ಇದರೊಂದಿಗೆ 9 ವರ್ಷಗಳ ನಂತರ ದಕ್ಷಿಣ ಆಫ್ರಿಕಾದ ಆಟಗಾರನೊಬ್ಬ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ದಾಖಲೆಯನ್ನು ರಿಕಲ್ಟನ್ ಬರೆದಿದ್ದಾರೆ. ಇದಕ್ಕೂ ಮೊದಲು ಕೇಪ್ ಟೌನ್‌ನಲ್ಲಿ ನಡೆದ ಹೊಸ ವರ್ಷದ ಟೆಸ್ಟ್‌ನಲ್ಲಿ ಹಶೀಮ್ ಆಮ್ಲಾ ದ್ವಿಶತಕ ಸಿಡಿಸಿದ್ದರು. ಅಷ್ಟೇ ಅಲ್ಲ, ಪಾಕಿಸ್ತಾನದ ವಿರುದ್ಧ ದ್ವಿಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರಿಕಲ್ಟನ್ ಪಾತ್ರರಾಗಿದ್ದಾರೆ.