AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price on 27th January: ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಇಳಿಕೆ

Bullion Market 2024 January 27th: ವಾರಾಂತ್ಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸೋಮವಾರ ಇಳಿಕೆ ಆಗಿವೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 8,225 ರೂ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 7,540 ರೂ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆ 6,169 ರೂ ಆಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 1 ರೂ ಕಡಿಮೆ ಆಗಿದೆ. ಬೆಂಗಳೂರು ಮೊದಲಾದೆಡೆ ಬೆಲೆ 96.50 ರೂ ಆಗಿದೆ. ಚೆನ್ನೈ ಮೊದಲಾದೆಡೆ 104 ರೂಗೆ ಇಳಿಕೆ ಆಗಿದೆ.

Gold Silver Price on 27th January: ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಇಳಿಕೆ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 27, 2025 | 10:23 AM

Share

ಬೆಂಗಳೂರು, ಜನವರಿ 27: ಚಿನ್ನದ ಬೆಲೆ ಇಳಿಕೆಯೊಂದಿಗೆ ಈ ವಾರದ ಆರಂಭವಾಗಿದೆ. ಬೆಳ್ಳಿ ಬೆಲೆಯೂ ಇಳಿಕೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 15 ರೂನಷ್ಟು ಕಡಿಮೆ ಆಗಿದೆ. 7,555 ರೂ ಇದ್ದ ಅದರ ಬೆಲೆ 7,540 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆಯೂ 8,225 ರೂಗೆ ಇಳಿದಿದೆ. ವಿದೇಶಗಳ ಮಾರುಕಟ್ಟೆಗಳಲ್ಲಿ ಬಹುತೇಕ ಕಡೆ ಚಿನ್ನದ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಭಾರತದಲ್ಲಿ ಮಾತ್ರ ಸೋಮವಾರ ತುಸು ಬದಲಾವಣೆ ಆಗಿದೆ. ಬೆಳ್ಳಿ ಬೆಲೆ ಜನವರಿ 14ರ ಬಳಿಕ ಮೊದಲ ಬಾರಿ ಇಳಿಕೆ ಆಗಿದೆ. ಸೋಮವಾರ ಗ್ರಾಮ್​ಗೆ ಒಂದು ರೂ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ 97.50 ರೂ ಇದ್ದ ಬೆಳ್ಳಿ ಬೆಲೆ 96.50 ರೂಗೆ ಕುಸಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 75,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 82,250 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,650 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 75,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,650 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 27ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 75,400 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 82,250 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,690 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 965 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 75,400 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 82,250 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 965 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 75,400 ರೂ
  • ಚೆನ್ನೈ: 75,400 ರೂ
  • ಮುಂಬೈ: 75,400 ರೂ
  • ದೆಹಲಿ: 75,550 ರೂ
  • ಕೋಲ್ಕತಾ: 75,400 ರೂ
  • ಕೇರಳ: 75,400 ರೂ
  • ಅಹ್ಮದಾಬಾದ್: 75,450 ರೂ
  • ಜೈಪುರ್: 75,550 ರೂ
  • ಲಕ್ನೋ: 75,550 ರೂ
  • ಭುವನೇಶ್ವರ್: 75,400 ರೂ

ಇದನ್ನೂ ಓದಿ: ಜನವರಿಯಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಭರ್ಜರಿ ಎಕ್ಸ್​ಪೋರ್ಟ್ ಆರ್ಡರ್; ಹಣದುಬ್ಬರ ಶೇ. 4.2ಕ್ಕೆ ಇಳಿಯುವ ಸಾಧ್ಯತೆ: ಎಚ್ಎಸ್​ಬಿಸಿ ವರದಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,630 ರಿಂಗಿಟ್ (71,700 ರುಪಾಯಿ)
  • ದುಬೈ: 3,107.50 ಡಿರಾಮ್ (73,070 ರುಪಾಯಿ)
  • ಅಮೆರಿಕ: 780 ಡಾಲರ್ (67,380 ರುಪಾಯಿ)
  • ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (69,590 ರುಪಾಯಿ)
  • ಕತಾರ್: 3,135 ಕತಾರಿ ರಿಯಾಲ್ (74,290 ರೂ)
  • ಸೌದಿ ಅರೇಬಿಯಾ: 3,170 ಸೌದಿ ರಿಯಾಲ್ (73,000 ರುಪಾಯಿ)
  • ಓಮನ್: 330 ಒಮಾನಿ ರಿಯಾಲ್ (74,050 ರುಪಾಯಿ)
  • ಕುವೇತ್: 254 ಕುವೇತಿ ದಿನಾರ್ (71,200 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,650 ರೂ
  • ಚೆನ್ನೈ: 10,400 ರೂ
  • ಮುಂಬೈ: 9,650 ರೂ
  • ದೆಹಲಿ: 9,650 ರೂ
  • ಕೋಲ್ಕತಾ: 9,650 ರೂ
  • ಕೇರಳ: 10,400 ರೂ
  • ಅಹ್ಮದಾಬಾದ್: 9,650 ರೂ
  • ಜೈಪುರ್: 9,650 ರೂ
  • ಲಕ್ನೋ: 9,650 ರೂ
  • ಭುವನೇಶ್ವರ್: 10,400 ರೂ
  • ಪುಣೆ: 9,650

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ