4 Day Work Week: ಜಪಾನ್ ಸರ್ಕಾರ ಸೂಚಿಸಿತು ವಾರದಲ್ಲಿ ನಾಲ್ಕೇ ದಿನದ ಕೆಲಸ; ಇನ್ನಾದರೂ ನಿಲ್ಲುತ್ತಾ ಕರೋಶಿ?

4 Day Work Week: ಜಪಾನ್ ಸರ್ಕಾರ ಸೂಚಿಸಿತು ವಾರದಲ್ಲಿ ನಾಲ್ಕೇ ದಿನದ ಕೆಲಸ; ಇನ್ನಾದರೂ ನಿಲ್ಲುತ್ತಾ ಕರೋಶಿ?
ಜಪಾನ್ ಪ್ರಧಾನಿ ಯೊಶಿಹಿದೆ ಸುಗಾ (ಸಂಗ್ರಹ ಚಿತ್ರ)

ಕಂಪೆನಿಗಳು ಹಾಗೂ ಉದ್ಯೋಗದಾತರಿಗೆ ಸೂಚನೆ ನೀಡಿರುವ ಜಪಾನ್​ ಸರ್ಕಾರ, ಸಿಬ್ಬಂದಿಗೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡುವುದಕ್ಕೆ ಅವಕಾಶ ನೀಡಬೇಕು ಹಾಗೂ ಉಳಿದ ಮೂರು ದಿನ ರಜಾ ನೀಡಬೇಕು ಎಂದಿದೆ.

TV9kannada Web Team

| Edited By: Srinivas Mata

Jun 27, 2021 | 12:02 AM

ಸಿಬ್ಬಂದಿಯ ಉದ್ಯೋಗ ಹಾಗೂ ಬದುಕಿನ ಮಧ್ಯೆ ಸಮತೋಲನ ಕಾಯ್ದುಕೊಳ್ಳುವುದಕ್ಕೆ ಅನುಕೂಲ ಆಗುವಂತೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಇರುವಂತೆ ನೋಡಿಕೊಳ್ಳಬೇಕು ಎಂದು ಜಪಾನ್​ ಸರ್ಕಾರವು ಅಲ್ಲಿನ ಕಂಪೆನಿಗಳಿಗೆ ಸೂಚನೆ ನೀಡಿದೆ. ಈಚೆಗಿನ ಆರ್ಥಿಕ ನೀತಿಯ ಮಾರ್ಗದರ್ಶಿ ಸೂತ್ರದ ಪ್ರಕಾರ, ಜಪಾನ್ ಸರ್ಕಾರವು ಕಂಪೆನಿಗಳಿಗೆ ಮತ್ತು ಉದ್ಯೋಗಿಗಳಿಗೆ ಸೂಚಿಸಿರುವಂತೆ, ಐದು ದಿನಗಳ ಕೆಲಸದ ಬದಲಿಗೆ ನಾಲ್ಕು ದಿನದ ಉದ್ಯೋಗಕ್ಕೆ ಅವಕಾಶ ನೀಡಬೇಕು ಎಂದಿದೆ. ಜಪಾನ್​ನ ಪ್ರಧಾನಮಂತ್ರಿ ಯೊಶಿಹಿದೆ ಸುಗಾ ಮಾತನಾಡಿ, ವಾರದಲ್ಲಿ ನಾಲ್ಕು ದಿನದ ಕೆಲಸ ಜಾರಿ ಮಾಡುವುದರೊಂದಿಗೆ, ಕಂಪೆನಿಗಳು ಸಾಮರ್ಥ್ಯ ಇರುವ ಮತ್ತು ಅನುಭಸ್ಥ ಸಿಬ್ಬಂದಿಯನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಆ ಸಿಬ್ಬಂದಿಯು ತಮ್ಮ ಕುಟುಂಬ ಅಥವಾ ಹಿರಿಯ ಸಂಬಂಧಿಗಳ ಕಾಳಜಿ ಮಾಡುವ ಸಲುವಾಗಿಯೇ ಕೆಲಸ ಬಿಡಬೇಕಾಗುತ್ತದೆ ಎಂದಿದ್ದಾರೆ.

ಸರ್ಕಾರದ ಪ್ರಕಾರ, ನಾಲ್ಕು ದಿನದ ಕೆಲಸ ಎಂದು ಮಾಡುವುದರಿಂದ ಹೆಚ್ಚು ಜನರು ತಮ್ಮ ಶೈಕ್ಷಣಿಕ ಅರ್ಹತೆ ಜಾಸ್ತಿ ಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ ಅಥವಾ ತಮ್ಮ ನಿಯಮಿತವಾದ ಕೆಲಸದ ಜತೆಗೆ ಮತ್ತೊಂದು ಉದ್ಯೋಗ ಮಾಡುವುದಕ್ಕೆ ಅನುಕೂಲ ಆಗುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ವಾರದಲ್ಲಿ ಹೆಚ್ಚಿನ ರಜಾ ಇದ್ದರೆ ಹೊರಗೆ ಅಡ್ಡಾಡಿ ಖರ್ಚು ಮಾಡುವವರ ಪ್ರಮಾಣ ಜಾಸ್ತಿ ಆಗುತ್ತದೆ ಹಾಗೂ ಇದರಿಂದ ಆರ್ಥಿಕತೆಗೆ ಉತ್ತೇಜನ ಸಿಗುತ್ತದೆ. ಜಪಾನ್​ನಲ್ಲಿ ಕಾರ್ಪೊರೇಟ್​ ವಲಯಲ್ಲಿ ವಿಪರೀತ ಒತ್ತಡ ಇದೆ. ಇದನ್ನು ಕರೋಶಿ ಎನ್ನಲಾಗುತ್ತದೆ. ಈ ಕುಖ್ಯಾತ ಪದ್ಧತಿಗೆ ಇದರೊಂದಿಗೆ ಕೊನೆ ಹಾಡಿದಂತಾಗುತ್ತದೆ ಎಂಬ ನಂಬಿಕೆ ಇದೆ. ಅಂದ ಹಾಗೆ, ಕರೋಶಿ ಅಂದರೆ ವಿಪರೀತ ಕೆಲಸದಿಂದ ಸಾವು ಸಂಭವಿಸುವುದು. ಕೆಲಸಕ್ಕೆ ಸಂಬಂಧಿಸಿದ ಒತ್ತಡಗಳು ಹಾಗೂ ಅಸಮಾಧಾನಗಳಿಂದ ಸಾವು ಸಂಭವಿಸುವುದಕ್ಕೆ ಕರೋಶಿ ಎನ್ನಲಾಗುತ್ತದೆ. ಈ ಪದವನ್ನು 1970ರ ದಶಕದಲ್ಲಿ ಕಂಡುಹಿಡಿಯಲಾಗಿದೆ.

ಆದರೆ, ಕೊರೊನಾ ಕಾಣಿಸಿಕೊಂಡ ನಂತರ ಜಪಾನ್​ನಲ್ಲಿ ಕಂಪೆನಿಗಳು ಕಾರ್ಯ ನಿರ್ವಹಿಸುವ ರೀತಿಯಲ್ಲಿ ಬದಲಾವಣೆಗಳಾಗಿವೆ. ಹಲವು ಕಂಪೆನಿಗಳು ವರ್ಕ್ ಫ್ರಮ್ ಹೋಮ್ ಅಳವಡಿಸಿಕೊಂಡಿವೆ. ಕೊರೊನಾದ ಕಾರಣಕ್ಕೆ ವಾರದಲ್ಲಿ ನಾಲ್ಕು ದಿನದ ಕೆಲಸ ಎಂಬುದು ಜಾಗತಿಕ ಮಟ್ಟದಲ್ಲಿಯೇ ಜನಪ್ರಿಯವಾಗುತ್ತಿದೆ. ನ್ಯೂಜಿಲ್ಯಾಂಡ್, ಜರ್ಮನಿ, ಸ್ಪೇನ್ ಸೇರಿದಂತೆ ಹಲವು ದೇಶಗಳು ಅನುಕೂಲಕರ ಕೆಲಸದ ಸಮಯವನ್ನು ಅಳವಡಿಸಿವೆ. ಈ ವರ್ಷದ ಆರಂಭದಲ್ಲೇ ನಾಲ್ಕು ದಿನದ ಕೆಲಸವನ್ನು ಸ್ಪೇನ್​ ದೇಶ ಘೋಷಣೆ ಮಾಡಿತು.

ಕಳೆದ ವರ್ಷ ಡಿಸೆಂಬರ್​ನಲ್ಲಿ ಯುನಿಲಿವರ್ ನ್ಯೂಜಿಲ್ಯಾಂಡ್​ ಒಂದು ವರ್ಷದ ಕಾಲ ಪ್ರಾಯೋಗಿಕವಾಗಿ 81 ಸಿಬ್ಬಂದಿಗೆ ವಾರದಲ್ಲಿ ನಾಲ್ಕು ದಿನ ಕೆಲಸ ಮಾಡುವ ಅವಕಾಶ ನೀಡಿತು. ಮತ್ತು ಅವರಿಗೆ ವೇತನದಲ್ಲಿ ಯಾವುದೇ ಬದಲಾವಣೆ ಕೂಡ ಮಾಡಲಿಲ್ಲ. ಉತ್ಪಾದಕತೆ ಹಾಗೂ ಉದ್ಯೋಗ- ಬದುಕಿನ ಸಮತೋಲನವನ್ನು ಅಳೆಯುವ ಸಲುವಾಗಿ ಹೀಗೆ ಮಾಡಲಾಯಿತು.

ಇದನ್ನೂ ಓದಿ: OYO ಸಿಬ್ಬಂದಿಗೆ ವಾರದಲ್ಲಿ 4 ದಿನ ಕೆಲಸ, ಬೇಕೆಂದಾಗ ಬೇಕಾದಷ್ಟು ಸಂಬಳ ಸಹಿತ ರಜಾ ಘೋಷಣೆ

ಇದನ್ನೂ ಓದಿ: Powerful Passports 2021: ವಿಶ್ವದ ಪ್ರಭಾವಿ ಪಾಸ್​ಪೋರ್ಟ್​ ಜಪಾನ್​ನದು; ಭಾರತ ಪಾಸ್​ಪೋರ್ಟ್​ಗೆ ಎಷ್ಟನೇ ಸ್ಥಾನ?

( Japan government asks firms to allow employees to 4 days work week to balance work and life)

Follow us on

Related Stories

Most Read Stories

Click on your DTH Provider to Add TV9 Kannada