Pro Kabaddi: ಪ್ರೊ ಕಬ್ಬಡಿ ಲೀಗ್ ಪಂದ್ಯ ಮುಕ್ತಾಯ: ಕೊನೆಗೂ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಬೆಂಗಳೂರು ಬುಲ್ಸ್
ಪುಣೇರಿ ಪಲ್ಟನ್ ತಂಡ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ 37-30 ಅಂಕಗಳ ಅಂತರದಲ್ಲಿ ಸೋಲುಣಿತು. ಇದರ ಫಲವಾಗಿ ಬೆಂಗಳೂರು ತಂಡಕ್ಕೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿ ಪ್ಲೇ ಆಫ್ಸ್ ಹಂತಕ್ಕೇರಲು ಸಾಧ್ಯವಾಗಿದೆ.
ಪ್ರೊ ಕಬ್ಬಡಿಯ(Pro Kabaddi) ಲೀಗ್ ಹಂತದ ಪಂದ್ಯಾವಳಿಗಳು ಮುಕ್ತಾಯವಾಗಿದ್ದು 8ನೇ ಆವೃತ್ತಿಯ ಪ್ಲೇ-ಆಫ್‌ಗೆ ಬೆಂಗಳೂರು ಬುಲ್ಸ್ (Bengaluru Bulls) ಲಗ್ಗೆಯಿಟ್ಟಿದೆ. ಜೈಪುರ ಮತ್ತು ಹರಿಯಾಣದ ಸೋಲಿನಿಂದಾಗಿ ಬೆಂಗಳೂರು ಬುಲ್ಸ್ ಪ್ಲೇಆಫ್‌ಗೆ ಅರ್ಹತೆ ಗಳಿಸಿತುತು. ನಂತರ ಪುಣೇರಿ ಪಲ್ಟನ್ ಜೈಪುರವನ್ನು ಸೋಲಿಸುವ ಮೂಲಕ ಪ್ಲೇಆಫ್ ತಲುಪಿದ ಕೊನೆಯ ತಂಡವಾಯಿತು. ಲೀಗ್ ನ ಕೊನೆಯ ಪಂದ್ಯಾವಳಿಗಳ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಪಾಟ್ನಾ ಪೈರೇಟ್ಸ್ ಹರಿಯಾಣ ಸ್ಟೀಲರ್ಸ್ ತಂಡವನ್ನು ಸೋಲಿಸುವ ಮೂಲಕ ಪ್ಲೇಆಫ್ ಭರವಸೆಯನ್ನು ಮುರಿಯಿತು. ಹೀಗಾಗಿ ಗುಜರಾತ್ ಜೈಂಟ್ಸ್ ಯು ಮುಂಬಾ ತಂಡವನ್ನು ಸೋಲಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು.
ಇಲ್ಲಿನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್ ಆವಣದಲ್ಲಿ ನಿರ್ಮಿಸಲಾಗಿರುವ ಬಯೋ ಬಬಲ್ ವಾತಾವರಣದಲ್ಲಿ ಶನಿವಾರ ನಡೆದ ಟೂರ್ನಿಯ 130ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ 37-30 ಅಂಕಗಳ ಅಂತರದಲ್ಲಿ ಸೋಲುಣಿತು. ಇದರ ಫಲವಾಗಿ ಬೆಂಗಳೂರು ತಂಡಕ್ಕೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿ ಪ್ಲೇ ಆಫ್ಸ್ ಹಂತಕ್ಕೇರಲು ಸಾಧ್ಯವಾಗಿದೆ. 12 ತಂಡಗಳ ನಡುವಣ ಪೈಪೋಟಿಯಲ್ಲಿ 6 ತಂಡಗಳಿಗೆ ಮಾತ್ರವೇ ನಾಕ್‌ಔಟ್ ಹಂತಕ್ಕೇರುವ ಅವಕಾಶ ಲಭ್ಯವಾಗುತ್ತದೆ. ಲೀಗ್ ಹಂತದ ಮೊದಲ ಚರಣದ ಮುಕ್ತಾಯಕ್ಕೆ ಅಂಕಪಟ್ಟಿಯ ಮೊದಲ ಸ್ಥಾನದಲ್ಲಿದ್ದ ಬೆಂಗಳೂರು ತಂಡ, 2ನೇ ಚರಣದ ಮುಕ್ತಾಯಕ್ಕೆ 5ನೇ ಸ್ಥಾನಕ್ಕೆ ಜಾರಿದರೂ ಮುಂದಿನ ಸುತ್ತಿಗೆ ತೇರ್ಗಡೆಯಾಗಿದೆ.
ರೇಡರ್ ಮೋಹಿತ್ ಗೋಯತ್ (14 ಅಂಕ) ಮತ್ತು ಅಸ್ಲಾಮ್ ಇನಾಂಮ್ದಾರ್ (11 ಅಂಕ) ಅವರ ಮನಮೋಹಕ ಪ್ರದರ್ಶನದಿಂದ ಜಯ ದಕ್ಕಿಸಿಕೊಂಡ ಪುಣೇರಿ ಪಲ್ಟನ್ ಪಡೆಯೂ ಅಂಕಪಟ್ಟಿಯಲ್ಲಿ 6ನೇ ಸ್ಥಾನಿಯಾಗಿ ಒಟ್ಟು 66 ಅಂಕಗಳೊಂದಿಗೆ ನಾಕ್‌ಔಟ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಇನ್ನು 2ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ ವಿರುದ್ಧ 2 ಬಾರಿ ರನ್ನರ್-ಅಪ್ ಗುಜರಾತ್ ಜೈಂಟ್ಸ್ 36-33ರಲ್ಲಿ ಗೆಲುವು ಸಾಧಿಸಿ ಪ್ಲೇ-ಆಫ್‌ಗೇರಿತು. ಗುಜರಾತ್‌ಗಿದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿತ್ತು. ರೈಡರ್‌ಗಳಾದ ರಾಕೇಶ್ ಹಾಗೂ ಮಹೇಂದ್ರ ರಜಪೂತ್‌ರ ಆಕರ್ಷಕ ಆಟದ ನೆರವಿನಿಂದ ರೋಚಕ ಗೆಲುವು ಸಾಧಿಸಿತು. ಲೀಗ್ ಆರಂಭದಲ್ಲಿ ಪ್ಲೇ-ಆಫ್‌ಗೇರುವ ನೆಚ್ಚಿನ ತಂಡ ಎನಿಸಿಕೊಂಡಿದ್ದ ಮುಂಬಾ, ಸತತ 4ನೇ ಸೋಲಿನೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಿತು. ಇತ್ತ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 27-30 ಅಂಕಗಳಲ್ಲಿ ಸೋತ ಹರ್ಯಾಣ ಸ್ಟೀಲರ್ಸ್, ಪ್ಲೇ-ಆಫ್ ರೇಸ್‌ನಿಂದ ಹೊರಬಿತ್ತು.
ಪ್ಲೇಆಫ್‌ಗೆ ಅರ್ಹತೆ ಪಡೆದ ತಂಡಗಳು:
ಪಾಟ್ನಾ ಪೈರೇಟ್
ದಬಾಂಗ್ ದೆಹಲಿ ಕೆ.ಸಿ
ಯು ಪಿ ಯೋಧಾ
ಗುಜರಾತ್ ಜೈಂಟ್ಸ್
ಬೆಂಗಳೂರು ಬುಲ್ಸ್
ಪುಣೇರಿ ಪಲ್ಟನ್
ಪ್ಲೇ-ಆಫ್ ವೇಳಾಪಟ್ಟಿ:
ಎಲಿಮಿನೇಟರ್ 1 ಫೆ.21 ಯು.ಪಿ.ಯೋಧಾ-ಪುಣೇರಿ ಪಲ್ಟನ್
ಎಲಿಮಿನೇಟರ್ 2 ಫೆ.21 ಬೆಂಗಳೂರು ಬುಲ್ಸ್-ಗುಜರಾತ್ ಜೈಂಟ್ಸ್
ಸೆಮಿಫೈನಲ್ 1 ಫೆ.23 ಪಾಟ್ನಾ-ಎಲಿಮಿನೇಟರ್ 1ರಲ್ಲಿ ಗೆಲ್ಲುವ ತಂಡ
ಸೆಮಿಫೈನಲ್ 2 ಫೆ.23 ಡೆಲ್ಲಿ-ಎಲಿಮಿನೇಟರ್ 2ರಲ್ಲಿ ಗೆಲ್ಲುವ ತಂಡ
ಫೈನಲ್ ಫೆ.25ಕ್ಕೆ ನಡೆಯಲಿದೆ
Wriddhiman Saha: ನಿವೃತ್ತಿ ನೀಡು ಎಂದು ದ್ರಾವಿಡ್ ಸೂಚಿಸಿದರು: ತಂಡದಿಂದ ಕೈಬಿಟ್ಟ ಬೆನ್ನಲ್ಲೇ ಸಾಹ ಶಾಕಿಂಗ್ ಹೇಳಿಕೆ
IND vs WI T20: ಕೊಹ್ಲಿ-ಪಂತ್ ಔಟ್: 3ನೇ ಟಿ20ಗೆ ಭಾರತದಲ್ಲಿ ದೊಡ್ಡ ಬದಲಾವಣೆ: ಇಲ್ಲಿದೆ ಸಂಭಾವ್ಯ ಪ್ಲೇಯಿಂಗ್ XI