Video: ಹಾರ್ನ್ ಮಾಡುವ ಸಂಸ್ಕೃತಿ ಟೀಕಿಸುವವರಿಗೆ ಖಡಕ್ ಎಚ್ಚರಿಕೆ ನೀಡಿದ ವಿದೇಶಿ ಮಹಿಳೆ
ನಿಮ್ಮ ಮುಂದೆ ಹೋಗುತ್ತಿರುವ ವಾಹನ ಅಥವಾ ಪಾದಚಾರಿಗಳನ್ನು ಎಚ್ಚರಿಸಲು ವಾಹನ ಸವಾರರು ಹಾರ್ನ್ ಮಾಡುತ್ತಾರೆ. ಪದೇ ಪದೇ ಹಾರ್ನ್ ಮಾಡುತ್ತಿದ್ದರೆ ಕೆಲವರಿಗೆ ಕಿರಿಕಿರಿ ಅನಿಸಬಹುದು. ಆದರೆ ಇದೀಗ ಡಚ್ ಮಹಿಳೆಯೊಬ್ಬರು ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ಹಾರ್ನ್ ಮಾಡುವುದು ಕೇವಲ ಶಬ್ದವಲ್ಲ, ಇದು ಸಂವಹನದ ಒಂದು ಭಾಷೆ ಎಂದಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಭಾರತ ಸೇರಿದಂತೆ ಹಲವು ಏಷ್ಯಾದ ದೇಶಗಳಲ್ಲಿ ಹಾರ್ನ್ ಹೊಡೆಯುವುದು ದೈನಂದಿನ ಸಂಚಾರದ ಪ್ರಮುಖ ಭಾಗವಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹಾರ್ನ್ ಮಾಡುವುದು ತುರ್ತು ಸಂದರ್ಭಗಳಲ್ಲಿ ಅಥವಾ ಅಪಾಯದ ಮುನ್ಸೂಚನೆ ಸಂದರ್ಭಗಳಲ್ಲಿ ಮಾತ್ರ. ಹೌದು, ಭಾರತದಲ್ಲಿ ಇದು ಕೇವಲ ರಸ್ತೆ ನಿಯಮವಲ್ಲ, ಇದೊಂದು ಸಂವಹನದ ರೂಪಾಂತರವಾಗಿದೆ. ಇದನ್ನೆಲ್ಲಾ ಗಮನಿಸಿದ ಡಚ್ ಮಹಿಳೆ (Dutch woman) ಭಾರತ ಹಾಗೂ ಆಗ್ನೇಯ ಏಷ್ಯಾದ ಕೆಲ ಭಾಗಗಳಲ್ಲಿ, ಹಾರ್ನ್ ಮಾಡುವುದು ಕೇವಲ ಶಬ್ದ ಎಂದು ಭಾವಿಸಬೇಡಿ. ಈ ರಸ್ತೆ ನಿಯಮವನ್ನು ಪಾಶ್ಚಿಮಾತ್ಯ ದೇಶಗಳೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ತಿಳಿ ಹೇಳಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಾರ್ನ್ ಕಿರಿಕಿರಿಯಲ್ಲ, ಎಚ್ಚರಿಸಲು ಇರುವ ಮಾರ್ಗ
ಇವಾನಾ (ivana) ಎಂಬ ಡಚ್ ಮಹಿಳೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಕೆಲ ದೇಶಗಳಲ್ಲಿ ಜಾಗೃತಿ ಮೂಡಿಸಲು ಅಥವಾ ಎಚ್ಚರಿಸಲು ಇರುವ ಈ ಹಾರ್ನ್‌ನ್ನು ಪಾಶ್ಚಿಮಾತ್ಯ ದೇಶಗಳೊಂದಿಗೆ ಹೋಲಿಕೆ ಮಾಡುವುದು ತಪ್ಪು. ಇದೊಂದು ಸಂವಹನದ ಮಾರ್ಗವಾಗಿದ್ದು, ಇದನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಳೆಯುವುದು ಯಾವುದೇ ರೀತಿಯಿಂದಲೂ ಸರಿಯಲ್ಲ ಎಂದು ಹೇಳಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಮೊದಲ ಬಾರಿಗೆ ಪಾರ್ಲೆ-ಜಿ ಬಿಸ್ಕೆಟ್ ಸವಿದು ಕ್ಯೂಟ್ ರಿಯಾಕ್ಷನ್ ಕೊಟ್ಟ ಕೆನಡಿಯನ್ ಮಹಿಳೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಹೆಚ್ಚಿನವರು ಕಿರಿಕಿರಿ ಎಂದೇ ಭಾವಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ತುಂಬಾ ತಿಳಿದು ಕೊಂಡಿದ್ದೀರಿ, ನಿಮ್ಮ ಬಗ್ಗೆ ಗೌರವ ಹೆಚ್ಚಿದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರ, ಕೆಲ ವಿಷ್ಯಗಳನ್ನು ಪಾಸಿಟಿವ್ ದೃಷ್ಟಿಕೋನದಿಂದ ನೋಡಿದ್ದೀರಿ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




