AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship

Relationship

ಯಾವುದೇ ವ್ಯಕ್ತಿಯು ಜೀವನದಲ್ಲಿ ಒಂಟಿಯಾಗಿರಲು ಸಾಧ್ಯವಿಲ್ಲ. ಸಂತೋಷದ ಸಮಯವನ್ನು ಒಂಟಿಯಾಗಿ ಸಂಭ್ರಮಿಸಿದರೂ, ದುಃಖವಾದಾಗ ತನ್ನ ನೋವನ್ನು ಹಂಚಿಕೊಳ್ಳಲು ಒಂದಷ್ಟು ಸಂಬಂಧಗಳು ಬೇಕೆನಿಸುತ್ತದೆ. ಹೀಗಾಗಿ ಮನುಷ್ಯನ ಜೀವನದಲ್ಲಿ ಪ್ರತಿಯೊಂದು ಸಂಬಂಧವು ಪ್ರಮುಖ ಪಾತ್ರ ವಹಿಸುತ್ತದೆ. ಹುಟ್ಟಿನಿಂದ ಜೊತೆಯಾಗುವ ಅಪ್ಪ ಅಮ್ಮ, ಅಣ್ಣ ತಮ್ಮ, ಅಜ್ಜ ಅಜ್ಜಿ, ಚಿಕ್ಕಮ್ಮ ಚಿಕ್ಕಪ್ಪ, ದೊಡ್ಡಪ್ಪ ದೊಡ್ಡಮ್ಮ ಸಂಬಂಧಗಳು ಒಂದೆಡೆಯಾದರೆ, ಬೆಳೆಯುತ್ತಾ ಹೋದಂತೆಲ್ಲಾ ಸ್ನೇಹ ಸಂಬಂಧಗಳು ಬೆಸೆದು ಕೊಳ್ಳುತ್ತವೆ. ಆದರೆ ಕೆಲವೊಂದು ಸಂಬಂಧಗಳು ಕಾರಣವಿಲ್ಲದೇ ಮುರಿದು ಹೋಗಬಹುದು. ಹಾಗಾದ್ರೆ ಬದುಕಿನ ಭಾಗವಾದ ರಿಲೇಷನ್ಶಿಪ್ ಗೆ ಸಂಬಂಧ ಪಟ್ಟ ಸ್ಟೋರಿಗಳು ಇಲ್ಲಿದೆ.

ಇನ್ನೂ ಹೆಚ್ಚು ಓದಿ

ದಂಪತಿಗಳು ಎಂದಿಗೂ ಬೆಳಬೆಳಗ್ಗೆ ಈ ವಿಚಾರಗಳನ್ನು ಮಾತನಾಡಬಾರದು; ಏಕೆ ಗೊತ್ತಾ?

ಸಂಸಾರ ಚೆನ್ನಾಗಿರಬೇಕೆಂದರೆ ಗಂಡ ಹೆಂಡತಿಯ ನಡುವೆ ಪ್ರೀತಿ ಮಾತ್ರವಲ್ಲದೆ ನಂಬಿಕೆ, ಕಾಳಜಿ, ಪ್ರಾಮಾಣಿಕತೆ ಇವೆಲ್ಲವೂ ಇರಲೇಬೇಕು. ಅದೇ ರೀತಿ ಸಂಸಾರದಲ್ಲಿ ಶಾಂತಿ, ನೆಮ್ಮದಿ ಇರಬೇಕೆಂದರೆ ಗಂಡ ಹೆಂಡತಿ ಬೆಳಗ್ಗೆ ಎದ್ದ ತಕ್ಷಣವೇ ಈ ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಬಾರದಂತೆ. ಈ ರೀತಿ ಮಾತನಾಡುವುದರಿಂದ ಜಗಳಗಳು ಏರ್ಪಡುವ ಸಾಧ್ಯತೆ ಇರುತ್ತದೆ. ಸಂಸಾರ ಚೆನ್ನಾಗಿರಬೇಕೆಂದರೆ ದಂಪತಿಗಳು ಬೆಳಬೆಳಗ್ಗೆ ಯಾವ ವಿಚಾರಗಳ ಬಗ್ಗೆ ಮಾತನಾಡಬಾರದು ಎಂಬುದನ್ನು ನೋಡೋಣ ಬನ್ನಿ.

ಗಂಡ-ಹೆಂಡತಿ ಪರಸ್ಪರ ಈ ವಿಷಯಗಳನ್ನು ಮುಚ್ಚಿಡಲೇಬಾರದು; ಏಕೆ ಗೊತ್ತಾ?

ಗಂಡ ಹೆಂಡತಿಯ ನಡುವೆ ಪ್ರೀತಿ ಎಷ್ಟು ಮುಖ್ಯವೋ ಪ್ರಾಮಾಣಿಕತೆ, ನಂಬಿಕೆಯೂ ಅಷ್ಟೇ ಮುಖ್ಯ. ಆದರೆ ಹೆಚ್ಚಿನವರು ತಮ್ಮ ಸಂಗಾತಿಯ ಬಳಿ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ. ಇದು ಒಳ್ಳೆಯ ಲಕ್ಷಣವಲ್ಲ. ಏನೇ ವಿಚಾರಗಳಿದ್ದರೂ ಮುಕ್ತವಾಗಿ ಮಾತನಾಡಬೇಕಂತೆ. ಇದು ಸಂಗಾತಿಗಳಿಬ್ಬರ ನಡುವಿನ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಹೆಂಡತಿ ಮಾಡುವ ಈ ತಪ್ಪುಗಳು ದಾಂಪತ್ಯ ಜೀವನವನ್ನೇ ಹಾಳು ಮಾಡಬಹುದು

ಗಂಡ ಹೆಂಡತಿಯ ಸಂಬಂಧ ತುಂಬಾನೇ ಸುಂದರವಾದುದು. ಈ ಸುಂದರ ಸಂಬಂಧ ಪ್ರೀತಿ ಮಾತ್ರವಲ್ಲ ನಂಬಿಕೆ ಹಾಗೂ ವಿಶ್ವಾಸದ ಮೇಲೂ ನಿಂತಿದೆ. ಹೀಗಿರುವಾದ ಗಂಡ ಅಥವಾ ಹೆಂಡತಿ ಮಾಡುವ ಕೆಲವು ತಪ್ಪುಗಳು ದಾಂಪತ್ಯ ಜೀವನದ ಸಂತೋಷವನ್ನೇ ಕಿತ್ತುಕೊಳ್ಳುತ್ತದೆ. ಅದರಲ್ಲೂ ಹೆಂಡತಿಯ ಈ ನಡವಳಿಕೆಗಳು ದಾಂಪತ್ಯ ಜೀವನವನ್ನೇ ಹಾಳು ಮಾಡುತ್ತದಂತೆ. ಆದ್ದರಿಂದ ವಿವಾಹಿತ ಮಹಿಳೆಯರು ಈ ಕೆಲವೊಂದು ನಡವಳಿಕೆಗಳ ಬಗ್ಗೆ ಆದಷ್ಟು ಜಾಗೂರಕರಾಗಿರಬೇಕು.

Chanakya Niti: ದಾಂಪತ್ಯ ಜೀವನ ಸುಖವಾಗಿರಬೇಕೆಂದರೆ ಗಂಡ-ಹೆಂಡತಿ ಹೀಗಿರಬೇಕೆಂದಿದ್ದಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ಸುಖ ದಾಂಪತ್ಯಕ್ಕೆ ಸಂಬಂಧಿಸಿದ ಹಲವು ಸಲಹೆಗಳನ್ನು ನೀಡಿದ್ದಾರೆ. ಗಂಡನಾದವನು ಹೇಗಿರಬೇಕು, ಎಂತಹ ಸಂಗಾತಿ ಪತಿಗೆ ಅದೃಷ್ಟ ತರುತ್ತಾಳೆ ಹೀಗೆ ಗಂಡ ಹೆಂಡತಿಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ದಾಂಪತ್ಯ ಜೀವನ ಸಂತೋಷದಿಂದ ಸಾಗಲು ಪತಿ ಪತ್ನಿಯರಲ್ಲಿ ಈ ಮೂರು ಗುಣಗಳು ಇರಲೇಬೇಕು ಎಂಬುದನ್ನು ಸಹ ಹೇಳಿದ್ದಾರೆ. ಅವು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ಗಂಡನಾದವನು ತನ್ನ ಹೆಂಡತಿಯ ಬಳಿ ಆಡುವ ಈ ಮಾತುಗಳು ಸುಂದರ ಸಂಬಂಧವನ್ನೇ ಹಾಳು ಮಾಡುತ್ತದೆ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು, ಶ್ರೀಮತಿಂಕೆ ಮಾತ್ರವಲ್ಲ ಗಂಡ ಹೆಂಡತಿಯ ಸಂಬಂಧದ ಬಗ್ಗೆಯೂ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ದಾಂಪತ್ಯ ಜೀವನ ಹಾಲು ಜೇನಿನಂತೆ ಇರಲು ಗಂಡ ಹೆಂಡತಿ ಹೇಗಿರಬೇಕು ಎಂಬುದನ್ನೂ ಸಹ ವಿವರಿಸಿದ್ದಾರೆ. ಅದೇ ರೀತಿ ಅವರು ದಾಂಪತ್ಯ ಜೀವನದಲ್ಲಿ ಮಾತುಗಳು ನಿರ್ಣಾಯಕ ಪಾತ್ರವನ್ನು ವಹಿಸುವುದರಿಂದ ಗಂಡ ತನ್ನ ಹೆಂಡತಿಯ ಬಳಿ ಈ ಮಾತುಗಳನ್ನು ಎಂದಿಗೂ ಆಡಬಾರದೆಂದಿದ್ದಾರೆ. ಆ ಮಾತುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಅತ್ತೆ- ಸೊಸೆಯ ನಡುವಿನ ಜಗಳಕ್ಕೆ ಕಾರಣಗಳೇನು? ಇವರಿಬ್ಬರ ಸಂಬಂಧವನ್ನು ಸರಿಪಡಿಸುವುದು ಹೇಗೆ?

ಕುಟುಂಬದಲ್ಲಿ ಸಣ್ಣಪುಟ್ಟ ಜಗಳಗಳು ಕಾಮನ್.‌ ಅದರಲ್ಲೂ ಪ್ರತಿ ಮನೆಯನ್ನೂ ಅತ್ತೆ ಸೊಸೆ ಮಧ್ಯೆ ಸಣ್ಣಪುಟ್ಟ ಕಿರಿಕ್‌, ಮನಸ್ತಾಪಗಳು ಇದ್ದೇ ಇರುತ್ತದೆ. ಕೆಲವೊಂದು ಬಾರಿ ಈ ಅತ್ತೆ ಸೊಸೆ ಜಗಳಗಳು ತಾರಕಕ್ಕೇರುತ್ತವೆ. ಹೀಗೆ ಅತ್ತೆ-ಸೊಸೆ ಮಧ್ಯೆ ಜಗಳಗಳು ನಡೆಯಲು ಕಾರಣವೇನು, ಇವರಿಬ್ಬರ ಸಂಬಂಧವನ್ನು ಹೇಗೆ ಸರಿಪಡಿಸಬಹುದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಪತಿ ಪತ್ನಿಯರು ಈ ಸರಳ ಸೂತ್ರ ಪಾಲಿಸಿದರೆ ದಾಂಪತ್ಯ ಜೀವನ ಹಾಲು-ಜೇನಿನಂತೆ ಇರುವುದು ಖಂಡಿತ

ಗಂಡ ಹೆಂಡತಿಯರ ನಡುವಿನ ಒಗ್ಗಟ್ಟು, ಪ್ರೀತಿ, ವಿಶ್ವಾಸ, ನಂಬಿಕೆಯೇ ಸಂತೋಷಮಯವಾದ ದಾಂಪತ್ಯ ಜೀವನದ ರಹಸ್ಯ. ಆದ್ರೆ ಇಂದಿನ ಕಾರ್ಯನಿರತ ಜೀವನದಲ್ಲಿ ಬಹುತೇಕ ಹೆಚ್ಚಿನ ದಂಪತಿಗಳ ನಡುವೆ ಮನಸ್ತಾಪ, ಮುನಿಸು, ಜಗಳಗಳೇ ಹೆಚ್ಚಾಗಿದ್ದು, ದಾಂಪತ್ಯ ಜೀವನದಲ್ಲಿ ಸಂತೋಷ ಅನ್ನೋದೇ ಸಿಗುತ್ತಿಲ್ಲ. ಹೀಗಿರುವಾಗ ಪತಿ ಪತ್ನಿಯರು ಈ ಕೆಲವೊಂದು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ದಾಂಪತ್ಯ ಜೀವನದಲ್ಲಿ ಸದಾಕಾಲ ಸಂತೋಷ ನೆಲೆಸುವಂತೆ ನೋಡಿಕೊಳ್ಳಬಹುದು.

ಸಂಗಾತಿಯಲ್ಲಿ ಈ ಬದಲಾವಣೆಗಳು ಕಂಡುಬಂದರೆ ನೀವು ಪ್ರೀತಿಯಲ್ಲಿ ಮೋಸ ಹೋಗ್ತಿದ್ದೀರಿ ಎಂದರ್ಥ

ಪ್ರೇಮಿಗಳ ಮಧ್ಯೆ ಜಗಳಗಳು ನಡೆಯುತ್ತವೆ. ಈ ಜಗಳಗಳಿಂದಲೇ ಬ್ರೇಕಪ್‌ಗೆ ಆಗುತ್ತೆ ಎಂದು ಹಲವರು ಭಾವಿಸುತ್ತಾರೆ. ಆದ್ರೆ ಏನು ಗೊತ್ತಾ, ಸಂಗಾತಿಯಲ್ಲಿನ ಕೆಲವೊಂದು ಬದಲಾವಣೆಗಳು ಸಹ ಪ್ರೇಮ ವೈಫಲ್ಯಕ್ಕೆ ಕಾರಣವಾಗಬಹುದು. ಇದ್ದಕ್ಕಿದ್ದಂತೆ ಪ್ರೀತಿಯಲ್ಲಿ ಅಂತರ ಸೃಷ್ಟಿಯಾಗುವುದಿಲ್ಲ ಬದಲಾಗಿ ಬ್ರೇಕಪ್‌ಗೂ ಮುನ್ನ ಈ ಕೆಲವು ಬದಲಾವಣೆಗಳು ಸಂಗಾತಿಯಲ್ಲಿ ಗೋಚರಿಸುತ್ತವಂತೆ. ಅವು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸಂಬಂಧದಲ್ಲಿ ಪ್ರೀತಿ, ಆತ್ಮೀಯತೆಯನ್ನು ಹೆಚ್ಚಿಸಲು ಸಂಗಾತಿಗಳಿಬ್ಬರ ಬೆಳಗಿನ ದಿನಚರಿ ಹೀಗಿದ್ದರೆ ಚೆಂದ

ಇಂದಿನ ಈ ಬ್ಯುಸಿ ಜೀವನಶೈಲಿಯ ಕಾರಣ ತಮ್ಮ ಕುಟುಂಬದೊಂದಿಗೆ ಮುಖ್ಯವಾಗಿ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಇದು ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸಬಹುದು. ಹಾಗಾಗಿ ಸಂಬಂಧವನ್ನು ಇನ್ನಷ್ಟು ಬಲಪಡಿಸಲು, ಆತ್ಮೀಯತೆಯನ್ನು ಹೆಚ್ಚಿಸಲು ದಂಪತಿಗಳು ಬೆಳಗಿನ ದಿನಚರಿಯಲ್ಲಿ ಈ ಒಂದಷ್ಟು ಕೆಲಸಗಳನ್ನು ಮಾಡಿದರೆ ಚೆಂದ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ದಾಂಪತ್ಯ ಜೀವನ ಸುಖವಾಗಿ ಸಾಗಲು ಪತಿ-ಪತ್ನಿ ಪ್ರತಿನಿತ್ಯ ಈ ಕೆಲಸಗಳನ್ನು ಮಾಡಬೇಕು

ಪತಿ ಪತ್ನಿಯ ಸಂಬಂಧ ಎನ್ನುವಂತಹದ್ದು ಸುಂದರ ಶಾಶ್ವತವಾದ ಬಂಧ. ಇಲ್ಲಿ ಪ್ರೀತಿ ಇರುವಂತೆ ಗಂಡ ಹೆಂಡತಿಯರ ಮಧ್ಯೆ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ಕೂಡ ಆಗೊಮ್ಮೆ ಈಗೊಮ್ಮೆ ಕಾಣಿಸುತ್ತವೆ. ಆದರೆ ಈ ಜಗಳಗಳು ಅತಿರೇಕಕ್ಕೆ ತಿರುಗಿದರೆ ಸಂಬಂಧದಲ್ಲಿ ಬಿರುಕು ಮೂಡುವುದು ಖಂಡಿತ. ಅದಕ್ಕಾಗಿ ಈ ಜಗಳ, ಮನಸ್ತಾಪಗಳು ತಲೆದೋರದಂತೆ ನೋಡಿಕೊಳ್ಳಲು ಗಂಡ ಹೆಂಡತಿ ಪ್ರತಿನಿತ್ಯ ಈ ಕೆಲಸಗಳನ್ನು ಮಾಡಬೇಕಂತೆ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೆಂಡತಿಯಾದವಳು ತನ್ನ ಗಂಡನಿಂದ ಈ ವಿಷಯಗಳನ್ನು ಎಂದಿಗೂ ಮರೆ ಮಾಡಬಾರದು

ಗಂಡ ಹೆಂಡತಿಯ ಸಂಬಂಧ ಎನ್ನುವಂತಹದ್ದು, ತುಂಬಾನೇ ಅಮೂಲ್ಯವಾದದ್ದು. ಈ ಸಂಬಂಧ ಗಟ್ಟಿಯಾಗಿ ನಿಲ್ಲುವುದೇ ಪ್ರೀತಿ, ನಂಬಿಕೆಯ ಆಧಾರದ ಮೇಲೆ. ಗಂಡ ಹೆಂಡತಿಯ ಈ ಬಾಂಧವ್ಯ ಶಾಶ್ವತವಾಗಿರಬೇಕಾದರೆ ಇವರಿಬ್ಬರ ಮಧ್ಯೆ ಯಾವುದೇ ರೀತಿಯ ಮುಚ್ಚುಮರೆ ಇರಬಾರದು. ಅದರಲ್ಲೂ ಹೆಂಡತಿಯಾದವಳು ಈ ಒಂದಷ್ಟು ವಿಷಯಗಳನ್ನು ಗಂಡನಿಂದ ಮುಚ್ಚಿಡಲೇಬಾರದಂತೆ. ಆ ವಿಷಯಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ತಜ್ಞರು ಹೇಳುತ್ತಾರೆ ಯಾವ ಹುಡ್ಗಿಗೂ ಹುಡುಗರ ಈ ಗುಣಗಳು ಇಷ್ಟವಾಗುವುದಿಲ್ಲವಂತೆ

ಹೆಚ್ಚಿನ ಹುಡುಗರು, ಯುವಕರು ತಮಗೆ ಇಷ್ಟವಾಗುವಂತಹ ಹುಡುಗಿಯ ಜೊತೆ ಹೆಚ್ಚು ಹೆಚ್ಚು ಮಾತನಾಡಲು ಪ್ರಯತ್ನಿಸುತ್ತಿರುತ್ತಾರೆ. ಹುಡುಗಿಗೆ ಇನ್ನಷ್ಟು ಹತ್ತಿರವಾಗಲು ಬಯಸುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ತೋರ್ಪಡಿಸುವ ಈ ಕೆಲವೊಂದು ಗುಣಗಳು ಯಾವ ಹುಡುಗಿಗೂ ಇಷ್ಟವಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ರೆ ಹುಡುಗಿಯರಿಗೆ ಕೋಪ ತರಿಸುವಂತಹ ಹುಡುಗರ ಆ ಗುಣಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.