ಅಮೆರಿಕ ವಾಯುದಾಳಿಗೆ ತತ್ತರಿಸಿದ ಇರಾಕ್
ಉತ್ತರ ಬಾಗ್ದಾದ್‌ನಲ್ಲಿ ಇರಾಕ್‌ನ ಸೇನಾ ಪಡೆಯನ್ನು ಗುರಿಯಾಗಿಸಿಕೊಂಡು ಅಮೆರಿಕ ವಾಯುದಾಳಿ ನಡೆಸಿದ್ದು, 6 ಜನ ಮೃತಪಟ್ಟಿದ್ದಾರೆ. ನಿನ್ನೆಯೂ ಇರಾಕ್‌ನ ಬಾಗ್ದಾದ್ ಏರ್ಪೋರ್ಟ್ ಬಳಿ ಅಮೆರಿಕ ವಾಯುದಾಳಿ ನಡೆಸಿತ್ತು. ದಾಳಿಯಲ್ಲಿ ಇರಾನ್ನ ಕುದ್ಸ್ ಪಡೆ ಮುಖ್ಯಸ್ಥ ಜ.ಖಾಸಿಮ್ ಸುಲೈಮಾನಿ ಸೇರಿ 8 ಜನ ಮೃತಪಟ್ಟಿದ್ರು. ಅಮೆರಿಕ ವಿರುದ್ಧ ದಾಳಿಗೆ ಇರಾನ್ ಸಿದ್ಧತೆ: ಅಮೆರಿಕ ಪಡೆಗಳು ಇರಾನ್ ಕುದ್ಸ್ ಫೋರ್ಸ್ನ ಮುಖ್ಯಸ್ಥ ಖಾಸಿಮ್ ಸುಲೇಮನ್ನನ್ನು ಹತ್ಯೆಗೈದಿರುವ ಬೆನ್ನಲ್ಲೇ, ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಎಚ್ಚೆತ್ತಿರುವ ಅಮೆರಿಕ ಹೆಚ್ಚಿನ ಪಡೆಗಳನ್ನು ಗಲ್ಫ್ನಲ್ಲಿರುವ […]
ಉತ್ತರ ಬಾಗ್ದಾದ್‌ನಲ್ಲಿ ಇರಾಕ್‌ನ ಸೇನಾ ಪಡೆಯನ್ನು ಗುರಿಯಾಗಿಸಿಕೊಂಡು ಅಮೆರಿಕ ವಾಯುದಾಳಿ ನಡೆಸಿದ್ದು, 6 ಜನ ಮೃತಪಟ್ಟಿದ್ದಾರೆ. ನಿನ್ನೆಯೂ ಇರಾಕ್‌ನ ಬಾಗ್ದಾದ್ ಏರ್ಪೋರ್ಟ್ ಬಳಿ ಅಮೆರಿಕ ವಾಯುದಾಳಿ ನಡೆಸಿತ್ತು. ದಾಳಿಯಲ್ಲಿ ಇರಾನ್ನ ಕುದ್ಸ್ ಪಡೆ ಮುಖ್ಯಸ್ಥ ಜ.ಖಾಸಿಮ್ ಸುಲೈಮಾನಿ ಸೇರಿ 8 ಜನ ಮೃತಪಟ್ಟಿದ್ರು.
ಅಮೆರಿಕ ವಿರುದ್ಧ ದಾಳಿಗೆ ಇರಾನ್ ಸಿದ್ಧತೆ: ಅಮೆರಿಕ ಪಡೆಗಳು ಇರಾನ್ ಕುದ್ಸ್ ಫೋರ್ಸ್ನ ಮುಖ್ಯಸ್ಥ ಖಾಸಿಮ್ ಸುಲೇಮನ್ನನ್ನು ಹತ್ಯೆಗೈದಿರುವ ಬೆನ್ನಲ್ಲೇ, ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಎಚ್ಚೆತ್ತಿರುವ ಅಮೆರಿಕ ಹೆಚ್ಚಿನ ಪಡೆಗಳನ್ನು ಗಲ್ಫ್ನಲ್ಲಿರುವ ತನ್ನ ಮಿತ್ರ ರಾಷ್ಟ್ರಗಳಿಗೆ ರವಾನಿಸಿದೆ. ಅಲ್ಲದೆ ತಕ್ಷಣ ಇರಾನ್ ತೊರೆಯುವಂತೆ ತನ್ನ ಪ್ರಜೆಗಳಿಗೆ ತಾಕೀತು ಮಾಡಿದೆ.
ವಿದೇಶಿ ವಿನಿಯಮ ಸಂಗ್ರಹದಲ್ಲಿ ದಾಖಲೆ: ದೇಶದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಗಣನೀಯ ಏರಿಕೆಯಾಗಿದೆ.ಡಿಸೆಂಬರ್ 27ಕ್ಕೆ ಕೊನೆಗೊಂಡಂತೆ 17,640 ಕೋಟಿ ರೂಪಾಯಿಯಷ್ಟು ವಿದೇಶಿ ವಿನಿಮಯ ಹೆಚ್ಚಾಗಿದ್ದು, ಒಟ್ಟು 32 ಲಕ್ಷ ಕೋಟಿ ವಿದೇಶಿ ವಿನಿಮಯ ಸಂಗ್ರಹ ಆಗಿದೆ. ಈ ಕುರಿತು ಆರ್ಬಿಐ ವರದಿಯೊಂದನ್ನ ಬಿಡುಗಡೆ ಮಾಡಿದೆ.
48 ಕೋಟಿ ಪ್ರಾಣಿಗಳು ಬಲಿ? ಆಸ್ಟ್ರೇಲಿಯಾದಲ್ಲಿ ಸೆಪ್ಟೆಂಬರ್ನಿಂದ ಕಾಡ್ಗಿಚ್ಚು ನಿರಂತರವಾಗಿದೆ. ಈ ಕಾಡ್ಗಿಚ್ಚಿನಲ್ಲಿ ಸುಮಾರು 48 ಕೋಟಿ ಪ್ರಾಣಿಗಳು ಮೃತಪಟ್ಟಿವೆ ಅಂತಾ ಸಿಡ್ನಿ ವಿವಿ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ಅಲ್ದೆ, ಈ ಸಂಖ್ಯೆ ಇನ್ನೂ ಹೆಚ್ಚಳವಾಗಬಹುದು ಅಂತಲೂ ಅಧ್ಯಯನ ತಿಳಿಸಿದೆ.