ಸ್ವಾತಂತ್ರ್ಯಪೂರ್ವದಲ್ಲಿ ಇದ್ದ ಆದಾಯ ತೆರಿಗೆ ಎಷ್ಟಿತ್ತು? ಇವತ್ತಿನ ಕಾಲಕ್ಕೆ ಎಷ್ಟಾಗುತ್ತದೆ ಆ ದರ?
Income tax before independence: ಬಜೆಟ್ನಲ್ಲಿನ ಆದಾಯ ತೆರಿಗೆ ಬಗ್ಗೆ ಈಗಲೂ ಚರ್ಚೆ, ನಿಷ್ಕರ್ಷೆಗಳು ನಡೆಯುತ್ತಿವೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಳ ಮತ್ತು ಕೆಲ ತೆರಿಗೆ ಸ್ಲ್ಯಾಬ್ಗಳ ಮಿತಿ ಹೆಚ್ಚಳದ ಮೂಲಕ ತೆರಿಗೆ ಪಾವತಿದಾರರಿಗೆ ರಿಲ್ಯಾಕ್ಸ್ ತರಲಾಗಿದೆ. ಇದೇ ವೇಳೆ 1945ರಲ್ಲಿ ಆದಾಯ ತೆರಿಗೆ ಎಷ್ಟಿತ್ತು ಎಂದು ಹೇಳುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪ್ರತೀ ಬಾರಿ ಬಜೆಟ್ ಮಂಡನೆ ಆದಾಗೆಲ್ಲಾ ಆದಾಯ ತೆರಿಗೆ ಕುರಿತ ಚರ್ಚೆ ನಡೆಯುತ್ತಲೇ ಇರುತ್ತದೆ. ತೆರಿಗೆ ವಿನಾಯಿತಿ ಇರುವ ಮೊತ್ತವನ್ನು ಹೆಚ್ಚಿಸಬೇಕು. ಆದಾಯ ತೆರಿಗೆ ಅತಿಯಾಗಿ ಹಾಕಲಾಗುತ್ತಿದೆ ಎಂಬಿತ್ಯಾದಿ ಟೀಕೆಗಳು ಪ್ರತೀ ಬಾರಿಯೂ ಕೇಳಿಬರುತ್ತಿರುತ್ತದೆ. ಭಾರತದಲ್ಲಿ ಆದಾಯ ತೆರಿಗೆ ಹೇರಲಾಗುತ್ತಿರುವುದು ಹೊಸದಲ್ಲ. 19ನೇ ಶತಮಾನದಲ್ಲೇ ಬ್ರಿಟಿಷರ ಆಳ್ವಿಕೆಯಲ್ಲಿ ಮಂಡನೆಯಾದ ಬಜೆಟ್ನಲ್ಲಿ ಆದಾಯ ತೆರಿಗೆಯನ್ನು ತರಲಾಗಿತ್ತು. ಸ್ವಾತಂತ್ರ್ಯಕ್ಕೆ ಕೆಲ ವರ್ಷಗಳ ಮೊದಲು ಇದ್ದ ಆದಾಯ ತೆರಿಗೆಯ ವಿವರ ಇರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರ ಪ್ರಕಾರ ಆಗ ಆದಾಯದ ಶೇಕಡವಾರು ಪ್ರಕಾರ ತೆರಿಗೆ ಇರಲಿಲ್ಲ. ನಿಶ್ಚಿತ ಮೊತ್ತದ ರೂಪದಲ್ಲಿ ತೆರಿಗೆ ಹಾಕಲಾಗುತ್ತಿತ್ತು.
1945ರ ಆಗಸ್ಟ್ 17ರಂದು ಇದ್ದ ಆದಾಯ ತೆರಿಗೆ ದರ
- ಒಟ್ಟು ಆದಾಯದಲ್ಲಿ ಮೊದಲ 1,500 ರೂ: ತೆರಿಗೆ ಇಲ್ಲ
- ಮುಂದಿನ 3,500 ರೂ ಆದಾಯಕ್ಕೆ: ಎಂಟು ಪೈ
- ನಂತರದ 5,000 ರೂ ಆದಾಯಕ್ಕೆ: ಒಂದು ಆಣೆ
- ನಂತರ 5,000 ರೂ ಆದಾಯಕ್ಕೆ: ಒಂದು ಆಣೆ ಆರು ಪೈಗಳು
- ಉಳಿದ ಆದಾಯಕ್ಕೆ: ಎರಡು ಆಣೆ
ಇಲ್ಲಿ 2,000 ರೂ ಒಳಗಿನ ಆದಾಯ ಇದ್ದರೆ ಅದಕ್ಕೆ ಇನ್ಕಮ್ ಟ್ಯಾಕ್ಸ್ ಇರುವುದಿಲ್ಲ ಎಂದು ತಿಳಿಸಲಾಗಿತ್ತು.
ಇಲ್ಲಿ ಆಣೆ ನಿಮಗೆ ಗೊತ್ತಿರಬಹುದು. ನಾಲ್ಕಾಣೆ, ಎಂಟಾಣಿ ಇತ್ಯಾದಿ. ಒಂದು ರುಪಾಯಿಗೆ 16 ಆಣೆ ಇರುತ್ತದೆ. 1947ರವರೆಗೂ ಪೈ ಎಂಬ ಕರೆನ್ಸಿಯೂ ಚಾಲನೆಯಲ್ಲಿತ್ತು. ಒಂದು ಆಣೆಗೆ 12 ಪೈಸ್ ಇತ್ತು. 1957ರಲ್ಲಿ ಭಾರತದಲ್ಲಿ ಕರೆನ್ಸಿ ಯೂನಿಟ್ ಅನ್ನು ದಶಾಂಶ ಪದ್ಧತಿಗೆ ಬದಲಾಯಿಸಲಾಯಿತು. ಆಗ ಒಂದು ರುಪಾಯಿಗೆ ನೂರು ಪೈಸೆ ಎಂದು ಮಾಡಲಾಯಿತು.
ಇದನ್ನೂ ಓದಿ: ಗಮನಿಸಿ… ಮಧ್ಯವರ್ತಿಗಳ ಮಾತು ನಂಬಿ ಐಟಿಆರ್ನಲ್ಲಿ ಸುಳ್ಳು ಕ್ಲೇಮ್ ಮಾಡಿದ್ರೆ ಸಿಕ್ಕಿಬೀಳ್ತೀರಿ
ಇದಿರಲಿ, ಆದಾಯ ತೆರಿಗೆ ವಿಚಾರಕ್ಕೆ ಬಂದರೆ ಆ ವೈರಲ್ ಫೋಟೋ ಪ್ರಕಾರ, ಆವತ್ತು 2,000 ರೂ ನಂತರದ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತಿತ್ತು. ಎಂಟು ಪೈ ಮೊತ್ತದ ತೆರಿಗೆ ಆ ಸ್ಲಾಬ್ಗೆ ಇತ್ತು. ಇವತ್ತಿನ ದಿನಕ್ಕೆ ಆ ದರವನ್ನು ತರುವುದಾದಲ್ಲಿ, ಈಗ 3 ಲಕ್ಷ ರೂವರೆಗೆ ತೆರಿಗೆ ವಿನಾಯಿತಿ ಇದೆ. 3ರಿಂದ 7 ಲಕ್ಷ ಶೇ. 5 ತೆರಿಗೆ ಇದೆ. ಅಂದರೆ ನಾಲ್ಕು ಲಕ್ಷ ರೂಗೆ 20,000 ರೂ ತೆರಿಗೆ ಬೀಳುತ್ತದೆ.
ಒಂದು ರುಪಾಯಿಗೆ 192 ಪೈಗಳು ಎಂದು ಲೆಕ್ಕ ಹಾಕಿದಲ್ಲಿ 3 ಲಕ್ಷ ರುಪಾಯಿಗೆ ಕೇವಲ 6.25 ರೂ ಮಾತ್ರವೇ ಆದಾಯ ತೆರಿಗೆ ಆಗುತ್ತದೆ. ಅದೇನೇ ಇರಲಿ ಆಗಿನ ದರಗಳು ಈಗಿಲ್ಲ, ಹಣದ ಮೌಲ್ಯ ಕಡಿಮೆ ಆಗಿದೆ. ಆದರೆ, ಆದಾಯ ತೆರಿಗೆ ದರಗಳು ಮಾತ್ರ ತೀರಾ ಹೆಚ್ಚಾಗಿರುವುದನ್ನು ಗಮನಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ