AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nepal Flood: ನೇಪಾಳ ಜಲಪ್ರಳಯದಲ್ಲಿ 300 ಭಾರತೀಯ ಯಾತ್ರಿಕರು ನಾಪತ್ತೆ, ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಮಾಹಿತಿ

ನೇಪಾಳದ ರಸುವಾ ಜಿಲ್ಲೆಯಲ್ಲಿ ಭೀಕರ ಪ್ರವಾಹದಿಂದ 300 ಭಾರತೀಯ ಕೈಲಾಸ ಮಾನಸ ಸರೋವರ ಯಾತ್ರಿಕರು ನಾಪತ್ತೆಯಾಗಿದ್ದಾರೆ. ವಿದೇಶಾಂಗ ಸಚಿವ ಶಿಶಿರ್ ಖನಾಲ್ ಈ ಮಾಹಿತಿ ನೀಡಿದ್ದಾರೆ. ಪ್ರವಾಹದಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದು, ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಭಾರತದ ಸಹಾಯಕ್ಕೆ ನೇಪಾಳ ಧನ್ಯವಾದ ಅರ್ಪಿಸಿದ್ದು, ಪ್ರವಾಸಿ ತಾಣಗಳು ಸುರಕ್ಷಿತವಾಗಿವೆ ಎಂದು ಭರವಸೆ ನೀಡಿದೆ.

Nepal Flood: ನೇಪಾಳ ಜಲಪ್ರಳಯದಲ್ಲಿ 300 ಭಾರತೀಯ ಯಾತ್ರಿಕರು ನಾಪತ್ತೆ, ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಮಾಹಿತಿ
ನೇಪಾಳ ಪ್ರವಾಹ
ನಯನಾ ರಾಜೀವ್
|

Updated on: Aug 27, 2026 | 11:07 AM

Share

ಕಠ್ಮಂಡು, ಆಗಸ್ಟ್ 27: ನೇಪಾಳ(Nepal)ದ ರಸುವಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ ಸಾವಿನ ಸಂಖ್ಯೆ 160 ಕ್ಕೆ ಏರಿಕೆಯಾಗಿದ್ದು, ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿದ್ದ ಸುಮಾರು 300 ಭಾರತೀಯರು ಸೇರಿದಂತೆ 500 ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ತಿಳಿಸಿದ್ದಾರೆ.

ಕಠ್ಮಂಡುವಿನಲ್ಲಿ ನಡೆದ ‘ಎನ್‌ಡಿಟಿವಿ ವಿಶ್ವ ಅನ್ವಿಕ್ಷಾ ಶೃಂಗಸಭೆ’ಯಲ್ಲಿ ಮಾತನಾಡಿದ ಅವರು, ಕೇವಲ ಕೆಲವೇ ಗಂಟೆಗಳ ಅಂತರದಲ್ಲಿ ಬೃಹತ್ ಜಲರಾಶಿಯು ಸಾಲು ಸಾಲು ಪಟ್ಟಣಗಳು ಮತ್ತು ಹಳ್ಳಿಗಳನ್ನು ಆಪೋಶನ ತೆಗೆದುಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾವಿರಾರು ಜನರು ನಿರಾಶ್ರಿತ: ಪ್ರವಾಹದಿಂದಾಗಿ ಸಾವಿರಾರು ಕುಟುಂಬಗಳು ಮನೆ-ಮಠಗಳನ್ನು ಕಳೆದುಕೊಂಡು ನಾಪತ್ತೆಯಾಗಿವೆ. ವಿಪತ್ತಿನ ನಿಖರ ನಷ್ಟದ ಪ್ರಮಾಣವನ್ನು ಅಂದಾಜಿಸಲು ಆಡಳಿತ ಶ್ರಮಿಸುತ್ತಿದೆ.

ಭಾರತೀಯರ ಸಂಪರ್ಕಕ್ಕೆ ಯತ್ನ: ಮಾನಸ ಸರೋವರ ಯಾತ್ರೆಗಾಗಿ ಟಿಬೆಟ್ ಗಡಿ ಮಾರ್ಗದಲ್ಲಿದ್ದ ಸುಮಾರು ೩೦೦ ಭಾರತೀಯ ಯಾತ್ರಿಕರ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಅವರ ಸ್ಥಳ ಪತ್ತೆಹಚ್ಚಲು ಭಾರತೀಯ ರಾಯಭಾರ ಕಚೇರಿಯೊಂದಿಗೆ ನೇಪಾಳ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಸ್ವದೇಶಿ ನಾಗರಿಕರಷ್ಟೇ ವಿದೇಶಿ ಪ್ರಜೆಗಳ ರಕ್ಷಣೆಗೂ ನೇಪಾಳ ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಮತ್ತಷ್ಟು ಓದಿ: Nepal Flood: ನೇಪಾಳ ಜಲಪ್ರಳಯದಲ್ಲಿ ಕೈಲಾಸ ಯಾತ್ರಿಕರು ನಾಪತ್ತೆ: ಇಶಾ ಫೌಂಡೇಶನ್‌ನ 77 ಮಂದಿ ಹಾಗೂ ಕೋಲ್ಕತ್ತಾದ 32 ಯಾತ್ರಿಕರ ಸಂಪರ್ಕ ಕಟ್

ಭಾರತದ ತ್ವರಿತ ಸ್ಪಂದನೆ: ವಿಪತ್ತು ಸಂಭವಿಸಿದ ತಕ್ಷಣವೇ 10 ಟನ್ ತುರ್ತು ಪರಿಹಾರ ಸಾಮಗ್ರಿಗಳು ಮತ್ತು ವೈದ್ಯಕೀಯ ನೆರವನ್ನು ರವಾನಿಸಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಸಚಿವ ಖನಾಲ್ ವಿಶೇಷ ಧನ್ಯವಾದ ಅರ್ಪಿಸಿದರು.

ಜಾಗತಿಕ ಸಮುದಾಯಕ್ಕೆ ಮನವಿ: 2015 ರ ಭೀಕರ ಭೂಕಂಪದ ನಂತರ ನೇಪಾಳ ಮರಳಿ ಎದ್ದುನಿಂತಂತೆ ಈ ಬಾರಿಯೂ ದೇಶ ಪುನರ್ನಿರ್ಮಾಣಗೊಳ್ಳಲಿದೆ. ಹೀಗಾಗಿ ಪ್ರವಾಸಿಗರು ನೇಪಾಳ ಭೇಟಿಯನ್ನು ರದ್ದುಗೊಳಿಸದೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರವಾಸಿ ತಾಣಗಳು ಸುರಕ್ಷಿತ: ಪ್ರವಾಹವು ಕೇವಲ ಗಡಿ ಕಣಿವೆ ಪ್ರದೇಶಗಳಿಗೆ ಸೀಮಿತವಾಗಿದ್ದು, ದೇಶದ ಪ್ರಮುಖ ಪ್ರವಾಸಿ ಆಕರ್ಷಣೆಗಳಾದ ಪೋಖ್ರಾ, ಮೌಂಟ್ ಎವರೆಸ್ಟ್ ವಲಯ ಮತ್ತು ಕಠ್ಮಂಡು ಕಣಿವೆ ಸಂಪೂರ್ಣ ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದರು.

ಪ್ರವಾಸೋದ್ಯಮವೇ ನೇಪಾಳದ ಜೀವನಾಡಿ: ನೇಪಾಳದ ಒಟ್ಟು ಜಿಡಿಪಿಗೆ (GDP) ಪ್ರವಾಸೋದ್ಯಮ ವಲಯವು ಶೇಕಡಾ 6 ರಿಂದ 7 ರಷ್ಟು ಕೊಡುಗೆ ನೀಡುತ್ತದೆ. ನೈಸರ್ಗಿಕ ವಿಕೋಪಗಳಿಂದ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದರೆ ದೇಶದ ವಿದೇಶಿ ವಿನಿಮಯ ಮೀಸಲು ಕುಸಿಯುವ ಅಪಾಯವಿದೆ.

ಟೆಲಿಕಾಂ ಮೂಲಸೌಕರ್ಯ ಪುನರ್ಸ್ಥಾಪನೆ: ಪ್ರವಾಹ ಪೀಡಿತ ರಸುವಾ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಆಪ್ಟಿಕಲ್ ಫೈಬರ್ ಮತ್ತು ಮೊಬೈಲ್ ಟವರ್‌ಗಳು ಕೊಚ್ಚಿಹೋಗಿರುವುದರಿಂದ, ಸಿಲುಕಿರುವ ಯಾತ್ರಿಕರನ್ನು ಸಂಪರ್ಕಿಸಲು ನೇಪಾಳ ಸೇನೆಯು ಉಪಗ್ರಹ ಫೋನ್‌ಗಳನ್ನು ಬಳಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು