AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Realme Narzo 50: ಮೊದಲ ಸೇಲ್​ನಲ್ಲೇ ಬಂಪರ್ ಡಿಸ್ಕೌಂಟ್: ಇಂದೇ ಖರೀದಿಸಿ ಹೊಸ ರಿಯಲ್‌ ಮಿ ನಾರ್ಜೊ 50 ಫೋನ್

Realme Narzo 50 Sale: ರಿಯಲ್‌ ಮಿ ನಾರ್ಜೊ 50 ಸ್ಮಾರ್ಟ್​ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಮಧ್ಯಾಹ್ನ 12 ಗಂಟೆಯಿಂದ ಮೊದಲ ಸೇಲ್ ಕಾಣುತ್ತಿದೆ. ಜೊತೆಗೆ ಕಂಪನಿಯ ಆನ್‌ಲೈನ್ ಸ್ಟೋರ್ ಮತ್ತು ರಿಟೇಲ್‌ ಸ್ಟೋರ್‌ನಲ್ಲಿ ಖರೀದಿಸಬಹುದು.

Realme Narzo 50: ಮೊದಲ ಸೇಲ್​ನಲ್ಲೇ ಬಂಪರ್ ಡಿಸ್ಕೌಂಟ್: ಇಂದೇ ಖರೀದಿಸಿ ಹೊಸ ರಿಯಲ್‌ ಮಿ ನಾರ್ಜೊ 50 ಫೋನ್
Realme Narzo 50 5G
TV9 Web
| Edited By: |

Updated on:Mar 03, 2022 | 2:53 PM

Share

ರಿಯಲ್ ಮಿ ಕಂಪನಿ ಭಾರತದಲ್ಲಿ ಇತ್ತೀಚೆಗಷ್ಟೆ ತನ್ನ ಬಹುನಿರೀಕ್ಷಿತ ಹೊಸ ರಿಯಲ್‌ ಮಿ ನಾರ್ಜೊ 50 (Realme Narzo 50) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿತ್ತು. ಬಲಿಷ್ಠ ಬ್ಯಾಟರಿ, ಅತ್ಯುತ್ತಮ ಕ್ಯಾಮೆರಾ, ಮೀಡಿಯಾಟೆಕ್‌ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿರುವ ಈ ಫೋನ್ ಸಾಕಷ್ಟು ವಿಶೇಷವಾಗಿದೆ. ಇದು ಇಂದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ (Amazon) ಮಧ್ಯಾಹ್ನ 12 ಗಂಟೆಯಿಂದ ಮೊದಲ ಸೇಲ್ ಕಾಣುತ್ತಿದೆ. ಜೊತೆಗೆ ಕಂಪನಿಯ ಆನ್‌ಲೈನ್ ಸ್ಟೋರ್ ಮತ್ತು ರಿಟೇಲ್‌ ಸ್ಟೋರ್‌ನಲ್ಲಿ ಖರೀದಿಸಬಹುದು. ಬಜೆಟ್ ಬೆಲೆಯ ಈ ಫೋನ್ ಮತ್ತಷ್ಟು ಡಿಸ್ಕೌಂಟ್​ನಲ್ಲಿ ಕೂಡ ಖರೀದಿಸಬಹುದಾದ ಆಯ್ಕೆ ನೀಡಲಾಗಿದೆ. ರಿಯಲ್‌ ಮಿ ನಾರ್ಜೊ 50 ಸ್ಮಾರ್ಟ್​ಫೋನ್ (Smartphone) ಸ್ಪೀಡ್ ಬ್ಲ್ಯಾಕ್ ಮತ್ತು ಸ್ಪೀಡ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಬೆಲೆ ಎಷ್ಟು?:

ಭಾರತದಲ್ಲಿ ರಿಯಲ್‌ಮಿ ನಾರ್ಜೊ 50 ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಎರಡು ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ಮಾದರಿಗೆ ಕೇವಲ 12,999 ರೂ. ನಿಗದಿ ಮಾಡಲಾಗಿದೆ. ಇನ್ನು 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 15,499 ರೂ.ಆಗಿದೆ. ನೀವು ಹೆಡ್​ಡಿಎಫ್​ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್​ ಹೊಂದಿದ್ದು ಇದರ ಮೂಲಕ ಖರೀದಿ ಮಾಡಿದರೆ 1,000 ರೂ. ಗಳ ಆಕರ್ಷಕ ಡಿಸ್ಕೌಂಟ್​ನಲ್ಲಿ ಈ ಫೋನನ್ನು ನಿಮ್ಮದಾಗಿಸಬಹುದು.

ಏನು ವಿಶೇಷತೆ?:

ರಿಯಲ್‌ಮಿ ನಾರ್ಜೊ 50 ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್‌ HD+ IPS LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ಮತ್ತು 600 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸಸ್​ನಿಂದ ಕೂಡಿದೆ ಮೀಡಿಯಾಟೆಕ್‌ ಹಿಲಿಯೋ G96 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ರಿಯಲ್‌ಮಿ UI 2.0 ಜೊತೆಗೆ ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ವರ್ಚುವಲ್ ಮೆಮೊರಿಯಾಗಿ ಬಳಸಿಕೊಳ್ಳುವ ಮೂಲಕ ಲಭ್ಯವಿರುವ ಮೆಮೊರಿಯನ್ನು 11GB ವರೆಗೆ ವಿಸ್ತರಿಸಲು ಡೈನಾಮಿಕ್ RAM ವಿಸ್ತರಣೆ ವೈಶಿಷ್ಟ್ಯವನ್ನು ಸಹ ಒಳಗೊಂಡಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

ಈ ಫೋನಿನ ಕ್ಯಾಮೆರಾ ಭರ್ಜರಿ ಆಗಿದ್ದು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ರಿಯಲ್‌ಮಿ ನಾರ್ಜೊ 50 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಸೂಪರ್ಡಾರ್ಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕೇವಲ 70 ನಿಮಿಷಗಳಲ್ಲಿ 0-100% ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ ಮತ್ತು GPS ನಿಂದ ಕೂಡಿದೆ.

WhatsApp: ನೀವು ವಾಟ್ಸ್​ಆ್ಯಪ್​ನಲ್ಲಿ ಆ ರೀತಿಯ ವಿಡಿಯೋ ಕಳುಹಿಸುತ್ತೀರಾ?: ಹಾಗಿದ್ರೆ ತಪ್ಪದೇ ಈ ಸ್ಟೋರಿ ಓದಿ

One Plus Nord 3: ಕೇವಲ 15 ನಿಮಿಷಗಳಲ್ಲಿ ಫುಲ್ ಚಾರ್ಜ್: ಒನ್​ಪ್ಲಸ್ ಬಿಡುಗಡೆ ಮಾಡುತ್ತಿದೆ ಅಚ್ಚರಿಯ ಫೋನ್

Published On - 2:53 pm, Thu, 3 March 22

Follow Us
TV9 Web
TV9 Web

TV9 Kannada

Read More
ಟಿವಿ9 ವರದಿಯ ಪರಿಣಾಮ: ತೆಕ್ಕಲಕೋಟೆ ಆಸ್ಪತ್ರೆ ವಾರ್ಡ್‌ಗೆ ಹೊಸ UPS ಅಳವಡಿಕೆ
ಟಿವಿ9 ವರದಿಯ ಪರಿಣಾಮ: ತೆಕ್ಕಲಕೋಟೆ ಆಸ್ಪತ್ರೆ ವಾರ್ಡ್‌ಗೆ ಹೊಸ UPS ಅಳವಡಿಕೆ
ಪೊಲೀಸರ ಜೀಪನ್ನೇ ಅಲುಗಾಡಿಸಿ ವಿದ್ಯಾರ್ಥಿನಿಯರ ಆಕ್ರೋಶ
ಪೊಲೀಸರ ಜೀಪನ್ನೇ ಅಲುಗಾಡಿಸಿ ವಿದ್ಯಾರ್ಥಿನಿಯರ ಆಕ್ರೋಶ
ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ರದ್ದಾಗಲು ಪ್ರಭಾವಿ ವ್ಯಕ್ತಿ ಕರೆಯೇ ಕಾರಣ
ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ರದ್ದಾಗಲು ಪ್ರಭಾವಿ ವ್ಯಕ್ತಿ ಕರೆಯೇ ಕಾರಣ
ಇಂಡಿ ಮೈತ್ರಿಕೂಟದಿಂದ ಸುಪ್ರೀಂ ಚಲೋ ಮೆರವಣಿಗೆ
ಇಂಡಿ ಮೈತ್ರಿಕೂಟದಿಂದ ಸುಪ್ರೀಂ ಚಲೋ ಮೆರವಣಿಗೆ
ಅಜ್ಜಿಯ ಅಂತ್ಯಕ್ರಿಯೆಗೂ ಬಿಡಲಿಲ್ಲ ಎಂದ ಸಿಜೆಪಿ ನಾಯಕರಿಗೆ ವಿಡಿಯೋ ತಿರುಗೇಟು
ಅಜ್ಜಿಯ ಅಂತ್ಯಕ್ರಿಯೆಗೂ ಬಿಡಲಿಲ್ಲ ಎಂದ ಸಿಜೆಪಿ ನಾಯಕರಿಗೆ ವಿಡಿಯೋ ತಿರುಗೇಟು
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್​ಗೆ ಸಂಪೂರ್ಣ ಕಡಿವಾಣ
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್​ಗೆ ಸಂಪೂರ್ಣ ಕಡಿವಾಣ
ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಪೋಟ
ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಪೋಟ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ