Viral News: ಹೆಂಡತಿಗೆ ಕೈಕೊಟ್ಟು ಅತ್ತೆಯನ್ನೇ ಮದುವೆಯಾದ ಅಳಿಯ!
ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿರುವ ಅತ್ಯಂತ ವಿಲಕ್ಷಣ ಅಚ್ಚರಿಯ ಘಟನೆ ವೈರಲ್ ಆಗಿದೆ. ತನಗೆ ಮಗಳನ್ನು ಧಾರೆ ಎರೆದುಕೊಟ್ಟಿದ್ದ ಅತ್ತೆಯ ಮೇಲೆ ಪ್ರೀತಿಯಾಗಿ, ಹೆಂಡತಿಗೆ ವಿಚ್ಛೇದನ ನೀಡಿದ ಮಹಾನುಭಾವನೊಬ್ಬ ಆ ಅತ್ತೆಯನ್ನೇ ಮದುವೆಯಾಗಿರುವ ವಿಚಿತ್ರ ಘಟನೆ ಇಲ್ಲಿ ನಡೆದಿದೆ. ಕೋರ್ಟ್‌ನಲ್ಲಿ ಇಬ್ಬರೂ ಮದುವೆಯಾಗಿದ್ದು, ಅಳಿಯನಾಗಿದ್ದ ವ್ಯಕ್ತಿ ಈಗ ಆ ಮಹಿಳೆಯ ಪತಿಯಾಗಿದ್ದಾನೆ.

ಕಾನ್ಪುರ, ಜೂನ್ 8: ಉತ್ತರ ಪ್ರದೇಶದ ಕಾನ್ಪುರದಲ್ಲಿ ಅತ್ಯಂತ ಅಚ್ಚರಿಯ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಅತ್ತೆಯನ್ನೇ ವಿವಾಹವಾಗಿದ್ದಾನೆ. ಸದ್ಯ ಈ ವಿಲಕ್ಷಣ ಮದುವೆಯ ವಿಡಿಯೋ (Viral Video) ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಳಿಯ ಮತ್ತು ಅತ್ತೆ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಇವರಿಬ್ಬರು ನ್ಯಾಯಾಲಯದಲ್ಲಿ ನೋಂದಾಯಿತ ವಿವಾಹ (ಕೋರ್ಟ್ ಮ್ಯಾರೇಜ್) ಮಾಡಿಕೊಂಡಿದ್ದಾರೆ. ಈ ಘಟನೆಯು ಸ್ಥಳೀಯವಾಗಿ ಭಾರಿ ಸಂಚಲನ ಮೂಡಿಸಿದ್ದು, ಕೌಟುಂಬಿಕ ಸಂಬಂಧಗಳ ಪವಿತ್ರತೆಗೆ ಧಕ್ಕೆ ತಂದಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ವಿಲಕ್ಷಣ ಕೌಟುಂಬಿಕ ಬಿಕ್ಕಟ್ಟು ಸದ್ಯ ಕಾನ್ಪುರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಏನಿದು ಘಟನೆ?:
ಕಾನ್ಪುರದ ನಿವಾಸಿಯೊಬ್ಬರಿಗೆ ಕೆಲವು ವರ್ಷಗಳ ಹಿಂದೆ ವಿವಾಹವಾಗಿತ್ತು. ಮದುವೆಯಾದ ಆರಂಭದಲ್ಲಿ ದಂಪತಿಯ ನಡುವೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕಾಲಕ್ರಮೇಣ ಪತ್ನಿಯ ತಾಯಿ ಈ ದಂಪತಿಗಳ ಮನೆಗೆ ಆಗಾಗ ಬಂದು ಉಳಿದುಕೊಳ್ಳಲು ಆರಂಭಿಸಿದ್ದರು. ಈ ಸಮಯದಲ್ಲಿ ಅಳಿಯ ಮತ್ತು ಅತ್ತೆಯ ನಡುವೆ ಪ್ರೇಮಾಂಕುರವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Video: ಕೇಕ್ ತೆಗೆದುಕೊಂಡು ಅತ್ತೆ ಮನೆಗೆ ಹೋಗಿ ನನ್ನ ಹೆಂಡ್ತಿನಾ ವಾಪಸ್ ಕಳಿಸಿ ಎಂದ ಅಳಿಯ
ಅತ್ತೆಯೊಂದಿಗಿನ ಸಂಬಂಧ ದಿನದಿಂದ ದಿನಕ್ಕೆ ಆಳವಾಗುತ್ತಿದ್ದಂತೆ, ಆ ವ್ಯಕ್ತಿ ತನ್ನ ಪತ್ನಿಯಿಂದ ದೂರವಾಗಲು ನಿರ್ಧರಿಸಿದ್ದ. ಕೌಟುಂಬಿಕ ಕಲಹ ಹಾಗೂ ಭಿನ್ನಾಭಿಪ್ರಾಯಗಳ ನೆಪವೊಡ್ಡಿ ಆತ ನ್ಯಾಯಾಲಯದ ಮೂಲಕ ತನ್ನ ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿದ್ದ. ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ, ಆ ವ್ಯಕ್ತಿ ತನ್ನ ಮಾಜಿ ಪತ್ನಿಯ ತಾಯಿಯನ್ನು ಅಂದರೆ ತನ್ನ ಅತ್ತೆಯನ್ನು ಮದುವೆಯಾಗಲು ನಿರ್ಧರಿಸಿದ್ದ. ಇಬ್ಬರೂ ಒಮ್ಮತದಿಂದ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ವಿಚಿತ್ರವಾದ ಮದುವೆಗೆ ಕುಟುಂಬದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Ghor Kalyug 🤫
In a surprising case from Kanpur, a young man has reportedly ended his marriage and married his mother-in-law instead.
According to media reports, the mother-in-law and son-in-law developed a close relationship after his marriage to her daughter. The situation… pic.twitter.com/AZtO9fk6v4
— Oxomiya Jiyori 🇮🇳 (@SouleFacts) June 8, 2026
ಇದನ್ನೂ ಓದಿ: ಕಲಿಯುಗದ ‘ಶ್ರವಣ ಕುಮಾರ’; 90 ವರ್ಷದ ಅತ್ತೆಯನ್ನು ತಲೆ ಮೇಲೆ ಹೊತ್ತು 260 ಕಿ.ಮೀ ಪಾದಯಾತ್ರೆ ಮಾಡಿದ ಗಾಯಕಿ!
ಈ ಫೋಟೋ ಮತ್ತು ವಿಡಿಯೋ ಎಕ್ಸ್ (ಟ್ವಿಟರ್)ನಲ್ಲಿ ವೈರಲ್ ಆಗಿದ್ದು, “ತಾಯಿಯೇ ತನ್ನ ಸ್ವಂತ ಮಗಳ ಸಂಸಾರವನ್ನು ಹೇಗೆ ಮುರಿಯಬಹುದು? ಈಕೆ ತಾಯಿ ಎಂದು ಕರೆಸಿಕೊಳ್ಳಲು ಲಾಯಕ್ಕಿಲ್ಲ” ಎಂಬ ಕ್ಯಾಪ್ಷನ್ ನೀಡಿ ಹಂಚಿಕೊಳ್ಳಲಾಗಿದೆ. ಇವರಿಬ್ಬರ ಈ ವರ್ತನೆ ಕೌಟುಂಬಿಕ ಸಂಬಂಧಗಳ ವ್ಯಾಖ್ಯಾನಕ್ಕೇ ಮಸಿ ಬಳಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಸ್ವಂತ ಮಗಳ ಸಂಸಾರವನ್ನು ಹಾಳುಗೆಡವಿ ಒಬ್ಬ ತಾಯಿಗೆ ಏನು ಸಿಗಲು ಸಾಧ್ಯ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈ ಮಹಿಳೆಯು ಮಗಳು ಮತ್ತು ಗಂಡನ ಮನೆಯವರನ್ನು ಧಿಕ್ಕರಿಸಿ ತನ್ನ ಅಳಿಯನೊಂದಿಗೆ ಮನೆಯಿಂದ ಓಡಿಹೋಗಿ, ನಂತರ ಕೋರ್ಟ್‌ನಲ್ಲಿ ಮದುವೆಯಾಗಿದ್ದಾಳೆ ಎಂದು ವರದಿಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Mon, 8 June 26




