AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟರ್ಕಿ ದೇಶದಿಂದ 9,300 ಕೋಟಿ ರೂ, ಅತ್ಯಂತ ಸುಂದರ ಮಹಿಳೆ ಬೇಕು: ಉಗಾಂಡ ಸೇನಾ ಮುಖ್ಯಸ್ಥನ ವಿಚಿತ್ರ ಡಿಮ್ಯಾಂಡ್

Uganda army chief demands 1 billion USD and most beautiful woman from Turkey: ಆಫ್ರಿಕಾದಲ್ಲಿ ಪ್ರಾದೇಶಿಕ ಭದ್ರತೆ ಒದಗಿಸಲು ಉಗಾಂಡ ನೆರವಾಗಿದೆ. ಸೊಮಾಲಿಯಾದಲ್ಲಿ ಉಗ್ರ ಸಂಘಟನೆ ವಿರುದ್ಧ ಉಗಾಂಡ ಹೋರಾಡುತ್ತಿದೆ. ಸೊಮಾಲಿಯಾದಲ್ಲಿ ದೊಡ್ಡ ಬ್ಯುಸಿನೆಸ್ ನಡೆಸುವ ಟರ್ಕಿಯು ಉಗಾಂಡಕ್ಕೆ ಒಂದು ಬಿಲಿಯನ್ ಡಾಲರ್ ಹಣ ಕೊಡಬೇಕು ಎಂದು ಉಗಾಂಡದ ಸೇನಾ ಮುಖ್ಯಸ್ಥರು ಒತ್ತಾಯಿಸಿದ್ದಾರೆ.

ಟರ್ಕಿ ದೇಶದಿಂದ 9,300 ಕೋಟಿ ರೂ, ಅತ್ಯಂತ ಸುಂದರ ಮಹಿಳೆ ಬೇಕು: ಉಗಾಂಡ ಸೇನಾ ಮುಖ್ಯಸ್ಥನ ವಿಚಿತ್ರ ಡಿಮ್ಯಾಂಡ್
ಉಗಾಂಡImage Credit source: World Atlas
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 12, 2026 | 10:33 PM

Share

ನವದೆಹಲಿ, ಏಪ್ರಿಲ್ 12: ಆಫ್ರಿಕಾದ ಉಗಾಂಡ ಮಿಲಿಟರಿ ಮುಖ್ಯಸ್ಥ ಮುಹೂಝಿ ಕೈನೇರುಗಬ (Muhoozi Kainerugaba) ಅವರು ಟರ್ಕಿ ದೇಶದಿಂದ 1 ಬಿಲಿಯನ್ ಡಾಲರ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಂದರೆ, 9,300 ಕೋಟಿ ರೂ ಅನ್ನು ಉಗಾಂಡಕ್ಕೆ ಟರ್ಕಿ ಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಟರ್ಕಿ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತನಗೆ ಮದುವೆಯಾಗಲು ಒಪ್ಪಿಸಬೇಕು ಎಂದೂ ಕೇಳಿದ್ದಾರೆ.

ಟರ್ಕಿಯಿಂದ ಮುಹೂಝಿ ಹಣ ಕೇಳುತ್ತಿರುವುದು ಯಾಕೆ?

ಟರ್ಕಿ ದೇಶವು ಸೊಮಾಲಿಯಾದಲ್ಲಿ ಸಮುದ್ರ ಬಂದರುಗಳು, ವಿಮಾನ ನಿಲ್ದಾಣಗಳು, ಮೂಲಸೌಕರ್ಯ ಯೋಜನೆಗಳ ನಿರ್ಮಾಣ ಇತ್ಯಾದಿ ಸಾಕಷ್ಟು ವ್ಯವಹಾರಗಳನ್ನು ನಡೆಸುತ್ತಿದೆ. ಆದರೆ, ಸೊಮಾಲಿಯಾದಲ್ಲಿ ಎರಡು ದಶಕಗಳಿಂದ ಉಗಾಂಡದಿಂದ ಭದ್ರತೆ ಒದಗಿಸಲಾಗುತ್ತಿದೆ. ಅಲ್ ಖೈದಾ ಸಂಬಂಧ ಇರುವ ಅಲ್ ಶಬಾದ್ ಉಗ್ರ ಸಂಘಟನೆಯ ಉಪಟಳವನ್ನು ನಿಯಂತ್ರಿಸಲು ಉಗಾಂಡ ನೆರವಾಗಿದೆ. ಪ್ರಾದೇಶಿಕ ಭದ್ರತೆಗೆ ಉಗಾಂಡ ಮಾಡಿರುವ ಪ್ರಯತ್ನಕ್ಕೆ ಟರ್ಕಿ ಋಣಿಯಾಗಿರಬೇಕು. ಉಗಾಂಡಕ್ಕೆ 1 ಬಿಲಿಯನ್ ಡಾಲರ್ ಕೊಡಬೇಕು ಎಂದು ಟರ್ಕಿಯನ್ನು ಕೈನೇರುಗಬ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಗೆ ಅಮೆರಿಕದಿಂದಲೂ ತಡೆ; ಸಂಧಾನಕ್ಕಾಗಿ ರಷ್ಯಾ ಕೂಡ ಸಿದ್ಧ

‘ಟರ್ಕಿಗೆ ಇದು ಸಿಂಪಲ್ ಡೀಲ್. ನೀವು ನಮಗೆ ಹಣ ಕೊಡಿ. ಇಲ್ಲದಿದ್ದರೆ ಅವರ ರಾಯಭಾರ ಕಚೇರಿಯನ್ನು ಮುಚ್ಚುತ್ತೇನೆ. ಅವರು ಬೇಕಾದಲ್ಲಿ ಟರ್ಕಿಯಲ್ಲಿರುವ ನಮ್ಮ ರಾಯಭಾರ ಕಚೇರಿಯನ್ನು ಮುಚ್ಚಲಿ, ಪರವಾಗಿಲ್ಲ’ ಎಂದು ಇವರು ಎಕ್ಸ್​ನಲ್ಲಿ ಹಾಕಿರುವ ಪೋಸ್ಟ್​ನಲ್ಲಿ ತಿಳಿಸಿದ್ದಾರೆ. ಮುಹೂಝಿ ಕೈನೇರುಗಬ ಅವರು ಉಗಾಂಡದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದಾರೆ. ಉಗಾಂಡ ಅಧ್ಯಕ್ಷ ಯೊವೇರಿ ಮುಸೆವೇನಿ ಅವರ ಮಗನೂ ಆಗಿರುವ ಅವರು ಉಗಾಂಡದ ಭವಿಷ್ಯದ ಅಧ್ಯಕ್ಷ ಎಂದೂ ಗುರುತಾಗಿದ್ದಾರೆ.

ಟರ್ಕಿಯ ಸುಂದರ ಮಹಿಳೆಯನ್ನು ವರಿಸುತ್ತೇನೆ ಎನ್ನುವ ಮುಹೂಝಿ

ಟರ್ಕಿ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತನಗೆ ಒಪ್ಪಿಸಬೇಕು. ತಾನು ಆಕೆಯನ್ನು ಮದುವೆಯಾಗುತ್ತೇನೆ ಎಂದೂ ಉಗಾಂಡದ ಮಿಲಿಟರಿ ಮುಖ್ಯಸ್ಥ ಆಗ್ರಹಿಸಿದ್ದಾರೆ. ಇದೇ ವ್ಯಕ್ತಿ ಹಿಂದೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಮದುವೆಯಾಗುವುದಾಗಿ ಹೇಳಿದ್ದರು.

ಇದನ್ನೂ ಓದಿ: ಪಾಕಿಸ್ತಾನದ ಮಧ್ಯಸ್ತಿಕೆ ಇಲ್ಲದೇ ಇದ್ದಿದ್ದರೆ ಇಸ್ರೇಲ್​ಗೆ ತಕ್ಕ ಶಾಸ್ತಿಯಾಗುತ್ತಿತ್ತು: ಟರ್ಕಿ ಅಧ್ಯಕ್ಷ ಎರ್ಡೋಗನ್ ಗುಡುಗು

ಇಸ್ರೇಲ್​ಗೆ ಬೆಂಬಲ ಕೊಡುತ್ತೇನೆಂದ ಮುಹೂಝಿ

ಇರಾನ್ ಜೊತೆ ಯುದ್ಧದಲ್ಲಿರುವ ಇಸ್ರೇಲ್​ಗೆ ನೆರವು ಕೊಡಲು ಒಂದು ಲಕ್ಷ ಸೈನಿಕರನ್ನು ಉಗಾಂಡದಿಂದ ಕಳುಹಿಸಿಕೊಡುವುದಾಗಿ ಮುಹೂಜಿ ಕೈನೆರುಗಬ ಹೇಳಿದ್ದಾರೆ. ನಮ್ಮ ದೇವರಾದ ಯೇಸು ಕ್ರಿಸ್ತನ ಪವಿತ್ರ ಜಾಗವನ್ನು ರಕ್ಷಿಸಲು ನನ್ನ ಅಣತಿ ಮೇರೆಗೆ ಉಗಾಂಡ ಸೈನಿಕರು ಇಸ್ರೇಲ್​ಗೆ ಹೋಗಲು ಸಿದ್ಧ ಎಂದಿದ್ದಾರೆ.

ಉಗಾಂಡದ ಮೇಲೆ ಟರ್ಕಿ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿರುವ ಮುಹೂಝಿ, ‘ನಿಮ್ಮ ಬೆನ್ನಿಗೆ ಸದಾ ಚೂರಿ ಹಾಕುತ್ತಲೇ ಇರುವ ಸ್ನೇಹಿತ ಯಾವನಿಗೆ ಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ