ಆಫ್ಸ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ. ಇತ್ತ ರಾಹುಲ್‌ (PBKS) ಪಡೆಗೆ ಗೆದ್ದರಷ್ಟೇ ಮುಂದಿನ ಹಂತಕ್ಕೇರಲಿದೆ ಎಂಬುದು ಸದ್ಯದ ಲೆಕ್ಕಾಚಾರ. ಸೋತರೆ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ.

ಇಲ್ಲಿವರೆಗೂ ಆಡಿರುವ ಒಟ್ಟು 11 ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ 7 ರಲ್ಲಿ ಗೆದ್ದು ಇನ್ನುಳಿದ 4ರಲ್ಲಿ ಸೋಲು ಅನುಭವಿಸಿದೆ. ಒಟ್ಟು 14 ಅಂಕಗಳನ್ನು ಕಲೆ ಹಾಕಿರುವ ಬೆಂಗಳೂರು ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, -0.200 ರಷ್ಟು ಆರ್‌ಸಿಬಿಯ ರನ್‌ರೇಟ್‌ ಮೈನಸ್‌ನಲ್ಲಿದೆ. ಆದರೂ ಇನ್ನೊಂದು ಪಂದ್ಯದಲ್ಲಿ ಕೊಹ್ಲಿ ಪಡೆ ಗೆದ್ದರೆ, ನಾಕೌಟ್‌ ಟಿಕೆಟ್‌ ಪಡೆದುಕೊಳ್ಳಲಿದೆ. ಇತ್ತ ಪಂಜಾಬ್ ಆಡಿರುವ 12 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಮತ್ತು ಏಳು ಪಂದ್ಯಗಳಲ್ಲಿ ಸೋಲು ಕಂಡಿದೆ. 10 ಅಂಕದೊಂದಿಗೆ ಐದನೇ ಸ್ಥಾನದಲ್ಲಿದೆ. -0.236 ರಷ್ಟು ರಾಹುಲ್ ಪಡೆಯ ರನ್​ರೇಟ್ ಕೂಡ ಮೈನಸ್​ನಲ್ಲಿದೆ.

ಆರ್​ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಬೊಂಬಾಟ್ ಆರಂಭ ಒದಗಿಸುತ್ತಿರುವುದು ಪಾಸಿಟಿವ್ ಸೈನ್ ಆಗಿದೆ. ಇದರ ಜೊತೆಗೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶ್ರೀಕರ್ ಭರತ್ ಭರವಸೆ ಮೂಡಿಸಿದ್ದಾರೆ. ಪ್ರಚಂಡ ಫಾರ್ಮ್​ಗೆ ಮರಳಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬಿದ್ದಾರೆ. ಆದರೆ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಅರಬ್‌ ನಾಡಿನಲ್ಲಿ ಅಬ್ಬರಿಸಲು ವಿಫ‌ಲರಾಗಿರುವುದು ಆರ್‌ಸಿಬಿಗೆ ಹಿನ್ನಡೆ ಎಂಬುದರಲ್ಲಿ ಆನುಮಾನವಿಲ್ಲ. ನಂತರ ಬರುವ ಬ್ಯಾಟರ್​ಗಳ ಮೇಲೆ ನಿರೀಕ್ಷೆಯೂ ಇಲ್ಲ.

ಇದನ್ನೂ ಓದಿ: 

IPL 2021: ಆರ್​ಸಿಬಿಗೆ ಕನ್ನಡಿಗನೆ ವಿಲನ್​! ಬೆಂಗಳೂರು ವಿರುದ್ಧ ಕೆ. ಎಲ್ ರಾಹುಲ್ ಅಬ್ಬರಿಸುವುದು ಗ್ಯಾರಂಟಿ 

RCB vs PBKS Live Score, IPL 2021: ಆರ್​ಸಿಬಿ ಉತ್ತಮ ಬ್ಯಾಟಿಂಗ್

Published On - 5:00 pm, Sun, 3 October 21

Follow Us
ಕಾವ್ಯಾನ ಮದುವೆ ಆಗಲ್ಲ: ಎಲ್ಲರ ಎದುರು ನೇರವಾಗಿ ಹೇಳಿದ ಗಿಲ್ಲಿ ನಟ
ಕಾವ್ಯಾನ ಮದುವೆ ಆಗಲ್ಲ: ಎಲ್ಲರ ಎದುರು ನೇರವಾಗಿ ಹೇಳಿದ ಗಿಲ್ಲಿ ನಟ
ಬ್ಯಾಡಗಿ ಮೆಣಸಿನ ರಫ್ತಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ
ಬ್ಯಾಡಗಿ ಮೆಣಸಿನ ರಫ್ತಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ
ಮದುವೆ ಮಾಡಿಕೊಂಡು ನೇರವಾಗಿ ದರ್ಶನ್ ಮನೆ ಮುಂದೆ ಬಂದ ನವ ಜೋಡಿ
ಮದುವೆ ಮಾಡಿಕೊಂಡು ನೇರವಾಗಿ ದರ್ಶನ್ ಮನೆ ಮುಂದೆ ಬಂದ ನವ ಜೋಡಿ
ಡಿಕೆ ಶಿವಕುಮಾರ್ ಶಾಕಿಂಗ್ ಮಾತು: ಮತ್ತೆ ಜೋರಾದ ಅಧಿಕಾರ ಹಂಚಿಕೆ ಬಿಕ್ಕಟ್ಟು
ಡಿಕೆ ಶಿವಕುಮಾರ್ ಶಾಕಿಂಗ್ ಮಾತು: ಮತ್ತೆ ಜೋರಾದ ಅಧಿಕಾರ ಹಂಚಿಕೆ ಬಿಕ್ಕಟ್ಟು
‘ಬಾಸ್’ ಚಿತ್ರದಲ್ಲಿ ರೇಣುಕಾಸ್ವಾಮಿ ಸಾವಿನ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ
‘ಬಾಸ್’ ಚಿತ್ರದಲ್ಲಿ ರೇಣುಕಾಸ್ವಾಮಿ ಸಾವಿನ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ
ಮೈದಾನದಲ್ಲಿ ಪತ್ನಿಗೆ ಲಿಪ್‌ಲಾಕ್ ಮಾಡಿದ ಕ್ರಿಕೆಟಿಗ
ಮೈದಾನದಲ್ಲಿ ಪತ್ನಿಗೆ ಲಿಪ್‌ಲಾಕ್ ಮಾಡಿದ ಕ್ರಿಕೆಟಿಗ
ದಳಪತಿ ವಿಜಯ್​​ಗೆ ಮತ್ತೆ ಹೆಚ್ಚಿತು ಸಂಕಷ್ಟ; ಎದುರಿಸಬೇಕಿದೆ ವಿಚಾರಣೆ
ದಳಪತಿ ವಿಜಯ್​​ಗೆ ಮತ್ತೆ ಹೆಚ್ಚಿತು ಸಂಕಷ್ಟ; ಎದುರಿಸಬೇಕಿದೆ ವಿಚಾರಣೆ
ಬೆಂಗಳೂರಿನ ಕೆಟ್ಟ ಸ್ಥಿತಿ ನಮಗೆ ಬಂದಿಲ್ಲ
ಬೆಂಗಳೂರಿನ ಕೆಟ್ಟ ಸ್ಥಿತಿ ನಮಗೆ ಬಂದಿಲ್ಲ
ಸಿಗರೇಟ್‌ಗೆ ಗಾಂಜಾ ತುಂಬಿಸಿ ನಶೆ ಏರಿಸುತ್ತಿದ್ದ ಇಬ್ಬರು ಖಾಕಿ ಬಲೆಗೆ
ಸಿಗರೇಟ್‌ಗೆ ಗಾಂಜಾ ತುಂಬಿಸಿ ನಶೆ ಏರಿಸುತ್ತಿದ್ದ ಇಬ್ಬರು ಖಾಕಿ ಬಲೆಗೆ
ಚಿನ್ನ ಕದ್ದ ಕ್ಯಾಬ್​​ ಚಾಲಕ ಲಾಕ್: ದರೋಡೆ ನಡೆಸಿದ ರೀತಿಯೇ ಇಂಟರೆಸ್ಟಿಂಗ್​!
ಚಿನ್ನ ಕದ್ದ ಕ್ಯಾಬ್​​ ಚಾಲಕ ಲಾಕ್: ದರೋಡೆ ನಡೆಸಿದ ರೀತಿಯೇ ಇಂಟರೆಸ್ಟಿಂಗ್​!