Forex Reserves: ಭಾರತದ ಫಾರೆಕ್ಸ್ ರಿಸರ್ವ್ಸ್ 37,000 ಕೋಟಿ ರೂನಷ್ಟು ಏರಿಕೆ; ಈಗೆಷ್ಟಿದೆ ಮೀಸಲು ನಿಧಿ?

Foreign Exchange Reserves Rose To 588.78 Billion Dollar: 2023 ಏಪ್ರಿಲ್ 28ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ 4.532 ಬಿಲಿಯನ್ ಡಾಲರ್​ಷ್ಟು ಏರಿ 588.78 ಬಿಲಿಯನ್ ಡಾಲರ್ ಮೊತ್ತ ಮುಟ್ಟಿದೆ. ಏಪ್ರಿಲ್ 21ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 2.16 ಬಿಲಿಯನ್ ಡಾಲರ್​ನಷ್ಟು ಇಳಿಕೆಯಾಗಿತ್ತು.

Forex Reserves: ಭಾರತದ ಫಾರೆಕ್ಸ್ ರಿಸರ್ವ್ಸ್ 37,000 ಕೋಟಿ ರೂನಷ್ಟು ಏರಿಕೆ; ಈಗೆಷ್ಟಿದೆ ಮೀಸಲು ನಿಧಿ?
ಫಾರೆಕ್ಸ್ ರಿಸರ್ವ್ಸ್ ನಿಧಿ
Follow us
|

Updated on: May 07, 2023 | 11:01 AM

ನವದೆಹಲಿ: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಏಪ್ರಿಲ್ 28ರ ವಾರದಲ್ಲಿ 4.532 ಬಿಲಿಯನ್ ಡಾಲರ್​ನಷ್ಟು (ಸುಮಾರು 30,000 ಕೋಟಿ ರೂ) ಏರಿಕೆ ಆಗಿದೆ. ನಿನ್ನೆ ಶನಿವಾರ ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಏಪ್ರಿಲ್ 28ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಒಟ್ಟು ಫಾರೆಕ್ಸ್ ರಿಸರ್ವ್ಸ್ ಮೊತ್ತ 588.780 ಬಿಲಿಯನ್ ಡಾಲರ್​ನಷ್ಟಿದೆ. ಅಂದರೆ 48.1 ಲಕ್ಷ ಕೋಟಿ ರುಪಾಯಿಯಷ್ಟು ಮೊತ್ತದ ಮೀಸಲು ನಿಧಿ ಭಾರತದ ಬಳಿ ಇದೆ. ಇದು ಕಳೆದ 10 ತಿಂಗಳಲ್ಲೇ ಗರಿಷ್ಠ ಫಾರೆಕ್ಸ್ ರಿಸರ್ವ್ಸ್ ಮೊತ್ತವಾಗಿದೆ.

ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ ಅತ್ಯಂತ ಪ್ರಮುಖ ಭಾಗವಾಗಿರುವುದು ವಿದೇಶೀ ಕರೆನ್ಸಿ ಆಸ್ತಿ. ಇದು 4.996 ಬಿಲಿಯನ್ ಡಾಲರ್​ನಷ್ಟು ಏರಿದೆ. ಈಗ ಈ ಆಸ್ತಿಯ ಮೊತ್ತ ಒಟ್ಟು 519.485 ಡಾಲರ್ ಆಗಿದೆ. ಅಂದರೆ ಸುಮಾರು 42.4 ಲಕ್ಷ ಕೋಟಿ ರೂನಷ್ಟು ವಿದೇಶೀ ಕರೆನ್ಸಿ ಆಸ್ತಿ ಸಂಗ್ರಹ ಇದೆ. ಆದರೆ, ಫಾರೆಕ್ಸ್ ರಿಸರ್ವ್ಸ್​ನ ಮತ್ತೊಂದು ಭಾಗವಾಗಿರುವ ಗೋಲ್ಡ್ ರಿಸರ್ವ್ಸ್ ಏಪ್ರಿಲ್ 28ರಂದು ಅಂತ್ಯಗೊಂಡ ವಾರದಲ್ಲಿ 494 ಮಿಲಿಯನ್ ಡಾಲರ್​ನಷ್ಟು ಕುಸಿತ ಕಂಡಿರುವುದು ಆರ್​ಬಿಐ ದತ್ತಾಂಶದಿಂದ ಗೊತ್ತಾಗುತ್ತದೆ. 494 ಮಿಲಿಯನ್ ಡಾಲರ್ ಎಂದರೆ ಸುಮಾರು 403 ಕೋಟಿ ರೂ. ಈಗ ಭಾರತದಲ್ಲಿ ಫಾರೆಕ್ಸ್ ರಿಸರ್ವ್ಸ್​ನಲ್ಲಿರುವ ಚಿನ್ನದ ಮೀಸಲು 45.657 ಬಿಲಿಯನ್ ಡಾಲರ್ (ಸುಮಾರು 3.73 ಲಕ್ಷ ಕೋಟಿ ರೂ) ಮೊತ್ತಕ್ಕೆ ಇಳಿದಿದೆ.

ಇದನ್ನೂ ಓದಿEPFO: ನಿವೃತ್ತಿಯ ನಂತರ ಮಾಸಿಕ ಪಿಂಚಣಿಯಾಗಿ 15,670 ರೂ. ಪಡೆಯುವುದು ಹೇಗೆ?

2021ರ ಅಕ್ಟೋಬರ್​ನಲ್ಲಿ ಗರಿಷ್ಠ ಫಾರೆಕ್ಸ್ ರಿಸರ್ವಸ್ ಹೊಂದಿದ್ದ ಭಾರತ

2021ರ ಅಕ್ಟೋಬರ್ ತಿಂಗಳ ಒಂದು ವಾರದಲ್ಲಿ ಭಾರತದ ವಿದೇಶ ವಿನಿಯಮ ಮೀಸಲು ನಿಧಿ 645 ಬಿಲಿಯನ್ ಡಾಲರ್ (ಸುಮಾರು 52.7 ಲಕ್ಷ ಕೋಟಿ ರೂ) ಮೊತ್ತಕ್ಕೆ ಏರಿತ್ತು. ಅದು ಭಾರತದ ಫಾರೆಕ್ಸ್ ಮಾರುಕಟ್ಟೆಯಲ್ಲಿ ಕಂಡ ಅತಿಹೆಚ್ಚು ಸಂಗ್ರಹ. ಅದಾದ ಬಳಿಕ ಮೀಸಲು ನಿಧಿ ಬಹುತೇಕ ನಿರಂತರವಾಗಿ ಕುಸಿಯುತ್ತಲೇ ಬಂದಿದೆ.

ಇದೇ ಏಪ್ರಿಲ್ 14ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 1.657 ಮಿಲಿಯನ್ ಡಾಲರ್​ನಷ್ಟು ಏರಿತ್ತು. ಏಪ್ರಿಲ್ 21ರಂದು ಅಂತ್ಯಗೊಂಡ ವಾರದಲ್ಲಿ 2.16 ಬಿಲಿಯನ್ ಡಾಲರ್​ಷ್ಟು ಇಳಿಕೆ ಕಂಡಿತ್ತು. ಅದರ ಮುಂದಿನ ವಾರದ, ಅಂದರೆ ಏಪ್ರಿಲ್ 28ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿದಿ 4.532 ಬಿಲಿಯನ್ ಡಾಲರ್​ನಷ್ಟು ಏರಿಕೆ ಕಂಡಿದೆ.

ಇದನ್ನೂ ಓದಿChina vs India: ಇತ್ತ ಭಾರತದಲ್ಲಿ ಚಿನ್ನ ಮಾರಾಟ ಕಡಿಮೆ; ಅತ್ತ ಚೀನಾದಲ್ಲಿ ದಿಢೀರ್ ಗೋಲ್ಡ್ ಸೇಲ್ ಹೆಚ್ಚಿದ್ದು ಯಾಕೆ?

2021ರ ಅಕ್ಟೋಬರ್​ನಿಂದೀಚೆ ಫಾರೆಕ್ಸ್ ರಿಸರ್ವ್ಸ್ ನಿಧಿ ಯಾಕೆ ಕುಸಿಯುತ್ತಿದೆ?

2021ರ ಅಕ್ಟೋಬರ್​ನಲ್ಲಿ ಸಖತ್ ಫಾರೆಕ್ಸ್ ರಿಸರ್ವ್ಸ್ ಹೊಂದಿದ್ದ ಭಾರತ ಆ ಬಳಿಕ ನಿರಂತರವಾಗಿ ಇಳಿಕೆ ಕಾಣಲು ಕಾರಣವಾಗಿದ್ದು ಬಹುತೇಕ ಡಾಲರ್ ಎಫೆಕ್ಟ್. ಡಾಲರ್ ಎದುರು ರೂಪಾಯಿ ಮೌಲ್ಯ ತೀರಾ ಕುಸಿಯುವುದನ್ನು ನಿಯಂತ್ರಿಸಲು ಆರ್​ಬಿಐ ಒಂದಷ್ಟು ಡಾಲರ್​ಗಳನ್ನು ಮಾರುವುದು ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಲ್ಲದಿದ್ದರೆ ಡಾಲರ್ ಎದುರು ರೂಪಾಯಿ ಮೌಲ್ಯ ಇಷ್ಟರಲ್ಲಾಗಲೇ 90 ರೂ ದಾಟಿ ಹೋಗುತ್ತಿತ್ತು. ಈ ಕಾರಣಕ್ಕೆ ಒಂದು ದೇಶಕ್ಕೆ ಫಾರೆಕ್ಸ್ ಮೀಸಲು ನಿಧಿ ಉತ್ತಮ ಸ್ಥಿತಿಯಲ್ಲಿರುವುದು ಬಹಳ ಮುಖ್ಯ. ಇದು ಆರ್ಥಿಕ ಆಪತ್ಪಾಲಕ್ಕೆ ಸಹಾಯಕ್ಕೆ ಬರುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ