ನೀರಜ್ ಚೋಪ್ರಾ ತಾಯಿಗೆ ಪತ್ರ ಬರೆದು ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನಿಮ್ಮ ಮನೆಯಲ್ಲಿ ತಯಾರಿಸಿದ ‘ಚುರ್ಮಾ’ (ಹರಿಯಾಣದ ಜನಪ್ರಿಯ ಸಿಹಿ ತಿಂಡಿ) ತಂದು ಕೊಡಬೇಕೆಂದು ತಿಳಿಸಿದ್ದರು.

ನೀರಜ್ ಚೋಪ್ರಾ ತಾಯಿಗೆ ಪತ್ರ ಬರೆದು ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ
Narendra Modi - Neeraj Chopra
Follow us
| Updated By: ಝಾಹಿರ್ ಯೂಸುಫ್

Updated on: Oct 02, 2024 | 6:40 PM

ಪ್ರಧಾನಿ ನರೇಂದ್ರ ಮೋದಿ ಅವರು ಒಲಿಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ತಾಯಿ ಸರೋಜ್ ದೇವಿ ಅವರಿಗೆ ಪತ್ರ ಬರೆದು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಬುಧವಾರ ನೀರಜ್ ಚೋಪ್ರಾ ಅವರ ತಾಯಿ ಮಾಡಿದ ಚುರ್ಮಾ ಸಿಹಿ ತಿಂಡಿಯನ್ನು ಪ್ರಧಾನಿ ಮೋದಿಗೆ ನೀಡಿದ್ದರು. ನಾನು ಹಾಗೂ ನೀರಜ್ ಆಗಾಗ್ಗೆ ಚುರ್ಮಾ ಬಗ್ಗೆ ಚರ್ಚಿಸುತ್ತೇವೆ. ಆದರೆ ಅದನ್ನು ಸೇವಿಸಿದ ನಂತರ ನಾನು ಭಾವುಕನಾಗಿದ್ದೇನೆ. ಈ ಪ್ರೀತಿ ತುಂಬಿದ ಉಡುಗೊರೆ ನನಗೆ ನನ್ನ ತಾಯಿ ನೆನಪಾದರು ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ನಿನ್ನೆ ಜಮೈಕಾದ ಪ್ರಧಾನಿಯವರ ಭೇಟಿಯ ಸಂದರ್ಭದಲ್ಲಿ ಆಯೋಜಿಸಿದ್ದ ಭೋಜನಾ ಕೂಟದಲ್ಲಿ ನಾನು ನೀರಜ್ ಭಾಯ್ (ನೀರಜ್ ಚೋಪ್ರಾ) ಅವರನ್ನು ಭೇಟಿಯಾದೆ. ನೀವು (ಸರೋಜಾ ದೇವಿ) ತಯಾರಿಸಿದ ಚುರ್ಮಾವನ್ನು ಅವರು ನನಗೆ ನೀಡಿದಾಗ ತುಂಬಾ ಸಂತೋಷವಾಯಿತು. ತಾಯಿ ಧೈರ್ಯ, ಪ್ರೀತಿ ಮತ್ತು ಸಮರ್ಪಣೆಯ ಸಾಕಾರಮೂರ್ತಿ. ನವರಾತ್ರಿಯ ಒಂದು ದಿನ ಮುಂಚಿತವಾಗಿ ನನಗೆ ಈ ಊಟ ಸಿಕ್ಕಿದ್ದು ಕಾಕತಾಳೀಯ. ನಾನು ನವರಾತ್ರಿ ದಿನಗಳಲ್ಲಿ ಉಪವಾಸ ಮಾಡುತ್ತೇನೆ ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ನೀರಜ್‌ಗೆ ಪದಕಗಳನ್ನು ಗೆಲ್ಲಲು ನೀವು ನೀಡುವ ಆಹಾರ ಸಹಾಯ ಮಾಡಿದಂತೆ, ಈ ಚುರ್ಮಾ ಮುಂದಿನ ಒಂಬತ್ತು ದಿನಗಳವರೆಗೆ ರಾಷ್ಟ್ರದ ಸೇವೆ ಮಾಡಲು ನನಗೆ ಸಹಾಯ ಮಾಡಲಿದೆ. ಈ ಮೂಲಕ ಪ್ರಧಾನಿ ಮೋದಿ ಅವರು ನೀರಜ್ ಚೋಪ್ರಾ ತಾಯಿಗೆ ಚುರ್ಮಾ ಕಳುಹಿಸಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನಿಮ್ಮ ಮನೆಯಲ್ಲಿ ತಯಾರಿಸಿದ ‘ಚುರ್ಮಾ’ (ಹರಿಯಾಣದ ಜನಪ್ರಿಯ ಸಿಹಿ ತಿಂಡಿ) ತಂದು ಕೊಡಬೇಕೆಂದು ತಿಳಿಸಿದ್ದರು. ಇದೇ ವೇಳೆ ಮುಂದಿನ ಬಾರಿ ತಂದು ಕೊಡುವುದಾಗಿ ನೀರಜ್ ಚೋಪ್ರಾ ಹೇಳಿದ್ದರು.

2020 ರಲ್ಲಿ ನಡೆದ ಈ ಮಾತುಕತೆಯನ್ನು ಇದೀಗ ಪ್ರಧಾನಿ ಮೋದಿ ಪ್ಯಾರಿಸ್ ಒಲಿಂಪಿಕ್ಸ್​ಗೂ ಮುನ್ನ ನೆನಪಿಸಿದ್ದರು. ಈ ವೇಳೆ ಈ ಸಲ ಖಂಡಿತವಾಗಿಯೂ ತಂದು ಕೊಡುತ್ತೇನೆ ಎಂದು ನೀರಜ್ ಚೋಪ್ರಾ ಮಾತು ನೀಡಿದ್ದರು. ಈ ಸಲ ಪದಕ ಗೆದ್ದು, ನಿಮ್ಮ ಮನೆಯಲ್ಲಿ ತಾಯಿ ತಯಾರಿಸಿದ ಚುರ್ಮಾ ತಂದುಕೊಡಬೇಕೆಂದು ಪ್ರಧಾನಿ ಮೋದಿ ತಿಳಿಸಿದ್ದರು.

ಇದನ್ನೂ ಓದಿ: Neeraj Chopra: ಕೇವಲ 1 ಸೆಂಟಿ ಮೀಟರ್ ಅಂತರದಲ್ಲಿ ನೀರಜ್ ಚೋಪ್ರಾ ಕೈ ತಪ್ಪಿದ ಅಗ್ರಸ್ಥಾನ

ಅದರಂತೆ ಇದೀಗ ನೀರಜ್ ಚೋಪ್ರಾ ಅವರು ತಾಯಿಯ ಕೈಯಿಂದ ತಯಾರಾದ ದೇಸಿ ಚುರ್ಮಾ ಸಿಹಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡಿದ್ದಾರೆ. ಇದನ್ನು ಸೇವಿಸಿದ ಪ್ರಧಾನಿ ವಿಶೇಷ ಪತ್ರದ ಮೂಲಕ ಚೋಪ್ರಾ ಅವರ ತಾಯಿ ಸರೋಜ್ ದೇವಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಮಾರ್ಟಿನ್ ರಿಲೀಸ್ ಹೊಸ್ತಿಲಲ್ಲಿ ಚಿತ್ರತಂಡದ ಸುದ್ದಿಗೋಷ್ಠಿ; ಲೈವ್ ನೋಡಿ..
ಮಾರ್ಟಿನ್ ರಿಲೀಸ್ ಹೊಸ್ತಿಲಲ್ಲಿ ಚಿತ್ರತಂಡದ ಸುದ್ದಿಗೋಷ್ಠಿ; ಲೈವ್ ನೋಡಿ..
‘ನಾನೇ ಬಿಗ್ ಬಾಸ್’: ಶಾಕಿಂಗ್ ಹೇಳಿಕೆ ನೀಡಿ ಹೊರಗೆ ಬರಲು ಸಿದ್ಧವಾದ ಜಗದೀಶ್​
‘ನಾನೇ ಬಿಗ್ ಬಾಸ್’: ಶಾಕಿಂಗ್ ಹೇಳಿಕೆ ನೀಡಿ ಹೊರಗೆ ಬರಲು ಸಿದ್ಧವಾದ ಜಗದೀಶ್​
ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ