AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನೀವು ಸ್ಮಾರ್ಟ್​ಫೋನ್ ಅನ್ನು ಈರೀತಿ ಚಾರ್ಜ್ ಮಾಡುತ್ತಿದ್ದರೆ ಒಮ್ಮೆ ಇಲ್ಲಿ ಗಮನಿಸಿ

Smartphone Tips: ನಿಮ್ಮ ಸ್ಮಾರ್ಟ್​ಫೋನ್ ಅನ್ನು ನೀವು ತಪ್ಪಾಗಿ ಚಾರ್ಜ್ ಮಾಡಿದರೆ ಅದು ಹಾನಿಗೊಳಗಾಗಬಹುದು. ಇದು ಬ್ಯಾಟರಿಯ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಇದು ಮೊಬೈಲ್ ಬ್ಲಾಸ್ಟ್ ಆಗಲು ಕೂಡ ಕಾರಣವಾಗಬಹುದು. ಹಾಗಾದರೆ, ಚಾರ್ಜ್ ಮಾಡುವಾಗ ಏನು ಎಚ್ಚರಿಕೆ ವಹಿಸಬೇಕು.

Tech Tips: ನೀವು ಸ್ಮಾರ್ಟ್​ಫೋನ್ ಅನ್ನು ಈರೀತಿ ಚಾರ್ಜ್ ಮಾಡುತ್ತಿದ್ದರೆ ಒಮ್ಮೆ ಇಲ್ಲಿ ಗಮನಿಸಿ
Mobile Charging
Vinay Bhat
|

Updated on: Dec 28, 2023 | 1:57 PM

Share

ಇಂದು ಸ್ಮಾರ್ಟ್‌ಫೋನ್‌ಗಳು (Smartphones) ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇವುಗಳನ್ನು ಬಳಸಲು ನಾವು ಪ್ರತಿದಿನ ಚಾರ್ಜ್ ಮಾಡಬೇಕಾಗುತ್ತದೆ. ಹೀಗೆ ಫೋನ್ ಅನ್ನು ಚಾರ್ಜ್ ಮಾಡುವಾಗ ಕೆಲ ತಪ್ಪುಗಳನ್ನು ಮಾಡಿದರೆ ಅನೇಕ ತೊಂದರೆಗಳು ಉಂಟಾಗಬಹುದು. ಮೊಬೈಲ್ ಸ್ಫೋಟಗೊಳ್ಳುವ ಅಪಾಯವೂ ಇದೆ. ಗಂಭೀರವಾದ ಗಾಯ ಅಥವಾ ಸಾವುಕೂಡ ಸಂಭವಿಸಬಹುದು. ತಪ್ಪಾಗಿ ಚಾರ್ಜ್ ಮಾಡಿದರೆ ಸ್ಮಾರ್ಟ್‌ಫೋನ್ ಹಾನಿಗೊಳಗಾಗಬಹುದು. ಇದಲ್ಲದೆ, ಬ್ಯಾಟರಿಯ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ಕೆಲವು ತಪ್ಪುಗಳಿಂದಾಗಿ ಫೋನ್ ಬಿಸಿಯಾಗುವ ಸಮಸ್ಯೆಯೂ ಉದ್ಭವಿಸುತ್ತದೆ. ಹಾಗಾದರೆ ನಾವು ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ.

ಚಾರ್ಜರ್ ಸ್ವಿಚ್ ಆಫ್ ಮಾಡಿ

ಫೋನ್ ಚಾರ್ಜ್ ಆದಾಗ ಜನರು ಫೋನ್ ಅನ್ನು ಮಾತ್ರ ತೆಗೆಯುತ್ತಾರೆ. ಆದರೆ ಚಾರ್ಜರ್ ಅನ್ನು ಅನ್ನು ಅಲ್ಲೇ ಬಿಟ್ಟು ಪ್ಲಗ್ ಕೂಡ ಆಫ್ ಮಾಡುವುದಿಲ್ಲ. ಇದು ಚಾರ್ಜರ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸಬಹುದು. ಆದ್ದರಿಂದ, ಫೋನ್ ಅನ್ನು ಚಾರ್ಜ್ ಮಾಡಿದ ನಂತರ, ಸ್ವಿಚ್ ಆಫ್ ಮಾಡಿ. ಹಾಗೆಯೆ ಸ್ವಿಚ್ ಆನ್ ಮಾಡಿ ಚಾರ್ಜಿಂಗ್‌ನಲ್ಲಿ ಫೋನ್ ಬಿಡುವ ಅಭ್ಯಾಸ ಜನರಲ್ಲಿದೆ. ಫೋನ್ ಚಾರ್ಜ್ ಆದ ನಂತರವೂ ಚಾರ್ಜರ್ ಅನ್ನು ಕನೆಕ್ಟ್ ಮಾಡುವುದರಿಂದ ಬ್ಯಾಟರಿ ಬೇಗ ಹಾಳಾಗುವ ಅಪಾಯವಿದೆ.

Sim Card: ಸಿಮ್ ಕಾರ್ಡ್ ಖರೀದಿಸುವ ಮುನ್ನ ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಿ

ಇದನ್ನೂ ಓದಿ
Image
ಚಿನ್ನ ಖರೀದಿಸುವ ಮೊದಲು ಈ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಿ
Image
ಐಕ್ಯೂಯಿಂದ ಬಂಪರ್ ಫೋನ್ ಬಿಡುಗಡೆ: ಐಕ್ಯೂ ನಿಯೋ 9, ನಿಯೋ 9 ಪ್ರೊ ಅನಾವರಣ
Image
60MP ಸೆಲ್ಫಿ ಕ್ಯಾಮೆರಾ,100W ಫಾಸ್ಟ್ ಚಾರ್ಜರ್: ಹುವೈ ನೋವ 12 ಸರಣಿ ರಿಲೀಸ್
Image
ಡೀಪ್​ಫೇಕ್ ಬಗ್ಗೆ ಬಳಕೆದಾರರಲ್ಲಿ ಅರಿವು: ಸೋಷಿಯಲ್ ಮೀಡಿಯಾಗೆ ಸರ್ಕಾರ ಸೂಚನೆ

ಸ್ಫೋಟ ಸಂಭವಿಸಬಹುದು

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್​ಫೋನ್ ಕಂಪನಿಗಳು ಮೊಬೈಲ್​ಗಳೊಂದಿಗೆ ಚಾರ್ಜರ್‌ಗಳನ್ನು ಒದಗಿಸುವುದಿಲ್ಲ. ಜನರು ಪ್ರತ್ಯೇಕ ಚಾರ್ಜರ್ ಖರೀದಿಸಬೇಕು. ಈ ಚಾರ್ಜರ್‌ಗಳು ಸ್ವಲ್ಪ ದುಬಾರಿಯಾಗಿರುವುದರಿಂದ ಕೆಲವರು ಲೋಕಲ್ ಚಾರ್ಜರ್‌ಗಳನ್ನು ಖರೀದಿಸುತ್ತಾರೆ. ಆದರೆ ಹಾಗೆ ಮಾಡುವುದು ಅಪಾಯಕಾರಿ, ಏಕೆಂದರೆ, ಇದರಿಂದ ಫೋನ್ ಸ್ಫೋಟಗೊಳ್ಳುವ ಅಪಾಯವಿದೆ. ಆದ್ದರಿಂದ, ಯಾವಾಗಲೂ ಆ ಫೋನ್​ಗೆ ನಿಗದಿ ಪಡಿಸಿದ ಚಾರ್ಜರ್ ಅನ್ನು ಮಾತ್ರ ಬಳಸಬೇಕು.

ಇತರೆ ಫೋನ್ ಚಾರ್ಜರ್

ಇತರೆ ಫೋನ್‌ನ ಚಾರ್ಜರ್‌ನೊಂದಿಗೆ ನಿಮ್ಮ ಫೋನ್ ಚಾರ್ಜ್ ಮಾಡುವಾಗ ತುಂಬಾ ನಿಧಾನವಾಗಿ ಚಾರ್ಜ್ ಆಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಏಕೆಂದರೆ ನೀವು ಬಳಸುತ್ತಿರುವ ಚಾರ್ಜರ್ ನಿಮ್ಮ ಫೋನ್ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಫೋನ್‌ನೊಂದಿಗೆ ಒದಗಿಸಲಾದ ಚಾರ್ಜರ್‌ನೊಂದಿಗೆ ಅದನ್ನು ಚಾರ್ಜ್ ಮಾಡಿ. ನಿಮ್ಮ ಫೋನ್ 20W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಭಾವಿಸೋಣ, ಆದರೆ, ನೀವು ಕನೆಕ್ಟ್ ಮಾಡಿರುವ ಚಾರ್ಜರ್ 120W ಅಥವಾ 65W ನದ್ದಾಗಿದ್ದರೆ ಫೋನ್ ಬಿಸಿಯಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್