AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮೆಗಾ ಕ್ಯಾಬ್ಸ್ ವತಿಯಿಂದ ಚಾಲಕರಿಗೆ ಉಚಿತ ತರಬೇತಿ ಕಾರ್ಯಾಗಾರ ಹಾಗೂ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ

omega cabs: ಒಮೆಗಾ omega cabs ವತಿಯಿಂದ ಚಾಲಕರಿಗೆ ಉಚಿತ ತರಬೇತಿ ಕಾರ್ಯಾಗಾರ ಮತ್ತು ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಕ್ಯಾಬ್ ಚಾಲಕರಿಗೆ ಶಿಸ್ತು, ಸಂಯಮ, ಸ್ವಚ್ಛತೆ, ಸಮಯಪಾಲನೆ, ವೃತ್ತಿಪರತೆಯ ಬಗ್ಗೆ ನಿದರ್ಶನ ಸಹಿತವಾಗಿ ವಿವರಿಸಲಾಯಿತು. ತರಬೇತಿ ಕಾರ್ಯಾಗಾರದ ನಂತರ 2023 ಸಾಲಿನ ಎಸ್​​ಎಸ್ಎಲ್​​​ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.80 ಕ್ಕೂ ಹೆಚ್ಚಿನ ಅಂಕ ಪಡೆದ ಆಯ್ದ ಕ್ಯಾಬ್ ಚಾಲಕರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ವಿದ್ಯಾರ್ಥಿವೇತನ ಪಡೆದವರಲ್ಲಿ ಪಿಯುಸಿ, ಡಿಗ್ರಿ, ಇoಜಿನಿಯರಿoಗ್, ಮೆಡಿಕಲ್(ಎಮ್.ಬಿ.ಬಿ.ಎಸ್ ) ಓದುತ್ತಿರುವ ವಿದ್ಯಾರ್ಥಿಗಳಿದ್ದಾರೆ.

ಒಮೆಗಾ ಕ್ಯಾಬ್ಸ್ ವತಿಯಿಂದ ಚಾಲಕರಿಗೆ ಉಚಿತ ತರಬೇತಿ ಕಾರ್ಯಾಗಾರ ಹಾಗೂ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ
ಒಮೆಗಾ ಕಂಪನಿಯಿಂದ ಚಾಲಕರಿಗೆ ಉಚಿತ ತರಬೇತಿ ಕಾರ್ಯಾಗಾರ ಹಾಗೂ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ
TV9 Web
| Edited By: |

Updated on:Oct 21, 2024 | 12:19 PM

Share

ಸುರಕ್ಷತಾ ದೃಷ್ಟಿಯಿಂದ ವಾಹನ ಚಾಲನೆ ಸಮಯದಲ್ಲಿ ಸಂಚಾರಿ ನಿಯಮ ಪಾಲಿಸುವುದು ಮತ್ತು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಎಚ್ಚರವಹಿಸುವುದರ ಬಗ್ಗೆ ಸವಿವರವಾದ ಕಾರ್ಯಾಗಾರ ಬೆಂಗಳೂರಿನ ಹಲಸೂರಿನಲ್ಲಿ ನಡೆಸಲಾಯಿತು. ಕಾರ್ಪೋರೇಟ್ ಸಂಸ್ಥೆಗಳಿಗೆ ಕ್ಯಾಬ್ ಸೇವೆ ಒದಗಿಸುತ್ತಿರುವ ಒಮೆಗಾ ಕ್ಯಾಬ್ಸ್ ಸಂಸ್ಥೆ (omega cabs) ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನುರಿತ, ವೃತ್ತಿಪರ ತರಬೇತುದಾರರಿಂದ ಕ್ಯಾಬ್ ಚಾಲಕರಿಗೆ ತರಬೇತಿ ನೀಡಿ ಚಾಲಕರ ಜೊತೆ ಸಂವಾದ, ಚರ್ಚೆಯನ್ನು ನಡೆಸಲಾಯಿತು. ಕ್ಯಾಬ್ ಚಾಲಕರಿಗೆ ಶಿಸ್ತು, ಸಂಯಮ, ಸ್ವಚ್ಛತೆ, ಸಮಯಪಾಲನೆ, ವೃತ್ತಿಪರತೆಯ ಬಗ್ಗೆ ನಿದರ್ಶನ ಸಹಿತವಾಗಿ ವಿವರಿಸಲಾಯಿತು.

ವೃತ್ತಿಪರ ಚಾಲಕರ ಕರ್ತವ್ಯಗಳು, ಜವಾಬ್ದಾರಿಗಳು, ನಡುವಳಿಕೆ, ಶುಚಿತ್ವ, ಶುಭ್ರತೆ, ವಿನಮ್ರತೆ, ಸುರಕ್ಷತಾ ಚಾಲನೆ, ರಸ್ತೆ ನಿಯಮ ಪಾಲನೆ, ವೇಗಮಿತಿ, ಮುoಜಾಗ್ರತೆ ಕ್ರಮಗಳು, ವಾಹನದ ನಿರ್ವಹಣೆ, ವಾಹನದ ದಾಖಲೆಗಳು ಇನ್ನಿತರ ಹತ್ತು ಹಲವು ವಿಚಾರಗಳನ್ನೊಳಗೊoಡ ತರಬೇತಿ ಕಾರ್ಯಕ್ರಮಕ್ಕೆ ಚಾಲಕರಿoದ ಉತ್ತಮ ಸ್ಪಂದನೆ ದೊರೆಯಿತು.

ತರಬೇತಿ ಕಾರ್ಯಾಗಾರದ ನಂತರ 2023 ಸಾಲಿನ ಎಸ್​​ಎಸ್ಎಲ್​​​ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.80 ಕ್ಕೂ ಹೆಚ್ಚಿನ ಅಂಕ ಪಡೆದ ಆಯ್ದ ಕ್ಯಾಬ್ ಚಾಲಕರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ವಿದ್ಯಾರ್ಥಿವೇತನ ಪಡೆದವರಲ್ಲಿ ಪಿಯುಸಿ, ಡಿಗ್ರಿ, ಇoಜಿನಿಯರಿಂಗ್, ಮೆಡಿಕಲ್ (ಎಮ್.ಬಿ.ಬಿ.ಎಸ್ ) ಓದುತ್ತಿರುವ ವಿದ್ಯಾರ್ಥಿಗಳಿದ್ದಾರೆ.  ಕಾರ್ಪೋರೇಟ್ ಸoಸ್ಥೆಗಳಿಗೆ ಕ್ಯಾಬ್ ಸೇವೆ ಒದಗಿಸುತ್ತಿರುವ ಒಮೆಗಾ ಕ್ಯಾಬ್ಸ್ ಸಂಸ್ಥೆ ಉತ್ತಮ ಅಂಕ ಪಡೆದ ಚಾಲಕರ ಮಕ್ಕಳನ್ನು ಗುರುತಿಸುವ, ಉತ್ತೇಜಿಸುವ ಆಯ್ದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುವ ಸದುದ್ದೇಶದಿoದ ಸ್ವತಂತ್ರವಾಗಿ ಸ್ವಯಂಪ್ರೇರಿತವಾಗಿ ಈ ಯೋಜನೆಯನ್ನು ಹಮ್ಮಿಕೊಂಡಿದೆ.

ಇದನ್ನೂ ಓದಿ: ರಾಮ್​ರಾಜ್ ಕಾಟನ್​ಗೆ ಹೊಸ ಪರಿಚಯ ರಿಷಬ್ ಶೆಟ್ಟಿ

ಈ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಯೆಲ್ಲೊ ಬೋರ್ಡ್ ಕ್ಯಾಬ್ ಚಾಲನೆ ಮಾಡುತ್ತಿರುವ ಚಾಲಕರ ಮಕ್ಕಳು ಸೌಲಭ್ಯದ ಪ್ರಯೋಜನ ಪಡೆದರು. ನಿರಂಜನ್ ಅವರು ತರಬೇತಿ ಸಮಯದಲ್ಲಿ ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಕ್ಯಾಬ್ ಚಾಲಕರು, ವಿದ್ಯಾರ್ಥಿವೇತನ ಫಲಾನುಭವಿಗಳು, ಅನುಭವಿ ತರಬೇತುದಾರರು, ಒಮೆಗಾ ಕ್ಯಾಬ್ಸ್ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

Published On - 12:14 pm, Sat, 10 February 24

Follow Us
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು