AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತನ್ನ ತಾಯಿ ಪಕ್ಕದಲ್ಲಿದ್ದ ಮಾಲೀಕನನ್ನು ತಳ್ಳಿ ವಾರ್ನಿಂಗ್ ಕೊಟ್ಟ ಮರಿಯಾನೆ

ಮರಿಯಾನೆಗಳ ಕ್ಯೂಟ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಮಾಲೀಕ ಜತೆಗೆ ಈ ಆನೆಗುಲು ತುಂಟಾಟ ಆಡುವ , ಗುದ್ದಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ಮರಿಯಾನೆ ಜಗಳಕ್ಕೆ ಇಳಿದಿದೆ. ಹೌದು, ತನ್ನ ತಾಯಿಯ ಪಕ್ಕ ಕುಳಿತ ಮಾಲೀಕನನ್ನು ಎದ್ದು ಓಡಿಸಿರುವ ದೃಶ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತನ್ನ ತಾಯಿ ಪಕ್ಕದಲ್ಲಿದ್ದ ಮಾಲೀಕನನ್ನು ತಳ್ಳಿ ವಾರ್ನಿಂಗ್ ಕೊಟ್ಟ ಮರಿಯಾನೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Sep 24, 2026 | 12:03 PM

Share

ಮರಿಯಾನೆಗಳು (baby elephant) ಏನು ಮಾಡಿದ್ರು ಮುದ್ದಾಗಿ ಕಾಣಿಸುತ್ತವೆ. ಅವುಗಳ ಆಟ ತುಂಟಾಟಗಳನ್ನು ನೋಡುವುದೇ ಖುಷಿ. ಇದೀಗ ಮರಿಯಾನೆ ತನ್ನ ತಾಯಿಯ ಜತೆಗೆ ಕುಳಿತಿದ್ದ ಮಾಲೀಕ ಕಂಡು ಅಸೂಯೆ ಪಟ್ಟುಕೊಂಡಿದೆ. ನೀನು ಇಲ್ಲಿ ಕೂತ್ಕೋಬಾರದು ಎಂಬಂತೆ ಎದ್ದು ಓಡಿಸಿದೆ. ಈ ಕ್ಯೂಟ್ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಾಯಾನೆ ಪಕ್ಕ ಕುಳಿತಿದ್ದ ಮಾಲೀಕನಿಗೆ ಮರಿಯಾನೆಯ ವಾರ್ನಿಂಗ್

ರಂಜಿತಾ ರಾಜ (Ranjitha Raja) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ತಾಯಾನೆಯ ಪಕ್ಕದಲ್ಲಿ ಮಾಲೀಕನು ಕುಳಿತುಕೊಂಡಿರುವುದನ್ನು ಕಾಣಬಹುದು. ಇದೇ ವೇಳೆ ಮಾಲೀಕನು ತನ್ನ ತಾಯಿಯ ಜತೆಗೆ ಕುಳಿತುಕೊಂಡದ್ದನ್ನು ಕಂಡು ಒಂದೊಳ್ಳೆ ಉಪಾಯ ಮಾಡಿದೆ. ಕೊನೆಗೆ ಮಾಲೀಕನನ್ನು ತನ್ನ ಪುಟಾಣಿ ಸೊಂಡಿಲಿನಿಂದ ಮಾಲೀಕನನ್ನು ತಳ್ಳಿ ಓಡಿಸಿ ಕ್ಯೂಟ್‌ ರಿಯಾಕ್ಷನ್‌ ನೀಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಾಯಿಯ ಹಿಂದೆ ಓಡುತ್ತಾ ಮುಗ್ಗರಿಸಿ ಬಿದ್ದ ಮರಿಯಾನೆ, ವೈರಲ್‌ ಆಯ್ತು ದೃಶ್ಯ 

ಈ ವಿಡಿಯೋ ಹತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಪುಟಾಣಿ ಆನೆಗೆ ಹೊಟ್ಟೆ ಕಿಚ್ಚು ನೋಡಿ ಎಂದಿದ್ದಾರೆ. ಇನ್ನೊಬ್ಬರು, ಕ್ಯೂಟ್ ಆದ ದೃಶ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಪ್ರಾಣಿಗಳೇ ಇರಲಿ, ಮನುಷ್ಯರೇ ಇರಲಿ ಭಾವನೆಗಳು ಇದ್ದೆ ಇರುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:02 pm, Thu, 24 September 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More