AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕ್ ಟಾಪ್ ಸ್ಥಾಪಕನನ್ನು ಮೀರಿಸಿದ ಮುಕೇಶ್ ಅಂಬಾನಿ ಈಗ ಏಷ್ಯಾದ ಅತಿದೊಡ್ಡ ಶ್ರೀಮಂತ

ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಭರ್ಜರಿ ಏರಿಕೆಯಿಂದಾಗಿ ಮುಕೇಶ್ ಅಂಬಾನಿ ಅವರ ಆಸ್ತಿ ಮೌಲ್ಯ $99.7 ಬಿಲಿಯನ್‌ಗೆ ತಲುಪಿದೆ. ಬೈಟ್‌ಡ್ಯಾನ್ಸ್ ಸ್ಥಾಪಕ ಝಾಂಗ್ ಯಿಮಿಂಗ್ ಅವರನ್ನು ಹಿಂದಿಕ್ಕಿ ಮತ್ತೆ ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮುಕೇಶ್ ಅಂಬಾನಿ ಜಾಗತಿಕ ಪಟ್ಟಿಯಲ್ಲಿ 21ನೇ ಸ್ಥಾನಕ್ಕೇರಿದ್ದಾರೆ. ಗೌತಮ್ ಅದಾನಿ 31ನೇ ಸ್ಥಾನದಲ್ಲಿದ್ದಾರೆ. ಅಂಬಾನಿ ನಂತರ ಅದಾನಿ ಅವರು ಭಾರತದ ಅತಿದೊಡ್ಡ ಶ್ರೀಮಂತರಾಗಿದ್ದಾರೆ.

ಟಿಕ್ ಟಾಪ್ ಸ್ಥಾಪಕನನ್ನು ಮೀರಿಸಿದ ಮುಕೇಶ್ ಅಂಬಾನಿ ಈಗ ಏಷ್ಯಾದ ಅತಿದೊಡ್ಡ ಶ್ರೀಮಂತ
ಮುಕೇಶ್ ಅಂಬಾನಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 03, 2026 | 4:46 PM

Share

ಮುಂಬೈ, ನವೆಂಬರ್ 3: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸಂಸ್ಥೆಯ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಮತ್ತೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವ ಸ್ಥಾನಮಾನ ಮತ್ತೆ ಗಿಟ್ಟಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಷೇರುಗಳು ದಾಖಲಿಸಿದ ಬಲವಾದ ಏರಿಕೆಯ ಫಲವಾಗಿ ಅವರ ಒಟ್ಟು ಆಸ್ತಿ ಮೌಲ್ಯವು 99.7 ಬಿಲಿಯನ್ ಡಾಲರ್‌ಗೆ ಜಿಗಿದಿದೆ. ಫೋರ್ಬ್ಸ್ ಬಿಲಿಯನೇರ್ಸ್ ಲಿಸ್ಟ್ ಪ್ರಕಾರ, ಅತಿಹೆಚ್ಚು ಆಸ್ತಿಮೌಲ್ಯದಲ್ಲಿ ಟಿಕ್‌ಟಾಕ್ (TikTok) ಮಾಲೀಕತ್ವದ ಬೈಟ್‌ಡ್ಯಾನ್ಸ್ (ByteDance) ಕಂಪನಿಯ ಸಂಸ್ಥಾಪಕ ಝಾಂಗ್ ಯಿಮಿಂಗ್ (Zhang Yiming) ಅವರನ್ನು ಮುಕೇಶ್ ಅಂಬಾನಿ ಹಿಂದಿಕ್ಕಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ವಿವಿಧ ಬ್ಯುಸಿನೆಸ್​ಗಳು (ಟೆಲಿಕಾಂ, ರಿಟೇಲ್ ಹಾಗೂ ಇಂಧನ) ಬಲವಾದ ಶೈಕ್ಷಣಿಕ ಮತ್ತು ಹಣಕಾಸಿನ ಕಾರ್ಯಕ್ಷಮತೆಯಿಂದಾಗಿ ಕಂಪನಿಯ ಷೇರು ಮೌಲ್ಯ ಹೆಚ್ಚಾಗಿದೆ. ಇದು ಮುಕೇಶ್ ಅಂಬಾನಿ ಅವರ ವೈಯಕ್ತಿಕ ಸಂಪತ್ತಿನಲ್ಲಿ ಶೇ. 10ರಷ್ಟು ಜಿಗಿತಕ್ಕೆ ನೇರ ಕಾರಣವಾಗಿದೆ.

ಇದನ್ನೂ ಓದಿ: ರಾತ್ರಿ ಹೊತ್ತು ಬೇಕೆಂದವರಿಗೆ ಸೂರ್ಯನ ಬೆಳಕು ಮಾರುವ ಯೋಜನೆ; ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಯದ್ದೂ ಸಹಯೋಗ

ಟಿಕ್ ಟಾಕ್ ಸಂಸ್ಥಾಪಕ ಝಾಂಗ್ ಯಿಮಿಂಗ್ ಅವರ ಆಸ್ತಿಮೌಲ್ಯ 69.3 ಬಿಲಿಯನ್ ಡಾಲರ್ ಇದೆ. ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಯಿಮಿಂಗ್ ಅವರು 26ನೇ ಸ್ಥಾನ ಹೊಂದಿದ್ದಾರೆ. ಅವರ ನಂತರದ ಐದು ಸ್ಥಾನದಲ್ಲಿ 63.8 ಬಿಲಿಯನ್ ಡಾಲರ್ ಆಸ್ತಿಮೌಲ್ಯ ಇರುವ ಗೌತಮ್ ಅದಾನಿ ಅವರಿದ್ದಾರೆ. ಮುಕೇಶ್ ಅಂಬಾನಿ ಅವರು 99.7 ಬಿಲಿಯನ್ ಡಾಲರ್ನೊಂದಿಗೆ ವಿಶ್ವದ 21ನೇ ಸ್ಥಾನಕ್ಕೆ ಏರಿದ್ದಾರೆ. ಏಷ್ಯನ್ನರ ಪೈಕಿ ಅಂಬಾನಿ ಅವರೆಯೇ ಅತಿದೊಡ್ಡ ಶ್ರೀಮಂತರೆನಿಸಿದ್ದಾರೆ.

ವಿಶ್ವದ ಟಾಪ್-10 ಶ್ರೀಮಂತರು: ಫೋರ್ಬ್ಸ್ ಪಟ್ಟಿ

  1. ಇಲಾನ್ ಮಸ್ಕ್: 839 ಬಿಲಿಯನ್ ಡಾಲರ್
  2. ಲ್ಯಾರಿ ಪೇಜ್: 257 ಬಿಲಿಯನ್ ಡಾಲರ್
  3. ಸೆರ್ಗೇ ಬ್ರಿನ್: 237 ಬಿಲಿಯನ್ ಡಾಲರ್
  4. ಜೆಫ್ ಬೇಜೋಸ್: 224 ಬಿಲಿಯನ್ ಡಾಲರ್
  5. ಮಾರ್ಕ್ ಝುಕರ್ಬರ್ಗ್: 222 ಬಿಲಿಯನ್ ಡಾಲರ್
  6. ಲ್ಯಾರಿ ಎಲಿಸನ್: 190 ಬಿಲಿಯನ್ ಡಾಲರ್
  7. ಬರ್ನಾರ್ಡ್ ಆರ್ನಾಲ್ಟ್: 171 ಬಿಲಿಯನ್ ಡಾಲರ್
  8. ಜೆನ್ಸೆನ್ ಹುವಾಂಗ್: 154 ಬಿಲಿಯನ್ ಡಾಲರ್
  9. ವಾರನ್ ಬಫೆಟ್: 149 ಬಿಲಿಯನ್ ಡಾಲರ್
  10. ಅಮನ್ಷಿಯೋ ಒರ್ಟೆಗಾ: 148 ಬಿಲಿಯನ್ ಡಾಲರ್

ಈ ಮೇಲಿನ ಟಾಪ್-10 ಪಟ್ಟಿಯಲ್ಲಿ ಎಂಟು ಮಂದಿ ಅಮೆರಿಕನ್ನರೇ ಇದ್ದಾರೆ. ಇಬ್ಬರು ಮಾತ್ರ ಬೇರೆ ದೇಶದವರು. ಫ್ರಾನ್ಸ್​ನ ಬರ್ನಾರ್ಡ್ ಆರ್ನಾಲ್ಟ್ ಮತ್ತು ಸ್ಪೇನ್​ನ ಅಮನ್ಷಿಯೋ ಒರ್ಟೆಗೋ ಅವರು ಟಾಪ್-10ನಲ್ಲಿ ಇರುವ ಅಮೆರಿಕನ್ನೇತರರಾಗಿದ್ದಾರೆ.

ಇದನ್ನೂ ಓದಿ: ಟಾಟಾ ಗ್ರೂಪ್ ವಿವಾದ ಸೌಹಾರ್ದಯುತವಾಗಿ ಬಗೆಹರಿಯಬೇಕು, ಸರ್ಕಾರದ ಮಧ್ಯಪ್ರವೇಶದ ಅಗತ್ಯವಿಲ್ಲ: ನಿರ್ಮಲಾ ಸೀತಾರಾಮನ್

ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಅಗ್ರಮಾನ್ಯರು…

  1. ಮುಕೇಶ್ ಅಂಬಾನಿ: 99.7 ಬಿಲಿಯನ್ ಡಾಲರ್ (ಜಾಗತಿಕವಾಗಿ 21ನೇ ಸ್ಥಾನ)
  2. ಗೌತಮ್ ಅದಾನಿ: 63.8 ಬಿಲಿಯನ್ ಡಾಲರ್ (ಜಾಗತಿಕವಾಗಿ 31ನೇ ಸ್ಥಾನ)
  3. ಸಾವಿತ್ರಿ ಜಿಂದಲ್: 391.1 ಬಿಲಿಯನ್ ಡಾಲರ್ (ಜಾಗತಿಕವಾಗಿ 51ನೇ ಸ್ಥಾನ)
  4. ಲಕ್ಷ್ಮೀ ಮಿತ್ತಲ್: 31 ಬಿಲಿಯನ್ ಡಾಲರ್ (ಜಾಗತಿಕವಾಗಿ 70ನೇ ಸ್ಥಾನ)
  5. ಶಿವ್ ನಾದರ್: 30.9 ಬಿಲಿಯನ್ ಡಾಲರ್ (ಜಾಗತಿಕವಾಗಿ 71ನೇ ಸ್ಥಾನ)

ಜಾಗತಿಕವಾಗಿ ಒಟ್ಟು 7 ಮಂದಿ ಭಾರತೀಯರು ಟಾಪ್-100 ಪಟ್ಟಿಯಲ್ಲಿದ್ದಾರೆ. ಮೇಲೆ ತಿಳಿಸಿರುವ ಐವರ ಜೊತೆಗೆ ಸೈರಸ್ ಪೂನಾವಾಲಾ ಮತ್ತು ದಿಲೀಪ್ ಸಾಂಘವಿ ಅವರು ಈ ಗ್ಲೋಬಲ್ ಟಾಪ್-100ನಲ್ಲಿರುವ ಇತರ ಭಾರತೀಯರಾಗಿದ್ದಾರೆ.

ಕುಮಾರ್ ಬಿರ್ಲಾ ಮತ್ತು ರಾಧಾಕೃಷ್ಣ ದಮಾನಿ ಅವರು 100ರಿಂದ 200ನೇ ಶ್ರೇಯಾಂಕದ ಮಟ್ಟದಲ್ಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್
ಗಣವೇಷ ಧರಿಸಿ RSS ಪಥಸಂಚಲನದಲ್ಲಿ ಭಾಗಿಯಾದ ಮುಸ್ಲಿಂ ಮುಖಂಡ
ಗಣವೇಷ ಧರಿಸಿ RSS ಪಥಸಂಚಲನದಲ್ಲಿ ಭಾಗಿಯಾದ ಮುಸ್ಲಿಂ ಮುಖಂಡ
ಕೋಲಾರದಲ್ಲಿ ಬಿಜೆಪಿಯಿಂದ ‘ಪ್ರಜಾಪ್ರಭುತ್ವ ಉಳಿಸಿ’ ಮಹಾ ಪಾದಯಾತ್ರೆ
ಕೋಲಾರದಲ್ಲಿ ಬಿಜೆಪಿಯಿಂದ ‘ಪ್ರಜಾಪ್ರಭುತ್ವ ಉಳಿಸಿ’ ಮಹಾ ಪಾದಯಾತ್ರೆ
ಗೆಳತಿ ಜೊತೆ ಬಂದು ಹಾಸನಾಂಬೆ ದರ್ಶನ ಪಡೆದ ಮುಸ್ಲಿಂ ಮಹಿಳೆ!
ಗೆಳತಿ ಜೊತೆ ಬಂದು ಹಾಸನಾಂಬೆ ದರ್ಶನ ಪಡೆದ ಮುಸ್ಲಿಂ ಮಹಿಳೆ!
ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಕಾಂಗ್ರೆಸ್​​ ಕ್ಷಮೆ ಕೇಳಿದ ವಿಜಯೇಂದ್ರ
ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಕಾಂಗ್ರೆಸ್​​ ಕ್ಷಮೆ ಕೇಳಿದ ವಿಜಯೇಂದ್ರ