AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಎಕ್ಸಾಮ್ ಪೇಪರ್ ಕರೆಕ್ಷನ್ ಮಾಡುವುದನ್ನು ರೀಲ್ಸ್ ಮಾಡಿದ ಶಿಕ್ಷಕಿ, ಮಕ್ಕಳ ಭವಿಷ್ಯ ಗೋವಿಂದ

ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ರೀಲ್ಸ್ ಹುಚ್ಚಿಗೆ ದಾಸರಾಗಿದ್ದಾರೆ. ತಮ್ಮ ಕೆಲಸವನ್ನು ಬಿಟ್ಟು ರೀಲ್ಸ್ ಮಾಡಿ ಅಪಾಯಗಳ ಮೈ ಮೇಲೆ ಎಳೆದುಕೊಳ್ಳುವವರೇ ಹೆಚ್ಚು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ಉತ್ತರ ಪತ್ರಿಕೆಯನ್ನು ಕರೆಕ್ಷನ್ ಮಾಡುವ ಬದಲು ರೀಲ್ಸ್ ನಲ್ಲಿ ಶಿಕ್ಷಕಿಯೊಬ್ಬಳು ಮಗ್ನಳಾಗಿದ್ದಾಳೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಟೀಕಿಸಿದ್ದಾರೆ.

Viral Video: ಎಕ್ಸಾಮ್ ಪೇಪರ್ ಕರೆಕ್ಷನ್ ಮಾಡುವುದನ್ನು ರೀಲ್ಸ್ ಮಾಡಿದ ಶಿಕ್ಷಕಿ, ಮಕ್ಕಳ ಭವಿಷ್ಯ ಗೋವಿಂದ
ಸಾಯಿನಂದಾ
| Edited By: |

Updated on: May 27, 2024 | 6:22 PM

Share

ಸೋಷಿಯಲ್ ಮೀಡಿಯಾವು ಪ್ರತಿಭೆಗಳಿಗೆ ಅದ್ಭುತ ವೇದಿಕೆಯೆನ್ನುವ ಮಾತೇನೋ ನಿಜ. ಈಗಾಗಲೇ ಅದೆಷ್ಟೋ ಜನರು ನೃತ್ಯ, ನಟನೆ, ಹಾಡು ಹೀಗೆ ನಾನಾ ರೀತಿಯ ಪ್ರತಿಭೆಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಫಾಲ್ಲೋರ್ಸ್ ಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಆದರೆ ನಮ್ಮ ಸುತ್ತಮುತ್ತಲಿನಲ್ಲಿ ಮಾಡುವ ಕೆಲಸವನ್ನು ಬಿಟ್ಟು ರೀಲ್ಸ್ ನಲ್ಲೇ ಮುಳುಗಿರುವವರು ಇದ್ದಾರೆ. ಇಲ್ಲೊಬ್ಬ ಶಿಕ್ಷಕಿಯ ಉತ್ತರ ಪತ್ರಿಕೆ ಕರೆಕ್ಷನ್ ಮಾಡುವ ವೇಳೆಯಲ್ಲಿ ರೀಲ್ಸ್ ಮಾಡುತ್ತಿದ್ದಾಳೆ. ಈ ವಿಡಿಯೋ ನೋಡಿದ ಮೇಲೆ ಈಕೆಗೆ ರೀಲ್ಸ್ ಹುಚ್ಚು ಎಷ್ಟಿದೆ ಎಂದು ತಿಳಿಯುತ್ತದೆ.

ಹೌದು, ಬಿಹಾರದ ಪಾಟ್ನಾ ಕಾಲೇಜು ಶಿಕ್ಷಕಿಯೊಬ್ಬರು ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವಾಗ ರೀಲ್ಸ್ ಮಾಡಿದ್ದಾರೆ. ಚಪ್ರಾ ಝಿಲ್ಲಾ ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ಶಾಲೆಯ ಬೆಂಚ್ ಮೇಲೆ ಹಲವಾರು ಉತ್ತರ ಪತ್ರಿಕೆಗಳನ್ನು ಇರಿಸಿರುವುದನ್ನು ನೋಡಬಹುದು. ಆದರೆ ಕರೆಕ್ಷನ್ ಮಾಡುವುದರಲ್ಲಿ ಇರಬೇಕಾದ ಗಮನ ಮೊಬೈಲ್ ಕ್ಯಾಮೆರಾದ ಮೇಲಿದೆ. ಉಳಿದ ಶಿಕ್ಷಕರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕೆಲಸ ಮಾಡುವುದನ್ನು ಬಿಟ್ಟು ರೀಲ್ಸ್ ನಲ್ಲಿ ಮುಳುಗಿದ ಈ ಶಿಕ್ಷಕಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಮಹಿಳೆಯ ಪರ್ಸ್ ಎಗರಿಸಲು ಬಂದ ಕಳ್ಳ ಬಸ್​​​ನಲ್ಲೇ ಲಾಕ್, ವಿಡಿಯೋ ವೈರಲ್

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ವೀಡಿಯೊವನ್ನು @BiharTeacherCan ಹೆಸರಿನ X (ಹಿಂದೆ Twitter) ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಮೂರು ಲಕ್ಷದ ಎಂಭತ್ತಮ್ಮೂರು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅದಲ್ಲದೇ, ಶಿಕ್ಷಕಿಯ ರೀಲ್ಸ್ ಹುಚ್ಚು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿಸಿದೆ. ಬಳಕೆದಾರರೊಬ್ಬರು, ‘ಈ ಮೇಡಂ ವಧುವಿನಂತೆ ಕಂಗೊಳಿಸುತ್ತಿದ್ದಾರೆ’ ಎಂದಿದ್ದಾರೆ. ಮತ್ತೊಬ್ಬರು ‘ಮಕ್ಕಳ ಪೇಪರ್ ಬ್ಯಾಕ್ ಅಪ್ ಯಾಕೆ ಆಗುತ್ತಿದೆಯೆಂದು ಈಗ ಅರ್ಥವಾಗುತ್ತಿದೆ’ ಎಂದಿದ್ದಾರೆ. ಇನ್ನು ಕೆಲವರು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಶಿಸ್ತನ್ನು ಕಲಿಸುವ ಶಿಕ್ಷಕರೇ ಹೀಗೆ ಮಾಡಿದರೆ ಮಕ್ಕಳ ಭವಿಷ್ಯದ ಗತಿಯೇನು ಎಂದು ಪ್ರಶ್ನಿಸುತ್ತಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ