AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮನೆಯೊಳಗೆ ಇಟ್ಟರೂ ಬಿಸಿಲಿನ ಶಾಖಕ್ಕೆ ಕರಗಿದ ಕ್ರಯಾನ್ಸ್; ಬೆಂಗಳೂರಿನ ಮಹಿಳೆ ಹೇಳಿದ್ದೇನು?

ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ರಾಜ್ಯದ ಜನರು ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಿನಲ್ಲೂ ಅದೇ ಪರಿಸ್ಥಿತಿ. ಇದೀಗ ಬೆಂಗಳೂರಿನ ಮಹಿಳೆಯೊಬ್ಬರು ನಗರದಲ್ಲಿ ಬಿಸಿಲು ಎಷ್ಟಿದೆ ಎಂದು ವಿವರಿಸಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮನೆಯೊಳಗೆ ಇಟ್ಟರೂ ಬಿಸಿಲಿನ ಶಾಖಕ್ಕೆ ಕರಗಿದ ಕ್ರಯಾನ್ಸ್; ಬೆಂಗಳೂರಿನ ಮಹಿಳೆ ಹೇಳಿದ್ದೇನು?
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Apr 20, 2026 | 9:03 PM

Share

ಬೆಂಗಳೂರು, ಏಪ್ರಿಲ್ 20: ಮನೆ ಹೊರಗಡೆ ಕಾಲಿಡಂಗಿಲ್ಲ, ಬಿಸಿಲೋ ಬಿಸಿಲು. ಬಿಸಿಲಿನ ಝಳಕ್ಕೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಫ್ಯಾನ್, ಎಸಿಯಿದ್ರೂ ಉರಿ ಸೆಖೆ ತಡೆಯಲು ಆಗುತ್ತಿಲ್ಲ. ಇಂತಹದ್ದರಲ್ಲಿ ಬೆಂಗಳೂರಿನ (Bengaluru) ಮಹಿಳೆ ಮನೆಯೊಳಗಿದ್ದಾಗಲೇ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಹೌದು, ಮನೆಯೊಳಗೆ ಇಟ್ಟ ಕ್ರಯೋನ್ಸ್‌ ಬಿಸಿಲಿನ ತಾಪಮಾನಕ್ಕೆ ಕರಗಿ ಹೋಗಿವೆಯಂತೆ. ತಮ್ಮ ಕಣ್ಣಾರೆ ಈ ದೃಶ್ಯ ಕಂಡು ಶಾಕ್ ಆಗಿದ್ದಾರೆ.

ಗೀತಾ ಶ್ರೀ ನಾಗರಾಜ್ (geethashreenagaraj) ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಬೆಂಗಳೂರಿನಲ್ಲಿ ಬಿಸಿಲಿನ ಝಳ ಎಷ್ಟಿದೆ ಎಂದು ವಿವರಿಸಿರುವುದನ್ನು ಕಾಣಬಹುದು. ಮನೆಯೊಳಗಿದ್ದಾಗಲೇ ತಮಗಾದ ಅನುಭವ ಹಂಚಿಕೊಳ್ಳುತ್ತಾ, ಮನೆಯೊಳಗಿನ ಮೇಜಿನ ಮೇಲೆ ಇರಿಸಲಾದ ಕ್ರಯೋನ್ಸ್‌ಗಳು ಬಿಸಿಲಿನ ಶಾಖಕ್ಕೆ ಕರಗಿ ಹೊಗಿದೆ‌ ಎಂದು ಹೇಳಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದರೂ, ಇಷ್ಟು ಬಿಸಿಲು ಇರಲಿಲ್ಲ. ಇಂತಹ ಅನುಭವ ಆಗಿರಲಿಲ್ಲ. ಆದರೆ ಒಳಗಿನ ಭಾಗದ ಟೇಬಲ್‌ಟಾಪ್ ಆಮ್ಲೆಟ್ ಬೇಯಿಸುವಷ್ಟು ಬಿಸಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: “ಕೆಲಸ ಹೋದ ಮೇಲೆ ಸತ್ಯ ಗೊತ್ತಾಯ್ತು!”: ಬೆಂಗಳೂರು ಯುವತಿಯ ಭಾವುಕ ವಿಡಿಯೋ ವೈರಲ್; ಕೆಲಸದ ಒತ್ತಡದ ಬಗ್ಗೆ ಬಿಚ್ಚಿಟ್ಟ ಸತ್ಯ

ಈ ವಿಡಿಯೋ ಆನ್ಲೈನ್ ವೈರಲ್ ಆಗಿದ್ದು ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಬಳಕೆದಾರರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, ನಾನು ನಮ್ಮ ಹಳೆಯ ಬೆಂಗಳೂರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಇನ್ನೊಬ್ಬರು, ನಮ್ಮ ಸ್ವಾರ್ಥದಿಂದ ನಾವೇ ಇಂದು ಈ ಪರಿಸ್ಥಿತಿ ತಂದು ಕೊಂಡದ್ದು ಎಂದು ಖಾರವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತುಂಬಾ ಉಷ್ಣ ಹವಾಮಾನ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್