ಅರ್ಜುನ ಪ್ರಶಸ್ತಿ ಪಡೆಯಲು ಇನ್ಯಾವ ಪದಕ ಗೆಲ್ಲಬೇಕು ಹೇಳಿ? -ಪ್ರಧಾನಿಗೆ ಸಾಕ್ಷಿ ಮಲ್ಲಿಕ್ ಪತ್ರ
ದೆಹಲಿ: ದೇಶದಲ್ಲಿ ಕ್ರೀಡಾ ಲೋಕದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಅರ್ಜುನ ಪ್ರಶಸ್ತಿಯನ್ನ ಪಡೆಯಲು ನಾನು ಯಾವ ಪದಕ ಗೆಲ್ಲಬೇಕು ಎಂದು ನೀವೇ ಹೇಳಿ ಅಂತಾ ಕ್ರೀಡಾಪಟು ಒಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸಂಗತಿ ವರದಿಯಾಗಿದೆ. ಹೌದು, ದೇಶದ ಪ್ರತಿಷ್ಠಿತ ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರಾದ ಸಾಕ್ಷಿ ಮಲ್ಲಿಕ್ ಈ ಪ್ರಶ್ನೆಯನ್ನು ತಮ್ಮ ಪತ್ರದ ಮುಖೇನ ಪ್ರಧಾನಿ ಮೋದಿಗೆ ಕೇಳಿದ್ದಾರಂತೆ. ಈ ಬಾರಿಯ ಅರ್ಜುನ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಸಾಕ್ಷಿ ಮಲ್ಲಿಕ್ ಈ […]
ದೆಹಲಿ: ದೇಶದಲ್ಲಿ ಕ್ರೀಡಾ ಲೋಕದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಅರ್ಜುನ ಪ್ರಶಸ್ತಿಯನ್ನ ಪಡೆಯಲು ನಾನು ಯಾವ ಪದಕ ಗೆಲ್ಲಬೇಕು ಎಂದು ನೀವೇ ಹೇಳಿ ಅಂತಾ ಕ್ರೀಡಾಪಟು ಒಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸಂಗತಿ ವರದಿಯಾಗಿದೆ.
ಹೌದು, ದೇಶದ ಪ್ರತಿಷ್ಠಿತ ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರಾದ ಸಾಕ್ಷಿ ಮಲ್ಲಿಕ್ ಈ ಪ್ರಶ್ನೆಯನ್ನು ತಮ್ಮ ಪತ್ರದ ಮುಖೇನ ಪ್ರಧಾನಿ ಮೋದಿಗೆ ಕೇಳಿದ್ದಾರಂತೆ. ಈ ಬಾರಿಯ ಅರ್ಜುನ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಸಾಕ್ಷಿ ಮಲ್ಲಿಕ್ ಈ ಪ್ರಶ್ನೆ ಎತ್ತಿದ್ದಾರೆ.
ಜೊತೆಗೆ, ನನಗೆ ಖೇಲ್ ರತ್ನ ಪ್ರಶ್ತಿ ದೊರಕಿರುವುದರ ಹೆಮ್ಮೆಯಿದೆ. ಪ್ರತಿಯೊಬ್ಬ ಕ್ರೀಡಾಪಟು ಎಲ್ಲಾ ಪುರಸ್ಕಾರಗಳನ್ನು ಗೆಲ್ಲುವ ಮಹದಾಸೆ ಹೊತ್ತಿರುತ್ತಾರೆ. ಅದಕ್ಕಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಆಟವಾಡುತ್ತಾರೆ. ಅಂತೆಯೇ, ನಾನು ಕೂಡ ಶ್ರಮಿಸಿದ್ದೇನೆ. ಹಾಗಾಗಿ, ನಾನೂ ಅರ್ಜುನ ಪ್ರಶಸ್ತಿ ಪುರಸ್ಕೃತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕೆಂಬ ಕನಸಿದೆ ಎಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
माननीय प्रधानमंत्री @narendramodi जी ओर माननीय खेल मंत्री @KirenRijiju जी । pic.twitter.com/YF1hQuJfPi
— Sakshi Malik (@SakshiMalik) August 22, 2020
Published On - 1:20 pm, Sun, 23 August 20