Viral Video
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್ ಕ್ಯಾಟಗರಿಯಲ್ಲಿ ತಿಳಿಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿರುವ ಸುದ್ದಿಗಳು, ತಕ್ಷಣಕ್ಕೆ ವೈರಲ್ ಕ್ಯಾಟಗರಿಗಳಲ್ಲಿ ನೀಡಿಲಾಗುವುದು. ಜಗತ್ತಿನಲ್ಲಿ ಆಗುವ ವೈರಲ್ ಸುದ್ದಿಗಳನ್ನು ಇಲ್ಲಿ ತಿಳಿಸಲಾಗುತ್ತದೆ,
Video: ಇದು ದೇಸಿ ಕ್ರೀಡೆಯ ಕರಾಮತ್ತು; ಸೀರೆಯುಟ್ಟ ನಾರಿಮಣಿಗಳ ಕಬಡ್ಡಿ ಆಟ ಹೇಗಿದೆ ನೋಡಿ
ಭಾರತದ ಪ್ರಾಚೀನ ಹಾಗೂ ಜನಪ್ರಿಯ ದೇಸೀ ಕ್ರೀಡೆಯೇ ಕಬಡ್ಡಿ. ಈ ಮಕ್ಕಳು ಹಾಗೂ ಯುವಕ ಯುವತಿಯರು ಜರ್ಬದಸ್ ಕಬಡ್ಡಿ ಆಟವನ್ನು ನೋಡಿರುತ್ತೀರಿ. ಆದರೆ ಇದೀಗ ಹಳ್ಳಿಯ ಮಹಿಳೆಯರು ಕಬಡ್ಡಿ ಆಡುತ್ತಾ ಎಂಜಾಯ್ ಮಾಡುವ ವಿಡಿಯೋ ವೈರಲ್ ಆಗಿದೆ. ಮಹಿಳೆಯರ ಕಬ್ಬಡಿ ಆಟವನ್ನುಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Jun 10, 2026
- 3:50 pm
Video: ಹೆತ್ತವರಿಗೆ ತಾನು ಕೆಲಸ ಮಾಡುವ ಬೆಂಗಳೂರಿನ ಮೈಕ್ರೋಸಾಫ್ಟ್ ಆಫೀಸ್ ತೋರಿಸಿದ ಉದ್ಯೋಗಿ
ಪ್ರತಿಯೊಬ್ಬ ತಂದೆ ತಾಯಂದಿರು ತಮ್ಮ ಮಕ್ಕಳು ಲೈಫ್‌ನಲ್ಲಿ ಸೆಟ್ಲ್ ಆಗ್ಬೇಕು, ಎತ್ತರದ ಸ್ಥಾನಕ್ಕೆ ತಲುಪಬೇಕು ಎಂದು ಬಯಸುತ್ತಾರೆ. ಮಕ್ಕಳ ಯಶಸ್ಸನ್ನು ಕಣ್ತುಂಬಿಸಿಕೊಳ್ಳುವ ಸೌಭಾಗ್ಯ ಸಿಕ್ಕರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಇದೀಗ ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ತಮ್ಮ ಪೋಷಕರನ್ನು ತಮ್ಮ ಕಚೇರಿ ತೋರಿಸಲು ಕರೆ ತಂದ ಭಾವನಾತ್ಮಕ ಕ್ಷಣದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Sainandha P
- Updated on: Jun 10, 2026
- 12:36 pm
Video: ಫಿಶ್ ಟ್ಯಾಂಕ್ ಒಳಗಿಳಿದು ಮೀನು ಹಿಡಿದ ಪುಟ್ಟ ಬಾಲಕ, ವೈರಲ್ ಆಯ್ತು ದೃಶ್ಯ
ಮಕ್ಕಳು ಒಂದೇ ಒಂದು ದಿನ ರಜೆ ಸಿಕ್ಕಿದ್ರೆ ಸಾಕು, ಹೆತ್ತವರಿಗೆ ಹೇಗಪ್ಪಾ ಈ ತರಲೆ ಮಕ್ಕಳನ್ನು ಸಂಭಾಳಿಸುವುದು ಎನ್ನುವ ಟೆನ್ಶನ್ ಶುರುವಾಗುತ್ತದೆ. ಮನೆಯಲ್ಲಿ ಯಾರು ಇರದ ಸಮಯದಲ್ಲೇ ಈ ಪುಟಾಣಿಗಳು ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡ್ತಿರುತ್ತಾರೆ. ಈ ವಿಡಿಯೋ ನೋಡಿದ್ರೆ ನಿಮಗೂ ಹಾಗೆ ಅನಿಸಬಹುದು. ಪುಟ್ಟ ಹುಡುಗನೊಬ್ಬ ಮನೆಯಲ್ಲಿದ್ದ ಅಕ್ವೇರಿಯಂ ಟ್ಯಾಂಕ್ ಹತ್ತಿ ಮೀನು ಹಿಡಿದಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Jun 9, 2026
- 7:36 pm
Video: ಗೋಲ್ಗಪ್ಪಾ ವಿಭಿನ್ನವಾಗಿ ತಿನ್ಬಹುದೆಂದು ತೋರಿಸಿಕೊಟ್ಟ ಪುಟಾಣಿ
ಗೋಲ್ಗಪ್ಪಾ ಈ ಹೆಸರು ಕೇಳಿದರೇನೇ ಬಾಯಲ್ಲಿ ನೀರೂರುತ್ತದೆ. ಮಕ್ಕಳಿಂದ ದೊಡ್ಡವರವರೆಗೂ ಬಾಯಿ ಚಪ್ಪರಿಸಿಕೊಂಡು ತಿನ್ನುವ ತಿನಿಸು ಇದು. ಆದರೆ ಈ ಪುಟ್ಟ ಹುಡುಗಿ ಗೋಲ್ಗಪ್ಪಾ ತಿನ್ನೋ ಸ್ಟೈಲ್ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ಪುಟಾಣಿ ಗೋಲ್ಗಪ್ಪಾ ತಿನ್ನುವ ಅಸಾಂಪ್ರದಾಯಿಕ ವಿಧಾನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Jun 9, 2026
- 10:40 am
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿಯ ಹೆಗಲಿಗೊರಗಿ ಕಣ್ಣೀರಿಟ್ಟ ತಾಯಿ; ಮನಕಲಕುವ ವಿಡಿಯೋ ಇಲ್ಲಿದೆ
ಹುತಾತ್ಮ ಸಿಪಾಯಿ ಜಂಜಾಲ್ ಪ್ರವೀಣ್ ಪ್ರಭಾಕರ್ ಅವರಿಗೆ ಅವರ ಅಸಾಧಾರಣ ಶೌರ್ಯ, ಅದಮ್ಯ ಧೈರ್ಯ ಮತ್ತು ರಾಷ್ಟ್ರ ಸೇವೆಯಲ್ಲಿ ಅತ್ಯುನ್ನತ ತ್ಯಾಗಕ್ಕಾಗಿ ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಲಾಯಿತು. ಈ ಪ್ರಶಸ್ತಿಯನ್ನು ಸ್ವೀಕರಿಸುವಾಗ ಅವರ ತಾಯಿ ದೂಖ ತಡೆಯಲಾರದೆ ಕಣ್ಣೀರಿಟ್ಟಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಿಪಾಯಿ ಜಂಜಾಲ್ ಪ್ರವೀಣ್ ಪ್ರಭಾಕರ್ ಅವರಿಗೆ ಮರಣೋತ್ತರ 'ಕೀರ್ತಿ ಚಕ್ರ' ಗೌರವ ನೀಡುವಾಗ ತಾಯಿಯ ಭಾವುಕ ಕ್ಷಣಗಳ ವಿಡಿಯೋ ವೈರಲ್ ಆಗಿದೆ.
- Sushma Chakre
- Updated on: Jun 8, 2026
- 11:02 pm
Viral News: ಹೆಂಡತಿಗೆ ಕೈಕೊಟ್ಟು ಅತ್ತೆಯನ್ನೇ ಮದುವೆಯಾದ ಅಳಿಯ!
ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿರುವ ಅತ್ಯಂತ ವಿಲಕ್ಷಣ ಅಚ್ಚರಿಯ ಘಟನೆ ವೈರಲ್ ಆಗಿದೆ. ತನಗೆ ಮಗಳನ್ನು ಧಾರೆ ಎರೆದುಕೊಟ್ಟಿದ್ದ ಅತ್ತೆಯ ಮೇಲೆ ಪ್ರೀತಿಯಾಗಿ, ಹೆಂಡತಿಗೆ ವಿಚ್ಛೇದನ ನೀಡಿದ ಮಹಾನುಭಾವನೊಬ್ಬ ಆ ಅತ್ತೆಯನ್ನೇ ಮದುವೆಯಾಗಿರುವ ವಿಚಿತ್ರ ಘಟನೆ ಇಲ್ಲಿ ನಡೆದಿದೆ. ಕೋರ್ಟ್ನಲ್ಲಿ ಇಬ್ಬರೂ ಮದುವೆಯಾಗಿದ್ದು, ಅಳಿಯನಾಗಿದ್ದ ವ್ಯಕ್ತಿ ಈಗ ಆ ಮಹಿಳೆಯ ಪತಿಯಾಗಿದ್ದಾನೆ.
- Sushma Chakre
- Updated on: Jun 8, 2026
- 7:40 pm
Video: ಕೇಕ್ ತೆಗೆದುಕೊಂಡು ಅತ್ತೆ ಮನೆಗೆ ಹೋಗಿ ನನ್ನ ಹೆಂಡ್ತಿನಾ ವಾಪಸ್ ಕಳಿಸಿ ಎಂದ ಅಳಿಯ
ಕೆಲ ಗಂಡ್ಮಕ್ಕಳು ತನ್ನ ಹೆಂಡ್ತಿ ಯಾವಾಗ ತವರು ಮನೆಗೆ ಹೋಗ್ತಾಳೆ ಅಂತ ಕಾಯ್ತಾ ಇರ್ತಾರೆ. ತಾಯಿ ಮನೆಗೆ ಹೊರಡುತ್ತಾಳೆ ಅಂದ್ರೆ ಈ ಗಂಡು ಮಕ್ಕಳ ಖುಷಿಗೆ ಪಾರಾವೇ ಇರಲ್ಲ. ಆದರೆ ಈ ವ್ಯಕ್ತಿಯದ್ದು ಮಾತ್ರ ಬೇರೆಯದ್ದೇ ಕಥೆ. ತಾಯಿ ಮನೆಗೆ ಹೋದ ಹೆಂಡ್ತಿ ಬರಲೇ ಇಲ್ಲ. ಹತ್ತು ದಿನಗಳ ಕಾಲ ಸಹಿಸಿಕೊಂಡ ವ್ಯಕ್ತಿ ನೇರ ಅತ್ತೆ ಮನೆಗೆ ಹೋಗಿದ್ದಾನೆ. ಮುಂದೇನಾಯ್ತು ಎಂದು ತಿಳಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ. ಈ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
- Sainandha P
- Updated on: Jun 8, 2026
- 4:36 pm
Video: ಐಸ್ ಕ್ರೀಮ್ ಬೇಕೆಂದು ಹಠ ಹಿಡಿದ ಪುಟಾಣಿ, ವೈರಲ್ ಆಯ್ತು ದೃಶ್ಯ
ಪುಟಾಣಿಗಳು ಹಠ ಹಿಡಿದರೆ ಅವುಗಳನ್ನು ರಮಿಸಿ ಸಮಾಧಾನ ಪಡಿಸುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಈ ಪುಟಾಣಿಯದ್ದು ಅದೇ ಕಥೆ. ಶಾಲೆಗೆ ಹೊರಟ ಪುಟಾಣಿ ಐಸ್ ಕ್ರೀಮ್ ಬೇಕೆಂದು ಅಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
- Sainandha P
- Updated on: Jun 8, 2026
- 2:15 pm
Video: ಸಂಬಳ ಪಡೆಯುತ್ತಿದ್ದ ಕೈಗಳಿಗಿಂತ ಖಾಲಿ ಕೈಗಳು ಕಲಿಸಿದ್ದೇ ಹೆಚ್ಚು; ಜಾಬ್ ರಿಸೈನ್ ಮಾಡಿದ ವ್ಯಕ್ತಿ ಹೀಗೆಂದಿದ್ದೇಕೆ?
ಕೈಯಲ್ಲಿ ಕೆಲಸ ಹಾಗೂ ದುಡ್ಡು ಇದ್ದರೇನೇ ಮರ್ಯಾದೆ. ಆದರೆ ಇಲ್ಲೊಬ್ಬ ವ್ಯಕ್ತಿ ಸಂಬಳವಿಲ್ಲದೆ 60 ದಿನಗಳನ್ನು ಕಳೆದಿದ್ದಾನೆ. ವ್ಯಕ್ತಿಯೊಬ್ಬ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಪೋಸ್ಟ್ ವೈರಲ್ ಆಗಿದ್ದು, ಭಾವನಾತ್ಮಕ ಮತ್ತು ಆರ್ಥಿಕ ಪರಿಣಾಮವನ್ನು ಎತ್ತಿ ತೋರಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Jun 7, 2026
- 8:19 pm
Video: ಗೊಂಬೆಗೆ ಸ್ನಾನ ಮಾಡಿಸಿ ಆರೈಕೆ ಮಾಡಿದ ಪುಟಾಣಿ, ವೈರಲ್ ಆಯ್ತು ದೃಶ್ಯ
ಸೋಶಿಯಲ್ ಮೀಡಿಯಾದಲ್ಲಿ ಮುದ್ದು ಮಕ್ಕಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ಪುಟಾಣಿಗಳ ಆಟ ತುಂಟಾಟಗಳ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳುವ ಖುಷಿಯೇ ಬೇರೆ. ಇದೀಗ ಪುಟಾಣಿಯೊಂದು ಗೊಂಬೆಗೆ ಸ್ನಾನ ಮಾಡಿಸಿದ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಗೊಂಬೆಗೆ ಕಾಳಜಿ ತೋರುವ ಈ ಪುಟ್ಟ ಹುಡುಗಿಯ ಮುಗ್ಧತೆಗೆ ನೆಟ್ಟಿಗರು ಕರಗಿ ಹೋಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Jun 7, 2026
- 6:13 pm
Video: ಕಾರ್ಪೊರೇಟ್ ಜೀವನವು ನನ್ನನ್ನು ಒತ್ತಡಕ್ಕೆ ಸಿಲುಕಿಸಿದೆ; ಯುವತಿ ಹೀಗೆಂದಿದ್ದೇಕೆ?
ಕೆಲಸದ ಸ್ಥಳಗಳಲ್ಲಿ ಕೆಲ ಉದ್ಯೋಗಿಗಳು ಅನುಭವಿಸುವ ಒತ್ತಡ ಹೇಳತೀರದು. ಆದರೆ ಏನ್ ಮಾಡೋದು, ಕೆಲಸ ಮಾಡದೇ ಇದ್ದರೆ ವಿಧಿಯಿಲ್ಲ. ಈ ಕಾರ್ಪೋರೇಟ್ ಜಗತ್ತಿನಲ್ಲಿ ಒತ್ತಡ ಡಬಲ್ ಆಗಿರುತ್ತದೆ. ಯುವತಿಯೊಬ್ಬಳು ಒತ್ತಡಭರಿತ ಕೆಲಸದಿಂದ ಮಾನಸಿಕ ಬಳಲುತ್ತಿದ್ದೇನೆ ಎನ್ನುತ್ತಾ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Jun 7, 2026
- 5:53 pm
Video: ಕೊಕ್ಕು ಮುರಿದುಕೊಂಡು ಆಹಾರ ತಿನ್ನಲು ಕಷ್ಟಪಡುತ್ತಿದ್ದ ಹಕ್ಕಿಯ ನೆರವಿಗೆ ಬಂದ ಮತ್ತೊಂದು ಪಕ್ಷಿ
ಸಹಾಯ ಮಾಡುವುದರಲ್ಲಿ ಮನುಷ್ಯರಿಗಿಂತ ಈ ಪ್ರಾಣಿ ಪಕ್ಷಿಗಳೇ ಮೇಲು ಎನ್ನುವ ಮಾತಿದೆ. ಇದಕ್ಕೆ ಉದಾಹರಣೆಯಂತಿದೆ ಈ ದೃಶ್ಯ. ಕೊಕ್ಕು ಮುರಿದುಕೊಂಡು ಆಹಾರ ತಿನ್ನಲು ಕಷ್ಟಪಡುತ್ತಿದ್ದ ಹಕ್ಕಿಗೆ ಇನ್ನೊಂದು ಪಕ್ಷಿ ಸಹಾಯ ಮಾಡಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Jun 5, 2026
- 4:21 pm