AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಫಾರೆಕ್ಸ್ ರಿಸರ್ವ್ಸ್ ಸತತ 3 ವಾರ ಏರಿಕೆ; ಒಟ್ಟು ರಿಸರ್ವ್ಸ್ 703 ಬಿಲಿಯನ್ ಡಾಲರ್

India's forex reserves crosses 703 billion USD: ಏಪ್ರಿಲ್ 17ಕ್ಕೆ ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 2.362 ಬಿಲಿಯನ್ ಡಾಲರ್​ನಷ್ಟು ಏರಿದೆ. ಇದರೊಂದಿಗೆ ಒಟ್ಟು ವಿದೇಶೀ ವಿನಿಮಯ ಮೀಸಲು ನಿಧಿ 703 ಬಿಲಿಯನ್ ಡಾಲರ್ ದಾಟಿದೆ. ವಿದೇಶೀ ಕರೆನ್ಸಿ ಆಸ್ತಿ, ಚಿನ್ನ ಸೇರಿದಂತೆ ಫಾರೆಕ್ಸ್​ನ ಎಲ್ಲಾ ಭಾಗಗಳಲ್ಲೂ ಹೆಚ್ಚಳ ಆಗಿದೆ.

ಭಾರತದ ಫಾರೆಕ್ಸ್ ರಿಸರ್ವ್ಸ್ ಸತತ 3 ವಾರ ಏರಿಕೆ; ಒಟ್ಟು ರಿಸರ್ವ್ಸ್ 703 ಬಿಲಿಯನ್ ಡಾಲರ್
ಫಾರೆಕ್ಸ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 26, 2026 | 11:53 AM

Share

ನವದೆಹಲಿ, ಏಪ್ರಿಲ್ 26: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಏಪ್ರಿಲ್ 17ಕ್ಕೆ 703.308 ಬಿಲಿಯನ್ ಡಾಲರ್ ಮುಟ್ಟಿದೆ. ಆ ಒಂದು ವಾರದಲ್ಲಿ ಮೀಸಲು ನಿಧಿಯಲ್ಲಿ 2.362 ಬಿಲಿಯನ್ ಡಾಲರ್​ನಷ್ಟು ಏರಿದೆ. ಸತತ ಮೂರನೇ ವಾರ ಫಾರೆಕ್ಸ್ ಹೆಚ್ಚಳ ಆಗಿರುವುದು. ಹಿಂದಿನ ವಾರದಲ್ಲಿ (ಏಪ್ರಿಲ್ 10) ಫಾರೆಕ್ಸ್ ರಿಸರ್ವ್ಸ್ 3.825 ಬಿಲಿಯನ್ ಡಾಲರ್ ಏರಿಕೆ ಆಗಿ 700.946 ಬಿಲಿಯನ್ ಡಾಲರ್​ನಷ್ಟು ಇತ್ತು.

ಚಿನ್ನದ ಸಂಗ್ರಹ ಹೆಚ್ಚಳ

ಭಾರತದ ಫಾರೆಕ್ಸ್ ರಿಸರ್ವ್ಸ್​ನಲ್ಲಿ ಎರಡನೇ ಅತಿದೊಡ್ಡ ಪಾಲು ಹೊಂದಿರುವ ಚಿನ್ನದ ಸಂಗ್ರಹ ಈ ವಾರ (ಏಪ್ರಿಲ್ 17) ಪ್ರಮುಖವಾಗಿ ಏರಿದೆ. 790 ಮಿಲಿಯನ್ ಡಾಲರ್​ಗಳಷ್ಟು ಏರಿದೆ. ಭಾರತ ಮಾತ್ರವಲ್ಲ, ಹಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಸತತವಾಗಿ ಚಿನ್ನದ ಖರೀದಿ ಮಾಡುವುದು ಮುಂದುವರಿದಿದೆ.

ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಲೈಸೆನ್ಸ್ ರದ್ದು ಮಾಡಿದ ಆರ್​ಬಿಐ; ಪೇಟಿಎಂ ಗ್ರಾಹಕರಿಗೆ ತೊಂದರೆಯಾ?

ಫಾರೆಕ್ಸ್ ಮೀಸಲು ನಿಧಿಯಲ್ಲಿ ಪ್ರಮುಖ ಭಾಗವಾಗಿರುವ ವಿದೇಶೀ ಕರೆನ್ಸಿ ಆಸ್ತಿ ಗಣನೀಯವಾಗಿ ಏರಿದೆ. 1.481 ಬಿಲಿಯನ್ ಡಾಲರ್​ಗಳಷ್ಟು ಹೆಚ್ಚಳಗೊಂಡು 557 ಬಿಲಿಯನ್ ಡಾಲರ್ ಮಟ್ಟ ದಾಟಿದೆ.

ಏಪ್ರಿಲ್ 17ರ ವಾರದಲ್ಲಿ ಏರಿಕೆಯಾದ ಫಾರೆಕ್ಸ್ ನಿಧಿ

ಒಟ್ಟೂ ಏರಿಕೆ 2.362 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಅಸೆಟ್ (ಎಫ್​ಸಿಎ): 1.481 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 790 ಮಿಲಿಯನ್ ಡಾಲರ್
  • ಎಸ್​ಡಿಆರ್: 78 ಬಿಲಿಯನ್ ಡಾಲರ್ ಏರಿಕೆ
  • ಐಎಂಎಫ್​ನಲ್ಲಿರುವ ರಿಸರ್ವ್ಸ್: 14 ಮಿಲಿಯನ್ ಡಾಲರ್

ಭಾರತದ ಒಟ್ಟು ಫಾರೆಕ್ಸ್ ರಿಸರ್ವ್ಸ್ (ಏ. 17ಕ್ಕೆ)

ಒಟ್ಟು ರಿಸರ್ವ್ಸ್: 703.308 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ: 557.463 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 122.133 ಬಿಲಿಯನ್ ಡಾಲರ್
  • ಎಸ್​ಡಿಆರ್: 18.841 ಬಿಲಿಯನ್ ಡಾಲರ್
  • ಐಎಂಎಫ್​ನಲ್ಲಿ ರಿಸರ್ವ್ಸ್: 4.87 ಬಿಲಿಯನ್ ಡಾಲರ್

ಇದನ್ನೂ ಓದಿ: ರುಪಾಯಿ ಮೌಲ್ಯ ಕುಸಿತ; ಆತಂಕ ಪಡಬೇಕಿಲ್ಲ; ದೀರ್ಘಾವಧಿ ಹೂಡಿಕೆಗೆ ಒಳ್ಳೆಯ ಅವಕಾಶ: ಸಿಇಎ ಅನಂತನಾಗೇಶ್ವರನ್

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳಿವು

  1. ಚೀನಾ: 3.64 ಟ್ರಿಲಿಯನ್ ಡಾಲರ್
  2. ಜಪಾನ್: 1.39 ಟ್ರಿಲಿಯನ್ ಡಾಲರ್
  3. ಸ್ವಿಟ್ಜರ್​ಲ್ಯಾಂಡ್: 1.077 ಟ್ರಿಲಿಯನ್ ಡಾಲರ್
  4. ರಷ್ಯಾ: 755 ಬಿಲಿಯನ್ ಡಾಲರ್
  5. ಭಾರತ: 703 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?