CPI: 2021ರ ಆಗಸ್ಟ್​ನಲ್ಲಿ ಸಿಪಿಐ ಆಧಾರಿತ ಚಿಲ್ಲರೆ ಹಣದುಬ್ಬರ ದರ ಶೇ 5.30ಕ್ಕೆ

TV9 Digital Desk

| Edited By: Srinivas Mata

Updated on: Sep 13, 2021 | 8:55 PM

ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು 2021ರ ಆಗಸ್ಟ್​ನಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿ ಶೇ 5.30 ಆಗಿದೆ. ಆ ಬಗ್ಗೆ ವಿವರ ಇಲ್ಲಿದೆ.

CPI: 2021ರ ಆಗಸ್ಟ್​ನಲ್ಲಿ ಸಿಪಿಐ ಆಧಾರಿತ ಚಿಲ್ಲರೆ ಹಣದುಬ್ಬರ ದರ ಶೇ 5.30ಕ್ಕೆ
ಸಾಂದರ್ಭಿಕ ಚಿತ್ರ

Follow us on

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ (ಸಿಪಿಐ) ಆಗಸ್ಟ್ 2021ಕ್ಕೆ ಶೇಕಡಾ 5.30ಕ್ಕೆ ಬಂದಿದೆ. ಜುಲೈನಲ್ಲಿ ಇದ್ದ ಶೇಕಡಾ 5.59ಕ್ಕೆ ಹೋಲಿಸಿದರೆ ಆಹಾರ ಬೆಲೆಗಳು, ವಿಶೇಷವಾಗಿ ತರಕಾರಿ ಹಣದುಬ್ಬರ ಮತ್ತಷ್ಟು ಕಡಿಮೆ ಆಗಿವೆ ಎಂದು ರಾಷ್ಟ್ರೀಯ ಅಂಕಿ- ಅಂಶ ಕಚೇರಿ (ಎನ್ಎಸ್ಒ) ಸೆಪ್ಟೆಂಬರ್ 13ರಂದು ಬಿಡುಗಡೆ ಮಾಡಿದ ಡೇಟಾದಿಂದ ಗೊತ್ತಾಗಿದೆ. ಗ್ರಾಹಕರ ಆಹಾರ ಬೆಲೆ ಹಣದುಬ್ಬರ (ಸಿಎಫ್‌ಪಿಐ) ಜುಲೈನಲ್ಲಿ ಇದ್ದ ಶೇ 3.96ಕ್ಕೆ ಹೋಲಿಸಿದರೆ ಆಗಸ್ಟ್‌ನಲ್ಲಿ ಶೇ 3.11 ಇಳಿದಿದೆ. ಆದರೆ ಹೆಚ್ಚಿನ ಖಾದ್ಯ ತೈಲ ಬೆಲೆ ಏರಿಕೆಯೊಂದಿಗೆ ಆತಂಕಕ್ಕೆ ಕಾರಣವಾಗಿ ಉಳಿದಿದ್ದು, ಇದು ವರ್ಷದಿಂದ ವರ್ಷಕ್ಕೆ (YoY) ಶೇ 33ರಷ್ಟು ಹೆಚ್ಚಳವನ್ನು ದಾಖಲಿಸಿದೆ.

“2021ರ ಆಗಸ್ಟ್​ನಲ್ಲಿ ಸ್ವಾಗತಾರ್ಹವಾದ ಸಿಪಿಐ ಹಣದುಬ್ಬರ ಕುಸಿತವು ವಿಶಾಲ ವ್ಯಾಪ್ತಿಯ ಆಧಾರಿತವಾಗಿದೆ. ಬಟ್ಟೆ, ಪಾದರಕ್ಷೆಗಳು, ಇಂಧನ ಮತ್ತು ವಿದ್ಯುತ್​ ಅನ್ನು ಹೊರತುಪಡಿಸಿ ಎಲ್ಲವೂ ಏರಿಕೆ ಕಂಡಿವೆ. ನಮ್ಮ ಆತಂಕಕ್ಕೆ ವಿರುದ್ಧವಾಗಿ ಸಿಪಿಐ ಹಣದುಬ್ಬರವು ನಿರೀಕ್ಷಿತಕ್ಕಿಂತ ಕಡಿಮೆಯಾಗಿದೆ,” ಎಂದು ಅರ್ಥಶಾಸ್ತ್ರಜ್ಞರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಜುಲೈ ತಿಂಗಳಿಗೆ ಆರ್​ಬಿಐ ಹಣಕಾಸು ನೀತಿ ಸಮಿತಿಯ ಸಿಪಿಐ ಹಣದುಬ್ಬರವನ್ನು ಶೇಕಡಾ 4 (+/- 2) ವ್ಯಾಪ್ತಿಯಲ್ಲಿ ಗುರಿಯಾಗಿಸಿಕೊಂಡಿದೆ. ಇದಕ್ಕೂ ಮುಂಚೆ ಎರಡು ತಿಂಗಳ ಕಾಲ ಶೇ 6ಕ್ಕಿಂತ ಹೆಚ್ಚಾಗಿದೆ. ಆಹಾರ ಬೆಲೆ ಹೆಚ್ಚಾಗಿ, ಪೆಟ್ರೋಲ್- ಡೀಸೆಲ್ ದರದಲ್ಲಿ ಏರಿಕೆ ಆಗಿದ್ದರಿಂದ ಮತ್ತು ಸ್ಥಳೀಯ ಲಾಕ್​ಡೌನ್​ಗಳಿಂದ ಮೇ ತಿಂಗಳಲ್ಲಿ ಹಣದುಬ್ಬರವು ಶೇ 6.30ರಲ್ಲಿ ಇತ್ತು. ಆ ನಂತರ ಜೂನ್​ನಲ್ಲಿ ಸ್ವಲ್ಪ ಕಡಿಮೆ ಆಗಿ, ಶೇ 6.26 ಇತ್ತು.

ಆಹಾರ ಹಣದುಬ್ಬರವು ಪರಿಹಾರವಾಗಿ ಬರುತ್ತದೆ ಆಗಸ್ಟ್‌ನಲ್ಲಿ ಸಿಪಿಐ ಹಣದುಬ್ಬರ ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಸಲು ಮುಖ್ಯ ಕಾರಣ ಆಹಾರ ಮತ್ತು ಪಾನೀಯಗಳ ಬೆಲೆ ಕಡಿಮೆ ಆಗಿರುವುದು ಎಂದು ವಿಶ್ಲೇಷಕರು ಹೇಳಿದ್ದಾರೆ. “ತಿಂಗಳಿಂದ ತಿಂಗಳಿಗೆ ಆಹಾರ ಮತ್ತು ಪಾನೀಯಗಳ ಬ್ಯಾಸ್ಕೆಟ್ ಏರಿಕೆ- ಇಳಿಕೆ ಕಾಣದೆ ಹಾಗೇ ಉಳಿದಿತ್ತು. ಮೊಟ್ಟೆ, ಮಾಂಸ ಮತ್ತು ಮೀನು, ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳು, ಹಾಲು, ಎಣ್ಣೆಗಳು ಮತ್ತು ಫ್ಯಾಟ್ಸ್, ತರಕಾರಿಗಳು, ಸಕ್ಕರೆ ಮತ್ತು ಮಸಾಲೆಗಳಲ್ಲಿನ ಬೆಲೆ ಇಳಿಕೆ ಹೊರತಾಗಿಯೂ ಹೀಗಾಗಿದೆ,” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನೂ ಮುಂದುವರಿದು, ಕೋರ್- ಸಿಪಿಐ ಹಣದುಬ್ಬರವು ಜುಲೈನಲ್ಲಿ ಶೇ 5.7ರಿಂದ ಆಗಸ್ಟ್​ನಲ್ಲಿ ಶೇ 5.5ಕ್ಕೆ ಇಳಿದಿದೆ. “ಪ್ರಮುಖವಾದ ಪದಾರ್ಥಗಳು ಬೆಲೆ ಏರಿಕೆ ಆಗಿವೆ ಮತ್ತು ಅಲ್ಲೇ ಉಳಿದಿದೆ. ಹೆಚ್ಚಿನ ಜಾಗತಿಕ ಸರಕುಗಳು ಮತ್ತು ಮಾರ್ಜಿನ್ ಒತ್ತಡಗಳ ಮೇಲೆ ಹಾದುಹೋಗುವ ಮಂದಗತಿ ಪ್ರಭಾವದ ನಡುವೆ ಒತ್ತಡದಲ್ಲಿ ಪ್ರಮುಖ ಹಣದುಬ್ಬರವು ಉಳಿಯಬಹುದು,” ಎಂದು ಎಮ್‌ಕೆ ಗ್ಲೋಬಲ್‌ನ ಪ್ರಮುಖ ಅರ್ಥಶಾಸ್ತ್ರಜ್ಞರಾದ ಮಾಧವಿ ಅರೋರಾ ಹೇಳಿದ್ದಾರೆ. ಸಿಪಿಐ ಸರಾಸರಿ 60 ಬೇಸಿಸ್ ಪಾಯಿಂಟ್ ಆಗಬಹುದು. ಆರ್‌ಬಿಐನ ಶೇಕಡಾ 5.7 ಮುನ್ಸೂಚನೆಗಿಂತ ಕಡಿಮೆ ಆಗಬಹುದು ಎಂದು ಅವರು ಹೇಳುತ್ತಾರೆ.

“ಪ್ರಸ್ತುತ, ನೀತಿಯು ಫೆಬ್ರವರಿ 2022ರಲ್ಲಿ ಸಾಮಾನ್ಯವಾಗಿ ಆರಂಭವಾಗಬಹುದು ಎಂದು ನಾವು ನಂಬುತ್ತೇವೆ. ಹಣಕಾಸು ನೀತಿಯು ಅಕಾಮಡೇಟಿವ್ ನಿಲವಿಂದ ತಟಸ್ಥವಾಗಿ ಬದಲಾಯಿಸಬಹುದು. ಆ ನಂತರ 2022ರ ಏಪ್ರಿಲ್ ಮತ್ತು 2022ರ ಜೂನ್ ದ್ವೈಮಾಸಿಕ ಸಭೆಗಳಲ್ಲಿ ರೆಪೋ ದರವನ್ನು ತಲಾ 25 ಬಿಪಿಎಸ್ ಹೆಚ್ಚಿಸಬಹುದು,” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Retail Inflation: ಜುಲೈ ತಿಂಗಳ ಚಿಲ್ಲರೆ ಹಣದುಬ್ಬರ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಶೇ 5.59ಕ್ಕೆ

Economic Recovery: ಕೊವಿಡ್​ 19ನಿಂದ ಬಿದ್ದ ಪೆಟ್ಟಿಗಿಂತ ಹೆಚ್ಚು ವೇಗವಾಗಿ ಪುಟಿದೆದ್ದ ಆರ್ಥಿಕತೆ ಎಂದ ಪ್ರಧಾನಿ ನರೇಂದ್ರ ಮೋದಿ

(CPI Inflation For The Month Of 2021 August At 5.30 Percent Here Is The Details)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada