April Fool 2023: ಏಪ್ರಿಲ್ ಫೂಲ್ ಯಾಕೆ ಬಂತು ಗೊತ್ತಾ? ಹೊಸ ವರ್ಷ ಆಚರಿಸಿಕೊಂಡು ಮೂರ್ಖರಾದ ದೇಶ ಯಾವುದು?
ಮೂರ್ಖರ ದಿನವನ್ನು ಮೊದಲು ಯುರೋಪಿನಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ನಿಖರವಾಗಿ ಹೇಗೆ ಪ್ರಾರಂಭಿಸಿಲಾಯಿತು ಎಂದು ಯಾರಿಗೂ ತಿಳಿದಿಲ್ಲ.
ಆಡು ಆಟವಾಡು, ಮಾಡು ಬಕ್ರಾ ಮಾಡು ಎಂದು ನೀವೇ ಬೇರೆಯವರನ್ನು ಬಕ್ರಾ ಮಾಡಿದ್ರಾ? ಅಥವಾ ಬೇರೆಯವರು ನಿಮ್ಮನ್ನು ಬಕ್ರಾ ಮಾಡಿದ್ರಾ?ಸಾಮಾನ್ಯವಾಗಿ ಏಪ್ರಿಲ್ 1 ರಂದು ಜನರು ಕಟ್ಟುಕಥೆ, ಸುಳ್ಳು-ಪೊಳ್ಳು , ತಮಾಷೆ ಮಾಡಿಕೊಂಡು ಎಂಜಾಯ್ ಮಾಡುತ್ತಾ ಒಬ್ಬರನ್ನೊಬ್ಬರು ಮೂರ್ಖರನ್ನಾಗಿ ಮಾಡುವುದು ಗೊತ್ತಿರುವ ವಿಷಯ. ಭಾರತದಲ್ಲಿ ಮಾತ್ರವಲ್ಲದೆ ಎಲ್ಲ ದೇಶಗಳಲ್ಲೂ ಏಪ್ರಿಲ್ 1ನ್ನು ಮೂರ್ಖರ ದಿನ ಆಚರಿಸಲಾಗುತ್ತದೆ. ಹಾಗಾದರೆ, ಏಪ್ರಿಲ್ ಫೂಲ್ ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ಮೂರ್ಖರ ದಿನದ ಇತಿಹಾಸ :
ಮೂರ್ಖರ ದಿನವನ್ನು ಮೊದಲು ಯುರೋಪಿನಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ನಿಖರವಾಗಿ ಹೇಗೆ ಪ್ರಾರಂಭಿಸಿಲಾಯಿತು ಎಂದು ಯಾರಿಗೂ ತಿಳಿದಿಲ್ಲ. ಆದರೂ ಇತಿಹಾಸಕಾರರು ಇದು 1582ರ ಹಿಂದೆಯೇ ಶುರುವಾಗಿದ್ದು ಎನ್ನುತ್ತಾರೆ. ಮೊದಲು ಫ್ರಾನ್ಸ್ ನಲ್ಲಿ ಆರಂಭವಾಗಿ ಬಳಿಕ ಯುರೋಪ್ ದೇಶಗಳಲ್ಲಿ ಆರಂಭವಾಯಿತು. ಸಿಂಪಲ್ ಆಗಿ ಹೇಳಬೇಕೆಂದರೆ ಕ್ಯಾಲೆಂಡರ್ ಬದಲಾವಣೆಯೇ ಮೂರ್ಖರ ದಿನವೆಂದು ಕರೆಯಲಾಗುತ್ತದೆ.
ಹೌದು, ಫ್ರಾನ್ಸ್ ನಲ್ಲಿ ಮೊದಲು ಜೂಲಿಯನ್ ಕ್ಯಾಲೆಂಡರ್ ಅನ್ನು ಬಳಕೆ ಮಾಡಲಾಗುತ್ತಿತ್ತು. ಈ ಕ್ಯಾಲೆಂಡರ್ ನಲ್ಲಿ ಎಪ್ರಿಲ್ 1 ಹೊಸ ವರ್ಷವನ್ನು ಆಚರಿಸಲಾಗುತ್ತಿತು. ಆದರೆ ಫ್ರಾನ್ಸ್ ದೇಶವೂ ಪೋಪ್ XIIIನೇ ಗ್ರೆಗೊರಿ ಸೂಚನೆ ಪ್ರಕಾರ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆ ಮಾಡಲು ಆರಂಭಿಸಿತು. ಈ ಕ್ಯಾಲೆಂಡರ್ ನಲ್ಲಿ ಹೊಸ ವರ್ಷವನ್ನು ಜನವರಿ 1ರಂದು ಆಚರಿಸಲಾಗುತ್ತಿದೆ. ಹೀಗಾಗಿ ಜನವರಿ 1ರ ಬದಲು ಏಪ್ರಿಲ್ 1ರಂದು ನಾವು ಹೊಸ ವರ್ಷ ಆಚರಿಸುತ್ತಿದ್ದೆವು ಎಂಬುವುದನ್ನು ಮನಗಂಡ ಫ್ರಾನ್ಸ್ ದೇಶ, ಇಷ್ಟು ದಿನ ನಾವು ಮೂರ್ಖರಾದೆವು ಎಂದು ಹೇಳಿಕೊಂಡಿತು.
ಇಷ್ಟು ಮಾತ್ರವಲ್ಲದೆ, ಯುರೋಪಿನ ಹಲವು ರಾಷ್ಟ್ರಗಳು ಈ ಹಳೆಯ ಜೂಲಿಯನ್ ಕ್ಯಾಲೆಂಡರ್ ಬದಲಾವಣೆಯನ್ನು ಒಪ್ಪಿಕೊಳ್ಳದೆ, ಇಂದಿಗೂ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ 1ರಂದು ಹೊಸ ವರ್ಷವನ್ನು ಆಚರಿಸುತ್ತಾರೆ. ಇಂಥ ಜನರಿಗೆ ಮೂಲ ಬದಲಾವಣೆಯ ಕುರಿತು ಅರಿವೇ ಇಲ್ಲದ, ಇವರು ಏಪ್ರಿಲ್ 1ರಂದು ಹೊಸ ವರ್ಷವನ್ನು ಆಚರಿಸುತ್ತಾರೆ. ಆ ಮೂಲಕ ತಮ್ಮನ್ನು ತಾವೇ ಮೂರ್ಖರು ಎಂದು ಜಗತ್ತಿನ ಎದುರು ಬಿಂಬಿಸಿಕೊಳ್ಳುತ್ತಾರೆ ಎಂಬ ವಾದವು ಆರಂಭವಾಗಿ ಏಪ್ರಿಲ್ ತಿಂಗಳ ಮೊದಲ ದಿನವನ್ನು ಫೂಲ್ ಡೇ ಎಂದು ಕರೆಯಲಾಯಿತು.
ಏಪ್ರಿಲ್ 1ರಂದು ಫೂಲ್ ನೆಪದಲ್ಲಿ ಪ್ರತಿ ವರ್ಷವು ಒಬ್ಬರನ್ನೊಬ್ಬರು ಮೂರ್ಖರನ್ನಾಗಿಸುತ್ತಾರೆ. ಕೆಲವರು ಫೂಲ್ ಮಾಡುವ ಉದ್ದೇಶದಿಂದ ಕಟ್ಟು ಕಥೆ, ಸುಳ್ಳು ಹೇಳುತ್ತಾರೆ. ಈ ದಿನ ಯಾವುದೇ ರೀತಿಯ ಸುಳ್ಳು ಹೇಳಿ ಮೂರ್ಖರನ್ನಾಗಿಸಿದರೆ ಅದು ತಪ್ಪು ಅಲ್ಲ ಎಂಬ ನಂಬಿಕೆ ಜನರಲ್ಲಿ ಇದೆ.
– ಆನಂದ ಜೇವೂರ್, ಕಲಬುರಗಿ