FIFA World Cup: LGBT ಬೆಂಬಲಿಸಿ ಕಾಮನಬಿಲ್ಲು ಟಿ-ಶರ್ಟ್ ಧರಿಸಿದ್ದ ಯುಎಸ್ ಪತ್ರಕರ್ತ ಕತಾರ್‌ನಲ್ಲಿ ನಿಗೂಢ ಸಾವು
ಫಿಫಾ ವಿಶ್ವಕಪ್ ಪಂದ್ಯದ ವರದಿ ಮಾಡುತ್ತಿದ್ದ ಯುಎಸ್ ಪತ್ರಕರ್ತ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಪತ್ರಕರ್ತನ ಸಹೋದರ ಎರಿಕ್, ನನ್ನ ಸಹೋದರ ಸತ್ತಿಲ್ಲ, ಕೊಲ್ಲಲ್ಪಟ್ಟಿದ್ದಾನೆ ಎಂದು ಆರೊಪಿಸಿದ್ದಾರೆ.
ಕತಾರ್‌ನಲ್ಲಿ ನಡೆದ ಯುನೈಟೆಡ್ ಸ್ಟೇಟ್ಸ್ ಮತ್ತು ವೇಲ್ಸ್ ನಡುವಿನ ಪಂದ್ಯದ ವೇಳೆ ಕಾಮನಬಿಲ್ಲಿನ ಬಣ್ಣದ ಟೀ ಶರ್ಟ್ (Rainbow T-Shirt) ಧರಿಸಿದ್ದಕ್ಕಾಗಿ ಭದ್ರತಾ ಸಿಬ್ಬಂದಿಯಿಂದ ಬಂಧನಕ್ಕೊಳಗಾದ ಕೆಲವು ದಿನಗಳ ನಂತರ, ಯುಎಸ್ ಪತ್ರಕರ್ತ ಗ್ರಾಂಟ್ ವಾಲ್ ಡಿಸೆಂಬರ್ 10ರಂದು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪತ್ರಕರ್ತ ಗ್ರಾಂಟ್ ವಾಲ್ ಅವರು ಲುಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಫಿಫಾ ವಿಶ್ವಕಪ್ (FIFA World Cup)ನ ಅರ್ಜೆಂಟೀನಾ ಮತ್ತು ನೆದರ್ಲೆಂಡ್ ನಡುವಿನ ಕ್ವಾರ್ಟರ್ ಫೈನಲ್ (Quarter-finals) ಪಂದ್ಯಾವಳಿಯ ವರದಿ ಮಾಡುತ್ತಿದ್ದಾಗ ಕುಸಿದುಬಿದ್ದಿದ್ದಾರೆ. ಮಾಜಿ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಪತ್ರಕರ್ತನ ಸಾವಿನಲ್ಲಿ ಕತಾರ್ ಸರ್ಕಾರ (Qatar Govt)ವು ಭಾಗಿಯಾಗಿರಬಹುದು ಎಂದು ಗ್ರಾಂಟ್ ಅವರ ಸಹೋದರ ಎರಿಕ್ ಆರೋಪಿಸಿದ್ದಾರೆ.
ವರದಿಯ ಪ್ರಕಾರ, ಅವರು ಪಂದ್ಯದ ಹೆಚ್ಚುವರಿ ಸಮಯದ ವಿಭಾಗದಲ್ಲಿ ಕುಸಿದರು ಮತ್ತು ಪುನಶ್ಚೇತನಗೊಳ್ಳಲು ಸಾಧ್ಯವಾಗಲಿಲ್ಲ. ಗ್ರಾಂಟ್ ವಾಲ್ ಅವರು ಸಾವನ್ನಪ್ಪುವ ಮುನ್ನ ಪಂದ್ಯದ ಬಗ್ಗೆ ಟ್ವೀಟ್ ಮಾಡಿದ್ದರು. “ನೆದರ್ಲ್ಯಾಂಡ್ಸ್ನಿಂದ ನಂಬಲಾಗದ ಸೆಟ್-ಪೀಸ್ ಗೋಲ್” ಎಂದು ಶನಿವಾರ 2.53AM ಕ್ಕೆ ಟ್ವೀಟ್ ಮಾಡಿದ್ದಾರೆ.
Just an incredible designed set-piece goal by the Netherlands.
— Subscribe to GrantWahl.com (@GrantWahl) December 9, 2022
ಇನ್ನು, ತನ್ನ ಸಹೋದರ ಸಾವನ್ನಪ್ಪಿರುವ ಬಗ್ಗೆ ಎರಿಕ್ ವಾಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. “ನನ್ನ ಹೆಸರು ಎರಿಕ್ ವಾಲ್. ನಾನು ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ವಾಸಿಸುತ್ತಿದ್ದೇನೆ. ನಾನು ಗ್ರಾಂಟ್ ವಾಲ್ ಅವರ ಸಹೋದರ. ನಾನು ಸಲಿಂಗಕಾಮಿ” ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ನನ್ನ ಸಹೋದರ ಸತ್ತಿಲ್ಲ, ಕೊಲ್ಲಲ್ಪಟ್ಟಿದ್ದಾನೆ
“ಗ್ರಾಂಟ್ ವಾಲ್ ವಿಶ್ವಕಪ್ ವೇಳೆ ಮಳೆಬಿಲ್ಲು/ ಕಾಮನಬಿಲ್ಲು ಶರ್ಟ್ ಧರಿಸಲು ನಾನು ಕಾರಣ. ಅವನಿಗೆ ಕೊಲೆ ಬೆದರಿಕೆಗಳು ಬಂದಿವೆ ಎಂದು ಅವನು ನನಗೆ ಹೇಳಿದ್ದನು. ನನ್ನ ಸಹೋದರ ಸತ್ತಿದ್ದಾನೆ ಎಂದು ನಾನು ನಂಬುವುದಿಲ್ಲ, ಅವನು ಕೊಲ್ಲಲ್ಪಟ್ಟಿದ್ದಾನೆ ಎಂದು ನಾನು ನಂಬುತ್ತೇನೆ. ಮತ್ತು ನಾನು ಯಾವುದಕ್ಕೂ ಸಹಾಯ ಬೇಡಿಕೊಳ್ಳುತ್ತೇನೆ” ಎಂದಿದ್ದಾರೆ.
ಕಾಮನಬಿಲ್ಲು ಟಿ-ಶರ್ಟ್ ಧರಿಸಿದ್ದಕ್ಕೆ ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ವೇಲ್ಸ್ ವಿರುದ್ಧದ ಯುನೈಟೆಡ್ ಸ್ಟೇಟ್ಸ್‌ನ ಆರಂಭಿಕ ಪಂದ್ಯಕ್ಕೆ ವಿಶ್ವಕಪ್ ಭದ್ರತೆಯು ತನಗೆ ಪ್ರವೇಶವನ್ನು ನಿರಾಕರಿಸಿತು. ಅಲ್ಲದೆ ತನ್ನ ಕಾಮನಬಿಲ್ಲು ಶರ್ಟ್ ತೆಗೆಯುವಂತೆ ಒತ್ತಾಯಿಸಿದ್ದಾರೆ ಎಂದು ಗ್ರಾಂಟ್ ಹೇಳಿದ್ದರು. ಘಟನೆಯ ಬಗ್ಗೆ ಟ್ವೀಟ್ ಮಾಡಿದಾಗ ಅವರ ಫೋನ್ ಕಿತ್ತುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಸ್ಥಳದಲ್ಲಿದ್ದ ಭದ್ರತಾ ಅಧಿಕಾರಿಯೊಬ್ಬರು ನಂತರ ಕ್ಷಮೆಯಾಚಿಸಲು ಗ್ರಾಂಟ್ ಅವರನ್ನು ಸಂಪರ್ಕಿಸಿದರು. ಬಳಿಕ ಅವರನ್ನು ಕ್ರೀಡಾಂಗಣಕ್ಕೆ ಅನುಮತಿಸಿದರು ಎಂದು ಎರಿಕೆ ಹೇಳಿದರು. ಅವರು ಫಿಫಾ ಪ್ರತಿನಿಧಿಯಿಂದ ಕ್ಷಮೆಯನ್ನೂ ಸ್ವೀಕರಿಸಿದ್ದಾರೆ ಎಂದು ಎರಿಕ್ ಹೇಳಿದರು.
ಗ್ರಾಂಟ್ ಸಾವಿನ ಬಗ್ಗೆ ಕಂಬನಿ ಮಿಡಿದ ಯುಎಸ್ ಫುಟ್ಬಾಲ್ ಸಂಸ್ಥೆ, ಅವರು ಎಲ್ಲರಿಗೂ ಸ್ಫೂರ್ತಿಯಾಗಿ ಉಳಿಯುತ್ತಾರೆ ಎಂದು ಹೇಳಿದೆ. ನಾವು ಗ್ರಾಂಟ್ ವಾಲ್ ಅನ್ನು ಕಳೆದುಕೊಂಡಿದ್ದೇವೆ ಎಂದು ತಿಳಿದು ಇಡೀ ಯುಎಸ್ ಸಾಕರ್ ಕುಟುಂಬವು ಎದೆಗುಂದಿದೆ ಎಂದು ಯುಎಸ್ ಸಾಕರ್ ಫೆಡರೇಶನ್ ಹೇಳಿದೆ. ಗ್ರಾಂಟ್ ಅವರ ಪತ್ನಿ ಟ್ವೀಟ್ ಮಾಡಿ, ಸ್ನೇಹಿತರ ಬೆಂಬಲಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಸಂಪೂರ್ಣ ಆಘಾತದಲ್ಲಿದ್ದೇನೆ ಎಂದು ಹೇಳಿಕಿಕೊಂಡಿದ್ದಾರೆ.
ಈ ವರ್ಷದ ನವೆಂಬರ್ 21 ರಂದು, ಯುನೈಟೆಡ್ ಸ್ಟೇಟ್ಸ್ ಮತ್ತು ವೇಲ್ಸ್ ನಡುವಿನ ಪಂದ್ಯದ ವೇಳೆ ಅಹ್ಮದ್ ಬಿನ್ ಅಲಿ ಕ್ರೀಡಾಂಗಣಕ್ಕೆ ಕಾಮನಬಿಲ್ಲಿನ ಬಣ್ಣದ ಟಿ-ಶರ್ಟ್ ಧರಿಸಿದ್ದಕ್ಕಾಗಿ ಭದ್ರತಾ ಸಿಬ್ಬಂದಿಯಿಂದ ಗ್ರಾಂಟ್ ವಾಲ್ ಅವರನ್ನು ಬಂಧಿಸಲಾಗಿತ್ತು. LGBTQ+ ಸಮುದಾಯದೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಲು ಅವರು T-ಶರ್ಟ್ ಧರಿಸಿದ್ದರು. ಪತ್ರಕರ್ತನನ್ನು ಸುಮಾರು 25 ನಿಮಿಷಗಳ ಕಾಲ ಬಂಧಿಸಲಾಯಿತು, ಈ ಸಮಯದಲ್ಲಿ ಅವನ ಕಾಮನಬಿಲ್ಲಿನ ಬಣ್ಣದ ಟೀ ಶರ್ಟ್ ‘ರಾಜಕೀಯ’ ಸ್ವರೂಪದ್ದಾಗಿದೆ ಎಂದು ಹೇಳಲಾಯಿತು. ಅವರ ಬಂಧನದ ಸಮಯದಲ್ಲಿ, ಭದ್ರತಾ ಸಿಬ್ಬಂದಿ ಅವರು ಯುನೈಟೆಡ್ ಕಿಂಗ್‌ಡಮ್‌ನಿಂದ ಬಂದಿದ್ದಾರಾ ಎಂದು ಕೂಡ ವಿಚಾರಿಸಿದರು.
ಮತ್ತಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 am, Sun, 11 December 22