ಭೂಮಿ ಬಳಿ ಬರಲಿದೆ ಬುರ್ಜ್ ಖಲೀಫಾಕ್ಕಿಂತ ಎರಡು ಪಟ್ಟು ಗಾತ್ರದ ಕ್ಷುದ್ರಗ್ರಹ; ಏನಿದು ವಿದ್ಯಮಾನ?
Asteroid 7482 ಭೂಮಿಗೆ ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ ಜನವರಿ 18 ರಂದು 4.51pm EST ಕ್ಕೆ (ಜನವರಿ 19 ರಂದು 3.21am IST) ಹಾದು ಹೋಗಲಿದೆ.
ಬುರ್ಜ್ ಖಲೀಫಾದ (Burj Khalifa) ಗಾತ್ರಕ್ಕಿಂತ ದೊಡ್ಡದಾದ ಕ್ಷುದ್ರಗ್ರಹವು (Asteroid) ಜನವರಿ 18 ರಂದು ಭೂಮಿಯ ಬಳಿ 1,230,000-ಮೈಲಿ ದೂರದಲ್ಲಿ ಹಾರಲು ಸಿದ್ಧವಾಗಿದೆ. ಕ್ಷುದ್ರಗ್ರಹ 7482 ಅನ್ನು 1994 PC1 ಎಂದು ಕರೆಯಲಾಗುತ್ತದೆ. ಇದು ಸುಮಾರು 1.6 ಕಿಮೀ ಅಗಲವಿದೆ. ಭೂಮಿಯ ಅತೀ ಸಮೀಪದಿಂದ ಹಾದು ಹೋಗುವ ಕಾರಣ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಇದನ್ನು “ಸಂಭಾವ್ಯ ಅಪಾಯಕಾರಿ ವಸ್ತು” ಎಂದು ವರ್ಗೀಕರಿಸಿದೆ. ಕ್ಷುದ್ರಗ್ರಹಗಳು ಸೂರ್ಯನ ಸುತ್ತ ಭೂಮಿಯ ಕಕ್ಷೆಯಿಂದ 4.6 ಮಿಲಿಯನ್ ಮೈಲುಗಳಷ್ಟು ಹತ್ತಿರವಿರುವ ಕಕ್ಷೆಗಳೊಂದಿಗೆ ಸುಮಾರು 140 ಮೀಟರ್‌ಗಳಿಗಿಂತ ಹೆಚ್ಚು ಗಾತ್ರದಲ್ಲಿದ್ದರೆ ಕ್ಷುದ್ರಗ್ರಹಗಳನ್ನು ಅಪಾಯಕಾರಿ ಎಂದು ನಾಸಾ ಗುರುತಿಸುತ್ತದೆ. ಇದು ಭೂಮಿಯ ಸಮೀಪವಿರುವ ವಸ್ತುವಾಗಿದೆ ಏಕೆಂದರೆ ಇದು 1.3au ಖಗೋಳ ಘಟಕಗಳಿಗಿಂತ ಹತ್ತಿರದಲ್ಲಿದೆ. ಅಂದರೆ ಭೂಮಿ ಮತ್ತು ಸೂರ್ಯನ ನಡುವಿನ ಅಂತರಕ್ಕಿಂತ ಸ್ವಲ್ಪ ಹೆಚ್ಚು. ಒಂದು au ಎಂಬುದು 93 ಮಿಲಿಯನ್ ಮೈಲುಗಳಿಗೆ ಸಮಾನವಾಗಿದೆ. ಅಂತಹ ಗಾತ್ರದ ಕ್ಷುದ್ರಗ್ರಹವು ಭೂಮಿಯ ಮೇಲೆ ಭಾರಿ ಹಾನಿಯನ್ನುಂಟು ಮಾಡುತ್ತದೆ. 1994 PC1 ಸುರಕ್ಷಿತವಾಗಿ 1.2 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಭೂಮಿಯ ಹಿಂದೆ ಹಾರುತ್ತದೆ ಎಂದು ನಾಸಾ ಭರವಸೆ ನೀಡಿದೆ.
Near-Earth #asteroid 1994 PC1 (~1 km wide) is very well known and has been studied for decades by our #PlanetaryDefense experts. Rest assured, 1994 PC1 will safely fly past our planet 1.2 million miles away next Tues., Jan. 18.
Track it yourself here: https://t.co/JMAPWiirZh pic.twitter.com/35pgUb1anq
— NASA Asteroid Watch (@AsteroidWatch) January 12, 2022
ಭೂಮಿಗೆ ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ ಜನವರಿ 18 ರಂದು 4.51pm EST ಕ್ಕೆ (ಜನವರಿ 19 ರಂದು 3.21am IST) ಹಾದು ಹೋಗಲಿದೆ. ಅದರ ಕಕ್ಷೆಯನ್ನು ಲೆಕ್ಕ ಹಾಕಿದ ಖಗೋಳಶಾಸ್ತ್ರಜ್ಞರ ಪ್ರಕಾರ 200 ವರ್ಷಗಳ ಕಾಲ ಮುಂದಿನ 200 ವರ್ಷಗಳಲ್ಲಿ ಭೂಮಿಯ ಅತೀ ಹತ್ತಿರದಿಂದ ಹಾದುಹೋಗುವ ಕ್ಷುದ್ರಗ್ರಹ ಇದಾಗಿದೆ ಎಂದು ಅರ್ಥ್ ಸ್ಕೈ ವರದಿ ಮಾಡಿದೆ.
ಇತ್ತೀಚೆಗಿನ ಕ್ಷುದ್ರಗ್ರಹವು ರಷ್ಯಾದಲ್ಲಿ ಎಂಟು ವರ್ಷಗಳ ಹಿಂದೆ ಗ್ರಹಕ್ಕೆ ಅಪ್ಪಳಿಸಿತು, ಅದು ವಾತಾವರಣದಲ್ಲಿ ಸ್ಫೋಟಿಸಿತು.
ನಾಸಾ ಇತ್ತೀಚೆಗೆ ಬಾಹ್ಯಾಕಾಶ ನೌಕೆಯನ್ನು ಉದ್ದೇಶಪೂರ್ವಕವಾಗಿ ಕ್ಷುದ್ರಗ್ರಹಕ್ಕೆ ಒಡೆದುಹಾಕಲು ಒಂದು ದೈತ್ಯ ಬಾಹ್ಯಾಕಾಶ ಬಂಡೆಯನ್ನು ಭೂಮಿಯ ಮೇಲಿನ ಜೀವವನ್ನು ನಾಶಪಡಿಸುವುದನ್ನು ತಡೆಯಲು ಪರೀಕ್ಷಾರ್ಥವಾಗಿ ಚಾಲನೆ ಮಾಡಿತು. ಡಿಮೊರ್ಫಾಸ್ ಮತ್ತು ಡಿಡಿಮೋಸ್ ನ ಬೈನರಿ ಕ್ಷುದ್ರಗ್ರಹ ವ್ಯವಸ್ಥೆಯು ಭೂಮಿಯಿಂದ 11 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವಾಗ ಬಾಹ್ಯಾಕಾಶ ನೌಕೆಯು 2022 ರಲ್ಲಿ ಕ್ಷುದ್ರಗ್ರಹವನ್ನು ಹೊಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ: ಸೋನಿಕ್ ಬೂಮ್, ಭೂಕಂಪ, ಸುನಾಮಿ ಅಲೆಗಳು: ಟೊಂಗಾ ಜ್ವಾಲಾಮುಖಿ ಸ್ಫೋಟ ಸಣ್ಣ ಘಟನೆ ಅಲ್ಲ ಯಾಕೆ?