KPL ಮ್ಯಾಚ್ ಫಿಕ್ಸಿಂಗ್: ಬೆಂಗಳೂರು ತಂಡದ ಮಾಲೀಕರಿಗೂ ಬುಲಾವ್
ಬೆಂಗಳೂರು: ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರು ಟೀಂ ಮಾಲೀಕರಿಗೂ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆಟಗಾರ ಮತ್ತು ಕೋಚ್ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆಂದು ಆರೋಪಿಸಿ ಸಿಸಿಬಿ ರೌಡಿ ಸ್ಕ್ವಾಡ್ ಎಸಿಪಿ ದೂರು ದಾಖಲಿಸಿದ್ದರು. ಆಟಗಾರರಾದ ಎಂ.ವಿಶ್ವನಾಥನ್ ಹಾಗೂ ವಿನು ಪ್ರಸಾದ್ ಮೇಲೆ ಭಾರತೀನಗರ ಠಾಣೆಯಲ್ಲಿ ಎಸಿಪಿ ಎಸ್.ಎಂ.ನಾಗರಾಜ್ ದೂರು ನೀಡಿದ್ದರು. ಭಾರತೀನಗರದ ಲೆಮನ್ ಟ್ರೀ ಹೋಟೆಲ್ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದರೆಂದು ದೂರು ದಾಖಲಿಸಿದ್ದರು. ಹೀಗಾಗಿ ವಿಚಾರಣೆಗೆ […]
ಬೆಂಗಳೂರು: ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರು ಟೀಂ ಮಾಲೀಕರಿಗೂ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆಟಗಾರ ಮತ್ತು ಕೋಚ್ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆಂದು ಆರೋಪಿಸಿ ಸಿಸಿಬಿ ರೌಡಿ ಸ್ಕ್ವಾಡ್ ಎಸಿಪಿ ದೂರು ದಾಖಲಿಸಿದ್ದರು.
ಆಟಗಾರರಾದ ಎಂ.ವಿಶ್ವನಾಥನ್ ಹಾಗೂ ವಿನು ಪ್ರಸಾದ್ ಮೇಲೆ ಭಾರತೀನಗರ ಠಾಣೆಯಲ್ಲಿ ಎಸಿಪಿ ಎಸ್.ಎಂ.ನಾಗರಾಜ್ ದೂರು ನೀಡಿದ್ದರು. ಭಾರತೀನಗರದ ಲೆಮನ್ ಟ್ರೀ ಹೋಟೆಲ್ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದರೆಂದು ದೂರು ದಾಖಲಿಸಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.