AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮರ್ಷಿಯಲ್ ಅಡುಗೆ ಅನಿಲವಾಗಿ ಎಥನಾಲ್ ಬಳಕೆ? ಎಲ್​ಪಿಜಿ ಅವಲಂಬನೆ ತಗ್ಗಿಸಲು ಸರ್ಕಾರದಿಂದ ಹೊಸ ಮಾರ್ಗೋಪಾಯ

Govt thinks of using ethanol as commercial cooking gas: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಅನಿಲ ಪೂರೈಕೆಯಲ್ಲಿ ಅಡೆತಡೆ ಉಂಟಾಗಿದ್ದು, ಎಲ್‌ಪಿಜಿ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಹೋಟೆಲ್‌ಗಳು ಮತ್ತು ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಅವಲಂಬನೆಯನ್ನು ತಗ್ಗಿಸಲು ದೇಶೀಯವಾಗಿ ಉತ್ಪಾದನೆಯಾಗುವ ಎಥೆನಾಲ್ ಅನ್ನು ಬಳಸಲು ಉದ್ದೇಶಿಸಲಾಗಿದೆ.

ಕಮರ್ಷಿಯಲ್ ಅಡುಗೆ ಅನಿಲವಾಗಿ ಎಥನಾಲ್ ಬಳಕೆ? ಎಲ್​ಪಿಜಿ ಅವಲಂಬನೆ ತಗ್ಗಿಸಲು ಸರ್ಕಾರದಿಂದ ಹೊಸ ಮಾರ್ಗೋಪಾಯ
ಬಯೋಇಥನಾಲ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 17, 2026 | 6:42 PM

Share

ನವದೆಹಲಿ, ಏಪ್ರಿಲ್ 17: ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಎಲ್‌ಪಿಜಿ (LPG) ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಎದುರಿಸಲು ಭಾರತ ಸರ್ಕಾರವು ಒಂದು ಮಹತ್ವದ ಹೆಜ್ಜೆಯನ್ನು ಇರಿಸುತ್ತಿದೆ. ಕಮರ್ಷಿಯಲ್ ಗ್ಯಾಸ್ ಆಗಿ ಬಳಸಲು ಎಲ್​ಪಿಜಿ ಜೊತೆಗೆ ಮತ್ತೊಂದು ಪರ್ಯಾಯವಾದ ಇಂಧನದ ಬಳಕೆ ಕುರಿತು ಯೋಚಿಸಲಾಗುತ್ತಿದೆ. ವಾಣಿಜ್ಯ ಬಳಕೆಯ ಅಡುಗೆ ಇಂಧನವಾಗಿ ‘ಎಥೆನಾಲ್’ (Ethanol) ಬಳಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.

ಭಾರತದಲ್ಲಿ ಪೆಟ್ರೋಲ್‌ಗೆ ಶೇ. 20 ರಷ್ಟು ಎಥೆನಾಲ್ ಮಿಶ್ರಣ ಮಾಡಿದ ನಂತರವೂ, ಸುಮಾರು 1,000 ಕೋಟಿ ಲೀಟರ್‌ಗಳಷ್ಟು ಹೆಚ್ಚುವರಿ ಎಥೆನಾಲ್ ಲಭ್ಯವಿದೆ. ಇದನ್ನು ಅಡುಗೆ ಇಂಧನವಾಗಿ ಬಳಸಲು ಉದ್ಯಮ ಪ್ರತಿನಿಧಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಪೂರೈಕೆಯ ಕೊರತೆಯಿಂದಾಗಿ ಸರ್ಕಾರವು ಎಲ್‌ಪಿಜಿಯನ್ನು ಸದ್ಯಕ್ಕೆ ಮನೆ ಬಳಕೆಗೆ ಮೊದಲ ಆದ್ಯತೆಯಾಗಿ ನೀಡುತ್ತಿದೆ. ಹೀಗಾಗಿ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ವಿಮಾನ ನಿಲ್ದಾಣಗಳಂತಹ ದೊಡ್ಡ ಘಟಕಗಳಲ್ಲಿನ ವಾಣಿಜ್ಯ ಅಡುಗೆ ಮನೆಗಳಲ್ಲಿ ಎಥೆನಾಲ್ ಅನ್ನು ಎಲ್​ಪಿಜಿಗೆ ಪರ್ಯಾಯವಾಗಿ ಬಳಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಮೆರಿಕದ ನಿಷೇಧದ ನಡುವೆಯೂ ರಷ್ಯನ್ ತೈಲ ಖರೀದಿ ಮುಂದುವರಿಸಲಿರುವ ಭಾರತ

ಬೆಲೆ ಮತ್ತು ಗುಣಮಟ್ಟ

ಇಂಧನ ಮಟ್ಟದ ಎಥನಾಲ್ ಜೊತೆಗೆ ಹೈಡ್ರಸ್ ಅಥವಾ ಜಲಯುಕ್ತ ಎಥನಾಲ್ ಕೂಡ ಇದೆ. ಈ ಹೈಡ್ರಸ್ ಎಥನಾಲ್​ನಲ್ಲಿ ಶೇ. 95ರಷ್ಟು ಇಥನಾಲ್ ಹಾಗೂ ಸ್ವಲ್ಪ ನೀರು ಇರುತ್ತದೆ. ಆದರೆ, ಫುಯಲ್ ಗ್ರೇಡ್ ಎಥನಾಲ್​ಗಿಂತ ಈ ಹೈಡ್ರಸ್ ಎಥನಾಲ್ ಕಡಿಮೆ ಬೆಲೆ.

ವಾಣಿಜ್ಯ ಎಲ್‌ಪಿಜಿ ಬೆಲೆ ಕೆ.ಜಿ.ಗೆ ಸುಮಾರು 103 ರೂ. ಇದ್ದರೆ, ಹೈಡ್ರಸ್ ಎಥೆನಾಲ್ ಬೆಲೆ ಸುಮಾರು 70 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

ಎಲ್‌ಪಿಜಿಗೆ ಹೋಲಿಸಿದರೆ ಎಥೆನಾಲ್‌ನಲ್ಲಿ ಶಾಖದ ಸಾಮರ್ಥ್ಯ (Calorific value) ಸ್ವಲ್ಪ ಕಡಿಮೆ ಇರುತ್ತದೆ (LPG: 12,000 kcal/kg vs Ethanol: 7,100 kcal/kg). ಅಂದರೆ ಎಲ್‌ಪಿಜಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದ ಎಥೆನಾಲ್ ಬೇಕಾಗಬಹುದು, ಆದರೆ ಇದು ಪರಿಸರ ಸ್ನೇಹಿಯಾಗಿದೆ. ಈ ಹೈಡ್ರಸ್ ಎಥನಾಲ್ ಅನ್ನು ಸದ್ಯ ಆಲ್ಕೋಹಾಲ್ ಸ್ಟವ್ ಅಥವಾ ಬಯೋ ಇಥನಾಲ್ ಬರ್ನರ್​ಗಳಲ್ಲಿ ಬಳಸಲಾಗುತ್ತಿದೆ. ಇದರ ಪ್ರಮುಖ ಕೊರತೆ ಎಂದರೆ ಕಡಿಮೆ ಶಾಖ ಬಿಡುಗಡೆ ಮಾಡುವುದು. ಅಂದರೆ, ಅಡುಗೆ ಮಾಡಲು ಎಲ್​ಪಿಜಿಗಿಂತ ಹೆಚ್ಚು ಹೈಡ್ರಸ್ ಎಥನಾಲ್ ಅನ್ನು ವ್ಯಯಿಸಬೇಕಾಗುತ್ತದೆ.

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಎಥೆನಾಲ್ ಮೂಲ

ಭಾರತದಲ್ಲಿ ಎಥೆನಾಲ್ ಅನ್ನು ಮುಖ್ಯವಾಗಿ ಕಬ್ಬು, ಮೆಕ್ಕೆಜೋಳ ಮತ್ತು ನುಚ್ಚಕ್ಕಿಯಿಂದ (Broken Rice) ತಯಾರಿಸಲಾಗುತ್ತದೆ. ಇದನ್ನು ಅಡುಗೆಗೆ ಬಳಸುವುದರಿಂದ ದೇಶದ ರೈತರಿಗೂ ಹೆಚ್ಚಿನ ಲಾಭ ಸಿಗುವ ನಿರೀಕ್ಷೆಯಿದೆ.

ಮುಂಬರುವ ವಾರಗಳಲ್ಲಿ ಈ ಕುರಿತು ‘ಶ್ವೇತಪತ್ರ’ (White Paper) ವನ್ನು ಅಂತರ-ಸಚಿವಾಲಯ ಸಮಿತಿಗೆ ಸಲ್ಲಿಸಲಾಗುವುದು. ತಾಂತ್ರಿಕ ಸುರಕ್ಷತೆ ಮತ್ತು ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಕಾಟ ಇಲ್ಲ : ರಾಹುಲ್ ಗಾಂಧಿ
ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಕಾಟ ಇಲ್ಲ : ರಾಹುಲ್ ಗಾಂಧಿ
ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತು ಕುಳಿತ ಚಿರತೆ; ಹೌಹಾರಿದ ಕುಟುಂಬಸ್ಥರು!
ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತು ಕುಳಿತ ಚಿರತೆ; ಹೌಹಾರಿದ ಕುಟುಂಬಸ್ಥರು!