ಪ್ಯಾರಿಸ್ ಒಲಿಂಪಿಕ್ಸ್ ಯಾವಾಗ ಆರಂಭ? ಭಾರತದಿಂದ ಎಷ್ಟು ಸ್ಪರ್ಧಿಗಳು? ಉಚಿತವಾಗಿ ವೀಕ್ಷಿಸುವುದು ಹೇಗೆ? ಪೂರ್ಣ ವಿವರ ಇಲ್ಲಿದೆ
Paris Olympics 2024: ಜುಲೈ 26 ರಿಂದ ಪ್ರಾರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿಶ್ವದಾದ್ಯಂತದ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 17 ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಒಟ್ಟು 329 ಪದಕಗಳ ಮೇಲೆ ಕಣ್ಣೀಡಲಿದ್ದಾರೆ. ಭಾರತದಿಂದ ಒಟ್ಟು 112 ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಲಿದ್ದು, ಇದರಲ್ಲಿ 65 ಪುರುಷ ಆಟಗಾರರು ಮತ್ತು 47 ಮಹಿಳಾ ಆಟಗಾರ್ತಿಯರು ಸೇರಿದ್ದಾರೆ.
ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಜುಲೈ 26 ರಿಂದ ಕ್ರೀಡೆಯ ಮಹಾಕುಂಭ ಅಂದರೆ ಒಲಿಂಪಿಕ್ ಕ್ರೀಡಾಕೂಟ ಆರಂಭವಾಗಲಿದೆ. ಈ ಕ್ರೀಡಾಕೂಟವೂ ಜುಲೈ 26 ರಂದು ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾದರೂ, ಭಾರತದ ಈವೆಂಟ್‌ಗಳು ಜುಲೈ 25 ರಿಂದಲೇ ಪ್ರಾರಂಭವಾಗುತ್ತವೆ. ಹೀಗಿರುವಾಗ ಈ ಬಾರಿಯ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಳುಗಳ ಸಂಖ್ಯೆ ಎಷ್ಟು? ಈ ಕ್ರೀಡಾಕೂಟವನ್ನು ಯಾವ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ? ಉಚಿತವಾಗಿ ವೀಕ್ಷಿಸುವುದು ಹೇಗೆ ಎಂಬ ಪ್ರಶ್ನೆ ಕ್ರೀಡಾಭಿಮಾನಿಗಳ ಮನದಲ್ಲಿ ಮೂಡುತ್ತಿದೆ. ಹಾಗಾಗಿ ಈ ವರದಿಯಲ್ಲಿ ಈ ಬಗ್ಗೆ ಸಂಪೂರ್ಣ ವಿವರ ನೀಡಲಾಗಿದೆ.
10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು
ಜುಲೈ 26 ರಿಂದ ಪ್ರಾರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿಶ್ವದಾದ್ಯಂತದ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 17 ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಒಟ್ಟು 329 ಪದಕಗಳ ಮೇಲೆ ಕಣ್ಣೀಡಲಿದ್ದಾರೆ. ಭಾರತದಿಂದ ಒಟ್ಟು 112 ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಲಿದ್ದು, ಇದರಲ್ಲಿ 65 ಪುರುಷ ಆಟಗಾರರು ಮತ್ತು 47 ಮಹಿಳಾ ಆಟಗಾರ್ತಿಯರು ಸೇರಿದ್ದಾರೆ.
🇮🇳🙌 𝗖𝗢𝗨𝗡𝗧𝗗𝗢𝗪𝗡 𝗦𝗧𝗔𝗥𝗧𝗦! From Tokyo to Paris, get ready to witness the most prestigious sporting event in the world, the 2024 Paris Olympics.
🤩 Wishing everyone a happy new year filled with joy and hoping for more medals to come for India.@Media_SAI @Paris2024… pic.twitter.com/3D2XED7qJe
— India at Paris 2024 Olympics (@sportwalkmedia) January 1, 2024
ಕಳೆದ ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ
ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 7 ಪದಕ ಗೆದ್ದಿತ್ತು. ಇದರಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳು ಸೇರಿದ್ದು, ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಮೀರಾಬಾಯಿ ಚಾನು ಮತ್ತು ರವಿಕುಮಾರ್ ಬೆಳ್ಳಿ ಪದಕ ಗೆದ್ದಿದ್ದರು. ಇದಲ್ಲದೆ ಲೊವ್ಲಿನಾ ಬೊರ್ಗೊಹೈನ್, ಪಿವಿ ಸಿಂಧು ಮತ್ತು ಬಜರಂಗ್ ಬುನಿಯಾ ಕಂಚಿನ ಪದಕ ಗೆದ್ದಿದ್ದರು. ಭಾರತದ ಪುರುಷರ ಹಾಕಿ ತಂಡವೂ ಕಂಚಿನ ಪದಕ ಗೆದ್ದಿತ್ತು.
ಇದುವರೆಗೆ ಭಾರತ ಎಷ್ಟು ಪದಕಗಳನ್ನು ಗೆದ್ದಿದೆ?
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇದುವರೆಗೆ ಒಟ್ಟು 35 ಒಲಿಂಪಿಕ್ ಪದಕಗಳನ್ನು ಗೆದ್ದಿದೆ. ದೇಶದ ಮೊದಲ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ಬೀಜಿಂಗ್ ಒಲಿಂಪಿಕ್ಸ್-2008 ರಲ್ಲಿ ಬಂದಿತು. ಇದರಲ್ಲಿ ಅಭಿನವ್ ಬಿಂದ್ರಾ ಪದಕ ಗೆಲ್ಲುವ ಮೂಲಕ ಭಾರತದ ಖಾತೆ ತೆರೆದಿದ್ದರು. ಇದರ ನಂತರ ನೀರಜ್ ಚೋಪ್ರಾ ಕಳೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಟಿವಿಯಲ್ಲಿ ವೀಕ್ಷಿಸುವುದು ಹೇಗೆ?
ಪ್ಯಾರಿಸ್ ಒಲಿಂಪಿಕ್ಸ್ ಅನ್ನು ಭಾರತದಲ್ಲಿ ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಇದು ಈ ಚಾನೆಲ್‌ನಲ್ಲಿ ಮಾತ್ರ ನೇರ ಪ್ರಸಾರವಾಗಲಿದೆ. ಅದೇ ಸಮಯದಲ್ಲಿ, ಉಚಿತವಾಗಿ ವೀಕ್ಷಿಸಲು, ಮೊಬೈಲ್‌ನಲ್ಲಿ ಜಿಯೋ ಸಿನಿಮಾ ಅಪ್ಲಿಕೇಶನ್ ಅನ್ನು ಹೊಂದಿರುವುದು ಅವಶ್ಯಕ. ಅದರಲ್ಲಿ ನೀವು ಭಾರತೀಯ ಕ್ರೀಡಾಪಟುಗಳ ಪಂದ್ಯಗಳನ್ನು ಲೈವ್ ಆಗಿ ವೀಕ್ಷಿಸಲು ಸಾಧ್ಯವಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Fri, 12 July 24