AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITR Filing: ನಿಮ್ಮ 10 ಲಕ್ಷ ರೂ ಸಂಬಳಕ್ಕೆ ಪೂರ್ಣ ಟ್ಯಾಕ್ಸ್ ಉಳಿಸುವುದು ಹೇಗೆ? ಇಲ್ಲಿದೆ ಐಡಿಯಾ

Tax deduction opportunities: ನಿಮಗೆ ವರ್ಷಕ್ಕೆ 10 ಲಕ್ಷ ರೂ ಆದಾಯ ಇದ್ದರೆ ತೆರಿಗೆಯೇ ಇಲ್ಲದಂತೆ ಮಾಡುವ ಉಪಾಯವಿದೆ. ಎನ್​ಪಿಎಸ್, ಇನ್ಷೂರೆನ್ಸ್ ಸೇರಿದಂತೆ ವಿವಿಧ ಹೂಡಿಕೆಗಳ ಮೂಲಕ 4 ಲಕ್ಷ ರೂಗೂ ಹೆಚ್ಚು ಮೊತ್ತಕ್ಕೆ ಡಿಡಕ್ಷನ್ ಪಡೆಯಬಹುದು. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31ಕ್ಕೆ ಕೊನೆಯ ದಿನ. ಎರಡೇ ದಿನ ಮಾತ್ರ ಬಾಕಿ ಇದೆ.

ITR Filing: ನಿಮ್ಮ 10 ಲಕ್ಷ ರೂ ಸಂಬಳಕ್ಕೆ ಪೂರ್ಣ ಟ್ಯಾಕ್ಸ್ ಉಳಿಸುವುದು ಹೇಗೆ? ಇಲ್ಲಿದೆ ಐಡಿಯಾ
ಆದಾಯ ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 30, 2024 | 11:00 AM

Share

ನವದೆಹಲಿ, ಜುಲೈ 30: ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲು ಇವತ್ತು ಮತ್ತು ನಾಳೆ ಮಾತ್ರವೇ ಕಾಲಾವಕಾಶ ಇದೆ. ಅದಾದ ಬಳಿಕ ತಡಪಾವತಿ ಶುಲ್ಕ ಕಟ್ಟಬೇಕಾಗುತ್ತದೆ. ನಿಮಗೆ ಸಂಬಳ ಸೇರಿ ವರ್ಷಕ್ಕೆ ಬರುವ ಆದಾಯ 10 ಲಕ್ಷ ರೂ ದಾಟುತ್ತಿದ್ದರೆ ಬಹಳಷ್ಟು ತೆರಿಗೆ ಪಾವತಿಸಬೇಕಾಗಬಹುದು. ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿ ನೀವು ಮುಂದುವರಿಯುತ್ತಿದ್ದರೆ ಈ 10 ಲಕ್ಷ ರೂ ಆದಾಯಕ್ಕೆ ಸ್ವಲ್ಪವೂ ತೆರಿಗೆ ಬೀಳದ ಹಾಗೆ ನೋಡಿಕೊಳ್ಳಲು ಸಾಧ್ಯ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಟ್ಯಾಕ್ಸ್ ರಿಬೇಟ್ ಇರುವುದರಿಂದ ಎಂಟು ಲಕ್ಷ ರೂ ಒಳಗಿನ ಆದಾಯಕ್ಕೆ (7.75 ಲಕ್ಷ ರೂ) ತೆರಿಗೆ ಬೀಳುವುದಿಲ್ಲ. ಆದರೆ, 10 ಲಕ್ಷ ರೂ ಆದಾಯ ಇದ್ದರೆ ಹಳೆಯ ರೆಜಿಮೆಯ ಮೂಲಕ ತೆರಿಗೆ ಉಳಿಸಬಹುದು.

ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿರುವ ಡಿಡಕ್ಷನ್ಸ್ ಅವಕಾಶ ಬಳಸಿಕೊಳ್ಳಿರಿ. ಸೆಕ್ಷನ್ 80 ಅಡಿಯಲ್ಲಿ ನಾಲ್ಕು ಲಕ್ಷ ರೂಗೂ ಹೆಚ್ಚು ಟ್ಯಾಕ್ಸ್ ಡಿಡಕ್ಷನ್ ಪಡೆಯುವ ಅವಕಾಶ ಉಂಟು. ಈ ಅವಕಾಶ ಬಳಸಿಕೊಳ್ಳುವ ಸಾಧ್ಯತೆ ನಿಮಗಿದ್ದರೆ ಖಂಡಿತವಾಗಿ ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿ ಮುಂದುವರಿಯಿರಿ.

ಸೆಕ್ಷನ್ 80ಸಿ ಅಡಿಯಲ್ಲಿ 1,50,000 ರೂ ಡಿಡಕ್ಷನ್ ಅವಕಾಶ

ಇದು ಬಹಳ ಸಾಮಾನ್ಯವಾಗಿ ಬಳಕೆಯಾಗುವ ಅವಕಾಶ. ಪಿಪಿಎಫ್ ಸೇರಿದಂತೆ ವಿವಿಧ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಲ್ಲಿ ಮಾಡುವ ಒಂದೂವರೆ ಲಕ್ಷ ರೂವರೆಗಿನ ಹೂಡಿಕೆಗೆ ಸೆಕ್ಷನ್ 80ಸಿ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್, ಇನ್ಷೂರೆನ್ಸ್ ಪ್ರೀಮಿಯಮ್, ಐದು ವರ್ಷದ ಫಿಕ್ಸೆಡ್ ಡೆಪಾಸಿಟ್, ಗೃಹಸಾಲಗಳ ಅಸಲು ಹಣ ಪಾವತಿ ಇತ್ಯಾದಿ ವೆಚ್ಚವೂ ಇದರ ಅಡಿಯಲ್ಲೇ ಬರುತ್ತದೆ. ಹೀಗಾಗಿ, ನೀವು ಈ ಸೆಕ್ಷನ್ ಅನ್ನು ಸುಲಭವಾಗಿ ಉಪಯೋಗಿಸಿಕೊಳ್ಳಬಹುದು.

ಇದನ್ನೂ ಓದಿ: ಗಮನಿಸಿ… ಮಧ್ಯವರ್ತಿಗಳ ಮಾತು ನಂಬಿ ಐಟಿಆರ್​ನಲ್ಲಿ ಸುಳ್ಳು ಕ್ಲೇಮ್ ಮಾಡಿದ್ರೆ ಸಿಕ್ಕಿಬೀಳ್ತೀರಿ

ನಿಮ್ಮ ವಾರ್ಷಿಕ ಆದಾಯ 10 ಲಕ್ಷ ರೂ ಆದಾಯದಲ್ಲಿ, 50,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ತೆಗೆಯಿರಿ. ನಿಮ್ಮ ಟ್ಯಾಕ್ಸಬಲ್ ಇನ್ಕಮ್ ಅಥವಾ ತೆರಿಗೆಗೆ ಅರ್ಹವಾದ ಆದಾಯ 9.50 ಲಕ್ಷ ರೂ ಆಗುತ್ತದೆ. ಸೆಕ್ಷನ್ 80ಸಿ ಅಡಿಯಲ್ಲಿ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿದ್ದರೆ ಆಗ ಟ್ಯಾಕ್ಸಬಲ್ ಇನ್ಕಮ್ 8 ಲಕ್ಷ ರೂ ಆಗುತ್ತದೆ. ಇನ್ನಷ್ಟು ಡಿಡಕ್ಷನ್ ಅವಕಾಶ ಏನಿದೆ ಎಂದು ಮುಂದಿದೆ ವಿವರ…

ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ 50,000 ರೂ ಡಿಡಕ್ಷನ್ ಸಾಧ್ಯತೆ

ಆದಾಯ ತೆರಿಗೆ ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ ಎನ್​ಪಿಎಸ್, ಅಥವಾ ನ್ಯಾಷನಲ್ ಪೆನ್ಷನ್ ಸಿಸ್ಟಂ ಯೋಜನೆಯಲ್ಲಿ ವರ್ಷಕ್ಕೆ 50,000 ರೂವರೆಗಿನ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ ಇರುತ್ತದೆ. ಎನ್​ಪಿಎಸ್ ಎಂಬುದು ಮಾರುಕಟ್ಟೆಗೆ ಜೋಡಿತವಾದ ಉತ್ತಮ ಪಿಂಚಣಿ ಯೋಜನೆ. ನಿಮ್ಮ ಹಣ ಸುಮ್ಮನೆ ವ್ಯರ್ಥವಾಗುವುದಿಲ್ಲ. ವರ್ಷಕ್ಕೆ ಶೇ. 9ರಿಂದ 15ರವರೆಗೆ ನೀವು ರಿಟರ್ನ್ಸ್ ನಿರೀಕ್ಷಿಸಬಹುದು.

ಮೇಲಿನ ಈ ಎರಡು ಸೆಕ್ಷನ್ ಅನ್ನು ನೀವು ಉಪಯೋಗಿಸಿದ ಬಳಿಕ ನಿಮ್ಮ 10 ಲಕ್ಷ ರೂ ಆದಾಯದಲ್ಲಿ ತೆರಿಗೆಗೆ ಅರ್ಹವಾದ ಆದಾಯ 7.50 ಲಕ್ಷ ರೂಗೆ ಇಳಿಯುತ್ತದೆ.

ಇದನ್ನೂ ಓದಿ: ನೀವು ನಕಲಿ ರೆಂಟ್ ರೆಸಿಪ್ಟ್ ಸಲ್ಲಿಸಿದ್ರೆ ಸರ್ಕಾರಕ್ಕೆ ಗೊತ್ತಾಗುತ್ತೆ ಹುಷಾರ್..! ಇಲಾಖೆ ನೆರವಿಗೆ ಎಐ ಟೆಕ್ನಾಲಜಿ

ಸೆಕ್ಷನ್ 80ಡಿ ಅಡಿಯಲ್ಲಿ 50,000 ರೂವರೆಗೆ ಡಿಡಕ್ಷನ್ ಅವಕಾಶ

ಸೆಕ್ಷನ್ 80ಡಿ ಅಡಿಯಲ್ಲಿ ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ನೀವು 60 ವರ್ಷದೊಳಗಿನ ವಯಸ್ಸಿವರಾಗಿ ನಿಮಗೊಬ್ಬರಿಗೇ ಹೆಲ್ತ್ ಇನ್ಷೂರೆನ್ಸ್ ಇದ್ದರೆ 25,000 ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ತಂದೆ ತಂದೆ, ಸಂಗಾತಿಗೂ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಿದ್ದರೆ 50,000 ರೂವರೆಗೆ ಡಿಡಕ್ಷನ್​ಗೆ ಅವಕಾಶ ಇರುತ್ತದೆ.

ಈಗ ನಿಮ್ಮ ಟ್ಯಾಕ್ಸಬಲ್ ಇನ್ಕಮ್ 7 ಲಕ್ಷ ರೂ ಆಗುತ್ತದೆ. ಮೇಲೆ ಹೇಳಿದ ಇಷ್ಟೂ ಯೋಜನೆಗಳು ತೆರಿಗೆ ಉಳಿಸಲು ಮಾತ್ರವಲ್ಲ, ಒಟ್ಟಾರೆಯಾಗಿ ಉತ್ತಮ ಹೂಡಿಕೆಗಳೇ ಆಗಿರುವುದರಿಂದ ನೀವು ಸದ್ಬಳಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಸ್ವಾತಂತ್ರ್ಯಪೂರ್ವದಲ್ಲಿ ಇದ್ದ ಆದಾಯ ತೆರಿಗೆ ಎಷ್ಟಿತ್ತು? ಇವತ್ತಿನ ಕಾಲಕ್ಕೆ ಎಷ್ಟಾಗುತ್ತದೆ ಆ ದರ?

ಗೃಹಸಾಲಕ್ಕೆ ಕಟ್ಟುವ ಬಡ್ಡಿ ಹಣಕ್ಕೆ ಹೆಚ್ಚು ಟ್ಯಾಕ್ಸ್ ಡಿಡಕ್ಷನ್…

ನೀವು ಗೃಹಸಾಲ ಪಡೆದುಕೊಂಡಿದ್ದರೆ ಅದರ ಬಡ್ಡಿಹಣಕ್ಕೆ ವರ್ಷಕ್ಕೆ ಎರಡು ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಇರುತ್ತದೆ. ಮೇಲಿನ ಮೂರು ಸೆಕ್ಷನ್​ಗಳನ್ನು ಉಪಯೋಗಿಸಿಕೊಂಡು, ಈ ಗೃಹಸಾಲ ಬಡ್ಡಿಯನ್ನೂ ಒಳಗೊಂಡರೆ ನಿಮ್ಮ 10 ಲಕ್ಷ ರೂ ಆದಾಯಕ್ಕೆ ಟ್ಯಾಕ್ಸಬಲ್ ಇನ್ಕಮ್ 5 ಲಕ್ಷ ರೂಗೆ ಇಳಿದುಹೋಗುತ್ತದೆ. ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿ 5 ಲಕ್ಷ ರೂಗೆ ತೆರಿಗೆ ಇರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು