ಪಂಜುರ್ಲಿ ಬಿಟ್ಟರು ನಾನು ಬಿಡಲಾರೆ, ಗುಳಿಗನ ಹುಟ್ಟು ಒಂದು ಭಯಾನಕ ಸತ್ಯ

ಗುಳಿಗ ಶಿವ ಗಣಗಳಲ್ಲಿ ಒಂದು, ಹಾಗೆಯೇ ಇದರ ಇತಿಹಾಸವನ್ನು ನೋಡಿದಾಗ ಬೇರೆ ಬೇರೆ ರೀತಿಯಲ್ಲಿ ಗುಳಿಗನ ಹುಟ್ಟಿನ ಮಾಹಿತಿ ಸಿಗುತ್ತದೆ. ಅದರಲ್ಲಿ ಒಂದು ಇತಿಹಾಸ ಪ್ರಕಾರ ನೆಲವುಳ್ಳ ಸಂಕೆ ಹಾಗೂ ಗಾಳಿ ಭದ್ರ ಕುಮಾರನ ಮಗನೇ ಗುಳಿಗ, ಈ ಗುಳಿಗ ದೈವದ ಹುಟ್ಟು ಒಂದು ಆಶ್ಚರ್ಯ ಹಾಗೂ ವಿಚಿತ್ರ

ಪಂಜುರ್ಲಿ ಬಿಟ್ಟರು ನಾನು ಬಿಡಲಾರೆ, ಗುಳಿಗನ ಹುಟ್ಟು ಒಂದು ಭಯಾನಕ ಸತ್ಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 11, 2022 | 9:08 AM

ನಂಬಿಕೆ, ಸತ್ಯ, ವಿಶ್ವಾಸಕ್ಕೆ ಇನ್ನೊಂದು ಹೆಸರು ನಾವು ನಂಬಿರುವ ದೈವ ಅದು ಯಾವ ರೂಪದಲ್ಲಿ ಬೇಕಾದರೂ ಇರುತ್ತದೆ. ಆದರೆ ಅದರ ನಂಬಿಕೆ, ಸತ್ಯ ಒಂದೇ, ಆರಾಧನೆ ರೀತಿ, ನಿಯಮ ಬೇರೆ ಬೇರೆ ಇರಬಹುದು. ನಮ್ಮ ನಂಬಿಕೆಗೆ ಸ್ಪಷ್ಟ ಕೈಗನ್ನಡಿ ಈ ದೈವ ಆರಾಧನೆ. ಕರಾವಳಿ ಭಾಗದಲ್ಲಿ ದೈವರಾಧನೆ ಎನ್ನುವುದಕ್ಕೆ ಒಂದು ಹಳೆಯ ಕಟ್ಟಪಾಡು ಇದೆ. ಜೊತೆ ಜೊತೆಗೆ ಇತಿಹಾಸವು ಇದೆ. ಇಲ್ಲಿ ಒಂದೊಂದು ವಿಭಿನ್ನ ಶೈಲಿ ಇದೆ. ಈ ದೈವ ನೆಲೆಗೆ ಒಂದು ಅದ್ಭುತ ಸಾಕ್ಷಿ ಕೂಡ ಇದೆ.

ಇಲ್ಲಿ ಒಂದೊಂದು ದೈವಕ್ಕೂ ಒಂದೊಂದು ಇತಿಹಾಸ ಇದೆ. ಇದರ ಜೊತೆಗೆ ಸಂಸ್ಕೃತಿಯ ಸಾಕ್ಷಿಯು ಇರುತ್ತದೆ, ಜೊತೆಗೆ ನಂಬಿಕೆ ಇದೆ. ಸಾಮಾಜಿಕ ಬದ್ಧತೆಯ ಜೊತೆಗೆ ಧಾರ್ಮಿಕ ನಂಬಿಕೆಯು ಇರುತ್ತದೆ. ಪ್ರತಿಯೊಂದು ದೈವಕ್ಕೂ ಪ್ರಮುಖ ಸ್ಥಾನಮಾನವಿದೆ. ಹಿಂದೂ ಸಂಪ್ರದಾಯದಲ್ಲಿ ದೈವಾರಾಧನೆ ಎಂಬುದು ಒಂದು ಭಯ-ಭಕ್ತಿ ಎಂಬುದು ಕಂಡಿತ ಇರುತ್ತದೆ.

ನಂಬಿದವರನ್ನು ಸದಾ ಕಾಪಾಡುತ್ತಾ ಬಂದಿರುವ ದೈವಕ್ಕೆ ವರ್ಷಂ ಪ್ರತಿ ಕೋಲ ತಂಬಿಲ ಸೇವೆಯನ್ನು ಕೊಟ್ಟು ತೃಪ್ತಿ ಪಡಿಸುತ್ತಾರೆ. ದುಷ್ಟರ ಪಾಲಿಗೆ ವ್ಯಾಘ್ರ ಸ್ವರೂಪಿಯಾಗಿ ಕಷ್ಟ ಎಂದು ಬೇಡಿ ಬಂದವರಿಗೆ ಮಾಯಾ ರೂಪದಲ್ಲಿ ರಕ್ಷಕನಾಗಿ ನಂಬಿದವರಿಗೆ ಇಂಬು ಕೊಡುವವನಾಗಿ ತುಳುನಾಡಿನ ಮನೆ-ಮನಗಳಲ್ಲಿ ನೆಲೆಸಿರುವ ಅದೆಷ್ಟು ದೈವವನ್ನು ನಾವು ನೋಡಿದ್ದೇವೆ ನಂಬುತ್ತಾ ಬಂದಿದ್ದೇವೆ. ಹೌದು ಇಂತಹ ಉಗ್ರ ಸ್ವರೂಪಿ, ನೋಡಿದಾಕ್ಷಣ ಕಣ್ಣಿನಲ್ಲೇ ಕಷ್ಟಕ್ಕೆ ಪರಿಹಾರ ನೀಡುವ ದೈವರೂಪಿ ಗುಳಿಗ, ಈ ಗುಳಿಗ ಎಂದ ಕ್ಷಣ ನೆನಪಿಗೆ ಬರುವುದು ಕಾರಾಂತ ಸಿನಿಮಾ ಹೌದು ಆ ಸಿನಿಮಾದ ಕೊನೆಯಲ್ಲಿ ಬರುವ ಉಗ್ರ ರೂಪಿ ಗುಳಿಗ.

ಗುಳಿಗ ದೈವದ ಹುಟ್ಟು 

ಇದರ ಮೂಲ ಸ್ವರೂಪವನ್ನು ನಾವು ನೋಡಿಲ್ಲದಿದ್ದರೂ ದೈವನರ್ತಕ ವೇಷಭೂಷಣವನ್ನು ನೋಡಿದಾಗ ಸದಾ ಉಗ್ರರೂಪಿಯಂತೆ ಕಾಣುತ್ತದೆ. ಈ ಗುಳಿಗ ಶಿವ ಗಣಗಳಲ್ಲಿ ಒಂದು, ಹಾಗೆಯೇ ಇದರ ಇತಿಹಾಸವನ್ನು ನೋಡಿದಾಗ ಬೇರೆ ಬೇರೆ ರೀತಿಯಲ್ಲಿ ಗುಳಿಗನ ಹುಟ್ಟಿನ ಮಾಹಿತಿ ಸಿಗುತ್ತದೆ. ಅದರಲ್ಲಿ ಒಂದು ಇತಿಹಾಸ ಪ್ರಕಾರ ನೆಲವುಳ್ಳ ಸಂಕೆ ಹಾಗೂ ಗಾಳಿ ಭದ್ರ ಕುಮಾರನ ಮಗನೇ ಗುಳಿಗ, ಈ ಗುಳಿಗ ದೈವದ ಹುಟ್ಟು ಒಂದು ಆಶ್ಚರ್ಯ ಹಾಗೂ ವಿಚಿತ್ರ.

ಮುಕ್ಕಣ್ಣ ಎಂದು ಕರೆಯಲ್ಪಡುವ ಶಿವ, ಸಂಕೆ ಹಾಗೂ ಗಾಳಿ ಭದ್ರ ಕುಮಾರನಿಗೆ ಒಂದು ಶಾಪ ಕೊಟ್ಟಿರುತ್ತಾರೆ. ಅದರ ಪ್ರಕಾರ ಈ ದಂಪತಿಗಳ 25ನೇ ಮಗನಿಂದಲೇ ಇವರ ಮರಣ ಎಂದು ಮರಣ ಶಾಸನವಾಗಿರುತ್ತದೆ. 25ನೇ ಮಗನಾದ ಗುಳಿಗ ತಾಯಿಯ ಗರ್ಭದಲ್ಲಿರುವಾಗಲೇ ತಾಯಿಯ ಬಳಿ ಕೇಳುತ್ತಾನಂತೆ ಓ ಅಮ್ಮ…. ಓ ಅಮ್ಮ…. ನಾನು ಯಾವ ಜಾಗದಿಂದ ಭೂಮಿಗೆ ಬರಲಿ ಅಮ್ಮ. ಆಗ ತಾಯಿ ಸಂಕೆ ಎಲ್ಲರೂ ಯಾವ ಜಾಗದಿಂದ ಭೂಮಿಗೆ ಬರುತ್ತಾರೋ ಅದೇ ಜಾಗದಿಂದ ಬಾ ಎನ್ನುತ್ತಾಳೆ.

ಇದನ್ನು ಓದಿ: ಪಾರ್ವತಿ ಪ್ರೀತಿಯಿಂದ ಸಾಕಿದ ಹಂದಿ ಮರಿ ಪಂಜುರ್ಲಿಯಾದದ್ದು ಹೇಗೆ? ಇಲ್ಲಿದೆ ಮಾಹಿತಿ

ಆಗ ಗುಳಿಗ ಅವರ ಮಾತನ್ನು ಒಪ್ಪದೆ ತನ್ನ ತಾಯಿಯ ಬಸಿರನ್ನೇ (ಗರ್ಭ) ಬಗೆದು ಹೊರಬರುತ್ತಾನೆ, ಭೂಮಿಗೆ ಬರುತ್ತಿದಂತೆಯೇ ಹಸಿವು ಎಂದು ಕೂಗುತ್ತಾನೆ. ಹಸಿವು ತಾಳಲಾರದೆ ತನ್ನ ತಾಯಿಯ ರಕ್ತವನ್ನು ಹೀರಿ ಕರುಳನ್ನು ಹಾರವನ್ನಾಗಿಸಿಕೊಂಡು ತಂದೆ ಹಾಗೂ ತಾಯಿಯನ್ನು ವಧಿಸುತ್ತಾನೆ.

ಹಸಿವು ನೀಗದ ಗುಳಿಗ ನಂತರ ವಿಷ್ಣುವಿನ ಬಳಿ ಹೋಗಿ ಹಸಿವು ಎಂದು ಅಬ್ಬರಿಸುತ್ತಾನೆ ಏನೇ ಕೊಟ್ಟರು ಹಸಿವು ನೀಗದ ಗುಳಿಗ ನಿಗೆ ನಂತರ ವಿಷ್ಣು ತನ್ನ ಕಿರುಬೆರಳನ್ನು ನೀಡುತ್ತಾನೆ. ಇದರಿಂದ ಗುಳಿಗ ಶಾಂತನಾಗುತ್ತಾನೆ ಗುಳಿಗನ ಅಬ್ಬರವನ್ನು ಕಂಡ ವಿಷ್ಣು ಗುಳಿಗನನ್ನು ಭೂಲೋಕದ ರಕ್ಷಣೆಗಾಗಿ ದೈವ ಸ್ವರೂಪವನ್ನು ಕೊಟ್ಟು ಭೂಮಿಗೆ ಕಳುಹಿಸುತ್ತಾನೆ. ಹೀಗೆ ಭೂಮಿಗೆ ಬಂದಾಗ ಗುಳಿಗನನ್ನು ಕ್ಷೇತ್ರಪಾಲ ಎಂದು ಕೂಡ ಕರೆಯುತ್ತಾರೆ, ಕ್ಷೇತ್ರಪಾಲ ಎಂದರೆ ಜಾಗವನ್ನು ರಕ್ಷಣೆ ಮಾಡುವ ಎಂದರ್ಥ.

ತುಳುನಾಡಿನಲ್ಲಿ ಅನೇಕ ಮನೆಗಳಲ್ಲಿ ತಮ್ಮ ಜಾಗದಲ್ಲಿ ಗುಳಿಗನಿಗೆ ಎಂದೇ ಒಂದು ಕಲ್ಲನ್ನು ಪ್ರತಿಷ್ಠಾಪಿಸಿ ಪ್ರತಿವರ್ಷವೂ ಅದಕ್ಕೆ ತಂಬಿಲವನ್ನು ಕೊಟ್ಟು ಆರಾಧಿಸುತ್ತಾರೆ. ಗುಳಿಗನನ್ನು ನಾನಾ ಹೆಸರುಗಳಿಂದ ಬೇರೆ ಬೇರೆ ಕಡೆಗಳಲ್ಲಿ ನಂಬುತ್ತಾರೆ ರಾಹುಗುಳಿಗ, ರಕ್ತೇಶ್ವರಿ ಗುಳಿಗ, ನೆತ್ತರ್ ಗುಳಿಗ, ರಾವುಗುಳಿಗ, ಮಂತ್ರವಾದಿಗುಳಿಗ, ಚೌಕಾರ ಗುಳಿಗ, ಹೀಗೆ ಅನೇಕ ನಾಮಗಳಿಂದ ಭಯ ಭಕ್ತಿಯಿಂದ ಪೂಜಿಸುತ್ತಾರೆ. ಇನ್ನು ಇದರ ನರ್ತನೆ ಹಾಗೂ ವೇಷಭೂಷಣ ನೋಡುವುದಾದರೆ ಮುಖಕ್ಕೆ ಕಪ್ಪು ಕೆಂಪು ಹಳದಿ ಬಣ್ಣವನ್ನು ಹಚ್ಚಿ, ಸೊಂಟಕ್ಕೆ ತೆಂಗಿನಗರಿ ( ಸಿರಿ) ಹಾಗೂ ಕಪ್ಪು ಬಿಳಿ ಬಣ್ಣದ ಬಟ್ಟೆಯನ್ನು ಹಾಕುತ್ತಾರೆ. ದೈವ ನರ್ತನೆ ಶುರುವಾದಗಲೇ ಗುಳಿಗ ಹೊಟ್ಟೆ ಬಡಿದುಕೊಂಡು ಬರುತ್ತಾನೆ.

ಕೊನೆಯಲ್ಲಿ ಕ್ಷೇತ್ರ ಪಾಲನಿಗೆ ಆಹಾರವಾಗಿ ಕೋಳಿ, ಹರಳು, ಹಾಗೂ ಸೀಯಾಳವನ್ನು ನೀಡುತ್ತಾರೆ. ಹೀಗೆ ಸದಾ ಹಸಿವು ಹಾಗೂ ಉಗ್ರರೂಪಿ ಯಾಗಿರುವ ಗುಳಿಗ ಕ್ಷೇತ್ರಪಾಲನಾಗಿ ತುಳುನಾಡಿನ ಮನೆಗಳಲ್ಲಿ ನೆಲೆಯೂರಿ ತನ್ನ ಕಾರ್ನಿಕವನ್ನು ತೋರಿಸುತ್ತಾ ಬಂದಿದ್ದಾನೆ.

ಕವಿತಾ,ವಿಟ್ಲ

Published On - 8:44 am, Fri, 11 November 22

ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ