AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೀಚ್ ಕಂಡೊಡನೆ ಮೈ ಮರೆತು ಮಕ್ಕಳಂತೆ ಆಟ ಆಡಿದ ಅಜ್ಜಿ, ವೈರಲ್ ಆಯ್ತು ದೃಶ್ಯ

ಬೀಚ್ ಅಂದ್ರೆ ಬಹುತೇಕರಿಗೆ ಇಷ್ಟ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬೀಚ್ ಕಂಡಾಗ ಮಗುವಂತೆ ನೀರಿಗೆ ಇಳಿದು ಆಟ ಆಡುತ್ತಾರೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಈ ದೃಶ್ಯ. ಬೀಚ್‌ನಲ್ಲಿ ಮಕ್ಕಳಂತೆ ಆಟವಾಡಿದ ಅಜ್ಜಿಯ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ವೃದ್ಧ ಮಹಿಳೆಯ ಮಗುವಿನಂತಹ ಮನಸ್ಸಿಗೆ ನೆಟ್ಟಿಗರು ಕಳೆದೇ ಹೋಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬೀಚ್ ಕಂಡೊಡನೆ ಮೈ ಮರೆತು ಮಕ್ಕಳಂತೆ ಆಟ ಆಡಿದ ಅಜ್ಜಿ, ವೈರಲ್ ಆಯ್ತು ದೃಶ್ಯ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Jul 19, 2026 | 4:42 PM

Share

ಹಿರಿಜೀವಗಳಿಗೆ (grandparents) ಮನೆ ಬಿಟ್ಟರೆ ಪ್ರಪಂಚ ಬೇರೆ ಇಲ್ಲ. ಟ್ರಿಪ್, ಟ್ರಕ್ಕಿಂಗ್, ಸುತ್ತಾಟ ಎಂದು  ಅಜ್ಜ ಅಜ್ಜಿಯಂದಿರು  ಎಂಜಾಯ್ ಮಾಡುವುದೇ ಕಡಿಮೆ. ಆದರೆ ಇಲ್ಲೊಬ್ಬರು ಅಜ್ಜಿ ತನ್ನ ಕುಟುಂಬದೊಂದಿಗೆ ಬೀಚ್ ನೋಡಲು ತೆರಳಿದ್ದು ಅಲ್ಲಿ ಮತ್ತೆ ಮಕ್ಕಳಾಗಿದ್ದಾರೆ. ಬೀಚ್‌ನಲ್ಲಿ ಮತ್ತೆ ಮಗುವಿನಂತೆ ನೀರಿನಲ್ಲಿ ಆಟ ಆಡಿದ್ದಾರೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಪಾಯಲ್ (Payal) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತನ್ನ ಕುಟುಂಬದೊಂದಿಗೆ ಅಜ್ಜಿಯೊಬ್ಬರು ಬೀಚ್ ಗೆ ಬಂದಿದ್ದಾರೆ. ಅಲ್ಲಿ ತನಗೆ ವಯಸ್ಸು ಆಗಿದೆ ಎನ್ನುವುದನ್ನು ಮರೆತು ಮಕ್ಕಳಂತೆ ಆಟ ಆಡಿದ್ದಾರೆ. ಈ ವೃದ್ಧೆಯ ಮೊಗದಲ್ಲಿನ ನಗುವೇ ಎಲ್ಲವನ್ನು ಹೇಳುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Payal (@curatedbypayal)

ಇದನ್ನೂ ಓದಿ: ಹಾಯಾಗಿ ಮಲಗಿರುವ ಶ್ವಾನಕ್ಕೆ ಬೀಸಣಿಗೆಯಲ್ಲಿ ಗಾಳಿ ಬೀಸುತ್ತಿರುವ ವೃದ್ಧ

ಈ ವಿಡಿಯೋ ಹದಿಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಾನು ಇವತ್ತು ಅದ್ಭುತ ವಿಡಿಯೋ ನೋಡಿದೆ ಎಂದಿದ್ದಾರೆ. ಮತ್ತೊಬ್ಬರು, ಈ ಅಜ್ಜಿ ಅದೆಷ್ಟೋ ವರ್ಷಗಳ ಬಳಿಕ ಈ ರೀತಿ ಖುಷಿ ಪಟ್ಟಿರಬಹುದು ಎಂದೆನಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನನ್ನ ಅಜ್ಜಿ ನೆನಪಾದ್ರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಆ.13ರಂದು ಕರ್ನಾಟಕ ಬಂದ್​​: ಬೆಂಗಳೂರಿನ ಖಾಸಗಿ ಶಾಲೆಗಳಿಗಿಲ್ಲ ರಜೆ!
ಆ.13ರಂದು ಕರ್ನಾಟಕ ಬಂದ್​​: ಬೆಂಗಳೂರಿನ ಖಾಸಗಿ ಶಾಲೆಗಳಿಗಿಲ್ಲ ರಜೆ!
ಬನಶಂಕರಿಯಲ್ಲಿ ನಿನ್ನೆ ಸಂಜೆ ಮತ್ತೆ ಚಿರತೆ ಪ್ರತ್ಯಕ್ಷ ಇಂದು ಕಾರ್ಯಾಚರಣೆ
ಬನಶಂಕರಿಯಲ್ಲಿ ನಿನ್ನೆ ಸಂಜೆ ಮತ್ತೆ ಚಿರತೆ ಪ್ರತ್ಯಕ್ಷ ಇಂದು ಕಾರ್ಯಾಚರಣೆ
ಬಾಗಲಕೋಟೆಯಲ್ಲಿ ಗಮನ ಸೆಳೆದ 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ
ಬಾಗಲಕೋಟೆಯಲ್ಲಿ ಗಮನ ಸೆಳೆದ 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ
ಅದ್ವೈತ್ ಉಪಾಧ್ಯಾಯ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್​​!
ಅದ್ವೈತ್ ಉಪಾಧ್ಯಾಯ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್​​!
ಸರ್ಕಾರಿ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿದ ಅತಿಥಿ ಉಪನ್ಯಾಸಕರು
ಸರ್ಕಾರಿ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿದ ಅತಿಥಿ ಉಪನ್ಯಾಸಕರು
ಹೆಚ್​ಡಿಕೆ ವಿರುದ್ಧ ‘ಕೋಳಿ’ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ವ್ಯಂಗ್ಯ
ಹೆಚ್​ಡಿಕೆ ವಿರುದ್ಧ ‘ಕೋಳಿ’ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ವ್ಯಂಗ್ಯ
ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು