Personality Test : ಹಣೆಯ ಮೇಲಿನ ರೇಖೆ ಹೇಳುತ್ತದೆ ನಿಮ್ಮ ವ್ಯಕ್ತಿತ್ವವನ್ನು, ಈ ರೀತಿ ಇದ್ರೆ ನಿಮ್ಮಲ್ಲಿ ನಾಯಕತ್ವ ಗುಣ ಹೆಚ್ಚು
ಯಾವುದೇ ವ್ಯಕ್ತಿಯೇ ಇರಲಿ, ಹೊಸ ವ್ಯಕ್ತಿಯ ಪರಿಚಯವಾದಾಗ ಆತ ಹೇಗೆ? ಆತನಲ್ಲಿ ಒಳ್ಳೆಯ ಗುಣಗಳಿವೆಯೇ ಎಂದು ತಿಳಿಯಲು ಬಯಸುತ್ತಾರೆ. ಆ ವ್ಯಕ್ತಿಯೊಂದಿಗೆ ಸ್ವಲ್ಪ ಹೊತ್ತು ಮಾತನಾಡಿದ್ರೆ ಸಾಕು, ಆತನ ವ್ಯಕ್ತಿತ್ವ ಏನೆಂದು ತಿಳಿಯುತ್ತದೆ. ಆದರೆ ಒಬ್ಬ ವ್ಯಕ್ತಿಯ ಹಣೆಯಲ್ಲಿ ಮೂಡುವ ರೇಖೆಗಳ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಬಹುದು. ಹಣೆಯ ಮೇಲೆ ಎಷ್ಟು ರೇಖೆಗಳು ಮೂಡುತ್ತದೆ ಎನ್ನುವುದರ ಮೇಲೆ ಈ ವ್ಯಕ್ತಿಯ ನಿಗೂಢ ಗುಣಸ್ವಭಾವಗಳು ರಿವೀಲ್ ಆಗುತ್ತದೆ. ಹಾಗಾದ್ರೆ ಆ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
![Personality Test : ಹಣೆಯ ಮೇಲಿನ ರೇಖೆ ಹೇಳುತ್ತದೆ ನಿಮ್ಮ ವ್ಯಕ್ತಿತ್ವವನ್ನು, ಈ ರೀತಿ ಇದ್ರೆ ನಿಮ್ಮಲ್ಲಿ ನಾಯಕತ್ವ ಗುಣ ಹೆಚ್ಚು](https://images.tv9kannada.com/wp-content/uploads/2025/01/personality-test-12.jpg?w=1280)
Personality Test (12)
ನಮ್ಮ ದೇಹದ ಅಂಗಗಳು ನಮಗೆ ಗೊತ್ತಿಲ್ಲದಂತೆ ನಾವು ಹೇಗೆ ಎನ್ನುವುದನ್ನು ತಿಳಿಸುತ್ತದೆ. ಎಲ್ಲರಿಗೂ ತಿಳಿದಿರುವಂತೆ ನಾವು ನಡೆದಾಡುವ ರೀತಿ, ಕುಳಿತುಕೊಳ್ಳುವ ರೀತಿ, ಮಲಗುವ ರೀತಿ, ದೇಹದ ಅಂಗಗಳಾದ ತುಟಿ, ಮೂಗು, ಕಣ್ಣು, ಹಣೆ, ಕಿವಿ ಹಾಗೂ ಗಲ್ಲದ ಆಕಾರದಿಂದ ವ್ಯಕ್ತಿತ್ವ ತಿಳಿಯಬಹುದು. ಅದೇ ರೀತಿ ಹಣೆಯಲ್ಲಿ ಮೂಡುವ ರೇಖೆಗಳು ನಿಗೂಢ ವ್ಯಕ್ತಿತ್ವ ರಿವೀಲ್ ಮಾಡುತ್ತದೆ ಎನ್ನಲಾಗಿದೆ. ಹುಬ್ಬುಗಂಟಿಕ್ಕಿದಾಗ ಹಣೆಯ ಮೇಲೆ ಎಷ್ಟು ರೇಖೆಗಳಿವೆ ನೋಡಿ, ಆ ರೇಖೆಗಳು ನಿಮಗೆ ಗೊತ್ತಿರದ ನಿಮ್ಮ ಗುಣಸ್ವಭಾವ ಹೇಳುತ್ತದೆ.
- ಒಂದೇ ಒಂದು ಲಂಬ ರೇಖೆ : ಹುಬ್ಬುಗಂಟಿಕ್ಕಿದಾಗ ಒಂದೇ ಒಂದು ಲಂಬ ರೇಖೆ ಹಣೆಯ ಮೇಲೆ ಮೂಡಿದರೆ ಈ ವ್ಯಕ್ತಿಗಳು ಆಕ್ರಮಣಕಾರಿ ಸ್ವಭಾವವನ್ನು ಹೊಂದಿರುತ್ತಾರೆ. ದೃಢವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಎಷ್ಟೇ ಕಷ್ಟದ ಕೆಲಸವಾಗಿದ್ದರೂ ಯಾವುದಕ್ಕೂ ಜಗ್ಗದೆ ಮಾಡಿ ಮುಗಿಸುವ ಸ್ವಭಾವ ಇವರಾದ್ದಾಗಿರುತ್ತದೆ. ಸ್ವಾರ್ಥ ಸ್ವಭಾವವನ್ನು ಹೊಂದಿದ್ದು, ಈ ವ್ಯಕ್ತಿಗಳನ್ನು ಬೇರೆಯವರ ಭಾವನೆಗಳಿಗೆ ಬೆಲೆ ಕೊಡುವುದೇ ಕಡಿಮೆ. ಹೀಗಾಗಿ ಬೇರೆಯವರ ಕಷ್ಟ ನೋವು, ಆದ್ಯತೆಗಳಿಗೆ ಬೆಲೆ ಕೊಡುವುದಕ್ಕಿಂತ ತಮ್ಮ ಜೀವನ ಆದ್ಯತೆಗಳಿಗೆ ಹೆಚ್ಚು ಗಮನ ಹರಿಸುತ್ತಾರೆ. ತಾವು ಅಂದುಕೊಂಡಂತೆ ಬದುಕಲು ಬೇರೆಯವರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಇವರಿಗೆ ಸ್ನೇಹಿತರಿಗಿಂತ ಶತ್ರುಗಳೇ ಹೆಚ್ಚು ಎನ್ನಬಹುದು.
- ಎರಡು ಲಂಬ ರೇಖೆಗಳು : ಹುಬ್ಬುಗಂಟಿಕ್ಕಿದಾಗ ಎರಡು ಲಂಬ ರೇಖೆಗಳು ಮೂಡಿದರೆ ಈ ವ್ಯಕ್ತಿಗಳು ಬುದ್ಧಿವಂತರಾಗಿರುತ್ತಾರೆ. ಯಾವುದೇ ವಿಷಯಗಳನ್ನು ವಿಶ್ಲೇಷಣಾತ್ಮಕವಾಗಿ ಯೋಚಿಸುತ್ತಾರೆ. ಜೀವನದ ಬಗ್ಗೆ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದು, ಅದಕ್ಕಿಂತ ಕಷ್ಟ ಪಟ್ಟು ದುಡಿಯುವ ಗುಣ ಇವರದ್ದು. ಹೀಗಾಗಿ ಈ ವ್ಯಕ್ತಿಗಳನ್ನು ಶ್ರಮಜೀವಿಗಳೆನ್ನಬಹುದು. ಸವಾಲುಗಳನ್ನು ಎದುರಿಸುವ ಗುಣ ಇವರಲ್ಲಿ ಹೆಚ್ಚಿರುತ್ತದೆ. ಹೀಗಾಗಿ ಜೀವನದ ಸಮಸ್ಯೆಗಳಿಗೆ ಸುಲಭ ಪರಿಹಾರ ಕಂಡುಕೊಳ್ಳುತ್ತಾರೆ. ಕುಟುಂಬ ಹಾಗೂ ಸ್ನೇಹಿತರಿಗೆ ಕಷ್ಟ ಎಂದರೆ ಮಿಡಿಯುವ ಹೃದಯ ಇವರದ್ದು. ಕಷ್ಟಕಾಲದಲ್ಲಿ ಯಾರೇ ಇದ್ದರೂ ಸಹಾಯ ಮಾಡುವ ಗುಣ ಇವರಿಗಿರುತ್ತದೆ.
- ಮೂರು ಹಾಗೂ ಮೂರಕ್ಕಿಂತ ಹೆಚ್ಚು ರೇಖೆಗಳು : ಹಣೆಯ ಮೇಲೆ ಮೂರು ಅಥವಾ ಮೂರಕ್ಕಿಂತ ಹೆಚ್ಚು ರೇಖೆಗಳು ಕಂಡು ಬಂದರೆ ಈ ವ್ಯಕ್ತಿಗಳು ಬುದ್ಧಿವಂತರಾಗಿದ್ದು, ಹೆಚ್ಚು ಜೀವನ ಅನುಭವ ಹೊಂದಿರುತ್ತಾರೆ. ಚಿಂತನಾಶೀಲರಾಗಿದ್ದು ಜೀವನದ ಬಗ್ಗೆ ಎಲ್ಲಾ ದೃಷ್ಟಿಕೋನದಿಂದಲೂ ನೋಡುತ್ತಾರೆ. ನಾಯಕತ್ವ ಗುಣಗಳಿಂದಲೇ ತನ್ನ ಸುತ್ತಮುತ್ತಲಿನ ನಡುವೆ ಗುರುತಿಸಿಕೊಳ್ಳುತ್ತಾರೆ. ಯಾವುದೇ ನಿರ್ಧಾರವಿರಲಿ, ಯೋಚಿಸಿ ತೆಗೆದುಕೊಳ್ಳುವ ಸಾಮರ್ಥ್ಯ ಇವರಲ್ಲಿ ಅಧಿಕವಾಗಿರುತ್ತದೆ. ಉತ್ತಮ ಜೀವನ ನಡೆಸುವ ಕಾರಣ ಸಮಾಜದಲ್ಲಿ ಗುರುತಿಸುವ ವ್ಯಕ್ತಿ ಇವರಾಗಿರುತ್ತಾರೆ. ಈ ಜನರು ಇತರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯೇ ಹೆಚ್ಚು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:26 am, Wed, 29 January 25