AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದಾಖಲೆಗಳಿದ್ರೆ ನಿಮ್ಮ ಮಗುವಿನ ಪ್ಯಾನ್ ಕಾರ್ಡ್ ಮಾಡುವುದು ಸುಲಭ

ಮಕ್ಕಳ ಹೆಸರಿನಲ್ಲಿ ಪ್ಯಾನ್ ಕಾರ್ಡ್ ಮಾಡಿಸಬಹುದು. ಇದು ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲು, ಷೇರುಗಳು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಈ ದಾಖಲೆ ಉಪಯುಕ್ತವಾಗಿದೆ. ಆದರೆ ಈ ಅಪ್ರಾಪ್ತ ವಯಸ್ಕರ ಪ್ಯಾನ್ ಕಾರ್ಡ್ ಗೆ ನಿಮ್ಮ ಮಗುವಿನ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರದ ಜತೆಗೆ ಪೋಷಕರ ದಾಖಲೆಗಳು ಅಗತ್ಯ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಈ ದಾಖಲೆಗಳಿದ್ರೆ ನಿಮ್ಮ ಮಗುವಿನ ಪ್ಯಾನ್ ಕಾರ್ಡ್ ಮಾಡುವುದು ಸುಲಭ
ಪ್ಯಾನ್‌ ಕಾರ್ಡ್‌Image Credit source: newsdogshare.com
ಸಾಯಿನಂದಾ
|

Updated on:Nov 03, 2026 | 7:30 PM

Share

ಮುಖ್ಯಾಂಶಗಳು

  • ಭಾರತದ ಆದಾಯ ತೆರಿಗೆ ಇಲಾಖೆ ನೀಡುವ ಅಗತ್ಯ ಗುರುತಿನ ದಾಖಲೆ ಈ ಪ್ಯಾನ್‌ ಕಾರ್ಡ್‌
  • ಹಣಕಾಸಿನ ವಹಿವಾಟು, ತೆರಿಗೆ ಪಾವತಿ ಮತ್ತು ಬ್ಯಾಂಕ್ ಖಾತೆ ತೆರೆಯಲು ಈ ದಾಖಲೆ ಅಗತ್ಯ
  • ಮಕ್ಕಳಿಗೂ ಮೈನರ್‌ ಪ್ಯಾನ್‌ ಕಾರ್ಡ್‌ ಮಾಡಿಸಬಹುದು

ಅಗತ್ಯ ದಾಖಲೆಯಾದ ಈ ಪ್ಯಾನ್ ಕಾರ್ಡ್‌ನ್ನು (pan card) 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾಡಿಸಬಹುದು ಎಂದು ಕೆಲವರು ತಿಳಿದುಕೊಂಡಿದ್ದಾರೆ. ಆದರೆ ಮಕ್ಕಳ ಹೆಸರಿನಲ್ಲಿ ಪ್ಯಾನ್ ಕಾರ್ಡ್ ಮಾಡಬಹುದಾಗಿದೆ. ಈ ದಾಖಲೆಯಿದ್ದರೆ ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವುದು ಅಥವಾ ಹೂಡಿಕೆ ಮಾಡಲು ಸುಲಭವಾಗುತ್ತದೆ. ಆದರೆ ಇದರಲ್ಲಿ ಮಗುವಿನ ಫೋಟೋ ಹಾಗೂ ಸಹಿ ಇರುವುದಿಲ್ಲ. ಇದು ಮೈನರ್ ಪ್ಯಾನ್ ಕಾರ್ಡ್ ಆಗಿದ್ದು, 18 ವರ್ಷ ತುಂಬಿದ ಬಳಿಕ ಈ ದಾಖಲೆಯನ್ನು ಅಪ್ಡೇಟ್ ಮಾಡಿಸಬೇಕು. ಹಾಗಾದ್ರೆ ಮೈನರ್ ಪ್ಯಾನ್ ಕಾರ್ಡ್ ಅಥವಾ ಮಕ್ಕಳ ಪ್ಯಾನ್ ಕಾರ್ಡ್ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು? ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

ಮೈನರ್ ಪ್ಯಾನ್ ಕಾರ್ಡ್‌ಗೆ ಯಾವೆಲ್ಲಾ ದಾಖಲೆಗಳು ಬೇಕು?

  • ಮಗುವಿನ ಜನನ ಪ್ರಮಾಣಪತ್ರ ಅಥವಾ ಆಧಾರ್ ಕಾರ್ಡ್
  • ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಪಾಸ್‌ಪೋರ್ಟ್
  • ಮಗುವಿನ ಭಾವಚಿತ್ರ, ಆದರೆ ಈ ಪ್ಯಾನ್ ಕಾರ್ಡ್‌ಲ್ಲಿ ಫೋಟೋ ಇರುವುದಿಲ್ಲ

ಮಕ್ಕಳ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಎನ್ ಎಸ್ ಡಿ ಎಲ್ (NSDL) ಈ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.

ಹಂತ 2: ನ್ಯೂ ಪ್ಯಾನ್ ಆಯ್ಕೆ ಮಾಡಿ. ಫಾರ್ಮ್ 49ಎ ಮೇಲೆ ಕ್ಲಿಕ್ ಮಾಡಿ.

ಹಂತ 3: ಅರ್ಜಿದಾರರ ವರ್ಗದಲ್ಲಿ ಇಂಡಿವಿಜುವಲ್ (ಅಪ್ರಾಪ್ತರು) ಎಂದು ಆಯ್ಕೆಮಾಡಿ.

ಹಂತ 4: ಆ ಬಳಿಕ ಮಗುವಿನ ವಿವರಗಳು ಹಾಗೂ ಪೋಷಕರ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

ಹಂತ 5: ಮಗುವಿನ ದಾಖಲೆಗಳಾದ ಜನನ ಪ್ರಮಾಣಪತ್ರ ಅಥವಾ ಮಗುವಿನ ಆಧಾರ್ ಕಾರ್ಡ್ ಪೋಷಕರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್ ಹಾಗೂ ಮಗುವಿನ ಪಾಸ್‌ಪೋರ್ಟ್ ಅಳತೆಯ ಫೋಟೋ ಅಪ್ಲೋಡ್ ಮಾಡಿ.

ಹಂತ 6: ಕೊನೆಗೆ ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.

ಹಂತ 7: ಪಾವತಿಯ ಬಳಿಕ ಆಧಾರ್ ಆಧಾರಿತ ದೃಢೀಕರಣ ಪೂರ್ಣಗೊಳಿಸಿ.

ಹಂತ 8: ಅರ್ಜಿ ಸಲ್ಲಿಕೆಯ ಬಳಿಕ ಸ್ವೀಕೃತಿ ಸಂಖ್ಯೆಯನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಈ ಮೂಲಕ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಬಹುದು.

ಇದನ್ನೂ ಓದಿ: ಅಪ್ರಾಪ್ತ ವಯಸ್ಕರು ಪ್ಯಾನ್ ಕಾರ್ಡ್ ಹೊಂದಿದ್ರೆ 18 ವರ್ಷ ತುಂಬಿದ ಕೂಡ್ಲೇ ಈ ಕೆಲ್ಸ ಮೊದ್ಲು ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಪ್ಯಾನ್ ಕಾರ್ಡ್ ಮುಖ್ಯ ಯಾಕೆ?

ಉತ್ತರ: ಹಣಕಾಸಿನ ವಹಿವಾಟು, ತೆರಿಗೆ ಪಾವತಿ ಮತ್ತು ಬ್ಯಾಂಕ್ ಖಾತೆ ತೆರೆಯಲು ಈ ದಾಖಲೆ ನಿಮ್ಮ ಬಳಿ ಇರಲೇಬೇಕು.

ಪ್ರಶ್ನೆ: ಮೈನರ್ ಪ್ಯಾನ್ ಕಾರ್ಡ್‌ನಲ್ಲಿ 18 ವರ್ಷ ತುಂಬಿದ ಬಳಿಕ ಈ ದಾಖಲೆ ಅಪ್ಡೇಟ್ ಮಾಡುವುದು ಮುಖ್ಯ ಯಾಕೆ?

ಉತ್ತರ: ಮೈನರ್ ಪ್ಯಾನ್ ಕಾರ್ಡ್‌ನಲ್ಲಿ ಪೋಷಕರ ವಿವರಗಳಿರುತ್ತವೆ. ಹೀಗಾಗಿ ವಯಸ್ಕರಾದ ನಿಮ್ಮ ಸ್ವಂತ ವೈಯಕ್ತಿಕ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ.

ಪ್ರಶ್ನೆ: ಮೈನರ್ ಪ್ಯಾನ್ ಕಾರ್ಡ್ ಗೆ ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಮಗುವಿನ ಹೆಸರಿನಲ್ಲಿ ಪ್ಯಾನ್ ಕಾರ್ಡ್ ಮಾಡಿಸಲು ಮಗುವಿನ ಜನನ ಪ್ರಮಾಣಪತ್ರ ಇಲ್ಲವಾದರೆ ಆಧಾರ್ ಕಾರ್ಡ್, ತಂದೆ  ತಾಯಿಯ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಪಾಸ್‌ಪೋರ್ಟ್ ಹಾಗೂ ಮಗುವಿನ ಭಾವಚಿತ್ರ ಈ ದಾಖಲೆಗಳು ಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Tue, 3 November 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್ ನಾಯಕರನ್ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಕಾಂಗ್ರೆಸ್ ನಾಯಕರನ್ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಹಾಸನಾಂಬೆ ದೇವಿಯ ದರ್ಶನ ಮಾಡಿದ ನಟಿ ಪ್ರೇಮಾ, ಕಾರುಣ್ಯಾ ರಾಮ್: ವಿಡಿಯೋ
ಹಾಸನಾಂಬೆ ದೇವಿಯ ದರ್ಶನ ಮಾಡಿದ ನಟಿ ಪ್ರೇಮಾ, ಕಾರುಣ್ಯಾ ರಾಮ್: ವಿಡಿಯೋ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್