ISSF Junior World Cup: ವಿಶ್ವ ಶೂಟಿಂಗ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಭಾರತದ ಅಭಿನವ್-ಗೌತಮಿ ಜೋಡಿ

Gautami Bhanot and Abhinav Shaw: ಗೌತಮಿ ಮತ್ತು ಅಭಿವನ್‌ ಅವರು ಅರ್ಹತಾ ಹಂತದಲ್ಲಿ 628.3 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಕಣದಲ್ಲಿದ್ದ ಭಾರತದ ಇನ್ನೊಂದು ಜೋಡಿ ಸ್ವಾತಿ ಚೌಧರಿ-ಸಲೀಂ 624.3 ಪಾಯಿಂಟ್ಸ್‌ಗಳೊಂದಿಗೆ ಏಳನೇ ಸ್ಥಾನ ಗಳಿಸಿತು.

ISSF Junior World Cup: ವಿಶ್ವ ಶೂಟಿಂಗ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಭಾರತದ ಅಭಿನವ್-ಗೌತಮಿ ಜೋಡಿ
Abhinav, Gautami
Follow us
Vinay Bhat
|

Updated on: Jun 06, 2023 | 7:20 AM

ಜರ್ಮನಿಯ ಜೂಲ್​ನಲ್ಲಿ ನಡೆಯುತ್ತಿರುವ ಐಎಸ್​ಎಸ್​ಎಫ್ ಜ್ಯೂನಿಯರ್ (ISSF Junior World Cup) 10 ಮೀಟರ್ ಏರ್ ರೈಫಲ್ ಮಿಕ್ಸ್ಡ್ ವಿಭಾಗದಲ್ಲಿ ಭಾರತದ ಶೂಟರ್ ಗಳಾದ ಗೌತಮಿ ಭನೋಟ್ (Gautami Bhanot) ಹಾಗೂ ಅಭಿನವ್ ಶಾ ಜೋಡಿಯು ಚಿನ್ನದ (Gold) ಪದಕಕ್ಕೆ ಮುತ್ತಿಟ್ಟಿದ್ದಾರೆ. ಫೈನಲ್‌ನಲ್ಲಿ ಭಾರತದ ಜೋಡಿ 17-7 ರಲ್ಲಿ ಫ್ರಾನ್ಸ್‌ನ ಓಷಾನ್‌ ಮುಲ್ಲರ್‌ ಮತ್ತು ರೊಮೇನ್ ಆಫ್ರೆರ್‌ ಅವರನ್ನು ಸೋಲಿಸಿ ಚಿನ್ನ ಗೆದ್ದಿತು. ನಾರ್ವೆಯ ಪೆರ್ನೈಲ್ ನೋರ್‌ ವಾಲ್-ಜೆನ್ಸ್‌ ಓಲ್‌ಸ್ರುಡ್ ಜೋಡಿ ಕಂಚಿಗೆ ತೃಪ್ತಿಪಟ್ಟಿತು. ಗೌತಮಿ ಮತ್ತು ಅಭಿವನ್‌ ಅವರು ಅರ್ಹತಾ ಹಂತದಲ್ಲಿ 628.3 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಕಣದಲ್ಲಿದ್ದ ಭಾರತದ ಇನ್ನೊಂದು ಜೋಡಿ ಸ್ವಾತಿ ಚೌಧರಿ-ಸಲೀಂ 624.3 ಪಾಯಿಂಟ್ಸ್‌ಗಳೊಂದಿಗೆ ಏಳನೇ ಸ್ಥಾನ ಗಳಿಸಿತು.

ಇನ್ನು 10 ಮೀಟರ್ ಏರ್ ಪಿಸ್ತೂಲ್ ಮಿಕ್ಸೆಡ್​ನಲ್ಲಿ ಭಾರತದ ಸೈನ್ಯಮ್ ಹಾಗೂ ಅಭಿನವ್ ಚೌಧರಿ ಜೋಡಿಯು 12 ಅಂಕ ಕಲೆ ಹಾಕಿ ಬೆಳ್ಳಿ ಪದಕ ತಮ್ಮದಾಗಿಸಿದರು. ಈ ವಿಭಾಗದಲ್ಲಿ 16 ಅವಕಾಶಗಳಲ್ಲಿ ನಿಖರ ಗುರಿ ಸಾಧಿಸಿದ ಕೊರಿಯಾದ ಜೂರಿ ಕಿಮ್- ಕಾಂಗ್ ಹಿನ್ ಕಿಮ್ ಜೋಡಿಯು ಸ್ವರ್ಣ ಪದಕ ಗೆದ್ದುಕೊಂಡಿತು. ಅತ್ತ ಮಹಿಳೆಯರ ಏರ್ ಪಿಸ್ತೂಲ್ ವಿಭಾಗದಲ್ಲಿ ಸೈನ್ಯಮ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ನಮ್ಮ ಹೋರಾಟಕ್ಕೆ ಉದ್ಯೋಗ ಅಡ್ಡಿಯಾಗುವುದಾದರೆ ಅದನ್ನು ಬಿಡುವುದಕ್ಕೂ ನಾವು ಹಿಂಜರಿಯುವುದಿಲ್ಲ: ಕುಸ್ತಿಪಟುಗಳು

ಇದನ್ನೂ ಓದಿ
Image
WTC Final 2023: ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಸಿಕ್ಸರ್ ಕಿಂಗ್ ಯಾರು ಗೊತ್ತಾ?
Image
MPL 2023: ಹೊಸ ಲೀಗ್​ನಲ್ಲಿ ಕೇದಾರ್ ಜಾಧವ್ ಐಕಾನ್ ಪ್ಲೇಯರ್
Image
WTC Final 2023: ಫೈನಲ್ ಪಂದ್ಯದಲ್ಲಿ ಕೈ ಕೊಡುವ ರೋಹಿತ್ ಶರ್ಮಾ..!
Image
Fact Check: ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಎಂಎಸ್ ಧೋನಿ; ವೈರಲ್ ಪೋಸ್ಟ್ Fake

ಅಂತೆಯೆ ಭಾರತದ ಸುರುಚಿ ಇಂದರ್‌ ಸಿಂಗ್‌ ಮತ್ತು ಶುಭಮ್‌ ಬಿಸ್ಲಾ ಅವರು ಕಂಚು ಪಡೆದುಕೊಂಡರು. ಮೂರನೇ ಸ್ಥಾನಕ್ಕಾಗಿ ನಡೆದ ಈ ಪೈಪೋಟಿಯಲ್ಲಿ ಅವರು 16 ಪಾಯಿಂಟ್ಸ್‌ ಗಳಿಸಿದರೆ, ಉಜ್ಬೆಕಿಸ್ತಾನದ ನಿಗಿನಾ ಸೈದ್‌ಕುಲೊವಾ ಮುಹಮ್ಮದ್ ಕಮಲೋವ್ (14) ನಾಲ್ಕನೇ ಸ್ಥಾನ ಪಡೆದುಕೊಂಡರು.

ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಧನುಷ್‌ ಶ್ರೀಕಾಂತ್‌ ಕೂಡ ಬಂಗಾರದ ಪದಕ ಜಯಿಸಿದ್ದಾರೆ. ಅವರು ಪುರುಷರ 10 ಮೀ. ಏರ್‌ ರೈಫ‌ಲ್‌ ಸ್ಪರ್ಧೆಯಲ್ಲಿ ಈ ಸಾಧನೆಗೈದರು. 24 ಶಾಟ್‌ಗಳ ಫೈನಲ್‌ನಲ್ಲಿ ಧನುಷ್‌ ಶ್ರೀಕಾಂತ್‌ 249.4 ಅಂಕ ಸಂಪಾದಿಸಿದರು. ಈ ಸಂದರ್ಭದಲ್ಲಿ ಸ್ವೀಡನ್‌ನ ಪೊಂಟಸ್‌ ಕ್ಯಾಲಿನ್‌ ಮತ್ತು ಧನುಷ್‌ ಸಮಬಲ ಸಾಧನೆಗೈದರು. ಆದರೆ ಕ್ಲಿನಿಕಲ್‌ ಫಿನಿಶ್‌ನಲ್ಲಿ 1.3 ಅಂಕಗಳ ಹಿನ್ನಡೆ ಕಂಡ ಕ್ಯಾಲಿನ್‌ಗೆ ಬೆಳ್ಳಿ ಲಭಿಸಿತು.

ಅತ್ತ ದಕ್ಷಿಣ ಕೊರಿಯಾದ ಯೆಚೊಯಾನ್​ನಲ್ಲಿ ನಡೆಯುತ್ತಿರುವ ಏಷ್ಯನ್‌ 20 ವರ್ಷದೊಳಗಿನವರ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಸಿದ್ಧಾರ್ಥ್‌ ಚೌಧರಿ ಭಾರತಕ್ಕೆ ಮೂರನೇ ಚಿನ್ನವನ್ನು ತಂದುಕೊಟ್ಟರು. 17 ವರ್ಷದ ಸಿದ್ಧಾರ್ಥ್‌ ತಮ್ಮ ಮೂರನೇ ಪ್ರಯತ್ನದಲ್ಲಿ ಶಾಟ್‌ಪಟ್‌ಅನ್ನು 19.52 ಮೀಟರ್‌ ಎಸೆಯುವ ಮೂಲಕ ಚಿನ್ನದ ಪದಕ ಗಳಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್