AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಹನ ಚಾಲನೆಯಲ್ಲಿ ಭಾರತ-ಅಮೇರಿಕಾ ತದ್ವಿರುದ್ದ; ಏಕೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ?

ಕೆಲವು ದೇಶಗಳು ರಸ್ತೆಯ ಎಡಭಾಗದಲ್ಲಿ ವಾಹನ ಚಲಾಯಿಸಿದರೆ ಇತರ ದೇಶಗಳು ರಸ್ತೆಯ ಬಲಭಾಗದಲ್ಲಿ ಗಾಡಿಯನ್ನು ಚಲಾಯಿಸುತ್ತಾರೆ. ಹೀಗೇಕೆ ಕೆಲವರು ರಸ್ತೆಯ ಎಡ ಮತ್ತೆ ಕೆಲವರು ಬಲ ಭಾಗದಲ್ಲಿ ಗಾಡಿಯನ್ನು ಓಡಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಉತ್ತರವು ಇತಿಹಾಸ, ಸಂಸ್ಕೃತಿ ಮತ್ತು ಸ್ವಲ್ಪ ವಿಜ್ಞಾನದೊಂದಿಗೆ ಕೂಡಿದೆ.

ವಾಹನ ಚಾಲನೆಯಲ್ಲಿ ಭಾರತ-ಅಮೇರಿಕಾ ತದ್ವಿರುದ್ದ; ಏಕೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ?
ಭಾರತ-ಅಮೇರಿಕಾ ಕ್ಯಾಟ್ ಚಲಾಯಿಸುವ ವಿಧಾನImage Credit source: PSC
ನಯನಾ ಎಸ್​ಪಿ
|

Updated on:Feb 17, 2023 | 2:50 PM

Share

ಹಿಂದಿನ ಕಾಲದಲ್ಲಿ ಜನರು ಕುದುರೆ ಮತ್ತು ಗಾಡಿಗಳನ್ನು ಸವಾರಿ ಮಾಡುತ್ತಿದ್ದಾಗ, ರಸ್ತೆಯ ಎಡಭಾಗದಲ್ಲಿ ಚಲಿಸುವುದು ಸಾಮಾನ್ಯವಾಗಿತ್ತು. ಏಕೆಂದರೆ ಹೆಚ್ಚಿನ ಜನರು ಬಲಗೈಯವರೇ ಆಗಿದ್ದರು ಮತ್ತು ಅಗತ್ಯವಿದ್ದರೆ ಆಯುಧದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಅವರಿಗೆ ಸುಲಭವಾಗುತ್ತಿತ್ತು. 19 ನೇ ಶತಮಾನದ ಕಾರುಗಳನ್ನು ಪರಿಚಯಿಸಿದಾಗ, ಜನರು ರಸ್ತೆಯ ಎಡಭಾಗದಲ್ಲಿ ಓಡಿಸುವುದನ್ನು ಮುಂದುವರೆಸಿದರು. ನಂತರದ ದಿನಗಳಲ್ಲಿ ವೇಗವಾದ ಮತ್ತು ಹೆಚ್ಚು ಅಪಾಯಕಾರಿ ಗ್ಯಾಸೋಲಿನ್ ಚಾಲಿತ ಕಾರುಗಳ ಆಗಮನದೊಂದಿಗೆ, ಅನೇಕ ದೇಶಗಳು ಬಲಭಾಗದಲ್ಲಿ ಚಾಲನೆ ಮಾಡಲು ಪ್ರಾರಂಭಿಸಿದರು.

ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದ ಮತ್ತು ಬ್ರಿಟಿಷರು ಆಳಿದ ದೇಶಗಳಲ್ಲಿ ವಿಶೇಷವಾಗಿ ಈ ಅಭ್ಯಾಸ ಪ್ರಚಲಿತವಾಗಿತ್ತು. ಬ್ರಿಟಿಷರು ಸಹ ಅಂದಿನಿಂದ ಇಂದಿನವರೆಗೂ ರಸ್ತೆಯ ಎಡ ಭಾಗದಲ್ಲೇ ಗಡಿಗಳನ್ನು ಚಲಿಸುತ್ತಾ ಬಂದಿದ್ದಾರೆ.

ಕೆಲವರು ಎಡಭಾಗದಲ್ಲಿ ಗಾಡಿಯನ್ನು ಚಲಿಸಲು ಮುಂದುವರೆದರು

ಕೆಲವರು ಎಡಭಾಗದಲ್ಲಿ ಗಾಡಿಯನ್ನು ಚಲಿಸಲು ಮುಂದುವರೆದರು ಹೌದು. ಐರ್ಲೆಂಡ್, ಮಾಲ್ಟಾ ಮತ್ತು ಭಾರತವು ಬ್ರಿಟಿಷ್ ಆಳುತ್ತಿದ್ದ ಭಾಗಗಳಾಗಿದ್ದರೂ, ಈ ದೇಶಗಳು ಇನ್ನೂ ಗಾಡಿಗಳನ್ನು ಎಡಭಾಗದಲ್ಲಿ ಚಾಲನೆ ಮಾಡುತ್ತವೆ. ಇದಕ್ಕೆ ಕಾರಣ ಹಳೆಯ ಚಾಲನಾ ಅಭ್ಯಾಸಗಳು, ಈ ಅಭ್ಯಾಸವನ್ನು ರಸ್ತೆಗಳಲ್ಲಿ ಅನುಸರಿಸಲು ಖರ್ಚಾಗುವ ವೆಚ್ಚ, ಅನಾನುಕೂಲತೆ ಮತ್ತು ಚಾಲಕರಿಗೆ ಮರುತರಬೇತಿ ನೀಡುವ ತೊಂದರೆಯಿಂದಾಗಿ..

ಕೆಲವು ದೇಶಗಳು ಎಡದಿಂದ ಬಲಬದಿಯಲ್ಲಿ ಚಾಲನೆ ಮಾಡಲು ಏಕೆ ಪ್ರಾರಂಭಿಸಿದವು?

ಇದಕ್ಕೆ ಹಲವಾರು ಕಾರಣಗಳಿವೆ, ಉದಾಹರಣೆಗೆ ಫ್ರೆಂಚ್ ಕ್ರಾಂತಿಯಂತಹ ಐತಿಹಾಸಿಕ ಘಟನೆಗಳು. ಅಲ್ಲಿ ಫ್ರಾನ್ಸ್ ತನ್ನ ಕ್ರಾಂತಿಕಾರಿ ಸಿದ್ದಂತಗಳನ್ನು ಬೆಂಬಲಿಸುವ ಸಲುವಾಗಿ 1792 ರಲ್ಲಿ ಬಲಕ್ಕೆ ಚಾಲನೆ ಮಾಡಲು ಪ್ರಾರಂಭಿಸಿತು.

ಸ್ವೀಡನ್‌ನಲ್ಲಿ, 1967 ರಲ್ಲಿ ಬಲಬದಿಯಲ್ಲಿ ಚಾಲನೆ ಮಾಡುವ ಬದಲಾವಣೆಯಾಯಿತು. ಇದಕ್ಕೆ ಕಾರಣ ಬಲಭಾಗದಲ್ಲಿ ಚಲಿಸುವ ದೇಶಗಳಿಂದ ಹೆಚ್ಚಾಗಿ ರಫ್ತು ಮಾಡಿಕೊಂಡ ಕರುಗಳು. ಇತರ ದೇಶಗಳಲ್ಲಿ ವ್ಯಾಪಾರ ಮತ್ತು ಮಿಲಿಟರಿ ಮೈತ್ರಿಗಳಿಂದ ಪ್ರಭಾವಿತವಾಗಿದೆ.

ಬಲಭಾಗದಲ್ಲಿ ಚಾಲನೆ ಮಾಡುವುದು ನಿಜವಾಗಿಯೂ ಸುರಕ್ಷಿತವೇ?

ಬಲಬದಿಯಲ್ಲಿ ಚಾಲನೆ ಮಾಡುವುದು ಸುರಕ್ಷಿತ ಎಂಬ ಕಲ್ಪನೆ ಹುಟ್ಟಿಕೊಳ್ಳಲು ಕಾರಣ ಹೆಚ್ಚಿನವರು ತಮ್ಮ ದೈನಂದಿನ ಕೆಲಸಗಳನ್ನು ಮಾಡುವಾಗ ಬಲಗೈಯನ್ನು (Right Hand) ಬಳಸುತ್ತಾರೆ ಹೀಗಾಗಿ ರಸ್ತೆಯ ಬಲಭಾಗದಲ್ಲಿ ವಾಹನವನ್ನು ನಿಯಂತ್ರಿಸಲು ಸುಲಭವಾಗುತ್ತದೆ. ಬಲಭಾಗದಲ್ಲಿ ಚಾಲನೆ ಮಾಡುವುದರಿಂದ ಚಾಲಕರು ಮುಂಬರುವ ಟ್ರಾಫಿಕ್ ಅನ್ನು ಹೆಚ್ಚು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ. ಜೊತೆಗೆ ಅಪಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ದೇಶವು ಚಾಲನೆ ಮಾಡುವ ರಸ್ತೆಯ ಬದಿ ಮತ್ತು ರಸ್ತೆ ಸುರಕ್ಷತೆಯ ದಾಖಲೆಯ ನಡುವಿನ ಸಂಬಂಧವನ್ನು ನೋಡಲು ಅಧ್ಯಯನಗಳನ್ನು ನಡೆಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಎಡಭಾಗದಲ್ಲಿ ವಾಹನ ಚಲಾಯಿಸುವ ದೇಶಗಳಿಗೆ ಹೋಲಿಸಿದರೆ ರಸ್ತೆಯ ಬಲಭಾಗದಲ್ಲಿ ವಾಹನ ಚಲಾಯಿಸುವ ದೇಶಗಳು ಕಡಿಮೆ ರಸ್ತೆ ಟ್ರಾಫಿಕ್ ಸಾವುಗಳನ್ನು ಹೊಂದಿವೆ ಎಂದು ಕಂಡುಹಿಡಿದಿದೆ. ಸ್ವೀಡಿಷ್ ರಾಷ್ಟ್ರೀಯ ರಸ್ತೆ ಮತ್ತು ಸಾರಿಗೆ ಸಂಶೋಧನಾ ಸಂಸ್ಥೆಯ ಮತ್ತೊಂದು ಅಧ್ಯಯನವು ಬಲ ಭಾಗದಲ್ಲಿ ಚಾಲನೆ ಮಾಡುವುದರಿಂದ ರಸ್ತೆ ಟ್ರಾಫಿಕ್, ಅಪಘಾತಗಳನ್ನು 40% ರಷ್ಟು ಕಡಿಮೆ ಮಾಡಬಹುದು ಎಂಬ ವರದಿ ನೀಡಿದೆ.

ಇದನ್ನೂ ಓದಿ: ಭಾರತೀಯ ರೈಲುಗಳಿಗೆ ಹೇಗೆ ಹೆಸರಿಡುತ್ತಾರೆ? ಇಲ್ಲಿದೆ ರೋಚಕ ಕತೆ!

ಇದು ಎಷ್ಟರ ಮಟ್ಟಿಗೆ ಸರಿ?

ಬಲ ಭಾಗದಲ್ಲಿ ಗಾಡಿ ಚಾಲನೆ ಮಾಡುವುದೇ ಸುರಕ್ಷಿತ ಎಂದು ನಾವು ಖಚಿತವಾಗಿರಲು ಸಾಧ್ಯವಿಲ್ಲ. ರಸ್ತೆ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಲ್ಲಿ, ಅದರಲ್ಲಿ ಚಾಲನೆ ಮಾಡುವ ರಸ್ತೆಯ ಬದಿಯು ಒಂದಾಗಿದೆ. ರಸ್ತೆ ಮೂಲಸೌಕರ್ಯ, ಸಂಚಾರ ಕಾನೂನುಗಳು ಮತ್ತು ಚಾಲಕನ ನಡವಳಿಕೆಯಂತಹ ಇತರ ಅಂಶಗಳು ಸಹ ದೊಡ್ಡ ಪಾತ್ರವನ್ನು ವಹಿಸುತ್ತವೆ. ಹೀಗಾಗಿ ಎಡಬದಿಯಲ್ಲಿ ವಾಹನ ಚಲಾಯಿಸುವುದಕ್ಕಿಂತ ಬಲಬದಿಯಲ್ಲಿ ವಾಹನ ಚಲಾಯಿಸುವುದು ಸುರಕ್ಷಿತವೇ ಎಂಬುದು ಇನ್ನೂ ಚರ್ಚೆಗೆ ಗ್ರಾಸವಾಗಿದೆ!

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Fri, 17 February 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!