Rakesh Jhunjhunwala: ಒಂದು ವರ್ಷದೊಳಗೇ 7 ಪಟ್ಟು ಷೇರಿನ ಬೆಲೆ ಏರಿಕೆ ಕಂಡ ಕಂಪೆನಿಯಲ್ಲಿ ರಾಕೇಶ್ ಜುಂಜುನ್ವಾಲಾ ಹೂಡಿಕೆ
ಭಾರತದ ಬಿಗ್ ಬುಲ್ ರಾಕೇಶ್ ಜುಂಜುನ್ವಾಲ ಅವರು ರಾಘವ್ ಪ್ರೊಡಕ್ಟಿವಿಟಿ ಎನ್ಹ್ಯಾನ್ಸರ್ಸ್ನಲ್ಲಿ 31 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದಾರೆ. ಈ ಕಂಪೆನಿ ಷೇರು ಕಳೆದ ಒಂದು ವರ್ಷದಲ್ಲಿ ಶೇ 600ಕ್ಕೂ ಹೆಚ್ಚು ಏರಿಕೆ ಕಂಡಿದೆ.
ರಾಘವ್ ಪ್ರೊಡಕ್ಟಿವಿಟಿ ಎನ್ಹ್ಯಾನ್ಸರ್ಸ್ ಷೇರಿನ ಬೆಲೆಯು ಸೋಮವಾರ ಇಂಟ್ರಾಡೇಯಲ್ಲಿ ಒಂದು ಷೇರಿಗೆ ಬಿಎಸ್ಇಯಲ್ಲಿ ರೂ. 716.90 ತಲುಪಿತು. ಕಂಪೆನಿಯಲ್ಲಿ ರಾಕೇಶ್ ಜುಂಜುನ್ವಾಲಾ (Rakesh Jhunjhunwala) ಅವರು 31 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಾರೆ ಎಂದು ಈ ಇಂಡಸ್ಟ್ರಿಯಲ್ ಗೂಡ್ಸ್ ಕಂಪೆನಿ ಮಾಹಿತಿ ನೀಡಿದ ಮೇಲೆ ಹೀಗೆ ಮೇಲೇರಿದೆ. ಇಂದಿನ ವಹಿವಾಟಿನಲ್ಲಿ ಷೇರು ಬೆಲೆ ಮೇಲ್ಸ್ತರದ ಬೆಲೆಯ ಶೇ 5ರಷ್ಟನ್ನು ಮುಟ್ಟಿತು. ಅಂದಹಾಗೆ ಒಂದು ವರ್ಷದೊಳಗೆ ಈ ಷೇರಿನ ಬೆಲೆ ಶೇ 617 ಪರ್ಸೆಂಟ್ ಅಥವಾ ಹತ್ತಿರಹತ್ತಿರ ಏಳು ಪಟ್ಟು ಏರಿಕೆ ಆಗಿದೆ. ಹೂಡಿಕೆದಾರ ರಾಕೇಶ್ ಜುಂಜುನ್ವಾಲ ಅವರು 30.90 ಕೋಟಿ ಮೌಲ್ಯದ 6 ಲಕ್ಷ ರಾಘವ್ ಪ್ರೊಡಕ್ಟಿವಿಟಿ ಎನ್ಹ್ಯಾನ್ಸೆರರ್ಸ್ನ ಅನ್ಸೆಕ್ಯೂರ್ಡ್ ಕಂಪಲ್ಸರಿ ಕನ್ವರ್ಟಬಲ್ ಡಿಬೆಂಚರ್ಸ್ (CCD) ಖರೀದಿ ಮಾಡುತ್ತಾರೆ ಎಂದು ಕಂಪೆನಿಯು ಮಾಹಿತಿ ನೀಡಿದ ಮೇಲೆ ಈ ಬೆಳವಣಿಗೆ ಆಗಿದೆ. ಅಂದಹಾಗೆ ಈ ಕಂಪೆನಿಯ ಷೇರು 2016ರ ಏಪ್ರಿಲ್ನಲ್ಲಿ 39.5 ರೂಪಾಯಿ ತಲುಪಿತ್ತು. ಆ ಹಂತದಿಂದ ಶೇ 1715ರಷ್ಟು ಏರಿಕೆ ಕಂಡಂತೆ ಆಗಿದೆ.
ರಾಘವ್ ಪ್ರೊಡಕ್ಟಿವಿಟಿ ಎನ್ಹ್ಯಾನ್ಸರ್ಸ್ನಿಂದ ಪ್ರತಿ ಯೂನಿಟ್ಗೆ 515 ರೂಪಾಯಿಯಂತೆ 6 ಲಕ್ಷ ಸಿಸಿಡಿ ವಿತರಿಸಲಾಗುತ್ತದೆ. ಪ್ರತಿ ಸಿಸಿಡಿಯು ಸರಳ ಬಡ್ಡಿ ದರವಾದ ಶೇ 15ರಷ್ಟು ಪಡೆಯುತ್ತದೆ. ವಿತರಣೆ ಮಾಡಿದ ದಿನದಿಂದ 18 ತಿಂಗಳ ಕೊನೆಗೆ ಸಿಸಿಡಿಗಳು ಈಕ್ವಿಟಿ ಷೇರುಗಳಾಗಿ ಮಾರ್ಪಡುತ್ತವೆ. ಈ ವ್ಯವಹಾರದ ದಿನಾಂಕವು ಜುಲೈ 26, 2021 ಎಂದು ಬಿಎಸ್ಇ ಫೈಲಿಂಗ್ನಿಂದ ಗೊತ್ತಾಗಿದೆ. ಇನ್ನು ಏಪ್ರಿಲ್ 13, 2016ರಂದು ಈ ಕಂಪೆನಿಯ ಷೇರು 28.6 ರೂಪಾಯಿಗೆ ಲಿಸ್ಟಿಂಗ್ ಆಯಿತು. ಕಳೆದ ತಿಂಗಳು ಕಂಪೆನಿಯ ಷೇರಿನ ಬೆಲೆ ಶೇ 63ರಷ್ಟು ಹೆಚ್ಚಾಗಿದೆ.
2021ರ ಜೂನ್ ತ್ರೈಮಾಸಿಕದ ಕೊನೆಗೆ ಕಂಪೆನಿಯ ನಿವ್ವಳ ಲಾಭ ಶೇ 637.93ರಷ್ಟು ಏರಿಕೆ ಆಗಿದೆ, 4.28 ಕೋಟಿ ರೂಪಾಯಿ ಮುಟ್ಟಿತು. ಇದೇ ಕಳೆದ ವರ್ಷದ ಜೂನ್ ತ್ರೈಮಾಸಿಕದ ಅವಧಿಯಲ್ಲಿ 58 ಲಕ್ಷ ರೂಪಾಯಿ ಲಾಭ ದಾಖಲಿಸಿತ್ತು ಕಂಪೆನಿ. ಕಂಪೆನಿಯ ಮಾರಾಟವು ಶೇ 127.23ರಷ್ಟು ಏರಿಕೆ ಆಗಿ, 20.61 ಕೋಟಿ ಮುಟ್ಟಿದೆ 2021ರ ಜೂನ್ನಲ್ಲಿ. ಕಳೆದ ವರ್ಷ ಈ ಅವಧಿಯಲ್ಲಿ 9.07 ಕೋಟಿ ಇತ್ತು. ಇನ್ನು ಜೂನ್ 30, 2021ರ ಕೊನೆಗೆ ಪ್ರವರ್ತಕರ ಬಳಿಯಲ್ಲಿ ಶೇ 69.61ರಷ್ಟು ಷೇರಿನ ಪಾಲಿದೆ.
ಇದನ್ನೂ ಓದಿ: Rakesh Jhunjhunwala: ಹೊಸ ತಲೆಮಾರಿನ ಐಪಿಒಗಳ ಬಗ್ಗೆ ಬಿಗ್ ಬುಲ್ ರಾಕೇಶ್ ಜುಂಜುನ್ವಾಲಾ ಹೇಳೋದೇನು?
ಇದನ್ನೂ ಓದಿ: Rakesh Jhunjunwala: 5000 ರೂ.ನಿಂದ 34 ಸಾವಿರ ಕೋಟಿಯ ಸಾಮ್ರಾಜ್ಯ ಕಟ್ಟಿದ ರಾಕೇಶ್ ಜುಂಜುನ್ವಾಲಾಗೆ ಜುಲೈ 5 ಜನ್ಮದಿನ
(Ace Investor Rakesh Jhunjhunwala Investing Rs 31 Crore In Raghav Productivity Enhancers Company As Its Share Price Increased 7 Times)