Viral: ಹೆಂಡತಿ ವಿಚ್ಛೇದನ ನೀಡಿದ ಕಾರಣಕ್ಕೆ ಪ್ರತಿದಿನ ಅನ್ನ ನೀರು ಬಿಟ್ಟು ಬಿಯರ್​​​ ಕುಡಿದು ವ್ಯಕ್ತಿ ಸಾವು

ಹೆಂಡತಿ ವಿಚ್ಛೇದನ ನೀಡಿದಕ್ಕೆ ನೊಂದು ಅನ್ನ ನೀರು ಬಿಟ್ಟು, ಪ್ರತಿದಿನ ಬಿಯರ್​​​​ ಕುಡಿಯಲು ಶುರು ಮಾಡಿ, ಇದೀಗ ವ್ಯಕ್ತಿಯೊಬ್ಬ ಸಾವನ್ನಪ್ಪಿದ ವಿಚಿತ್ರ ಘಟನೆ ನಡೆದಿದೆ.. 44 ವರ್ಷದ ವ್ಯಕ್ತಿಯೊಬ್ಬ ವಿಚ್ಛೇದನದ ನಂತರ ನೋವಿನಲ್ಲಿ ಅನ್ನ ನೀರು ಬಿಟ್ಟು ಒಂದು ತಿಂಗಳು ಬರೀ ಬಿಯರ್​​ನ್ನು ಕುಡಿದು ತನ್ನ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

Viral: ಹೆಂಡತಿ ವಿಚ್ಛೇದನ ನೀಡಿದ ಕಾರಣಕ್ಕೆ ಪ್ರತಿದಿನ ಅನ್ನ ನೀರು ಬಿಟ್ಟು ಬಿಯರ್​​​ ಕುಡಿದು ವ್ಯಕ್ತಿ ಸಾವು
ಸಾಂದರ್ಭಿಕ ಚಿತ್ರ
Edited By:

Updated on: Jul 26, 2025 | 12:17 PM

ಇತ್ತಿಚೀಗಿನ ದಿನಗಳಲ್ಲಿ ವಿಚ್ಛೇದನ ( divorce)  ಪ್ರಕರಣಗಳು ಹೆಚ್ಚಾಗಿದೆ. ಸಣ್ಣ ಸಣ್ಣ ಕಾರಣಗಳಿಗೆ ವಿಚ್ಛೇದನ ನೀಡುತ್ತಾರೆ. ಹೀಗೆ ಸುಮ್ಮಸುಮ್ಮನೆ ವಿಚ್ಛೇದನ ನೀಡಿ, ತಮ್ಮ ಜೀವನವನ್ನು ಹಾಳು ಮಾಡಿಕೊಂಡಿರುವ ಹಲವು ಉದಾಹರಣೆಗಳು ನಮ್ಮ ಮುಂದೆ ಇದೆ. ಇದೀಗ ಇಲ್ಲೊಂದು ಘಟನೆ ಕೂಡ ಅದೇ ರೀತಿ ಆಗಿದೆ, ಆದರೆ ಇದು ಸ್ವಲ್ಪ ವಿಚಿತ್ರವಾಗಿದೆ. ವಿಚ್ಛೇದನ ನೀಡಿದ ನಂತರ ಅನ್ನ ನೀರು ಬಿಟ್ಟು ಬಿಯರ್​​​ ಮಾತ್ರ ಕುಡಿದು, ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಥೈಲ್ಯಾಂಡ್‌ನ (Thailand) ಬಾನ್ ಚಾಂಗ್ ಜಿಲ್ಲೆಯಲ್ಲಿ ನಡೆದಿದೆ. 44 ವರ್ಷದ ವ್ಯಕ್ತಿಯೊಬ್ಬ ವಿಚ್ಛೇದನದ ನಂತರ ಆ  ನೋವಿನಲ್ಲಿ ಅನ್ನ ನೀರು ಬಿಟ್ಟು ಒಂದು ತಿಂಗಳು ಬಿಯರ್​​ನ್ನು ಕುಡಿದು ತನ್ನ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇನ್ನು ಸಾವನ್ನಪ್ಪಿರುವ ವ್ಯಕ್ತಿಯನ್ನು ಥವೀಸಕ್ ನಮ್ವೊಂಗ್ಸಾ ಎಂದು ಗುರುತಿಸಲಾಗಿದೆ.

ಇನ್ನು ಈ ಘಟನೆಯನ್ನು ಮಗ ನೋಡಿದ್ದಾನೆ. ತಂದೆ ಶವ ಪತ್ತೆಯಾಗಿರುವ ರೂಮ್​​​ನಲ್ಲಿ 100ಕ್ಕೂ ಹೆಚ್ಚು ಬಿಯರ್​​ ಬಾಟಲ್​​​​ ಸಿಕ್ಕಿದೆ. ಒಂದು ಮಗುವಿನ ತಂದೆಯಾಗಿರುವ ನಮ್ವೊಂಗ್ಸಾ, ತನ್ನ ಹೆಂಡತಿಯಿಂದ ಬೇರ್ಪಟ್ಟ ನಂತರ ತನ್ನ 16 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದ. ಪ್ರತಿದಿನ ಬಿಸಿ ಬಿಸಿಯಾದ ಅಡುಗೆಯನ್ನು ಮಾಡುತ್ತಿದ್ದರೂ, ತಂದೆ ಮಾತ್ರ ಊಟ ಮುಟ್ಟುತ್ತಿರಲಿಲ್ಲ, ಪ್ರತಿದಿನ ಅವರಿಗೆ ಬಿಯರ್​​​​​ ಬೇಕಿತ್ತು ಎಂದು ಮಗ ಪೊಲೀಸರಿಗೆ ತಿಳಿಸಿದ್ದಾನೆ. ಇನ್ನು ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಥವೀಸಕ್ ನಮ್ವೊಂಗ್ಸಾ ಅವರ ಮಗ ಶಾಲೆ ಹೋಗಿ ಬರುವಾಗ ಮೂರ್ಛೆ ಹೋಗಿದ್ದನು, ಕೋಣೆಯಲ್ಲಿ ಪ್ರಜ್ಞಾಹೀನಾ ಸ್ಥಿತಿಯನ್ನು ಕಂಡು ಸಿಯಾಮ್ ರೇಯಾಂಗ್ ಫೌಂಡೇಶನ್‌ನ ಅರೆವೈದ್ಯಕೀಯ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಲಾಯಿತು. ಆದರೆ ಅವರು ಬರುವ ಹೊತ್ತಿಗೆ ನಮ್ವೊಂಗ್ಸಾ ಈಗಾಗಲೇ ಮೃತಪಟ್ಟಿದ್ದನು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮಗುವಿನ ಶಾಲೆಗಾಗಿ 11.2 ಲಕ್ಷ ರೂ. ಖರ್ಚು ಮಾಡುತ್ತಿರುವ ದಂಪತಿ

ಇದನ್ನೂ ಓದಿ
ಹತ್ತು ಸಾವಿರ ಕೋಟಿ ರೂ ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ, ವರ್ಕ್‌ ಫ್ರಮ್ ಹೋಮ್ ಬೆಸ್ಟ್‌
ಬದುಕು ಕಟ್ಟಿಕೊಟ್ಟ ಸುಂದರ ನಗರಕ್ಕೆ ಧನ್ಯವಾದ ತಿಳಿಸಿದ ವ್ಯಕ್ತಿ
ಮೊಬೈಲ್‌ ನೋಡುತ್ತಾ ಕುಳಿತು ಮೈ ಮರೆತ್ರೆ ಏನಾಗುತ್ತೆ ಅನ್ನೋದನ್ನು ನೋಡಿ

ಇನ್ನು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಒಂದು ಅಚ್ಚರಿಯ ವಿಚಾರ ಕಂಡಿದೆ. ಕೋಣೆಯೊಳಗೆ 100 ಕ್ಕೂ ಹೆಚ್ಚು ಖಾಲಿ ಬಿಯರ್ ಬಾಟಲಿಗಳು ರೂಮ್​​​ ತುಂಬಾ ಹರಡಿತ್ತು. ರೂಮ್​​​ ಒಳಗೆ ಕಾಲಿಡಲು ಸ್ಥಳವಿಲ್ಲ, ಅಷ್ಟು ಬಾಟಲಿಗಳು ರೂಮ್​​ನಲ್ಲಿ ಇತ್ತು. ಅತಿಯಾದ ಮದ್ಯ ಸೇವನೆಯಿಂದ ಆತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಅಧಿಕಾರಿಗಳು ಇನ್ನೂ ಸಾವಿಗೆ ಅಧಿಕೃತ ಕಾರಣವನ್ನು ದೃಢಪಡಿಸಿಲ್ಲ. ಈ ವಾರದ ಕೊನೆಯಲ್ಲಿ ಶವಪರೀಕ್ಷೆ ನಡೆಯಲಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us