ADAS ಫೀಚರ್ಸ್ ಹೊಂದಿರುವ ಕಿಯಾ ಸೊನೆಟ್ ಫೇಸ್‌ಲಿಫ್ಟ್‌ ಕಾರು ಬಿಡುಗಡೆ

ಕಿಯಾ ಇಂಡಿಯಾ ಕಂಪನಿಯ ತನ್ನ ಬಹುನೀರಿಕ್ಷಿತ ಸೊನೆಟ್ ಫೇಸ್‌ಲಿಫ್ಟ್‌ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ.

ADAS ಫೀಚರ್ಸ್ ಹೊಂದಿರುವ ಕಿಯಾ ಸೊನೆಟ್ ಫೇಸ್‌ಲಿಫ್ಟ್‌ ಕಾರು ಬಿಡುಗಡೆ
ಕಿಯಾ ಸೊನೆಟ್ ಫೇಸ್‌ಲಿಫ್ಟ್‌ ಕಾರು ಬಿಡುಗಡೆ
Follow us
Praveen Sannamani
|

Updated on: Jan 14, 2024 | 1:45 PM

ಕಿಯಾ ಇಂಡಿಯಾ (Kia India) ಕಂಪನಿಯು ತನ್ನ ಬಹುನೀರಿಕ್ಷಿತ ಸೊನೆಟ್ ಫೇಸ್‌ಲಿಫ್ಟ್‌ (Sonet facelift) ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.69 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ವಿವಿಧ ತಾಂತ್ರಿಕ ಅಂಶಗಳೊಂದಿಗೆ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್, ಜಿಟಿಎಕ್ಸ್ ಪ್ಲಸ್, ಎಕ್ಸ್-ಲೈನ್ ಎನ್ನುವ ಏಳು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

Kia Sonet facelift (14)

ಸೊನೆಟ್ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು ಸ್ಪೋರ್ಟಿ ಲುಕ್ ನೊಂದಿಗೆ ಮತ್ತಷ್ಟು ಪ್ರೀಮಿಯಂ ಫೀಚರ್ಸ್ ಹೊಂದಿರುವ ಸೊನೆಟ್ ಫೇಸ್‌ಲಿಫ್ಟ್‌ ಮಾದರಿಯು ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಾನೆಟ್ ಮತ್ತು ಬಂಪರ್ ನೊಂದಿಗೆ ಸ್ಪೋರ್ಟಿಯಾಗಿರುವ ಹೊಸ ಎಲ್ಇಡಿ ಹೆಡ್ ಲೈಟ್ಸ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ಲಂಬಾಕಾರವಾಗಿರುವ ಎಲ್ಇಡಿ ಫಾಗ್ ಲೈಟ್ಸ್, 16 ಇಂಚಿನ ಅಲಾಯ್ ವ್ಹೀಲ್ ಗಳು, ಹಿಂಬದಿಯಲ್ಲಿ ಎಲ್ಇಡಿ ಲೈಟ್ ಬಾರ್, ಸಿ ಆಕಾರದ ಟೈಲ್ ಲೈಟ್ ಮತ್ತು ರೂಫ್ ಮೌಂಟೆಡ್ ಸ್ಪಾಯ್ಲರ್ ಹೊಂದಿದೆ.

Kia Sonet facelift (11)

ಇದರೊಂದಿಗೆ ಹೊಸ ಕಾರಿನಲ್ಲಿ ಈ ಹಿಂದಿನಂತೆಯೇ ಸ್ಟ್ಯಾಂಡರ್ಡ್ ಜಿಟಿ ಆವೃತ್ತಿಗಳು ಮತ್ತು ಸ್ಪೋರ್ಟಿಯಾಗಿರುವ ಎಕ್ಸ್-ಲೈನ್ ಆವೃತ್ತಿಗಳಲ್ಲಿ ತುಸು ವಿಭಿನ್ನತೆಗಾಗಿ ಕೆಲವು ಹೊಸ ಬದಲಾವಣೆಗಳನ್ನು ಮಾಡಲಾಗಿದ್ದು, ಇವು ಒಟ್ಟು 8 ಮೊನೊಟೊನ್ ಮತ್ತು 2 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರಲಿದೆ. ಇದರೊಂದಿಗೆ ಹೊಸ ಕಾರಿನ ಒಳಭಾಗದಲ್ಲೂ ಹೆಚ್ಚಿನ ಬದಲಾವಣೆ ತರಲಾಗಿದ್ದು, ಸೆಲ್ಟೊಸ್ ಫೇಸ್‌ಲಿಫ್ಟ್‌ ನಲ್ಲಿರುವಂತೆ 10.25 ಇಂಚಿನ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಸಣ್ಣದಾದ ಕ್ಲೈಮೆಟ್ ಕಂಟ್ರೋಲ್ ಡಿಸ್ ಪ್ಲೇ, ಹ್ವಾಕ್ ಕಂಟ್ರೋಲ್ ಯುನಿಟ್, ಟ್ರಾಕ್ಷನ್, ಡ್ರೈವ್ ಮೋಡ್ ಕಂಟ್ರೋಲ್ ಸೇರಿದಂತೆ ಅರಾಮದಾಯಕವಾದ ಆಸನ ಸೌಲಭ್ಯವನ್ನು ನೀಡಲಾಗಿದೆ.

ಸುರಕ್ಷಾ ಸೌಲಭ್ಯಗಳು

ಸೊನೆಟ್ ಫೇಸ್‌ಲಿಫ್ಟ್‌ ಕ್ರಾಂತಿಕಾರಿಯಾಗಿರುವ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗಿದ್ದು, ಇದು ಸೆನ್ಸಾರ್ ಮತ್ತು ರಡಾರ್ ಸೌಲಭ್ಯಗಳೊಂದಿಗೆ ಸಂಭಾವ್ಯ ಅಪಘಾತಗಳನ್ನು ತಡೆಯಲು ಸಾಕಷ್ಟು ಸಹಕಾರಿಯಾಗಿದೆ. ಹೊಸ ಎಡಿಎಎಸ್ ಸೌಲಭ್ಯವನ್ನು ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ವೆನ್ಯೂನಲ್ಲೂ ಈಗಾಗಲೇ ನೀಡಲಾಗಿದ್ದು, ಎಡಿಎಎಸ್ ಪ್ಯಾಕೇಜ್ ನಲ್ಲಿ ಫಾರ್ವಡ್ ಕೂಲಿಷನ್ ವಾರ್ನಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಫಾರ್ವಡ್ ಕೂಲಿಷನ್ ಅವಾಯ್ಡ್ಡೆನ್ಸ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್ ಸೌಲಭ್ಯಗಳನ್ನು ಒಳಗೊಂಡಿದೆ.

Kia Sonet facelift (13)

ಎಡಿಎಎಸ್ ಜೊತೆಗೆ ಹೊಸ ಕಾರಿನಲ್ಲಿ ಈ ಬಾರಿ ಆರು ಏರ್ ಬ್ಯಾಗ್ ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಕಾರ್ನರಿಂಗ್ ಲ್ಯಾಂಪ್ಸ್, ನಾಲ್ಕು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ವ್ಯೂ ಮಾನಿಟರ್ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇದಲ್ಲದೆ ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ ಹೆಚ್ಚುವರಿಯಾಗಿ ಕೂಲ್ಡ್ ಫ್ರಂಟ್ ಸೀಟ್ ಗಳು, ಬಾಷ್ ಆಡಿಯೋ ಸಿಸ್ಟಂ, ಸನ್ ರೂಫ್, ಎಲ್ಇಡಿ ಆ್ಯಂಬಿಯೆಂಟ್ ಲೈಟಿಂಗ್ಸ್ ಮತ್ತು ಡ್ಯುಯಲ್ ಕಲರ್ ಇಂಟಿರಿಯರ್ ನೀಡಲಾಗಿದೆ.

Kia Sonet facelift (3)

ಎಂಜಿನ್ ಮತ್ತು ಪರ್ಫಾಮೆನ್ಸ್ ಹೊಸ ಕಾರಿನಲ್ಲಿ ಗ್ರಾಹಕರ ಆದ್ಯತೆಗೆ ಅನುಗುಣವಾಗಿ ಈ ಹಿಂದಿನಂತೆಯೇ 1.2 ಲೀಟರ್ ಎನ್ಎ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮುಂದುವರಿಸಲಾಗಿದ್ದು, ಇವು ಬಿಎಸ್ 6 2ನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪೂರೈಸಿವೆ. ಇದರೊಂದಿಗೆ ಇವು ಕಡಿಮೆ ಮಾಲಿನ್ಯ ಹೊರಸೂವಿಕೆಯೊಂದಿಗೆ ಪರಿಸರ ಸ್ನೇಹಿಯಾಗಿದ್ದು, 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಮತ್ತು 7 -ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ