ಮುಂಬೈ: ತೆರಿಗೆ ಪಾವತಿ ಮಾಡದ ವಕೀಲರೊಬ್ಬರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿತ್ತು. ಈ ನೋಟಿಸ್ಗೆ ಬಾಂಬೇ ಹೈಕೋರ್ಟ್ ಈಗ ತಡೆ ನೀಡಿದೆ.
2014-15ನೇ ಹಣಕಾಸು ವರ್ಷದಲ್ಲಿ ತೆರಿಗೆ ತುಂಬಿಲ್ಲ ಎಂದು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಸಹಾಯಕ ಸಚಿವರು, ವಕೀಲ ಸಂಜೀವ್ ಮಧುಸೂದನ್ ಶಾಗೆ ಶೋಕಾಸ್ ಕಮ್ ಡಿಮ್ಯಾಂಡ್ ನೋಟಿಸ್ ನೀಡಿತ್ತು. ಈ ಕ್ರಮವನ್ನು ಸಂಜೀವ್ ಬಾಂಬೇ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು.
ವ್ಯಕ್ತಿ ವಕೀಲನಾಗಿ ಸೇವೆ ಸಲ್ಲಿಸುತ್ತಿದ್ದರೆ ಅವರು ಸೇವಾ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತಾರೆ ಎಂದು ಈ ಮೊದಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದೇ ಆಧಾರದ ಮೇಲೆ ಸಂಜೀವ್ ವಾದ ಮಂಡನೆ ಮಾಡಿದ್ದರು. ಹೀಗಾಗಿ, ಬಾಂಬೇ ಹೈಕೋರ್ಟ್ ಜಿಎಸ್ಟಿ ನೋಟಿಸ್ಗೆ ತಡೆ ನೀಡಿದೆ.
ನೋಟಿಸ್ ಅವಧಿ ಮುಗಿಸದೇ ಕೆಲಸ ಬಿಟ್ಟರೆ ಕಾದಿದೆ ಜಿಎಸ್ಟಿ ಗುಮ್ಮ! ಏನದು ಲೆಕ್ಕಾಚಾರ?