AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನವರಿಯಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಭರ್ಜರಿ ಎಕ್ಸ್​ಪೋರ್ಟ್ ಆರ್ಡರ್; ಹಣದುಬ್ಬರ ಶೇ. 4.2ಕ್ಕೆ ಇಳಿಯುವ ಸಾಧ್ಯತೆ: ಎಚ್ಎಸ್​ಬಿಸಿ ವರದಿ

Indian manufacturing sector: 2025ರ ಜನವರಿ ತಿಂಗಳಲ್ಲಿ ಭಾರತದ ಮ್ಯಾನುಫ್ಯಾಕ್ಚರಿಂಗ್ ವಲದಯ ಕಂಪನಿಗಳಿಗೆ ಉತ್ತಮ ಎಕ್ಸ್​ಪೋರ್ಟ್ ಬಿಸಿನೆಸ್ ಸಿಗುತ್ತಿದೆ. ಜಾಗತಿಕವಾಗಿ ಆಮದು ಸುಂಕಗಳ ಏರಿಕೆ ಸಾಧ್ಯತೆ ಇರುವುದರಿಂದ ಹೆಚ್ಚಿನ ಕಂಪನಿಗಳು ಸರಕುಗಳ ದಾಸ್ತಾನು ಮಾಡುತ್ತಿರಬಹುದು. ಇದರಿಂದ ಭಾರತೀಯ ಕಂಪನಿಗಳಿಗೆ ಉತ್ತಮ ಎಕ್ಸ್​ಪೋರ್ಟ್ ಆರ್ಡರ್​ಗಳು ಸಿಗುತ್ತಿವೆ ಎಂದು ಎಚ್​ಎಸ್​ಬಿಸಿ ಸಂಸ್ಥೆಯ ವರದಿಯೊಂದರಲ್ಲಿ ಹೇಳಲಾಗಿದೆ.

ಜನವರಿಯಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಭರ್ಜರಿ ಎಕ್ಸ್​ಪೋರ್ಟ್ ಆರ್ಡರ್; ಹಣದುಬ್ಬರ ಶೇ. 4.2ಕ್ಕೆ ಇಳಿಯುವ ಸಾಧ್ಯತೆ: ಎಚ್ಎಸ್​ಬಿಸಿ ವರದಿ
ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 26, 2025 | 7:27 PM

Share

ನವದೆಹಲಿ, ಜನವರಿ 26: ಭಾರತದ ಉತ್ಪಾದನಾ ವಲಯಕ್ಕೆ ಹೊಸ ವರ್ಷದಲ್ಲಿ ಶುಭಾರಂಭ ಸಿಕ್ಕಿದೆ. ಜನವರಿ ತಿಂಗಳಲ್ಲಿ ಈ ಕ್ಷೇತ್ರದ ಅಮೋಘವಾಗಿ ಬೆಳವಣಿಗೆ ಹೊಂದುತ್ತಿದೆ. ಎಚ್​ಎಸ್​ಬಿಸಿ ಫ್ಲ್ಯಾಷ್ ಪಿಎಂಐ ವರದಿ ಪ್ರಕಾರ ಭಾರತಕ್ಕೆ ಹೊಸ ರಫ್ತು ಡೀಲ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಿರುವುದು, ಮತ್ತು ಜಾಗತಿಕವಾಗಿ ಸರಕುಗಳ ಸಂಗ್ರಹಣೆ ಹೆಚ್ಚುತ್ತಿರುವುದು ಭಾರತದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ಗೆ ಪುಷ್ಟಿ ಕೊಟ್ಟಿದೆ ಎಂದು ಈ ವರದಿ ಹೇಳುತ್ತಿದೆ.

ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೈಮಾಸಿಕದಲ್ಲಿ 100 ಚಟುವಟಿಕೆಯ ಸೂಚಕಗಳನ್ನು ವಿಶ್ಲೇಷಿಸಲಾಗಿದೆ. ಈ ಪೈಕಿ ಶೇ. 65ರಷ್ಟು ಇಂಡಿಕೇಟರ್​ಗಳು ಸಕಾರಾತ್ಮಕವಾಗಿವೆ. ಹಿಂದಿನ ಕ್ವಾರ್ಟರ್​ನಲ್ಲಿ ಶೇ. 55ರಷ್ಟು ಆಕ್ಟಿವಿಟಿ ಇಂಡಿಕೇಟರ್​ಗಳು ಸಕಾರಾತ್ಮಕವಾಗಿದ್ದವು. ಡಿಸೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಹೆಚ್ಚು ಸಕಾರಾತ್ಮಕ ಅಂಶಗಳಿರುವುದನ್ನು ವರದಿಯಲ್ಲಿ ಗುರುತಿಸಲಾಗಿದೆ.

ಡಿಸೆಂಬರ್​ಗೆ ಹೋಲಿಸಿದರೆ ಜನವರಿ ತಿಂಗಳಲ್ಲಿ ಸರ್ವಿಸಸ್ ಪಿಎಂಐ ಸ್ವಲ್ಪ ಮಂದಗೊಂಡಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಸೆಕ್ಟರ್​ಗಳಲ್ಲಿ ಈ ಅಂತರ ಹೆಚ್ಚಳಕ್ಕೆ ಪ್ರಾಯಶಃ ತೆರಿಗೆ ಭಯ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಒಳ್ಳೆಯ ಬಿಸಿನೆಸ್ ಸಿಕ್ಕುತ್ತಿದೆ. ದೇಶೀಯವಾಗಿ ಸಿಗುತ್ತಿರುವ ಆರ್ಡರ್​ಗಳಿಗೆ ಹೋಲಿಸಿದರೆ ಹೊರದೇಶಗಳಿಂದ ಬರುತ್ತಿರುವ ಆರ್ಡರ್​ಗಳ ಪ್ರಮಾಣದಲ್ಲಿ ಹೆಚ್ಚು ಏರಿಕೆ ಆಗಿದೆ. ಅಮೆರಿಕದಲ್ಲಿ ಹಾಗೂ ಜಾಗತಿಕವಾಗಿ ಆಮದು ತೆರಿಗೆ ಹೆಚ್ಚಳ ಆಗುವ ಸಾಧ್ಯತೆ ಇರುವುದರಿಂದ ಹೆಚ್ಚೆಚ್ಚು ಕಂಪನಿಗಳು ಸರಕುಗಳ ದಾಸ್ತಾನು ಮಾಡುತ್ತಿರಬಹುದು. ಹೀಗಾಗಿ, ಭಾರತದ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಿಗೆ ಹೆಚ್ಚು ಎಕ್ಸ್​ಪೋರ್ಟ್ ಆರ್ಡರ್​ಗಳು ಬರುತ್ತಿವೆ ಎನ್ನಲಾಗಿದೆ.

ಇದನ್ನೂ ಓದಿ: 2019ರಲ್ಲಿ ಭಾರತದಲ್ಲಿ ಮಾರಾಟವಾದ ಕಾರುಗಳಲ್ಲಿ ಇವಿಗಳ ಸಂಖ್ಯೆ ಶೇ. 1; 2030ರಲ್ಲಿ ಶೇ. 30ಕ್ಕೇರುವ ನಿರೀಕ್ಷೆ: ವರದಿ

ಹಣದುಬ್ಬರ ಕಡಿಮೆ ಆಗುವ ನಿರೀಕ್ಷೆ…

ಭಾರತದಲ್ಲಿ ಸರ್ಕಾರಕ್ಕೆ ಮತ್ತು ಜನರಿಗೆ ತಲೆನೋವಾಗಿರುವ ಹಣದುಬ್ಬರ ದರ ಮುಂದಿನ ದಿನಗಳಲ್ಲಿ ಹೆಚ್ಚು ನಿಯಂತ್ರಣಕ್ಕೆ ಸಿಗಬಹುದು ಎಂದು ಎಚ್​ಎಸ್​ಬಿಸಿ ಸಂಸ್ಥೆಯ ಈ ವರದಿಯಲ್ಲಿ ಅಂದಾಜಿಸಲಾಗಿದೆ. ಜನವರಿಯಲ್ಲಿ ಹಣದುಬ್ಬರ ಶೇ. 4.2ಕ್ಕೆ ಇಳಿಯಬಹುದು ಎಂದು ಅದು ಅಂದಾಜು ಮಾಡಿದೆ. ಇದೇನಾದರೂ ಆದಲ್ಲಿ, ಆರ್​ಬಿಐ ತನ್ನ ದರಗಳನ್ನು ಇಳಿಸಲು ಮನಸು ಮಾಡಬಹುದು. ಎಚ್​ಎಸ್​ಬಿಸಿ ವರದಿ ಪ್ರಕಾರ ಫೆಬ್ರುವರಿ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆಯುವ ಆರ್​ಬಿಐ ಎಂಪಿಸಿ ಸಭೆಗಳಲ್ಲಿ ತಲಾ 25 ಮೂಲಾಂಕಗಳಷ್ಟು ರಿಪೋ ದರ ಕಡಿತ ಮಾಡಬಹುದು. ಸದ್ಯ ಶೇ. 6.50ರಷ್ಟಿರುವ ರಿಪೋ ದರ ಏಪ್ರಿಲ್ ತಿಂಗಳಲ್ಲಿ ಶೇ. 6ಕ್ಕೆ ಇಳಿಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ