AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: 85ನೇ ಶತಕದಂಚಿನಲ್ಲಿ ಎಡವಿದ ವಿರಾಟ್ ಕೊಹ್ಲಿ

Virat Kohli's 93 vs NZ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ 93 ರನ್ ಗಳಿಸಿ ಅಬ್ಬರಿಸಿದರು. 77ನೇ ಅರ್ಧಶತಕದೊಂದಿಗೆ 28 ಸಾವಿರ ಅಂತರಾಷ್ಟ್ರೀಯ ರನ್‌ಗಳ ಗಡಿ ದಾಟಿ, ಸಂಗಕ್ಕಾರ ಅವರನ್ನು ಹಿಂದಿಕ್ಕಿದರು. ಶತಕದ ಅಂಚಿನಲ್ಲಿ ಎಡವಿದ ಕೊಹ್ಲಿ, ಕೇವಲ 7 ರನ್‌ಗಳಿಂದ ಸೆಹ್ವಾಗ್ ಅವರ ನ್ಯೂಜಿಲೆಂಡ್ ವಿರುದ್ಧದ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಮುರಿಯುವ ಅವಕಾಶ ಕಳೆದುಕೊಂಡರು.

ಪೃಥ್ವಿಶಂಕರ
|

Updated on: Jan 11, 2026 | 9:34 PM

Share
ಪ್ರಸ್ತುತ ಅತ್ಯುತ್ತಮ ಫಾರ್ಮ್​ನಲ್ಲಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದಿನಿಂದ ಆರಂಭವಾಗಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಅದನ್ನು ಮುಂದುವರೆಸಿದರು. ಕಳೆದ 4 ಪಂದ್ಯಗಳಲ್ಲಿ 50 ಪ್ಲಸ್ ರನ್ ಕಲೆಹಾಕಿದ್ದ ಕೊಹ್ಲಿ, ಕಿವೀಸ್ ವಿರುದ್ಧವೂ ಮತ್ತೊಂದು ಅರ್ಧಶತಕದ ಇನ್ನಿಂಗ್ಸ್ ಆಡಿದರು.

1 / 6
ರೋಹಿತ್ ವಿಕೆಟ್ ಪತನದ ಬಳಿಕ ಮೈದಾನಕ್ಕೆ ಕಾಲಿಟ್ಟ ಕೊಹ್ಲಿ ಬೌಂಡರಿಯೊಂದಿಗೆ ತಮ್ಮ ಖಾತೆ ತೆರೆದರು. ಆ ಬಳಿಕ ಹೊಡಿಬಡಿ ಆಟದೊಂದಿಗೆ ತಂಡದ ಸ್ಕೋರ್ ಬೋರ್ಡ್​ ವೇಗ ಹೆಚ್ಚಿಸಿದ ಕೊಹ್ಲಿ 25 ರನ್ ಕಲೆಹಾಕುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 28 ಸಾವಿರ ರನ್​ಗಳ ಗಡಿ ಕೂಡ ದಾಟಿದರು.

2 / 6
ಆ ಬಳಿಕ ತಮ್ಮ ಖಾತೆಗೆ 42 ರನ್​ಗಳ ಸೇರಿದ ಬೆನ್ನಲ್ಲೇ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದರು. ಇದು ಮಾತ್ರವಲ್ಲದೆ ಕೊಹ್ಲಿ 44 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಿಜೀವನದ 77ನೇ ಅರ್ಧಶತಕವನ್ನು ಪೂರೈಸಿದರು.

3 / 6
ಅರ್ಧಶತಕದ ಬಳಿಕ ತಮ್ಮ ಬ್ಯಾಟಿಂಗ್‌ ಗೇರ್ ಬದಲಿಸಿದ ಕೊಹ್ಲಿ ಶತಕದತ್ತ ಸಾಗುತ್ತಿದ್ದರು. ಇದರೊಂದಿಗೆ ಶ್ರೇಯಸ್ ಜೊತೆಗೂಡಿ ತಂಡವನ್ನು ಸಹ 200 ರನ್​ಗಳ ಗಡಿ ದಾಟಿಸಿದರು. ಆದರೆ 93 ರನ್ ಬಾರಿಸಿ ಶತಕದತ್ತ ಸಾಗುತ್ತಿದ್ದ ಕೊಹ್ಲಿ ಜೇಮಿಸನ್ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಲು ಯತ್ನಿಸಿ ಬ್ರೇಸ್‌ವೆಲ್​ಗೆ ಕ್ಯಾಚ್​ ನೀಡಿ ವಿಕೆಟ್ ಒಪ್ಪಿಸಿದರು.

4 / 6
ಕೊಹ್ಲಿ ವಿಕೆಟ್ ಒಪ್ಪಿಸುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಮೌನ ಸಾಗರದಲ್ಲಿ ಮುಳುಗಿತು. ಕೊಹ್ಲಿ ಕೂಡ ಬೇಸರದಲ್ಲಿ ಪೆವಿಲಿಯನ್​ತ್ತ ಹೆಜ್ಜೆ ಹಾಕಿದರು. ಈ ಪಂದ್ಯದಲ್ಲಿ ಕೊಹ್ಲಿ ಇನ್ನು 7 ರನ್ ಕಲೆಹಾಕಿದರೆ, ತಮ್ಮ ಏಕದಿನ ವೃತ್ತಿಜೀವನದ 54ನೇ ಏಕದಿನ ಶತಕವನ್ನು ಪೂರೈಸುವುದರೊಂದಿಗೆ, ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿಯುತ್ತಿದ್ದರು.

5 / 6
ವಾಸ್ತವವಾಗಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ಹಾಗೂ ಕೊಹ್ಲಿ ತಲಾ 6 ಶತಕಗಳೊಂದಿಗೆ ಅಗ್ರಸ್ಥಾನದಲಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದ್ದರೆ 7ನೇ ಶತಕದೊಂದಿಗೆ ಸೆಹ್ವಾಗ್​ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುತ್ತಿದ್ದರು. ಆದರೆ ಕೇವಲ 7 ರನ್​ಗಳಿಂದ ಕೊಹ್ಲಿ ಈ ದಾಖಲೆಯಿಂದ ವಂಚಿತರಾದರು.

6 / 6