ಐಟಿಆರ್​ನಲ್ಲಿ ತಪ್ಪಾಗಿದ್ದರೆ, ಅಥವಾ ತಪ್ಪು ಐಟಿಆರ್ ಫಾರ್ಮ್ ಸಲ್ಲಿಸಿದ್ದರೆ ಏನು ಮಾಡಬೇಕು? ದಂಡ ಕಟ್ಟಬೇಕಾ?

Income tax returns: ಆದಾಯ ತೆರಿಗೆ ರಿಟರ್ನ್ಸ್​ಗೆ ತಪ್ಪಾದ ಫಾರ್ಮ್ ಅನ್ನು ಸಲ್ಲಿಸುವ ಸಾಧ್ಯತೆ ಇದ್ದೇ ಇರುತ್ತದೆ. ಹಾಗೊಂದು ವೇಳೆ ಆ ತಪ್ಪು ಘಟಿಸಿದ್ದರೆ ಚಿಂತೆ ಪಡಬೇಕಿಲ್ಲ. ರಿವೈಸ್ಡ್ ಫಾರ್ಮ್ ಮೂಲಕ ತಪ್ಪು ಸರಿಪಡಿಸಬಹುದು. ನಿರ್ದಿಷ್ಟ ಆದಾಯ ಮುಚ್ಚಿಡಲು ನೀವು ತಪ್ಪಾದ ಫಾರ್ಮ್ ಆಯ್ಕೆ ಮಾಡಿದ್ದು ಗೊತ್ತಾದರೆ ದಂಡ ತೆರಬೇಕಾಗಬಹುದು.

ಐಟಿಆರ್​ನಲ್ಲಿ ತಪ್ಪಾಗಿದ್ದರೆ, ಅಥವಾ ತಪ್ಪು ಐಟಿಆರ್ ಫಾರ್ಮ್ ಸಲ್ಲಿಸಿದ್ದರೆ ಏನು ಮಾಡಬೇಕು? ದಂಡ ಕಟ್ಟಬೇಕಾ?
ಟ್ಯಾಕ್ಸ್ ರಿಟರ್ನ್
Follow us
|

Updated on: Jul 30, 2024 | 2:45 PM

ನವದೆಹಲಿ, ಜುಲೈ 30: ಐಟಿ ರಿಟರ್ನ್ಸ್ ಸಲ್ಲಿಸುವಾಗ ವಿವಿಧ ಫಾರ್ಮ್​ಗಳಲ್ಲಿ ಒಂದನ್ನು ಆಯ್ದುಕೊಂಡು ಭರ್ತಿ ಮಾಡಬೇಕು. ಹೆಚ್ಚಿನ ಸಂಬಳದಾರರಿಗೆ ಫಾರ್ಮ್ 1 ಅಥವಾ 2 ಆದರೆ ಸಾಕು. ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡಿ ಆದಾಯ ಗಳಿಸಿರುವವರು, ಬೇರೆ ವ್ಯವಹಾರಗಳಿಂದ ಆದಾಯ ಪಡೆಯುತ್ತಿರುವವರು ಹೀಗೆ ಆಯ್ಕೆ ಮಾಡಬೇಕಾದ ಫಾರ್ಮ್ ಬದಲಾಗುತ್ತದೆ. ನೀವು ತಪ್ಪಾಗಿ ಯಾವುದೋ ಫಾರ್ಮ್ ಅನ್ನು ಆಯ್ದುಕೊಂಡು ರಿಟರ್ನ್ಸ್ ಫೈಲ್ ಮಾಡಿದ್ದರೆ ಏನಾಗಬಹುದು? ಸಾಮಾನ್ಯವಾಗಿ ಅನಾಹುತವೇನಾಗುವುದಿಲ್ಲ. ಸರಿಪಡಿಸಲು ಅವಕಾಶ ಇದ್ದೇ ಇರುತ್ತದೆ.

ಒಂದು ವೇಳೆ ನಿಜವಾದ ಆದಾಯವನ್ನು ಮುಚ್ಚಿಡುವ ಸಲುವಾಗಿ ಉದ್ದೇಶಪೂರ್ವಕವಾಗಿ ತಪ್ಪಾದ ನಮೂನೆಯನ್ನು ಆಯ್ದುಕೊಂಡಿದ್ದರೆ ತೆರಿಗೆ ಬಾಕಿಯ ಮೂರು ಪಟ್ಟು ಹಣವನ್ನು ದಂಡವಾಗಿ ತೆರಬೇಕಾಗಬಹುದು. ಆದರೆ, ಆ ಮಟ್ಟಕ್ಕೆ ಹೋಗದಿರುವಂತೆ ನೋಡಿಕೊಳ್ಳಬಹುದು. ತಪ್ಪಾದ ಫಾರ್ಮ್ ಅನ್ನು ಸಲ್ಲಿಸಿರುವುದು ಅರಿವಿಗೆ ಬಂದ ಬಳಿಕ ನೀವು ರಿವೈಸ್ಡ್ ರಿಟರ್ನ್ಸ್ ಅನ್ನು ಸಲ್ಲಿಸಬಹುದು. ಅಂದರೆ ಮತ್ತೊಮ್ಮೆ ಸೂಕ್ತ ಫಾರ್ಮ್ ಅನ್ನು ಆಯ್ದುಕೊಂಡು ಸಲ್ಲಿಸಬಹುದು.

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139(5) ಅಡಿಯಲ್ಲಿ ಪರಿಷ್ಕೃತ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸುವ ಮೂಲಕ ತಪ್ಪು ಸರಿಪಡಿಸಿಕೊಳ್ಳಲು ಕಾನೂನು ಸಮ್ಮತಿ ಇದೆ. 2023-24ರ ಹಣಕಾಸು ವರ್ಷಕ್ಕೆ ರಿವೈಸ್ಡ್ ರಿಟರ್ನ್ ಸಲ್ಲಿಸಲು ಡಿಸೆಂಬರ್ 31ರವರೆಗೆ ಕಾಲಾವಕಾಶ ಇದೆ.

ಇದನ್ನೂ ಓದಿ: ಆಧಾರ್, ಪ್ಯಾನ್ ಲಿಂಕ್ ಮಾಡದಿರುವವರಿಗೆ ದುಬಾರಿ ತೆರಿಗೆ; ಬರಲಿದೆ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್

ಟ್ಯಾಕ್ಸ್ ರಿಟರ್ನ್ ಅನ್ನು ತಪ್ಪು ಫಾರ್ಮ್​ನಲ್ಲಿ ಸಲ್ಲಿಸಿದ್ದರೆ, ಅಥವಾ ರಿಟರ್ನ್ಸ್​ನಲ್ಲಿ ತಪ್ಪು ಮಾಹಿತಿ ಇದ್ದರೆ ಅದನ್ನು ನೀವು ಹೊಸ ಪರಿಷ್ಕೃತ ಫೈಲ್​ನಲ್ಲಿ ಸರಿಪಡಿಸಬಹುದು.

ಎಷ್ಟು ಬಾರಿ ಪರಿಷ್ಕೃತ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಬಹುದು?

ಒಂದು ವೇಳೆ ನೀವು ಸಲ್ಲಿಸಿದ ಪರಿಷ್ಕೃತ ರಿಟರ್ನ್ಸ್​ನಲ್ಲೂ ಲೋಪ ಇದ್ದರೆ ಏನು ಮಾಡಬಹುದು? ಆದಾಯ ತೆರಿಗೆ ಇಲಾಖೆ ಡಿಸೆಂಬರ್ 31ರವರೆಗೆ ಎಷ್ಟು ಬೇಕಾದರೂ ಪರಿಷ್ಕೃತ ರಿಟರ್ನ್ಸ್ ಫೈಲ್ ಮಾಡಲು ಅವಕಾಶ ಕೊಡುತ್ತದೆ. ಇದಕ್ಕೆ ಪೆನಾಲ್ಟಿ ಇತ್ಯಾದಿ ದಂಡ ವಿಧಿಸಲಾಗುವುದಿಲ್ಲ. ಆದರೆ, ಡಿಸೆಂಬರ್ 31ರೊಳಗೆ ರಿವೈಸ್ಡ್ ರಿಟರ್ನ್ಸ್ ಫೈಲ್ ಮಾಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ