Diesel
ಡೀಸಲ್ ಎಂಬುದು ಪೆಟ್ರೋಲ್ ರೀತಿ ಒಂದು ಪೆಟ್ರೋಲಿಯಂ ಉತ್ಪನ್ನ. ಡೀಸಲ್ ಎಂಜಿನ್ನ ವಾಹನಗಳಿಗೆ ಇದನ್ನು ಇಂಧನವಾಗಿ ಬಳಸಲಾಗುತ್ತದೆ. ಪೆಟ್ರೋಲಿಯಂ ಅಥವಾ ಕಚ್ಛಾ ತೈಲ ಮಾತ್ರವಲ್ಲ, ಬೇರೆ ಮೂಲಗಳಿಂದಲೂ ಡೀಸೆಲ್ ಇಂಧನ ತಯಾರಿಸಬಹುದು. ಸಿಂಥೆಟಿಕ್ ಡೀಸಲ್, ಬಯೋಡೀಸಲ್ ಕೂಡ ಇದೆ. ವೆಜಿಟಬಲ್ ಆಯಿಲ್ ಅಥವಾ ಪ್ರಾಣಿಗಳ ಕೊಬ್ಬಿನಿಂದ ಬಯೋಡೀಸಲ್ ತಯಾರಿಸಬಹುದು. ಪೆಟ್ರೋಲಿಯಂನಿಂದ ತಯಾರಿಸಲಾಗುವ ಡೀಸಲ್ ಅತಿ ಸಾಮಾನ್ಯವಾಗಿ ಬಳಕೆಯಲ್ಲಿ ಇದೆ. ಪೆಟ್ರೋಲ್ಗೆ ಹೋಲಿಸಿದರೆ ಡೀಸಲ್ ಹೆಚ್ಚು ಮಾಲಿನ್ಯಕಾರಕ ಎನಿಸಿದೆ. ಹೀಗಾಗಿ, ಡೀಸಲ್ ಇಂಧನ ಬಳಕೆಯನ್ನು ವಿವಿಧ ಸರ್ಕಾರಗಳು ಸಾಧ್ಯವಾದಷ್ಟು ನಿರ್ಬಂಧಿಸಲು ಯತ್ನಿಸುತ್ತಿವೆ. ಡೀಸಲ್ ಎಂಜಿನ್ನ ವಾಹನಗಳ ತಯಾರಿಕೆ ಬಹಳ ಕಡಿಮೆ ಆಗಿದೆ. ಮುಂದಿನ ಕೆಲ ವರ್ಷಗಳಲ್ಲಿ ಡೀಸಲ್ ಮಾತ್ರವಲ್ಲ ಪೆಟ್ರೋಲ್ ಎಂಜಿನ್ನ ವಾಹನಗಳ ತಯಾರಿಕೆಯೂ ನಿಂತು ಹೋಗಲಿದೆ. ಪರಿಸರ ಮಾಲಿನ್ಯಕ್ಕೆ ಧಕ್ಕೆಯಾಗುವ ಕಾರಣಕ್ಕೆ ಸರ್ಕಾರಗಳು ಈ ಕ್ರಮ ಕೈಗೊಳ್ಳುತ್ತಿವೆ. ಆದಾಗ್ಯೂ ಕೆಲವಾರು ವರ್ಷಗಳ ಕಾಲ ಡೀಸಲ್ ತೈಲ ಹೆಚ್ಚು ಬಳಕೆಯಲ್ಲಿ ಉಳಿಯುತ್ತದೆ. ಅದಕ್ಕೆ ಬೇಡಿಕೆ ಇದ್ದೇ ಇರುತ್ತದೆ.
ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?
Excise Duty Waived, But Petrol Price Won't Drop Yet: ಕೇಂದ್ರ ಸರ್ಕಾರವು ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ (E22-E30) ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸಿದೆ. ಆದರೆ, ದೇಶದಲ್ಲಿ ಪ್ರಚಲಿತದಲ್ಲಿರುವ E20 ಪೆಟ್ರೋಲ್ ಗ್ರಾಹಕರಿಗೆ ತಕ್ಷಣಕ್ಕೆ ಬೆಲೆ ಇಳಿಕೆಯಾಗುವುದಿಲ್ಲ. ಈ ನಿರ್ಧಾರವು ಭಾರತದ E30 ಎಥೆನಾಲ್ ಗುರಿಯ ಭಾಗವಾಗಿದೆ. ಇದು ರೈತರ ಆದಾಯ ಹೆಚ್ಚಿಸಲು, ಕಚ್ಚಾ ತೈಲ ಆಮದು ವೆಚ್ಚ ಕಡಿಮೆ ಮಾಡಲು ಮತ್ತು ದೀರ್ಘಾವಧಿಯಲ್ಲಿ ಆರ್ಥಿಕತೆಗೆ ಪ್ರಯೋಜನ ನೀಡಲು ಸಹಾಯಕವಾಗಿದೆ.
- Vijaya Sarathy SN
- Updated on: Jun 11, 2026
- 12:15 pm
ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ
ಕೇಂದ್ರ ಸರ್ಕಾರವು ಶೇ.22 ರಿಂದ 30ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ (E22-E30) ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ. ಇದು ಭಾರತದ ಇಂಧನ ಸ್ವಾವಲಂಬನೆ, ಪರಿಸರ ಸಂರಕ್ಷಣೆ ಮತ್ತು ಕೃಷಿ ವಲಯಕ್ಕೆ ಲಾಭ ತರಲಿದೆ. ಎಥೆನಾಲ್ ಮಿಶ್ರಣದಲ್ಲಿ ದೇಶದ ಅದ್ಭುತ ಪ್ರಗತಿಯನ್ನು ಇದು ಮತ್ತಷ್ಟು ಉತ್ತೇಜಿಸಲಿದೆ.
- Nayana Rajeev
- Updated on: Jun 11, 2026
- 9:31 am
ಒಮಾನ್-ಭಾರತ ಗ್ಯಾಸ್ ಪೈಪ್‌ಲೈನ್ ಪ್ರಾಜೆಕ್ಟ್ಗೆ ಮರುಜೀವ; ಸಾಧ್ಯತಾ ವರದಿಗೆ ಸರ್ಕಾರ ಆದೇಶ; ಈ ಯೋಜನೆಯಿಂದ ಭಾರತಕ್ಕಿದೆಯಾ ಲಾಭ?
Oman-Gujarat deep-sea gas pipeline project, feasibility study ordered: ಪಶ್ಚಿಮ ಏಷ್ಯಾ ಉದ್ವಿಗ್ನತೆಯ ನಡುವೆ, ಭಾರತವು ₹40,000 ಕೋಟಿ ವೆಚ್ಚದ 'ಒಮಾನ್-ಗುಜರಾತ್ ಆಳಸಮುದ್ರ ನೈಸರ್ಗಿಕ ಅನಿಲ ಪೈಪ್‌ಲೈನ್' ಯೋಜನೆಗೆ ಮರುಜೀವ ನೀಡಿದೆ. ಇದು ಭಾರತದ ಇಂಧನ ಭದ್ರತೆಯನ್ನು ಹೆಚ್ಚಿಸಿ, ಹಾರ್ಮುಜ್ ಜಲಸಂಧಿ ಮತ್ತು ಪಾಕಿಸ್ತಾನದ ಹಸ್ತಕ್ಷೇಪವನ್ನು ತಪ್ಪಿಸುತ್ತದೆ. ಗೇಲ್, IOCL, EIL ಸಂಸ್ಥೆಗಳಿಗೆ ಸಾಧ್ಯತಾ ವರದಿ ಸಿದ್ಧಪಡಿಸಲು ನಿರ್ದೇಶಿಸಲಾಗಿದ್ದು, ಭಾರತದ 2030ರ ಇಂಧನ ಗುರಿ ತಲುಪಲು ಇದು ನಿರ್ಣಾಯಕವಾಗಿದೆ.
- Vijaya Sarathy SN
- Updated on: Jun 10, 2026
- 2:53 pm
ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಭಾರತಕ್ಕೆ ಯಾರೂ ಹೇಳಿಲ್ಲ; ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ
ಇರಾನ್ ಸಂಘರ್ಷದಿಂದಾಗಿ 'ಸ್ಟ್ರೈಟ್ ಆಫ್ ಹಾರ್ಮುಜ್' ಮೂಲಕ ಇಂಧನ ಪೂರೈಕೆಗೆ ಅಡ್ಡಿಯಾಗಿದ್ದರೂ ಸಹ, ಜಾಗತಿಕವಾಗಿ ಗಗನಕ್ಕೇರುತ್ತಿದ್ದ ಇಂಧನ ಬೆಲೆಗಳ ಬಿಸಿಯಿಂದ ಭಾರತೀಯರನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರಿ ಏರುಪೇರುಗಳು ಮತ್ತು ಇಂಧನ ಪೂರೈಕೆಯಲ್ಲಿ ಸವಾಲುಗಳು ಎದುರಾಗಿದ್ದಾಗಲೂ ಭಾರತವು ಇಂಧನ ಬೆಲೆಗಳನ್ನು ನಿಯಂತ್ರಣದಲ್ಲಿಡುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ. ಸರ್ಕಾರದ ಇಂಧನ ನೀತಿಯಲ್ಲಿ ಗ್ರಾಹಕರ ಹಿತಾಸಕ್ತಿಯೇ ಪ್ರಮುಖ ಕೇಂದ್ರಬಿಂದುವಾಗಿದೆ ಎಂದು ಅವರು ತಿಳಿಸಿದ್ದಾರೆ.
- Sushma Chakre
- Updated on: Jun 8, 2026
- 3:16 pm
ಬೆಲೆ ಏರಿಕೆಯ ಬಿಸಿ: ಗೋಲ್ಡ್ ಸ್ಕೀಮ್ ಗಳಿಂದ ಹಿಂದೆ ಸರಿಯುತ್ತಿರುವ ಸಿಟಿ ಮಂದಿ
ಮಧ್ಯಮ ವರ್ಗದ ಜನರ ಜೀವನವೇ ಹಾಗೆ ಬಂಗಾರ ಇಷ್ಟ ಆದರೂ ಅದನ್ನ ಖರೀದಿ ಮಾಡಲು ಕಷ್ಟ ಪಡಬೇಕಾಗುತ್ತೆ. ಹೀಗಾಗಿ ಒಂದೇ ಸಲ ಅಷ್ಟೊಂದು ಹಣ ನೀಡಿ ಚಿನ್ನ ಖರೀದಿ ಮಾಡೋಕೆ ಆಗೋದಿಲ್ಲ ಅಂತ ಅನೇಕರು ಗೋಲ್ಡ್ ಸ್ಕೀಂಗಳ ಮೂಲಕ ಚಿನ್ನ ಖರೀದಿ ಮಾಡುತ್ತಿದ್ದರು. ಆದ್ರೆ, ಇದೀಗ ಈ ಸ್ಕೀಂಗಳಿಂದಲೂ ಕೂಡ ಜನರು ಹಿಂದೆ ಸರಿಯುವ ಪರಿಸ್ಥಿತಿ ಬಂದಿದ್ದು, ಜನರ ಜೀವನ ಬಲು ಕಷ್ಟ ಎನ್ನುವಂತಾಗಿದೆ. ಯಾಕೆ ಅಂತೀರಾ? ಈ ಕೆಳಗಿನಂತಿದೆ ನೋಡಿ.
- Vinay Kashappanavar
- Updated on: Jun 2, 2026
- 9:29 pm
ಪೆಟ್ರೋಲ್, ಡೀಸಲ್ ಮೇಲಿನ ರಫ್ತು ಸುಂಕ ತಗ್ಗಿಸಿದ ಸರ್ಕಾರ; ಇಂಧನ ಬೆಲೆ ಕಡಿಮೆಗೊಳ್ಳುತ್ತಾ?
Central govt reduces export tax on petrol, diesel and Jet Fuel: ಕೇಂದ್ರ ಸರ್ಕಾರ ಜೂನ್ 1ಕ್ಕೆ ಜಾರಿಗೆ ಬರುವಂತೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ರಫ್ತು ಸುಂಕವನ್ನು ಕಡಿಮೆ ಮಾಡಿದೆ. ಹಣಕಾಸು ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು 3 ರೂನಿಂದ ಒಂದೂವರೆ ರೂಗೆ ಇಳಿಸಲಾಗಿದೆ. ಡೀಸಲ್ ಮೇಲಿನ ರಫ್ತು ಸುಂಕವನ್ನು 16.5 ರೂನಿಂದ 13.5 ರೂಗೆ ತಗ್ಗಿಸಿದೆ. ಎಟಿಎಫ್ ರಫ್ತು ಸುಂಕವೂ ಕಡಿಮೆಗೊಂಡಿದೆ.
- Vijaya Sarathy SN
- Updated on: May 31, 2026
- 1:43 pm
ಅಮೆರಿಕದ ಯುದ್ಧವೆಲ್ಲವೂ ತೈಲಕ್ಕಾಗಿಯೇ; ಇವಿ, ಸೋಲಾರ್ ದಾಂಗುಡಿ ಇಟ್ಟರೂ ಆಯಿಲ್ಗೆ ಯಾಕಿಷ್ಟು ಬೇಡಿಕೆ? ಈ ಕಪ್ಪು ಚಿನ್ನ ಅಂತಿಂಥದ್ದಲ್ಲ
Why Green Energy & EVs Won't End Oil's Demand: ಜಗತ್ತು ಹಸಿರು ಇಂಧನ ಮತ್ತು ಎಲೆಕ್ಟ್ರಿಕ್ ವಾಹನಗಳತ್ತ ಸಾಗುತ್ತಿದ್ದರೂ ಕಚ್ಚಾ ತೈಲದ ಬೇಡಿಕೆ ಮುಂಬರುವ ದಶಕಗಳಲ್ಲಿ ಕಡಿಮೆಯಾಗುವುದಿಲ್ಲ. ಏಕೆಂದರೆ, ತೈಲ ಕೇವಲ ಇಂಧನವಲ್ಲ. ಪ್ಲಾಸ್ಟಿಕ್, ಔಷಧಿಗಳು, ಸೌಂದರ್ಯವರ್ಧಕಗಳು ಸೇರಿದಂತೆ ಸಾವಿರಾರು ದೈನಂದಿನ ವಸ್ತುಗಳ ತಯಾರಿಕೆಗೆ ಪೆಟ್ರೋಕೆಮಿಕಲ್ಸ್‌ಗಳು ಅವಶ್ಯಕ. EV ಯುಗದಲ್ಲೂ ಕೈಗಾರಿಕೆಗಳು ಮತ್ತು ನಮ್ಮ ನಿತ್ಯ ಜೀವನಕ್ಕೆ ತೈಲ ಅನಿವಾರ್ಯ.
- Vijaya Sarathy SN
- Updated on: May 25, 2026
- 7:04 pm
ಮೋದಿ ಸರ್ಕಾರ ರಹಸ್ಯವಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ; ಪೆಟ್ರೋಲ್ ಏರಿಕೆ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಕುರಿತು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಮುಗಿದ ತಕ್ಷಣ ಇಂಧನ ದರಗಳನ್ನು ಹೆಚ್ಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಚುನಾವಣೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪದೇ ಪದೇ ಹೆಚ್ಚಿಸುವ ಮೂಲಕ ಸರ್ಕಾರವು ಗ್ರಾಹಕರ ಮೇಲೆ ಹೊರೆಯನ್ನು ಹೇರುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಚುನಾವಣೆ ಮುಗಿದ ತಕ್ಷಣ ಸರ್ಕಾರವು ಹಣದುಬ್ಬರದ ಹೊರೆಯನ್ನು ಸಾರ್ವಜನಿಕರ ಮೇಲೆ ಹೇರಲು ಪ್ರಾರಂಭಿಸಿದೆ ಮತ್ತು ಸಾರ್ವಜನಿಕ ವಿರೋಧವನ್ನು ತಗ್ಗಿಸಲು ಹಂತ ಹಂತವಾಗಿ ಇಂಧನ ಬೆಲೆಗಳನ್ನು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.
- Sushma Chakre
- Updated on: May 25, 2026
- 3:36 pm
ಭಾರತದಲ್ಲಿ ಆದ ಪೆಟ್ರೋಲ್ ಬೆಲೆ ಏರಿಕೆ ಬಹಳ ದೊಡ್ಡ ಹೆಚ್ಚಳವಾ? ಇಲ್ಲಿದೆ ವಾಸ್ತವ ಸ್ಥಿತಿ
India's petrol price hike compared to other countries: ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಉದ್ಭವವಾದ ಕಳೆದ ಮೂರು ತಿಂಗಳಲ್ಲಿ ಭಾರತ ಸರ್ಕಾರ ಪೆಟ್ರೋಲ್ ಬೆಲೆಯನ್ನು ಶೇ. 7.7ರಷ್ಟು ಏರಿಸಿದೆ. ಇದೇ ವೇಳೆ, ಜಾಗತಿಕವಾಗಿ ಹೆಚ್ಚಿನ ದೇಶಗಳು ಬಹಳ ದೊಡ್ಡ ಮಟ್ಟದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಿಸಿವೆ. ಭಾರತದಲ್ಲೂ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಬೆಲೆಯಲ್ಲಿ ವ್ಯತ್ಯಾಸ ಇದ್ದ, ಇದಕ್ಕೆ ವ್ಯಾಟ್ ಅಂಶ ಕಾರಣ.
- Vijaya Sarathy SN
- Updated on: May 25, 2026
- 2:21 pm
ಪೆಟ್ರೋಲ್ ಡೀಸೆಲ್ ಬೆಲೆ ಇನ್ನೂ ಏರಿಕೆಯಾಗುತ್ತಾ? ಇಂಧನ ದರದಲ್ಲಿ ಕೇಂದ್ರ, ರಾಜ್ಯಕ್ಕೆಷ್ಟು ಪಾಲು ಎಂಬ ಮಾಹಿತಿ ಇಲ್ಲಿದೆ
ಕೇವಲ 11 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ನಾಲ್ಕನೇ ಬಾರಿಗೆ ಏರಿಕೆಯಾಗಿದೆ. ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ, ರೂಪಾಯಿ ಅಪಮೌಲ್ಯ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳ ತೆರಿಗೆ ಪಾಲು ಈ ಹೆಚ್ಚಳಕ್ಕೆ ಪ್ರಮುಖ ಕಾರಣ. ತೆರಿಗೆ ಕಡಿತಗೊಳಿಸುವುದು ತಕ್ಷಣದ ಪರಿಹಾರವಾಗಿದ್ದು, ಇಲ್ಲದಿದ್ದರೆ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
- Ganapathi Sharma
- Updated on: May 25, 2026
- 1:48 pm
Petrol Diesel Prices Hike: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಬೆಂಗಳೂರಿನಲ್ಲಿ ಇಂಧನ ದರದ ಚಾರ್ಟ್ ಇಲ್ಲಿದೆ
ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಸತತ ನಾಲ್ಕನೇ ಬಾರಿ ಹೆಚ್ಚಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 2.61 ರೂ. ಹಾಗೂ ಡೀಸೆಲ್ ದರ 2.71 ರೂ. ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ 110.93 ರೂ. ತಲುಪಿದೆ. ಯುದ್ಧದ ಪರಿಣಾಮದಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಕೆಲವರು ಸಮರ್ಥಿಸಿದರೆ, ಮಧ್ಯಮ ವರ್ಗದವರು ಜೀವನ ನಿರ್ವಹಣೆ ಕಷ್ಟವೆಂದು ಅಳಲು ತೋಡಿಕೊಂಡಿದ್ದಾರೆ.
- Ganapathi Sharma
- Updated on: May 25, 2026
- 10:34 am
Petrol Diesel Price Hike: ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ, ಬೆಂಗಳೂರಲ್ಲಿಎಷ್ಟಿದೆ?
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಏರಿಕೆ ಕಂಡಿವೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ತೈಲ ಕಂಪನಿಗಳ ನಷ್ಟ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಹೊಸ ದರಗಳು ಜಾರಿಗೆ ಬಂದಿದ್ದು, ಗ್ರಾಹಕರ ಮೇಲೆ ಮತ್ತಷ್ಟು ಹೊರಬಿದ್ದಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತವೇ ಪ್ರಮುಖ ಕಾರಣ.
- Nayana Rajeev
- Updated on: May 23, 2026
- 7:24 am