ಇರಾಕ್ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ!
ಅಮೆರಿಕ ಹಾಗೂ ಇರಾನ್ ಮಧ್ಯೆ ಭೀಕರ ಕಾಳಗಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಮೊನ್ನೆಯಷ್ಟೇ ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸೊಲೆಮನಿಯನ್ನು ಅಮೆರಿಕ ವಾಯುದಾಳಿ ಮೂಲಕ ಅಟ್ಟಾಡಿಸಿ ಕೊಂದಿತ್ತು. ದಾಳಿಯ ನಂತರ ಇರಾನ್ ನಾಗರಿಕರು, ಬಿದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಎಲ್ಲೆಲ್ಲೂ ಅಮೆರಿಕ ವಿರುದ್ಧದ ಪ್ರತಿಕಾರದ ಮಾತೇ ಕೇಳಿಬರುತ್ತಿದೆ. ಈ ಹೊತ್ತಲ್ಲೇ ಇರಾಕ್ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಇದು 3ನೇ ಮಹಾಯುದ್ಧದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ‘ಹಸಿರು ವಲಯ’ಕ್ಕೆ ಇದ್ದಕ್ಕಿದ್ದಂತೆ ನುಗ್ಗಿದ ಕ್ಷಿಪಣಿಗಳು! ಅಮೆರಿಕ […]
ಅಮೆರಿಕ ಹಾಗೂ ಇರಾನ್ ಮಧ್ಯೆ ಭೀಕರ ಕಾಳಗಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಮೊನ್ನೆಯಷ್ಟೇ ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸೊಲೆಮನಿಯನ್ನು ಅಮೆರಿಕ ವಾಯುದಾಳಿ ಮೂಲಕ ಅಟ್ಟಾಡಿಸಿ ಕೊಂದಿತ್ತು. ದಾಳಿಯ ನಂತರ ಇರಾನ್ ನಾಗರಿಕರು, ಬಿದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಎಲ್ಲೆಲ್ಲೂ ಅಮೆರಿಕ ವಿರುದ್ಧದ ಪ್ರತಿಕಾರದ ಮಾತೇ ಕೇಳಿಬರುತ್ತಿದೆ. ಈ ಹೊತ್ತಲ್ಲೇ ಇರಾಕ್ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಇದು 3ನೇ ಮಹಾಯುದ್ಧದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
‘ಹಸಿರು ವಲಯ’ಕ್ಕೆ ಇದ್ದಕ್ಕಿದ್ದಂತೆ ನುಗ್ಗಿದ ಕ್ಷಿಪಣಿಗಳು! ಅಮೆರಿಕ ಅಂದ್ರೆ ಜಾಗತಿಕ ಶಕ್ತಿ. ವಿಶ್ವದ ದೊಡ್ಡಣ್ಣ ಅಂತಲೇ ಗುರುತಿಸಿಕೊಳ್ಳುವ ಅಮೆರಿಕ, ಮಿಲಿಟರಿ ಸಾಮರ್ಥ್ಯದಲ್ಲಿ ಇಡೀ ಜಗತ್ತಿನಲ್ಲೇ ಬಲಾಢ್ಯ. ಆದ್ರೆ ಇಂತಹ ಬಲಾಢ್ಯ ದೇಶಕ್ಕೂ ತೊಡೆ ತಟ್ಟಲು ಇರಾನ್ ಸಿದ್ಧವಾಗಿದೆ. ಇರಾನ್ ಭದ್ರತಾ ಪಡೆ ಮುಖ್ಯಸ್ಥ ಖಾಸಿಮ್ ಸೊಲೆಮನಿ ಹತ್ಯೆ ನಂತರ ಇಡೀ ಇರಾನ್ ಕೊತ ಕೊತ ಕುದಿಯುತ್ತಿದೆ. ಅಲ್ಲಿ ನಾಯಕರಿಂದ ಹಿಡಿದು ನಾಗರಿಕರವರೆಗೂ ಪ್ರತಿಯೊಬ್ಬರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇರಾನ್ನ ಸೇನಾ ಮುಖ್ಯಸ್ಥನನ್ನ ಕೊಂದಿರುವ ಅಮೆರಿಕಾಗೆ ತಕ್ಕಪಾಠ ಕಲಿಸಬೇಕು ಅನ್ನೋ ಕೂಗು ಮುಗಿಲು ಮುಟ್ಟಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ ಇರಾಕ್ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಇರಾನ್ನ ಕ್ಷಿಪಣಿಗಳು ಹಾರಿವೆ.
‘ಹಸಿರು ವಲಯ’ಕ್ಕೆ ಇದ್ದಕ್ಕಿದ್ದಂತೆ ನುಗ್ಗಿದ ಕ್ಷಿಪಣಿಗಳು! ಹೌದು, ಈ ಮೊದಲೇ ಅಮೆರಿಕದ ವಿರುದ್ಧ ಹಲ್ಲು ಮಸೆಯುತ್ತಿದ್ದ ಇರಾನ್ಗೆ ಬ್ರಹ್ಮಾಸ್ತ್ರ ಸಿಕ್ಕಿದೆ. ಖಾಸಿಮ್ ಸೊಲೆಮನಿಯ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿದೆ. ಇದೇ ಕಾರಣಕ್ಕೆ ಇರಾನ್ನಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು, ಹೈಅಲರ್ಟ್ ಘೋಷಣೆಯಾಗಿದೆ. ಮತ್ತೊಂದ್ಕಡೆ ನಿನ್ನೆ ಸಂಜೆ ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸಮೀಪದ ಗ್ರೀನ್ ಜೋನ್ ಅಥವಾ ಹಸಿರು ವಲಯದ ಮೇಲೆ 2 ಸುತ್ತಿನ ಕ್ಷಿಪಣಿ ದಾಳಿ ನಡೆದಿದೆ. 1 ಕ್ಷಿಪಣಿ ವಲಯದೊಳಗೆ ನುಗ್ಗಿದರೆ, ಇನ್ನೊಂದು ಎನ್ಕ್ಲೇವ್ ಬಳಿ ಬಂದು ಬಿದ್ದಿದೆ. ಕತ್ಯೂಷ್ ಕ್ಷಿಪಣಿ ಮೂಲಕ ದಾಳಿ ನಡೆದಿದ್ದು, ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ತನ್ನ ಪ್ರಜೆಗಳಿಗೆ ಎಚ್ಚರಿಕೆ ಸಂದೇಶ ನೀಡಿದ ‘ದೊಡ್ಡಣ್ಣ’! ಇನ್ನು ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿರುವ ಬೆನ್ನಲ್ಲೇ, ಇರಾನ್ ಹಾಗೂ ಇರಾಕ್ನಲ್ಲಿರುವ ಅಮೆರಿಕನ್ನರಿಗೆ ವಾಪಸ್ ಬರುವಂತೆ ಟ್ರಂಪ್ ಸರ್ಕಾರ ತಾಕೀತು ಮಾಡಿದೆ. ಯಾವುದೇ ಕ್ಷಣದಲ್ಲಾದರೂ ಯುದ್ಧ ಸಂಭವಿಸುವ ಭೀತಿ ಇರೋ ಹಿನ್ನೆಲೆಯಲ್ಲಿ, ಈ ಸೂಚನೆ ನೀಡಲಾಗಿದೆ. ಇನ್ನುಳಿದಂತೆ ಅಮೆರಿಕದಲ್ಲಿರುವ ಇರಾನ್ ಪ್ರಜೆಗಳಿಂದ ಖಾಸಿಮ್ ಸೊಲೆಮನಿ ಹತ್ಯೆ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಮತ್ತೊಂದು ಮಹಾ ಕದನವೇ ನಡೆಯುವ ಸಂಭವ ಹೆಚ್ಚಾಗಿದೆ.
ಟ್ರಂಪ್ ಕೊಟ್ಟ ಹೇಳಿಕೆಯಿಂದ ಜಗತ್ತಿಗೇ ನಡುಕ! ಸೊಲೆಮನಿ ಹತ್ಯೆಯನ್ನ ಅಮೆರಿಕ ಸಮರ್ಥಿಸಿಕೊಂಡಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡುತ್ತಾ, ಸೊಲೆಮನಿ ಲಂಡನ್ ಹಾಗೂ ದೆಹಲಿಯಲ್ಲಿ ದಾಳಿ ನಡೆಸಲು ನೆರವು ನೀಡಿದ್ದ ಎಂದಿದ್ದಾರೆ. ಈ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದ್ದು, ಪ್ರಸಕ್ತ ಬೆಳವಣಿಗೆಗಳಿಂದ ಭಾರತದ ಆರ್ಥಿಕತೆಯಲ್ಲಿ ಕೆಟ್ಟ ಪರಿಣಾಮಗಳು ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಅದನ್ನ ಡೀಟೇಲ್ ಆಗಿ ನೋಡೋದಾದ್ರೆ.
ಇರಾನ್ ಹಾಗೂ ಅಮೆರಿಕ ಕಿತ್ತಾಟದ ಪರಿಣಾಮ ಕಚ್ಛಾ ತೈಲ ಬೆಲೆಯಲ್ಲಿ ಶೇಕಡ 4ರಷ್ಟು ಏರಿಕೆಯಾಗಿದೆ. ಮೊದಲೇ ಆರ್ಥಿಕ ಹಿಂಜರಿತದಿಂದ ಬಳಲುತ್ತಿರುವ ಭಾರತದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಇರಾನ್ ಸಹಭಾಗಿತ್ವದಲ್ಲಿ ನಿರ್ಮಿಸುತ್ತಿರುವ ‘ಚಬಹಾರ್ ಬಂದರು’ ನಿರ್ಮಾಣ ಕಾರ್ಯಕ್ಕೆ ಹೊಡೆತ ಬೀಳಲಿದೆ. ಇದೆಲ್ಲದರ ಮಧ್ಯೆ ರೂಪಾಯಿ ಬೆಲೆಯಲ್ಲೇ, ಕಡಿಮೆ ದರದಲ್ಲಿ ಪೂರೈಕೆಯಾಗುತ್ತಿರುವ ಕಚ್ಚಾ ತೈಲಕ್ಕೂ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ.
ಒಟ್ನಲ್ಲಿ ಇಬ್ಬರ ಜಗಳದಿಂದ 3ನೇ ವ್ಯಕ್ತಿಗೆ ಲಾಭವಾಗುವ ಬದಲು, ಸಮಸ್ಯೆ ಎದುರಾಗುತ್ತಿದೆ. ಇರಾನ್-ಅಮೆರಿಕ ನಡುವಿನ ಗಲಾಟೆಯಿಂದ ಭಾರತದ ಆರ್ಥಿಕತೆಗೆ ಪೆಟ್ಟಾಗುತ್ತಿದ್ರೆ, ಮತ್ತೊಂದ್ಕಡೆ 3ನೇ ಮಹಾಯುದ್ಧದ ಕಾರ್ಮೋಡವೂ ಕವಿಯತೊಡಗಿದೆ.