AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿರುವ ಶೇ. 71 ರಷ್ಟು ಭಾರತೀಯರಿಗೇ ಬಿಗ್ ಟೆನ್ಷನ್: 60 ದಿನಗಳ ಗ್ರೇಸ್ ಅವಧಿ ರದ್ದುಗೊಳಿಸಲು ಟ್ರಂಪ್ ಆಡಳಿತ ಸಿದ್ಧತೆ

ಅಮೆರಿಕದಲ್ಲಿ ಕೆಲಸ ಕಳೆದುಕೊಳ್ಳುವ H-1B ಸೇರಿದಂತೆ ವಿದೇಶಿ ಉದ್ಯೋಗಿಗಳಿಗೆ ಲಭ್ಯವಿದ್ದ 60 ದಿನಗಳ ಗ್ರೇಸ್ ಪೀರಿಯಡ್ ರದ್ದುಗೊಳಿಸಲು ಟ್ರಂಪ್ ಆಡಳಿತದ ಪ್ರಸ್ತಾವನೆಗೆ ಶ್ವೇತಭವನ ಅನುಮೋದಿಸಿದೆ. ಇದು ಜಾರಿಯಾದರೆ, ಕೆಲಸ ಕಳೆದುಕೊಂಡ ತಕ್ಷಣ ಹೊಸ ಉದ್ಯೋಗ ಹುಡುಕಬೇಕು ಅಥವಾ ದೇಶ ತೊರೆಯಬೇಕು. ಸಾವಿರಾರು ಭಾರತೀಯ H-1B ನೌಕರರಿಗೆ ಇದು ಭಾರೀ ಹಿನ್ನಡೆಯಾಗಲಿದ್ದು, ಐಟಿ ಮತ್ತು ಟೆಕ್ ವಲಯದ ಉದ್ಯೋಗಿಗಳ ಭವಿಷ್ಯ ಅಭದ್ರವಾಗಲಿದೆ.

ಅಮೆರಿಕದಲ್ಲಿರುವ ಶೇ. 71 ರಷ್ಟು ಭಾರತೀಯರಿಗೇ ಬಿಗ್ ಟೆನ್ಷನ್: 60 ದಿನಗಳ ಗ್ರೇಸ್ ಅವಧಿ ರದ್ದುಗೊಳಿಸಲು ಟ್ರಂಪ್ ಆಡಳಿತ ಸಿದ್ಧತೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Aug 29, 2026 | 9:00 AM

Share

ವಾಷಿಂಗ್ಟನ್, ಆ.29: ಅಮೆರಿಕದಲ್ಲಿ ಕೆಲಸ ಕಳೆದುಕೊಳ್ಳುವ ಎಚ್-1ಬಿ (H-1B) ಸೇರಿದಂತೆ ವಿದೇಶಿ ಉದ್ಯೋಗಿಗಳಿಗೆ ಲಭ್ಯವಿದ್ದ 60 ದಿನಗಳ ಕಾಲಾವಕಾಶವನ್ನು (Grace Period) ರದ್ದುಗೊಳಿಸುವ ಅಮೆರಿಕದ ಟ್ರಂಪ್ ಆಡಳಿತದ ಪ್ರಸ್ತಾವನೆಗೆ ಶ್ವೇತಭವನದ ‘ಆಫೀಸ್ ಆಫ್ ಇನ್ಫಾರ್ಮೇಶನ್ ಅಂಡ್ ರೆಗ್ಯುಲೇಟರಿ ಅಫೇರ್ಸ್’ (OIRA) ಅನುಮೋದನೆ ನೀಡಿದೆ. ಅಮೆರಿಕದ ಒಳನಾಡಿನ ಭದ್ರತಾ ಇಲಾಖೆ (DHS) ಸಲ್ಲಿಸಿದ್ದ ಈ ಪ್ರಸ್ತಾವನೆಯು ವೈಟ್ ಹೌಸ್ ನಿಯಂತ್ರಕ ಪರಾಮರ್ಶೆಯಲ್ಲಿ ತೇರ್ಗಡೆಯಾಗಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಗೊಳ್ಳಲಿದೆ. ಇದು ಜಾರಿಗೆ ಬಂದರೆ ಉದ್ಯೋಗ ಕಳೆದುಕೊಳ್ಳುವ ಸಾವಿರಾರು ಭಾರತೀಯ ಉದ್ಯೋಗಿಗಳಿಗೆ ಭಾರೀ ಹಿನ್ನಡೆಯಾಗಲಿದೆ.

2017 ರಿಂದ ಜಾರಿಯಲ್ಲಿದ್ದ ನಿಯಮದಂತೆ, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಎಚ್-1ಬಿ ಅಥವಾ ಇತರ ಸಬ್-ವೀಸಾ ಹೊಂದಿರುವ ಉದ್ಯೋಗಿ ಕಂಪನಿಯಿಂದ ವಜಾಗೊಂಡರೆ ಅಥವಾ ಉದ್ಯೋಗ ತೊರೆದರೆ, ಅವರಿಗೆ 60 ದಿನಗಳ ಕಾಲಾವಕಾಶ ಸಿಗುತ್ತಿತ್ತು.

ಹೊಸ ಉದ್ಯೋಗದಾತರನ್ನು ಹುಡುಕಿ ವೀಸಾ ಸ್ಪಾನ್ಸರ್ ಪಡೆದುಕೊಳ್ಳಬಹುದು. ತಮ್ಮ ವೀಸಾ ವಿಭಾಗವನ್ನು ಬದಲಾಯಿಸಿಕೊಳ್ಳಬಹುದು. ಅಥವಾ ದೇಶ ತೊರೆಯಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಈ ನಿಯಮವು H-1B ಅಲ್ಲದೆ E-1, E-2, E-3, H-1B1, L-1, O-1 ಮತ್ತು TN ವೀಸಾ ಹೊಂದಿರುವವರಿಗೂ ಅನ್ವಯಿಸುತ್ತಿತ್ತು.

ಟ್ರಂಪ್ ಆಡಳಿತ ತಂದಿರುವ ಹೊಸ ಪ್ರಸ್ತಾವನೆಯಲ್ಲೇನಿದೆ?

ಉದ್ಯೋಗ ಕಳೆದುಕೊಂಡ ನಂತರ ಸಿಗುತ್ತಿದ್ದ ಈ 60 ದಿನಗಳ ರಕ್ಷಣಾತ್ಮಕ ಕಾಲಾವಕಾಶವನ್ನು ಪೂರ್ಣವಾಗಿ ರದ್ದುಗೊಳಿಸಲು ಡಿಎಚ್‌ಎಸ್ (DHS) ಬಯಸಿದೆ. ಈ ನಿಯಮ ಜಾರಿಯಾದರೆ, ಕೆಲಸ ಕಳೆದುಕೊಂಡ ಉದ್ಯೋಗಿಗಳು ತಕ್ಷಣವೇ ಹೊಸ ಕೆಲಸ ಹುಡುಕಬೇಕು ಅಥವಾ ಯಾವುದೇ ಕಾಲಾವಕಾಶವಿಲ್ಲದೆ ಅಮೆರಿಕದಿಂದ ಕಾಲ್ತೆಗೆಯಬೇಕಾಗುತ್ತದೆ. ವೈಟ್ ಹೌಸ್ ವಿಮರ್ಶೆ ಪೂರ್ಣಗೊಂಡಿದ್ದರೂ, ಇನ್ನೂ ಅಧಿಕೃತ ಕರಡು ಪ್ರಕಟವಾಗಿಲ್ಲ. ಇದು ಫೆಡರಲ್ ರಿಜಿಸ್ಟರ್‌ನಲ್ಲಿ ಪ್ರಕಟಗೊಂಡ ನಂತರ ಸಾರ್ವಜನಿಕರ ಅಭಿಪ್ರಾಯಕ್ಕೆ ಸಮಯ ನೀಡಲಾಗುತ್ತದೆ.

ಇದನ್ನೂ ಓದಿ: ನೇಪಾಳ ಪ್ರವಾಹ: ಇನ್ಫೋಸಿಸ್ ಸಿಇಒ ಲಕ್ಷ್ ಗೋಪಿಸೆಟ್ಟಿ ನಾಪತ್ತೆ, ಸುರಂಗದಲ್ಲಿ ಸಿಲುಕಿದವರ ರಕ್ಷಣೆಗೆ ನೆರವು ಕೋರಿದ ನೆರೆ ರಾಷ್ಟ್ರ

ಭಾರತೀಯ H-1B ನೌಕರರಿಗೆ ಇದು ಏಕೆ ಮಾರಕ?

ಅಮೆರಿಕದ H-1B ವೀಸಾ ಯೋಜನೆ ಫಲಾನುಭವಿಗಳಲ್ಲಿ ಭಾರತೀಯರೇ ಸಿಂಹಪಾಲು ಹೊಂದಿದ್ದಾರೆ. 2024 ರ ಹಣಕಾಸು ವರ್ಷದಲ್ಲೇ ಒಟ್ಟು ಅನುಮೋದಿತ H-1B ಅರ್ಜಿಗಳಲ್ಲಿ ಶೇ. 71 ರಷ್ಟು ಭಾರತೀಯರದ್ದಾಗಿತ್ತು. ಕೆಲಸ ಕಳೆದುಕೊಂಡ ತಕ್ಷಣ ಹೊಸ ಕಂಪನಿಯಲ್ಲಿ ಪ್ರಕ್ರಿಯೆ ಮುಗಿಸುವುದು ಸುಲಭವಲ್ಲ. ಈ ನಿಯಮ ಜಾರಿಯಾದರೆ ಐಟಿ ಮತ್ತು ಟೆಕ್ ವಲಯದಲ್ಲಿರುವ ಭಾರತೀಯ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಭವಿಷ್ಯದ ಅಭದ್ರತೆ ಎದುರಾಗಲಿದೆ.

ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರ ಮಾಜಿ ಶ್ವೇತಭವನ ಸಲಹೆಗಾರ ಅಜಯ್ ಜೈನ್ ಭುಟೋರಿಯಾ ಈ ಪ್ರಸ್ತಾವನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “60 ದಿನಗಳ ಗ್ರೇಸ್ ಪೀರಿಯಡ್ ರದ್ದು ಮಾಡುವುದು ತೀರಾ ಅಮಾನವೀಯ ಮತ್ತು ಜಾರಿಗೆ ತರಲು ಸಾಧ್ಯವಿಲ್ಲದ ನಿರ್ಧಾರ. ಏಕಾಏಕಿ ಕೆಲಸ ಕಳೆದುಕೊಂಡಾಗ 60 ದಿನಗಳ ಸಮಯವೇ ತುಂಬಾ ಕಡಿಮೆಯಿರುತ್ತದೆ. ಅದನ್ನು ಪೂರ್ಣವಾಗಿ ರದ್ದು ಮಾಡಿದರೆ, ವರ್ಷಪೂರ್ತಿ ಕಷ್ಟಪಟ್ಟು ಕೆಲಸ ಮಾಡಿ ತೆರಿಗೆ ಪಾವತಿಸಿದ ನೌಕರರು ತಮ್ಮ ಬಾಡಿಗೆ ಮನೆ ಖಾಲಿ ಮಾಡಲು, ಮಕ್ಕಳ ಶಾಲೆ ಬದಲಾಯಿಸಲು ಹಾಗೂ ವೈಯಕ್ತಿಕ ವ್ಯವಹಾರಗಳನ್ನು ಮುಗಿಸಲು ಸಮಯವೇ ಸಿಗುವುದಿಲ್ಲ. ಈ ಸಮಯವನ್ನು 60 ದಿನಗಳ ಬದಲಾಗಿ 180 ದಿನಗಳಿಗೆ (6 ತಿಂಗಳು) ಹೆಚ್ಚಿಸಬೇಕು.” ಎಂದು ಹೇಳಿದ್ದಾರೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು