US‌ ಓಪನ್‌:‌‌ 2ನೇ ಸುತ್ತಿಗೆ ಸಮೀತ್‌ ನಗಾಲ್‌, 2013ರ ನಂತರ ಮೊದಲ ಭಾರತೀಯ!

ನ್ಯೂಯಾರ್ಕ್‌: ಕೊರೊನಾ ಸಂಕಷ್ಟದ ನಡುವೆಯೂ ಭಾರತಕ್ಕೆ ಕ್ರೀಡೆಯಲ್ಲಿ ಖುಷಿಯ ಸುದ್ದಿಯೊಂದು ಅಮೆರಿಕದಿಂದ ಬಂದಿದೆ. ಇದೇ ಮೊದಲ ಬಾರಿಗೆ 2013ರ ನಂತರ ಭಾರತದ ಟೆನಿಸ್‌ ಆಟಗಾರರೊಬ್ಬರು ಗ್ರಾಂಡಸ್ಲಾಮ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಎರಡನೇ ಸುತ್ತು ತಲುಪಿದ ಸಾಧನೆ ಮಾಡಿದ್ದಾರೆ. ಭಾರತದ ಉದಯೋನ್ಮುಖ ಆಟಗಾರ ಸಮೀತ್‌ ನಗಾಲ್‌ ಯುಎಸ್‌ ಓಪನ್‌ ಗ್ರಾಂಡ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಕೋಟ್ಯಂತರ ಭಾರತೀಯರಿಗೆ ಸಂತಸದ ಸಿಹಿ ನೀಡಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಸಮೀತ್‌ ನಗಾಲ್‌ ಅವರು, ಅಮೆರಿಕದವರೇ […]

US‌ ಓಪನ್‌:‌‌ 2ನೇ ಸುತ್ತಿಗೆ ಸಮೀತ್‌ ನಗಾಲ್‌, 2013ರ ನಂತರ ಮೊದಲ ಭಾರತೀಯ!
Follow us
Guru
| Updated By: Skanda

Updated on:Nov 24, 2020 | 8:13 AM

ನ್ಯೂಯಾರ್ಕ್‌: ಕೊರೊನಾ ಸಂಕಷ್ಟದ ನಡುವೆಯೂ ಭಾರತಕ್ಕೆ ಕ್ರೀಡೆಯಲ್ಲಿ ಖುಷಿಯ ಸುದ್ದಿಯೊಂದು ಅಮೆರಿಕದಿಂದ ಬಂದಿದೆ. ಇದೇ ಮೊದಲ ಬಾರಿಗೆ 2013ರ ನಂತರ ಭಾರತದ ಟೆನಿಸ್‌ ಆಟಗಾರರೊಬ್ಬರು ಗ್ರಾಂಡಸ್ಲಾಮ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಎರಡನೇ ಸುತ್ತು ತಲುಪಿದ ಸಾಧನೆ ಮಾಡಿದ್ದಾರೆ.

ಭಾರತದ ಉದಯೋನ್ಮುಖ ಆಟಗಾರ ಸಮೀತ್‌ ನಗಾಲ್‌ ಯುಎಸ್‌ ಓಪನ್‌ ಗ್ರಾಂಡ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಕೋಟ್ಯಂತರ ಭಾರತೀಯರಿಗೆ ಸಂತಸದ ಸಿಹಿ ನೀಡಿದ್ದಾರೆ.

ಮೊದಲ ಸುತ್ತಿನ ಪಂದ್ಯದಲ್ಲಿ ಸಮೀತ್‌ ನಗಾಲ್‌ ಅವರು, ಅಮೆರಿಕದವರೇ ಆದ ಬ್ರಾಡ್ಲೀ ಕ್ಲಾನ್‌ ಅವರನ್ನು 6-1, 6-3, 3-6, 6-1ರಿಂದ ಸೋಲಿಸುವ ಮೂಲಕ ತಮ್ಮ ಜೀವನದ ಮೊದಲ ಗ್ರಾಂಡ್‌ ಸ್ಲಾಮ್‌ ಟೂರ್ನಿಯ ಜಯ ಸಾಧಿಸಿದ್ದಾರೆ.

ಭಾರತದ ಮಾಜಿ ಟೆನಿಸ್‌ ಆಟಗರಾರ ಸೋಮದೇವ್‌ ದೇವವರ್ಮನ್‌ 2013ರಲ್ಲಿ ಕೊನೆಯ ಬಾರಿಗೆ ಗ್ರಾಂಡ್‌ಸ್ಲಾಮ್‌ ಟೂರ್ನಿಯ ಎರಡನೇ ಸುತ್ತು ತಲುಪಿದ ಭಾರತದ ಆಟಗಾರ. ಅವರು ಯುಎಸ್‌ ಓಪನ್‌, ಆಸ್ಟ್ರೇಲಿಯನ್‌ ಓಪನ್‌ ಮತ್ತು ಫ್ರೇಂಚ್‌ ಓಪನ್‌ಗಳಲ್ಲಿ ಎರಡನೇ ಸುತ್ತು ತಲುಪಿದ್ದರು.

ಸಮೀತ್‌ ಈಗ ತಮ್ಮ ಎರಡನೇ ಸುತ್ತಿನ ಪಂದ್ಯವನ್ನು ಗುರುವಾರ ಆಡಲಿದ್ದು, ಕೋಟ್ಯಂತರ ಭಾರತೀಯ ಗಮನ ಈಗ ಗುರುವಾರದ ಪಂದ್ಯದ ಮೇಲೆ ನೆಟ್ಟಿದೆ.

Published On - 1:46 pm, Wed, 2 September 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್