AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart: ಫ್ಲಿಪ್​ಕಾರ್ಟ್​ನಲ್ಲಿ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್​​ಫೋನ್​ ಸೇಲ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

ನೂತನ ಮೊಬೈಲ್ ಖರೀದಿಸುವಾಗ ಕೆಲವರು ತಮ್ಮ ಹಳೆಯ ಫೋನನ್ನು ಎಷ್ಟು ಬೆಲೆ ಸಿಗುತ್ತೊ ಅಷ್ಟಕ್ಕೆ ಹೊರಗಿನ ರಿಟೈಲ್ ಸ್ಟೋರ್​ಗೆ ಮಾರಾಟ ಮಾಡಿ ಬಿಡುತ್ತಾರೆ. ಆ ಮೊಬೈಲ್​ಗೆ (Mobile) ಅರ್ಹವಾದ ಬೆಲೆ ಸಿಗುವುದಿಲ್ಲ. ಆದರೆ, ನಿಮ್ಮ ಮೊಬೈಲ್ ಅನ್ನು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart)​ ಮೂಲಕ ಮಾರಾಟ ಮಾಡಬಹುದು ಎಂಬುದು ನಿಮಗೆ ಗೊತ್ತೇ?. ಇದಕ್ಕಾಗಿ ಇಲ್ಲಿದೆ ನೋಡಿ ಸಿಂಪಲ್ ಸ್ಟೆಪ್ಸ್.

Flipkart: ಫ್ಲಿಪ್​ಕಾರ್ಟ್​ನಲ್ಲಿ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್​​ಫೋನ್​ ಸೇಲ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Flipkart and Smartphones
TV9 Web
| Edited By: |

Updated on:Jul 03, 2026 | 1:24 PM

Share

ಮಾರುಕಟ್ಟೆಯಲ್ಲಿಂದು ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಹೊಸ ಸ್ಮಾರ್ಟ್​ಫೋನ್​ಗಳು (Smartphones) ಬಿಡುಗಡೆ ಆಗುತ್ತವೆ. ಇದರಲ್ಲಿ ಬಹುತೇಕ ಮೊಬೈಲ್​ಗಳು ಬಜೆಟ್ ಅಥವಾ ಮಧ್ಯಮ ಬೆಲೆಗೆ ಲಭ್ಯವಿರುವುದರಿಂದ ಬೇಗನೆ ಸೇಲ್ ಆಗಿ ಬಿಡುತ್ತದೆ. ಈಗ ಉಪಯೋಗಿಸುತ್ತಿರುವ ಮೊಬೈಲ್ ಬೋರ್ ಆಯಿತು ಎಂದಾಗ ಜನರು ಮತ್ತೊಂದು ಹೊಸ ಸ್ಮಾರ್ಟ್​ಫೋನ್ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ನೂತನ ಮೊಬೈಲ್ ಖರೀದಿಸುವಾಗ ಕೆಲವರು ತಮ್ಮ ಹಳೆಯ ಫೋನನ್ನು ಎಷ್ಟು ಬೆಲೆ ಸಿಗುತ್ತೊ ಅಷ್ಟಕ್ಕೆ ಹೊರಗಿನ ರಿಟೈಲ್ ಸ್ಟೋರ್​ಗೆ ಮಾರಾಟ ಮಾಡಿ ಬಿಡುತ್ತಾರೆ. ಆ ಮೊಬೈಲ್​ಗೆ (Mobile) ಅರ್ಹವಾದ ಬೆಲೆ ಸಿಗುವುದಿಲ್ಲ. ಆದರೆ, ನಿಮ್ಮ ಮೊಬೈಲ್ ಅನ್ನು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart)​ ಮೂಲಕ ಮಾರಾಟ ಮಾಡಬಹುದು ಎಂಬುದು ನಿಮಗೆ ಗೊತ್ತೇ?. ಇದಕ್ಕಾಗಿ ಇಲ್ಲಿದೆ ನೋಡಿ ಸಿಂಪಲ್ ಸ್ಟೆಪ್ಸ್.

ಫ್ಲಿಪ್​ಕಾರ್ಟ್​ ಸಂಸ್ಥೆ ಇತ್ತೀಚೆಗಷ್ಟೆ ತನ್ನ ಫೆಸ್ಟಿವಲ್ ಸೀಸನ್ 2022 ರಲ್ಲಿ ಸೆಲ್- ಬ್ಯಾಂಕ್ ಪ್ರೊಗ್ರಾಮ್ ಎಂಬ ವಿಶೇಷ ಆಯ್ಕೆಯನ್ನು ನೀಡಿತ್ತು. ಇದರ ಮೂಲಕ ನಿಮ್ಮ ಹಳೆಯ ಸ್ಮಾರ್ಟ್​ಫೋನನ್ನು ಯಾವುದೇ ಅಪಾಯವಿಲ್ಲದೆ ಸೇಫ್ ಹಾಗೂ ಸುಲಭವಾಗಿ ಮಾರಾಟ ಮಾಡಬಹುದು. ಇಲ್ಲಿ ನಿಮ್ಮ ಮೊಬೈಲ್​ಗೆ ಅರ್ಹವಾಗಿ ಖಚಿತ ಬೆಲೆ ಕೂಡ ಸಿಗುತ್ತದೆ. ಕೆಲವೇ ಸಮಯದಲ್ಲಿ ಹಣ ನಿಮ್ಮ ಬ್ಯಾಂಕ್ ಅಕೌಂಟ್​ಗೆ ಬಂದಿರುತ್ತದೆ. ಫ್ಲಿಪ್​ಕಾರ್ಟ್​ ಮೂಲಕ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್​​ಫೋನ್​ ಸೇಲ್ ಮಾಡಲು ಈ ಕೆಳಗಿನ ವಿಧಾನ ಅನುಸರಿಸಿ.

ಫ್ಲಿಪ್​ಕಾರ್ಟ್​ನಲ್ಲಿ ಹಳೆಯ ​​ಫೋನ್​ ಸೇಲ್ ಮಾಡುವುದು ಹೇಗೆ?:

  • ಫ್ಲಿಪ್​ಕಾರ್ಟ್​ ಆ್ಯಪ್ ತೆರೆಯಿರಿ ಮತ್ತು ಕೆಳ ಭಾಗದಲ್ಲಿರವ ಕ್ಯಾಟಗರಿ ಸೆಕ್ಷನ್​ನಲ್ಲಿ ಸೆಲ್​ ಬ್ಯಾಕ್ ಸೆಲೆಕ್ಟ್ ಮಾಡಿ.
  • ಈ ಆಯ್ಕೆ ಸಿಗಲಿಲ್ಲ ಎಂದಾದರೆ ಸರ್ಚ್​ ಬಾರ್​ನಲ್ಲಿ ಸೆಲ್​ ಬ್ಯಾಕ್ ಸರ್ಚ್​ ಮಾಡಿ ಓಪನ್ ಮಾಡಿರಿ.
  • ಈಗ ನೀವು ನಿಮ್ಮ ಮೊಬೈಲ್ ಫೋನ್‌ನ ಬ್ರ್ಯಾಂಡ್, ಮಾಡೆಲ್ ಮತ್ತು IMEI ಸಂಖ್ಯೆಯಂತಹ ಮಾಹಿತಿ ನೀಡಬೇಕು.
  • ನಂತರ ನಿಮ್ಮ ನೆಟ್‌ವರ್ಕ್ ಪಾಲುದಾರರಿಂದ ಫೋನ್‌ಗೆ ಎಷ್ಟು ಬೆಲೆ ಎಂಬ ಮಾಹಿತಿ ಕಾಣಿಸುತ್ತದೆ.
  • ಅಲ್ಲಿ ನೀಡಿರುವ ಬೆಲೆ ನಿಮಗೆ ಒಪ್ಪಿಗೆ ಇದ್ದಲ್ಲಿ 1 ರೂ. ಪಾವತಿಸಿ. ಬಳಿಕ ಮನೆ ಬಾಗಿಲಿಗೆ ಬಂದು ಪಿಕ್ ಅಪ್ ಮಾಡುತ್ತಾರೆ.
  • ಈ ಆರ್ಡರ್ ಖಚಿತವಾಯಿತು ಎಂದಾದರೆ 48 ಗಂಟೆಗಳ ಒಳಗೆ ಮೊಬೈಲ್ ಪಡೆದುಕೊಳ್ಳಲು ನಿಮ್ಮ ಮನೆಗೆ ಬರುತ್ತಾರೆ.
  • ನಿಮ್ಮ ಮೊಬೈಲ್ ಕಂಪನಿಯವರು ಮನೆಗೆ ಬಂದು ಮೊಬೈಲ್ ಪರಿಶೀಲಿಸಿ ಅಂತಿಮ ಬೆಲೆಯನ್ನು ಹೇಳುತ್ತಾರೆ. ಈ ಬೆಲೆ ನಿಮಗೆ ಇಷ್ಟವಾದರೆ ಮುಂದುವರೆಸಬಹುದು.
  • ನೀವು ಮುಂದುವರೆಸಿದರೆ 24 ಗಂಟೆಗಳ ಒಳಗೆ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುತ್ತದೆ. ಆರ್ಡರ್ ರದ್ದುಗೊಳಿಸಿದರೆ 1 ರೂ. ಅನ್ನು ನಿಮಗೆ ಪುನಃ ನೀಡಲಾಗುತ್ತದೆ.

ಹಳೆಯ ಫೋನ್ ಸೇಲ್ ಮಾಡುವ ಮುನ್ನ ಈ ಕೆಲಸ ಮಾಡಿ:

ನಿಮ್ಮ ಹಳೆಯ ಫೋನನ್ನು ಮಾರಾಟ ಮಾಡುವ ಮುನ್ನ ಅದರಲ್ಲಿರುವ ಅಕೌಂಟ್ಸ್, ಫೈಲ್ಸ್, ಫೋಟೋಗಳನೆಲ್ಲಾ ಬ್ಯಾಕಪ್ ಮಾಡಿಕೊಳ್ಳಿ. ಅದಕ್ಕಾಗಿ ಗೂಗಲ್​ನಲ್ಲಿ ದೊರೆಯುವ ಒನ್​ಡ್ರೈವ್ ಆ್ಯಪ್ ಬಳಕೆ ಮಾಡಬಹುದು. ಅಂತೆಯೇ, ಟ್ವಿಟ್ಟರ್, ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್, ಫೋನ್ ಪೇ, ಗೂಗಲ್ ಪೇ ಸೇರಿದಂತೆ ನೀವು ಲಾಗಿನ್ ಆಗಿರುವ ಆಕೌಂಟ್​ನಿಂದ ಲಾಗ್ ಜೌಟ್ ಆಗಿದ್ದೀರಾ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ. ಇಲ್ಲವಾದಲ್ಲಿ ನೀವು ಫೋನು ಮಾರಾಟ ಮಾಡುವ ಮುನ್ನ ರಿಸೆಟ್ ಮಾಡುವುದು ಉತ್ತಮ ಆಯ್ಕೆ.

Published On - 12:11 pm, Mon, 17 October 22

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್